ಸಂಕಷ್ಟಗಳಿಂದ ಪಾರಾಗಲು ಶಕ್ತಿ ದೇವತೆ ಮೊರೆ ಹೋದ ಪವಿತ್ರಾ ಗೌಡ – ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ನಟಿ

ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಪವಿತ್ರಾ ಗೌಡ ಅವರು ಜಾಮೀನಿನ ಮೇಲೆ ಬಿಡುಗಡೆ ಆಗಿದ್ದಾರೆ. ಸೆರೆವಾಸದಿಂದ ಹೊರ ಬರ್ತಿದ್ದಂತೆ ಪವಿತ್ರಾ ಗೌಡ ಅವರು ಬ್ಯಾಕ್ ಟು ಬ್ಯಾಕ್ ಟೆಂಪಲ್ ರನ್ ಮಾಡುತ್ತಿದ್ದಾರೆ. ಇದೀಗ ಪವಿತ್ರಾ ಗೌಡ ಶಕ್ತಿ ದೇವಿಯ ಮೊರೆ ಹೋಗಿದ್ದಾರೆ.
ಇದನ್ನೂ ಓದಿ: ತಲಾ ಕ್ರೇಜ್ ಕಡಿಮೆಯಾಗಿಲ್ವಾ? – LSG ಪರ ನಿಂತಿಲ್ವೇಕೆ ಲಕ್ನೋ ಫ್ಯಾನ್ಸ್?
ರೇಣುಕಾಸ್ವಾಮಿ ಪ್ರಕರಣದಲ್ಲಿ ಪವಿತ್ರಾ ಗೌಡ ಸಾಲು, ಸಾಲು ಸಂಕಷ್ಟ ಎದುರಿಸಿದ್ರು. ಜೈಲಿನಿಂದ ಹೊರ ಬರ್ತಿದ್ದಂತೆ ದೇವರ ಮೊರೆ ಹೋಗ್ತಿದ್ದಾರೆ. ಇತ್ತೀಚೆಗೆ ನಿಮಿಷಾಂಭ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಪವಿತ್ರಾ ಗೌಡ ಈಗ ಬನಶಂಕರಿ ದೇವಿಯ ಮೊರೆ ಹೋಗಿದ್ದಾರೆ. ಬನಶಂಕರಿ ದೇವಸ್ಥಾನಕ್ಕೆ ಭೇಟಿ ನೀಡಿರುವ ನಟಿ ಪವಿತ್ರ ಗೌಡ ಅವರು ದೇವಿಗೆ ಸೀರೆ, ಮಡಲಕ್ಕಿ ಕೊಟ್ಟು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಮಂಗಳವಾರವಾದ ಇಂದು ಶಕ್ತಿ ದೇವತೆ ಬನಶಂಕರಿ ಅಮ್ಮನವರ ದರ್ಶನಕ್ಕೆ ಭಕ್ತರು ಆಗಮಿಸುತ್ತಾರೆ. ಮಂಗಳವಾರದ ದಿನ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ರೆ ಶುಭವಾಗಲಿದೆ ಅನ್ನೋದು ಭಕ್ತರ ನಂಬಿಕೆಯಾಗಿದೆ.