ದಾಸನ ಮೀಟ್ ಆದ ಬಳಿಕ ಪವಿತ್ರಾಗೌಡ ಪೋಸ್ಟ್! – ಎಲ್ಲ ಕಳೆದುಕೊಂಡಂತೆ ನಟಿಸು ಎಂದಿದ್ಯಾಕೆ ನಟಿ?

ದರ್ಶನ್ ಹಾಗೂ ಪವಿತ್ರಾ ಗೌಡ ರೇಣುಕಾ ಸ್ವಾಮಿ ಕೇಸ್‌ನಲ್ಲಿ ಜೈಲು ಪಾಲಾಗಿದ್ರು.. ಜಾಮೀನು ಪಡೆದು ಹೊರ ಬಂದ್ಮೇಲೆ ಒಂದು ಬಾರಿಯೂ ಇವರಿಬ್ರು ಮೀಟ್ ಆಗಿರ್ಲಿಲ್ಲ. ಇತ್ತೀಚೆಗಷ್ಟೇ ಪವಿತ್ರಾ ಗೌಡ, ದರ್ಶನ್ ಸೇರಿ 16 ಆರೋಪಿಗಳು ಕೋರ್ಟ್ ಮುಂದೆ ಹಾಜರಾಗಿದ್ದರು. ಈ ವೇಳೆ ದರ್ಶನ್ ಹಾಗೂ ಪವಿತ್ರಾ ಗೌಡ ಅವರು ಮುಖಾಮುಖಿಯಾಗಿದ್ದರು. ಇಬ್ಬರು ನ್ಯಾಯಾಲಯದಲ್ಲಿ ಭೇಟಿಯಾಗಿದ್ದರು. ಇದಾಗಿ ಪವಿತ್ರಾ ಗೌಡ ಏನಾದರೂ ಪ್ರತಿಕ್ರಿಯುಸುತ್ತಾರಾ ಎಂದು ನೆಟ್ಟಿಗರು ಕಾದು ಕುಳಿತಿದ್ದರು. ಇದೀಗ ಪವಿತ್ರಾ ಗೌಡ ಸೋಶಿಯಲ್ ಮೀಡಿಯಾದಲ್ಲಿ ಸ್ಟೋರಿ ಹಾಕಿದ್ದಾರೆ.
ಇದನ್ನೂ ಓದಿ: ಕಾಂಟ್ರವರ್ಸಿ ಕಿಂಗ್ ರಾಥಿ ರಹಸ್ಯ.. ನೋಟ್‌ಬುಕ್ ಸೆಲೆಬ್ರೇಷನ್ ಯಾಕೆ? – ಉದ್ಧಟತನಕ್ಕೆ ದಿಗ್ವೇಶ್ ಕೆರಿಯರ್ ಎಂಡ್?
ಹೌದು, ಪವಿತ್ರಾ ಜೈಲಿನಿಂದ ಹೊರ ಬಂದ್ಮೇಲೆ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಆಗಾಗ ಫೋಟೋ, ವಿಡಿಯೋ ಶೇರ್ ಮಾಡ್ತಿರ್ತಾರೆ. ಇದೀಗ ಮತ್ತೊಂದು ಸ್ಟೋರಿ ಹಾಕಿದ್ದಾರೆ. ‘ಸಮಯ ಮತ್ತು ತಾಳ್ಮೆ ಮುಖ್ಯ. ಎಲ್ಲ ಪ್ರಶ್ನೆಗೆ ಮೌನವೇ ಒಳ್ಳೆಯ ಉತ್ತರ. ಎಲ್ಲ ಪರಿಸ್ಥಿತಿಗೆ ನಗುವೆ ಒಳ್ಳೆಯ ಪ್ರತಿಕ್ರಿಯೆ’ ಎಂದು ಹೇಳಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸ್ ಬಳಿಕ ಇದೆರಡೂ ತತ್ವವನ್ನು ಅವರು ಅಳವಡಿಸಿಕೊಂಡಿದ್ದಾರೆ. ಅವರಿಗೆ ಎಂಥದ್ದೇ ಪ್ರಶ್ನೆ ಬಂದರೂ ಅವರು ಮೌನವಾಗಿಯೇ ಇರುತ್ತಾರೆ. ಎಂಥದ್ದೇ ಪರಿಸ್ಥಿತಿ ಇದ್ದರೂ ಅವರು ನಗುತ್ತಾ ಇರುತ್ತಾರೆ.

ನೋಡಿರಿ

