ಪ್ರೇಮಿಗಳ ದಿನವೇ ಪವಿತ್ರಾ ಹೊಸ ಹೆಜ್ಜೆ.. ಕನಸಿನ ಕೆಲಸಕ್ಕೆ ನ್ಯೂ ಟಚ್
ರೆಡ್ ಕಾರ್ಪೆಟ್ ಗೆ ದರ್ಶನ್ ಬಂದ್ರಾ?

ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲು ಪಾಲಾಗಿದ್ದ ಪವಿತ್ರಾ ಗೌಡ ಈಗ ಬೇಲ್ ಮೂಲಕ ಹೊರ ಬಂದಿದ್ದಾರೆ.. ಕಳೆದ ವರ್ಷ ಪವಿತ್ರಾ ಕೇಸ್, ಕೋರ್ಟ್ ಅಂತಾ ಅಲಿತಿದ್ದ ಪವಿತ್ರಾ ಇದೀಗ ಹೊಸ ಲೈಫ್ ಲೀಡ್ ಮಾಡೋದಿಕ್ಕೆ ಮುಂದಾಗಿದ್ದಾರೆ. ಟೆಂಪಲ್ ರನ್ ಬಳಿಕ ಈಗ ಬುಸಿನೆಸ್‌ನತ್ತ ಮುಖ ಮಾಡಿದ್ದಾರೆ. ವ್ಯಾಲೆಂಟೈನ್ಸ್ ಡೇ ದಿನವೇ ಹೊಸ ಹೆಜ್ಜೆ ಇಟ್ಟಿದ್ದಾರೆ. ಇವತ್ತು ಪವಿತ್ರಾ ಗೌಡ ರೆಡ್ ಕಾರ್ಪೆಟ್ ರೀ ಲಾಂಚ್ ಆಗಿದೆ.. ರೆಡ್ ಕಾರ್ಪೆಟ್ ರಿಲಾಂಚ್ ಗೆ ಯಾರ್ಯಾರು ಬಂದಿದ್ರು.. ದರ್ಶನ್ ಗೆಸ್ಟ್ ಆಗಿ ಬಂದ್ರಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಬೆಂಗಳೂರು Vs ಗುಜರಾತ್ ಕದನಕ್ಕೆ ಕೌಂಟ್ ಡೌನ್ – ಸ್ಮೃತಿ ಮಂದಾನ ಪಡೆ ಹೇಗಿದೆ?
ಪವಿತ್ರಾ ಗೌಡ.. ಸ್ಯಾಂಡಲ್ ವುಡ್ ನಟಿ.. ಕಳೆದ 10-12 ವರ್ಷಗಳ ಹಿಂದೆ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ರು. ಅಗಮ್ಯ, ಛತ್ರಿಗಳು ಸಾರ್ ಛತ್ರಿಗಳು ಇನ್ನಿತರ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ರು.. ಆದರೆ ಯಾವ ಸಿನಿಮಾಗಳಿಂದಲೂ ಅವರ ವೃತ್ತಿ ಬದುಕಿಗೆ ಅಂಥ ಸಕ್ಸಸ್ ಏನೂ ಸಿಕ್ಕಿರಲಿಲ್ಲ. ಹೀಗಾಗಿ ಸಿನಿಮಾ ಇಂಡಸ್ಟ್ರಿಯಿಂದ ಆಕೆ ದೂರ ಉಳಿದ್ಲು.. ದರ್ಶನ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಳು. ಮಿಡಲ್ ಕ್ಲಾಸ್ ಜೀವನ ಮಾಡ್ತಿದ್ದ ಪವಿತ್ರಾ ಗೌಡಗೆ ಕಾರು.. ಐಶಾರಾಮಿ ಬಂಗಲೆ ಎಲ್ಲವೂ ಬಂತು.. ಸಿನಿಮಾ ಕೈಕೊಟ್ಟ ಬೆನ್ನಲ್ಲೇ ಆಕೆ ಬ್ಯುಸಿನೆಸ್ ನತ್ತ ಮುಖ ಮಾಡಿದ್ಲು.. ಆರ್ ಆರ್ ನಗರ ಬಳಿ ರೆಡ್ ಕಾರ್ಪೆಟ್ ಎಂಬ ಬಟ್ಟೆ ಅಂಗಡಿ ನಡೆಸ್ತಾ ಇದ್ರು.. ಆದ್ರೆ ರೇಣುಕಾ ಸ್ವಾಮಿ ಕೊಲೆ ಕೇಸ್ ನಲ್ಲಿ ಪವಿತ್ರಾ ಗೌಡ ಜೈಲಿಗೆ ಹೋಗಬೇಕಾಯ್ತು.. ಪವಿತ್ರಾ ಜೈಲಿಗೆ ಹೋಗ್ತಿದ್ದಂತೆ ಆಕೆಯ ಬ್ಯುಸಿನೆಸ್ ಅರ್ಧಕ್ಕೆ ನಿಂತು ಹೋಯ್ತು.. ಅದನ್ನ ಯಾರು ನಡೆಸ್ತಾ ಇರ್ಲಿಲ್ಲ.. ಇದೀಗ ಮತ್ತೆ ಆಕೆ ಹೊಸ ಜೀವನ ಶುರು ಮಾಡಲು ಸಿದ್ಧತೆ ನಡೆಸಿದ್ದಾರೆ.. ಇದೀಗ ಪ್ರೇಮಿಗಳ ದಿನದಂದೇ ಅರ್ ಅರ್ ನಗರದಲ್ಲಿರುವ ರೆಡ್ ಕಾರ್ಪೆಟ್ ಸ್ಟೂಡಿಯೋ ಈಗ ರಿ ಲಾಂಚ್ ಆಗಿದೆ.
ಹೌದು, ಪವಿತ್ರಾ ಗೌಡ ಜೈಲಿನಿಂದ ಬರ್ತಿದ್ದಂತೆ ಟೆಂಪಲ್ ರನ್ ಶುರುಮಾಡಿದ್ರು.. ಅದಾದ್ಮೇಲೆ ಕೋರ್ಟ್ ಅನುಮತಿ ಪಡೆದು ಹೊರ ರಾಜ್ಯಗಳಿಗೂ ಹೋಗಿ ಬಂದಿದ್ರು.. ಕೆಲವೊಂದಷ್ಟು ಮೆರಿಯಲ್ ಗಳನ್ನ ಪರ್ಚೇಸ್ ಮಾಡ್ಕೊಂಡು ಬಂದಿದ್ರು.. ಇದೀಗ ಸಖಲ ಸಿದ್ದತೆ ಯೊಂದಿಗೆ ರೆಡ್ ಕಾರ್ಪೆಟ್ ರೀಲಾಂಚ್ ಮಾಡಲಾಗಿದೆ. ಸರಳವಾಗಿ ಪೂಜೆ ಮಾಡುವ ಮೂಲಕ ಪವಿತ್ರಾ ಗೌಡ ಅವರು ರೆಡ್ ಕಾರ್ಪೆಟ್ ರಿಲಾಂಚ್ ಮಾಡಿದ್ದಾರೆ.
ಅಕ್ಟೋಬರ್ 19-2022 ರಲ್ಲಿ ಪವಿತ್ರಾ ಗೌಡ ತಮ್ಮ ಈ ರೆಡ್ ಕಾರ್ಪೆಟ್ 777 ಸ್ಟುಡಿಯೋ ಶುರು ಮಾಡಿದ್ದರು. 2022 ರಲ್ಲಿ ರೆಡ್ ಕಾರ್ಪೆಟ್ ಶುರುಮಾಡಿದ್ದ ವೇಳೆ ಪವಿತ್ರಗೆ ದರ್ಶನ್ ಬೆಂಬಲ ಕೊಟ್ಟಿದ್ದರು. ಅಮೂಲ್ಯ, ಸೋನಲ್, ರಕ್ಷಿತಾ ಪ್ರೇಮ್ ಸೇರಿ ಅನೇಕರು ಮುಖ್ಯ ಅತಿಥಿಗಳಾಗಿ ಬಂದಿದ್ರು.. ಈ ಬಾರಿಯೂ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬರ್ತಾರಾ ಎಂಬ ಸುದ್ದಿಗಳು ಸಾಕಷ್ಟು ವೈರಲ್ ಆಗಿತ್ತು. ಆದ್ರೆ ಕೊಲೆ ಕೇಸ್ ಬಳಿಕ ಪವಿತ್ರಾ ಗೌಡ ಏಕಾಂಗಿಯಾಗಿದ್ದಾರೆ. ಈ ಬಾರಿ ಯಾವ ಸೆಲೆಬ್ರಿಟಿ ಕೂಡ ಇವೆಂಟ್ ಗೆ ಬಂದಿಲ್ಲ.. ಇವತ್ತು ಪವಿತ್ರಾ ಒಬ್ಬರೇ ರೆಡ್ ಕಾರ್ಪೆಟ್ ಸ್ಟುಡಿಯೋಗೆ ಬಂದಿದ್ದಾರೆ. ರೇಂಜ್ ರೋವರ್ ಕಾರಿನಲ್ಲಿ, ಗಾಗಲ್ಸ್ ತೊಟ್ಟು ಸ್ಟೈಲ್ ಆಗಿ ಬಂದಿಳಿದಿದ್ದಾರೆ. ಸಂಜೆ ವೇಳೆಗೆ ಸೆಲೆಬ್ರಿಟಿಗಳು ಹಾಗೂ ಫ್ರೆಂಡ್ಸ್ ಬರೋ ಸಾಧ್ಯತೆ ಇದೆ. ಹೀಗಾಗಿ ಶಾಪ್ ಗೆ ಗ್ರಾಹಕರನ್ನು ಬಿಡಲಾಗ್ತಿಲ್ಲ.. ಆಹ್ವಾನಿತರನ್ನ ಮಾತ್ರ ಬಿಡಲಾಗ್ತಿದೆ ಎಂದು ಹೇಳಲಾಗ್ತಿದೆ. ಹೀಗಾಗೇ ಶಾಪ್ ನಲ್ಲಿ ಬೌನ್ಸರ್ ಗಳನ್ನ ನೇಮಿಸಲಾಗಿದೆ. ಇದೀಗ ಪ್ರೇಮಿಗಳ ದಿನದಂದೇ ಪವಿತ್ರಾ ಗೌಡ ರೆಡ್ ಕಾರ್ಪೆಟ್ ರೀ ಲಾಂಚ್ ಮಾಡಿದ್ದಾರೆ. ಮತ್ತೆ ತಮ್ಮ ಬ್ಯುಸಿನೆಸ್ ಸಕ್ಸಸ್ಫುಲ್ ಆಗಿ ರನ್ ಮಾಡುವ ಭರವಸೆಯಲ್ಲಿದ್ದಾರೆ.