ರೆಡ್ ಕಾರ್ಪೆಟ್ ನಲ್ಲಿ ಪವಿತ್ರಾ.. ಮತ್ತೆ ಶುರುವಾಯ್ತಾ ಬ್ಯುಸಿನೆಸ್‌? – RR ನಗರ ಸೇರಿದ ಸುಬ್ಬಿ!!

ರೆಡ್ ಕಾರ್ಪೆಟ್ ನಲ್ಲಿ ಪವಿತ್ರಾ.. ಮತ್ತೆ ಶುರುವಾಯ್ತಾ ಬ್ಯುಸಿನೆಸ್‌? – RR ನಗರ ಸೇರಿದ ಸುಬ್ಬಿ!!

ಪವಿತ್ರಾ ಗೌಡ.. ಈಕೆಗೆ 2024 ಕಹಿ ವರ್ಷವೇ ಆಗಿತ್ತು.. ರೇಣುಕಾ ಸ್ವಾಮಿ ಕೊಲೆ ಕೇಸ್‌ ನಲ್ಲಿ ಜೈಲು ಸೇರುವಂತೆ ಆಗಿತ್ತು.. ಆರು ತಿಂಗಳು ಜೈಲು ವಾಸ ಮಾಡಿದ್ದ ಪವಿತ್ರಾ  ಜಾಮೀನು ಮೂಲಕ ಹೊರ ಬಂದಿದ್ದಾರೆ.. ಜೈಲಿನಿಂದ ಆಚೆ ಬರುತ್ತಿದ್ದಂತೆ ಪವಿತ್ರಾ ಗೌಡ ಹೊಸ ವರ್ಷಕ್ಕೆ ಹೊಸ ಜೀವನ ಶುರು ಮಾಡಲಿದ್ದಾರಂತೆ.. ಹಾಗಾದ್ರೆ ಜೈಲಿನಿಂದ ಆಚೆ ಬಂದಿರುವ ಪವಿತ್ರಾಗೌಡ ಮುಂದಿನ ಪ್ಲ್ಯಾನ್‌ ಏನು? ಮತ್ತೆ ಬ್ಯುಸಿನೆಸ್‌ ಶುರು ಮಾಡ್ತಾರಾ? ಆರ್‌ ಆರ್‌ ನಗರಕ್ಕೆ ಬಂದಿದ್ಯಾಕೆ? ಅಲ್ಲೇ ಸೆಟಲ್‌ ಆಗ್ತಾರಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಕಳಪೆಯಿಂದ ಗ್ರೇಟ್ ಕಮ್ ಬ್ಯಾಕ್ ಮಾಡ್ತಾರಾ ಕೊಹ್ಲಿ – ಪ್ರೇಮಾನಂದ ಗುರೂಜಿ ಅಭಯವೇನು?

ಪವಿತ್ರಾ ಗೌಡ.. ನಟಿಯಾಗಿದ್ರೂ ಕೂಡ ಕಳೆದ ಹತ್ತು ಹನ್ನೆರಡು ವರ್ಷಗಳ ಹಿಂದೆ ಆಕೆ ಯಾರೆಂದು ಅನೇಕರಿಗೆ ಗೊತ್ತೇ ಇರ್ಲಿಲ್ಲ.. ಆದ್ರೀಗ ಈಕೆಯದ್ದೇ ಸುದ್ದಿ.. ಆಕೆ ಎಲ್ಲಿಗೆ ಹೋದ್ಲು.. ಏನ್‌ ಮಾಡಿದ್ಲು ಅನ್ನೋದು ಚರ್ಚೆಯಲ್ಲಿರೋ ವಿಷಯವಾಗಿದೆ.. ಇದಕ್ಕೆ ಕಾರಣ ರೇಣುಕಾಸ್ವಾಮಿ ಕೊಲೆ ಕೇಸ್..‌  ಹೌದು, ಪವಿತ್ರಾ ಗೌಡ ಸ್ಯಾಂಡಲ್‌ ವುಡ್‌ ನಟಿ.. ಆಕೆಯ ಸಿನಿಮಾ ವಿಚಾರಕ್ಕೆ ಬಂದರೆ 10-12 ವರ್ಷಗಳ ಹಿಂದೆ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದರು. ಅಗಮ್ಯ, ಛತ್ರಿಗಳು ಸಾರ್ ಛತ್ರಿಗಳು ಇನ್ನಿತರ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಆದರೆ ಯಾವ ಸಿನಿಮಾಗಳಿಂದಲೂ ಅವರ ವೃತ್ತಿ ಬದುಕಿಗೆ ಅಂಥ ಸಕ್ಸಸ್ ಏನೂ ಸಿಕ್ಕಿರಲಿಲ್ಲ. ಹೀಗಾಗಿ ಸಿನಿಮಾ ಇಂಡಸ್ಟ್ರಿಯಿಂದ ಆಕೆ ದೂರ ಉಳಿದ್ಲು..  ಕೋಣನಕುಂಟೆ ಬಳಿ ಸಿಂಗಲ್‌ ಬಿ ಹೆಚ್‌ಕೆ ಮನೆಯೊಂದ್ರಲ್ಲಿ ಫ್ಯಾಮಿಲಿ ಜೊತೆ ಆಕೆ ಇದ್ದರಂತೆ.. ಆದ್ರೆ ಬರುಬರುತ್ತಾ ಆಕೆಯ ಲೈಫ್‌ ಕಂಪ್ಲೀಟ್‌ ಚೇಂಚ್‌ ಆಯ್ತು.. ದರ್ಶನ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಳು.

ಹೌದು.. ಮಿಡಲ್‌ ಕ್ಲಾಸ್‌ ಜೀವನ ಮಾಡ್ತಿದ್ದ ಪವಿತ್ರಾ ಗೌಡಗೆ ಕಾರು.. ಐಶಾರಾಮಿ ಬಂಗಲೆ ಎಲ್ಲವೂ ಬಂತು.. ಸಿನಿಮಾ ಕೈಕೊಟ್ಟ ಬೆನ್ನಲ್ಲೇ ಆಕೆ ಬ್ಯುಸಿನೆಸ್‌ ನತ್ತ ಮುಖ ಮಾಡಿದ್ಲು.. ಆರ್‌ ಆರ್‌ ನಗರ ಬಳಿ ರೆಡ್ ಕಾರ್ಪೆಟ್ ಎಂಬ ಬಟ್ಟೆ ಅಂಗಡಿ   ನಡೆಸ್ತಾ ಇದ್ರು.. ಆದ್ರೆ ರೇಣುಕಾ ಸ್ವಾಮಿ ಕೊಲೆ ಕೇಸ್‌ ನಲ್ಲಿ ಪವಿತ್ರಾ ಗೌಡ ಜೈಲಿಗೆ ಹೋಗಬೇಕಾಯ್ತು.. ಪವಿತ್ರಾ ಜೈಲಿಗೆ ಹೋಗ್ತಿದ್ದಂತೆ ಆಕೆಯ ಬ್ಯುಸಿನೆಸ್‌ ಅರ್ಧಕ್ಕೆ ನಿಂತು ಹೋಯ್ತು.. ಅದನ್ನ ಯಾರು ನಡೆಸ್ತಾ ಇರ್ಲಿಲ್ಲ.. ಇದೀಗ ಮತ್ತೆ ಆಕೆ ಹೊಸ ಜೀವನ ಶುರು ಮಾಡಲು ಸಿದ್ಧತೆ ನಡೆಸಿದ್ದಾರೆ..

ಜೈಲಿಂದ ಬರ್ತಿದ್ದಂತೆ ಅಮ್ಮನ ಮನೆ ಸೇರಿದ್ದ ಪವಿತ್ರಾ ಗೌಡ, ಹೊಸ ವರ್ಷದ ದಿನ ಆರ್​ ಆರ್​ ನಗರದ ತಮ್ಮ ಮನೆಗೆ ಬಂದಿದ್ರು. ಮನೆಯಲ್ಲಿ ಹೊಸ ವರ್ಷದಂದೇ ಪೂಜೆ ಕೂಡ ಮಾಡಿಸಿದ್ದಾರೆ ಎನ್ನಲಾಗ್ತಿದೆ. ಅದಾದ್ಮೇಲೆ ಬೆಂಗಳೂರಿನ ಬನಶಂಕರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಕೂಡ ಮಾಡಿಸಿದ್ದಾರಂತೆ. ಅಷ್ಟೇ ಅಲ್ಲ.. ಹೊಸ‌ ವರ್ಷದಿಂದ ಹೊಸ ಬದುಕು ಕಟ್ಟಿಕೊಳ್ಳೊಕೆ ಸಜ್ಜಾದ ಪವಿತ್ರಗೌಡ, ಇದೀಗ ಏಳು ತಿಂಗಳ ನಂತರ ಮತ್ತೆ ರೆಡ್ ಕಾರ್ಪೆಟ್ ಶಾಪ್ ನಡೆಸಲು ಸಿದ್ಥತೆ ಮಾಡಿಕೊಳ್ತಿದ್ದಾರೆ.. ಈಗ ಶಾಪ್‌ ನ ಕೆಲಸಗಳು ನಡಿತಾ ಇದ್ಯಂತೆ.. ಈಗಾಗಲೇ ಬಟ್ಟೆ ಅಂಗಡಿಗೆ ರಾ ಮೇಟಿರಿಯಲ್ ಖರೀದಿಸಿದ್ದಾರೆ ಎನ್ನಲಾಗ್ತಿದೆ.. .. ಧನುರ್ಮಾಸ ಮುಗಿದ ನಂತ್ರ ಅಂಗಡಿ ಮತ್ತೆ ಓಪನ್‌ ಆಗಿದ್ಯಂತೆ.  ಜನವರಿ 15 ರಿಂದ ರೆಡ್ ಕಾರ್ಪೆಟ್  ಶಾಪ್​ ನಲ್ಲಿ ಪವಿತ್ರಾ ಗೌಡ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗ್ತಿದೆ.

Shwetha M

Leave a Reply

Your email address will not be published. Required fields are marked *