ಜೈಲಿನಲ್ಲಿ ದರ್ಶನ್ ಭೇಟಿಗೆ ಹಠ ಹಿಡಿದ ಪವಿತ್ರಾ ಗೌಡ – ಯಾವುದೇ ಕಾರಣಕ್ಕೂ ಮೀಟ್‌ ಮಾಡಲ್ಲ ಎಂದ  ದರ್ಶನ್

ಜೈಲಿನಲ್ಲಿ ದರ್ಶನ್ ಭೇಟಿಗೆ ಹಠ ಹಿಡಿದ ಪವಿತ್ರಾ ಗೌಡ – ಯಾವುದೇ ಕಾರಣಕ್ಕೂ ಮೀಟ್‌ ಮಾಡಲ್ಲ ಎಂದ  ದರ್ಶನ್

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟಿ ಪವಿತ್ರಾ ಗೌಡ ಜೈಲು ಸೇರಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್ ನಲ್ಲಿ ಟ್ರಯಲ್ ಆರಂಭವಾಗಿದೆ. ಸಾಕ್ಷಿಗಳ ಹೇಳಿಕೆ, ರೇಣುಕಾಸ್ವಾಮಿ ತಂದೆ-ತಾಯಿಗಳ ಹೇಳಿಕೆಗಳನ್ನು ಇನ್ ಕ್ಯಾಮರಾದಲ್ಲಿ ದಾಖಲಿಸಲಾಗುತ್ತಿದೆ. ಟ್ರಯಲ್ ಆರಂಭವಾಗಿರುವ ಬೆನ್ನಲ್ಲೇ ನಟ ದರ್ಶನ್, ಪವಿತ್ರಾಗೌಡಗೆ ಆತಂಕ ಶುರುವಾಗಿದೆ. ಇದೀಗ ಪವಿತ್ರಾ ಗೌಡ, ನಟ ದರ್ಶನ್‌ನನ್ನು ಭೇಟಿ ಮಾಡಲು ಹಠ ಹಿಡಿಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಸೆಲ್ಫಿ ತೆಗೆದುಕೊಳ್ಳಲು ಬಂದರಿಂದಲೇ ನಟಿಗೆ ಕಿರುಕುಳ – ಸಿಕ್ಕಿದ್ದೇ ಚಾನ್ಸ್ ಎಂದು ಮೈ ಮುಟ್ಟಿದ್ರು!

ರೇಣುಕಾಸ್ವಾಮಿ ಕೊಲೆ ಕೇಸ್‌ನ ಟ್ರಯಲ್ ಶುರುವಾಗುತ್ತಿದ್ದಂತೆ ಪವಿತ್ರಾ ಗೌಡ ಹಾಗೂ ದರ್ಶನ್‌ಗೆ ನಡುಕ ಶುರುವಾಗಿದೆ. ಈ ಬೆನ್ನಲ್ಲೇ ಪವಿತ್ರಾ ಗೌಡ ದರ್ಶನ್‌ನ ಭೇಟಿ ಮಾಡಲು ಪವಿತ್ರಾಗೌಡ ಶತ ಪ್ರಯತ್ನ ಮಾಡ್ತಿದ್ದಾರೆ. ಕಾರಾಗೃಹ ಇಲಾಖೆ ಡಿಜಿಪಿಯಾಗಿ ಅಧಿಕಾರ ಸ್ವೀಕರಿಸಿದ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್‌, ಈಚೆಗೆ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ ದರ್ಶನ್, ಪವಿತ್ರಾ ಗೌಡರನ್ನ ಮಾತನಾಡಿಸಿದ್ದಾರೆ. ಈ ವೇಳೆ ಸಹ ಕೈದಿಗಳ ಭೇಟಿಗೆ ಅವಕಾಶ ನೀಡುವಂತೆ ಪವಿತ್ರಾ ಗೌಡ ಮನವಿ ಮಾಡಿದ್ದಾರೆ.

ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್‌ ಬಳಿ, ತಾನು ಕಾನೂನು ಹೋರಾಟ ಮಾಡುತ್ತೇನೆ. ಈ ನಿಟ್ಟಿನಲ್ಲಿ ಕಾನೂನಿನಲ್ಲಿ ಅವಕಾಶವಿದೆಯಾ ಎಂದು ಪರಿಶೀಲಿಸುವುದಾಗಿ ಹೇಳಿದ್ದಾರೆ. ಆದ್ರೆ ಪವಿತ್ರಾ ಗೌಡ ಜೊತೆ ಮಾತನಾಡಲು ದರ್ಶನ್ ಒಪ್ಪುತ್ತಿಲ್ಲ. ಯಾವುದೇ ಕಾರಣಕ್ಕೂ ಆಕೆಯನ್ನ ಭೇಟಿ ಮಾಡಲ್ಲ ಎಂದಿದ್ದಾರೆ ಎಂದು ತಿಳಿದುಬಂದಿದೆ.

Shwetha M