ಪತಿರಾನ ಸೆಲೆಬ್ರೇಷನ್ ಸೀಕ್ರೆಟ್ – ಬೇಬಿ ಮಾಲಿಂಗನಿಗೆ ಧೋನಿಯೇ ಪವರ್ – CSK ಬೌಲರ್ ಸಕ್ಸಸ್ ಸ್ಟೋರಿ

ಪತಿರಾನ ಸೆಲೆಬ್ರೇಷನ್ ಸೀಕ್ರೆಟ್ – ಬೇಬಿ ಮಾಲಿಂಗನಿಗೆ ಧೋನಿಯೇ ಪವರ್ – CSK ಬೌಲರ್ ಸಕ್ಸಸ್ ಸ್ಟೋರಿ

ಐಪಿಎಲ್​ ಇತಿಹಾಸದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್ ವನ್​ ಆಫ್​ ದಿ ಮೋಸ್ಟ್ ಸಕ್ಸಸ್​ಫುಲ್ ಫ್ರಾಂಚೈಸಿ. ಇದುವರೆಗೆ ಒಟ್ಟು ಐದು ಬಾರಿ ಸಿಎಸ್​ಕೆ ಚಾಂಪಿಯನ್ ಆಗಿದೆ. ಚೆನ್ನೈನ ಸಕ್ಸಸ್​ನಲ್ಲಿ ಧೋನಿಯ ರೋಲ್ ತುಂಬಾ ದೊಡ್ಡದಿದೆ. ಯಂಗ್​ ಬೌಲರ್ಸ್​ಗಳನ್ನಿಟ್ಟುಕೊಂಡೇ ಗೆಲ್ಲೋ ಟೀಮ್ ಅಂದ್ರೆ ಅದು ಸಿಎಸ್‌ಕೆ. ಈ ಬಾರಿಯೂ ಅಷ್ಟೇ ಚೆನ್ನೈ ಸೂಪರ್​​ ಕಿಂಗ್ಸ್​ ಫುಲ್​ ಫ್ಲೆಡ್ಜ್, ಸ್ಟ್ರಾಂಗ್​ ಬೌಲಿಂಗ್​ ಸ್ಕ್ವಾಡ್​​ನ್ನ ಹೊಂದಿದೆ. ಅದ್ರಲ್ಲೂ ಸಿಎಸ್​ಕೆ ಪ್ರಮುಖ ಅಸ್ತ್ರವೇ ಬೇಬಿ ಮಾಲಿಂಗ. ಈತನ ಬೌಲಿಂಗ್ ಸ್ಟೈಲ್ ಫುಲ್ ಡಿಫರೆಂಟ್. ಅಷ್ಟೇ ಅಲ್ಲ ಪ್ರತಿ ವಿಕೆಟ್ ಕಬಳಿಸಿದ ಮೇಲೆ ಈತನ ಸೆಲೆಬ್ರೇಷನ್ ಕೂಡಾ ಡಿಫರೆಂಟ್. ಈತನಿಗೂ ಫುಟ್ಬಾಲ್ ದಿಗ್ಗಜ ಕ್ರಿಶ್ಚಿಯಾನೋ ರೋನಾಲ್ಡೋಗೂ ಒಂದು ವಿಚಾರದಲ್ಲಿ ಹೋಲಿಕೆಯೂ ಆಗುತ್ತಿದೆ.

ಇದನ್ನೂ ಓದಿ: ತವರಿನಲ್ಲೇ KKR ಢಮಾರ್ – ತಿರಸ್ಕರಿಸಿದ್ದ ಶಶಾಂಕ್ ಪಂಜಾಬ್ HERO

ಶ್ರೀಲಂಕಾದ ಲೆಜೆಂಡರಿ ಕ್ರಿಕೆಟರ್ ಲಸಿತ್ ಮಲಿಂಗಾ ಎಂಥಾ ಡೇಂಜರಸ್ ಬೌಲರ್ ಆಗಿದ್ರು ಅನ್ನೋದು ನಿಮಗೆ ಗೊತ್ತೇ ಇದೆ. ಅದ್ರಲ್ಲೂ ಮಲಿಂಗಾ ಎಸೀತಾ ಇದ್ದಂತಾ ಯಾರ್ಕರ್​​ಗಳಂತೂ ಅನ್​​ಪ್ಲೇಯಬಲ್ ಆಗಿದ್ವು. ಬ್ಯಾಟ್​​ ಮಿಸ್ ಆಯ್ತು ಅಂದ್ರೆ ವಿಕೆಟ್​ಗಳು ಪಲ್ಟಿ ಹೊಡೀತಾ ಇದ್ವು. ಲಸಿತ್ ಮಲಿಂಗಾ ಬೌಲಿಂಗ್ ಶೈಲಿಯೇ ಬ್ಯಾಟ್ಸ್​​ಮನ್​ಗಳಿಗೆ ದೊಡ್ಡ ಚಾಲೆಂಜ್ ಆಗಿತ್ತು. ಆದ್ರೀಗ ಮಲಿಂಗಾ ಅಂತಾರಾಷ್ಟ್ರೀಯ ಕ್ರಿಕೆಟ್ ಆಗಲಿ, ಐಪಿಎಲ್​​ನಲ್ಲಾಗಲಿ ಆಡ್ತಾ ಇಲ್ಲ. ರಿಟೈರ್ಡ್ ಆಗಿದ್ದಾರೆ. ಆದ್ರೆ ಶ್ರೀಲಂಕಾದಲ್ಲಿ ಇನ್ನಷ್ಟು ಮರಿ ಮಲಿಂಗಾಗಳು ಇದ್ದಾರೆ. ಲಸಿತ್ ಮಲಿಂಗಾರಿಂದ ಇನ್​ಸ್ಪೈರ್ ಆಗಿ ಅವರದ್ದೇ ಶೈಲಿಯಲ್ಲಿ ಬೌಲಿಂಗ್ ಪ್ರಾಕ್ಟೀಸ್ ಮಾಡಿ ಈಗ ಶ್ರೀಲಂಕಾ ಪರ ಅಂತಾರಾಷ್ಟ್ರೀಯ ಮ್ಯಾಚ್​​ಗಳನ್ನಾಡೋ ಮಟ್ಟಕ್ಕೆ ಬೆಳೆದಿದ್ದಾರೆ. ಐಪಿಎಲ್​​ಗೂ ಎಂಟ್ರಿಯಾಗಿದ್ದಾರೆ. ಈ ಪೈಕಿ ಮತೀಶ ಪತಿರಾಣ ಕೂಡ ಒಬ್ಬರು. ಚೆನ್ನೈ ಸೂಪರ್​​ ಕಿಂಗ್ಸ್ ಪರ ಆಡ್ತಿರೋ ಮತೀಶ ಪತಿರಾಣ ಕಳೆದ ಐಪಿಎಲ್​​​ನಲ್ಲಿ ಫುಲ್ ಶೈನ್ ಆಗಿದ್ರು. 2023ರ ಸೀಸನ್​ನಲ್ಲಿ ಮತೀಶ ಪತಿರಾಣ ಒಟ್ಟು 19 ವಿಕೆಟ್​ಗಳನ್ನ ಪಡೆದಿದ್ರು. ಅಸಲಿಗೆ ಲಾಕ್​ಡೌನ್​ ಟೈಮ್​ನಲ್ಲಿ ಎಂ.ಎಸ್.ಧೋನಿ ಮತೀಶ ಪತಿರಾಣರನ್ನ ಫೈಂಡ್​ಔಟ್ ಮಾಡ್ತಾರೆ. ಮತೀಶ ಪತಿರಾಣ ಬೌಲಿಂಗ್ ವಿಡಿಯೋ ಒಂದು ವೈರಲ್ ಆಗಿತ್ತು. ಆಗ ಪತಿರಾಣ ಶ್ರೀಲಂಕಾದಲ್ಲಿ ಇನ್ನೂ ಸ್ಕೂಲ್ ಕ್ರಿಕೆಟ್ ಆಡ್ತಾ ಇದ್ರು. ಆ ವೈರಲ್ ವಿಡಿಯೋ ನೋಡಿ ಎಂ.ಎಸ್.ಧೋನಿ ಲಂಕಾ ಯಂಗ್​​ಸ್ಟರ್ನ್​​ನ ಚೆನ್ನೈ ಸೂಪರ್​ ಕಿಂಗ್ಸ್​​ಗೆ ಸೇರಿಸಿಕೊಳ್ಳೋಕೆ ನಿರ್ಧರಿಸ್ತಾರೆ. ಸಿಎಸ್​ಕೆ ಪಾಲಿಗೆ ಪತಿರಾಣ ಈಗ ಮೇನ್ ವೆಪನ್ ಆಗಿದ್ದಾರೆ. ಇಲ್ಲಿ ಇನ್ನೊಂದು ಸಂಗತಿಯನ್ನ ಹೇಳಲೇಬೇಕು. ಬ್ಯಾಟ್ಸ್​ಮನ್​ಗಳೇ ಇರ್ಲಿ, ಬೌಲರ್ಸ್​ಗಳೇ ಇರ್ಲಿ.. ಯಂಗ್​ ಟ್ಯಾಲೆಂಟೆಡ್ ಕ್ರಿಕೆಟರ್ಸ್​​ಗಳನ್ನ ಪಿಕ್ ಮಾಡೋದ್ರಲ್ಲಿ ಧೋನಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್​​ ಫ್ರಾಂಚೈಸಿ ಎಕ್ಸ್​ಪರ್ಟ್ ಆಗಿದೆ. ಯಂಗ್​ಸ್ಟರ್ಸ್​ಗಳನ್ನ ಹೇಗೆ ಶಾರ್ಪ್ ಮಾಡಬೇಕು, ಯಾರನ್ನ, ಯಾವ ಸ್ವಿಚ್ಯುವೇಶನ್​ನಲ್ಲಿ ಹೇಗೆ ಬಳಸಿಕೊಳ್ಳಬೇಕು ಅನ್ನೋದು ಧೋನಿಗೆ ಚೆನ್ನಾಗಿಯೇ ಗೊತ್ತಿದೆ. ಆಗಲೇ ಹೇಳಿದ ಹಾಗೆ 2023ರ ಐಪಿಎಲ್​ ವೇಳೆಯೂ ಚೆನ್ನೈ ಸೂಪರ್​​ ಕಿಂಗ್ಸ್​​ನಲ್ಲಿ ಟಾಪ್ ಕ್ಲಾಸ್, ಸ್ಟಾರ್ ಬೌಲರ್​ಗಳು ಅಂತಾ ಯಾರೂ ಇರಲಿಲ್ಲ. ಆದ್ರೂ ಸಿಎಸ್​ಕೆ ಚಾಂಪಿಯನ್ ಆಗಿತ್ತು. ಇನ್​​​ಎಕ್ಸ್​ಪೀರಿಯನ್ಸ್ಡ್, ಯಂಗ್​​ಸ್ಟರ್ಸ್​​ಗಳನ್ನಿಟ್ಟುಕೊಂಡೇ ಧೋನಿ ಟೂರ್ನಿಯನ್ನ ಗೆಲ್ಲಿಸಿದ್ರು. ಚೆನ್ನೈ ಸೂಪರ್ ಕಿಂಗ್ಸ್​ನಲ್ಲಿ ಧೋನಿ ಗರಡಿಯಲ್ಲಿ ಯಂಗ್​ಸ್ಟರ್ಸ್​ಗಳೆಲ್ಲಾ ತಮ್ಮ ತಮ್ಮ ಪರ್ಫಾಮೆನ್ಸ್​​ನ್ನ ಸಾಕಷ್ಟು ಇಂಪ್ರೂವ್ ಮಾಡಿಕೊಳ್ತಾ ಇದ್ದಾರೆ. ಐಪಿಎಲ್​​ನಲ್ಲಿ ಆಡೋಕೆ ಬಯಸೋ ಆಲ್​​ಮೋಸ್ಟ್​ ಎಲ್ಲಾ ಯಂಗ್ ಕ್ರಿಕೆಟರ್ಸ್​ ಕೂಡ ಚೆನ್ನೈ ಸೂಪರ್​​​ ಕಿಂಗ್ಸ್​ ಜಾಯಿನ್ ಆಗೋಕೆ ಬಯಸ್ತಾರೆ. ಅದಕ್ಕೆ ಕಾರಣ ಎಂ.ಎಸ್.ಧೋನಿ. ಮಾಹಿ ಆ ರೀತಿ ಟ್ರೈನ್ ಮಾಡ್ತಾರೆ. ಟಿಪ್ಸ್​ಗಳನ್ನ ನೀಡ್ತಾರೆ. ತಂಡದ ಪ್ರತಿಯೊಬ್ಬ ಆಟಗಾರನ ಜೊತೆಗೂ ಸಪರೇಟ್ ಆಗಿ ಡಿಸ್ಕಸ್ ಮಾಡ್ತಾರೆ. ಅವರ ವೀಕ್​ನೆಸ್​​ಗಳನ್ನ ಐಡೆಂಟಿಫೈ ಮಾಡಿ ಅದ್ರ ಮೇಲೆ ವರ್ಕೌಟ್ ಮಾಡೋಕೆ ಬೇಕಾದ ಸಲಹೆಗಳನ್ನ ನೀಡ್ತಾರೆ. ಇದೇ ಕಾರಣಕ್ಕೆ ಚೆನ್ನೈ ಸೂಪರ್​ ಕಿಂಗ್ಸ್​​ನಲ್ಲಿ ಯಂಗ್​ಸ್ಟರ್ಸ್​​ಗಳೇ ಹೆಚ್ಚಿರೋದು. ಧೋನಿ ಕೂಡ ಟೀಮ್​ನಲ್ಲಿ ಯುವ ಕ್ರಿಕೆಟಿಗರಿಗೆ ಹೆಚ್ಚಿನ ಪ್ರಿಫರೆನ್ಸ್ ನೀಡ್ತಾ ಇರೋದು. ನೋ ಡೌಟ್ ಆಫ್ಟರ್ ಕ್ಯಾಪ್ಟನ್ಸಿ, ನಾಯಕತ್ವದಿಂದ ಕೆಳಗಿಳಿದ ಮೇಲೆ ಧೋನಿ ಚೆನ್ನೈ ಸೂಪರ್ ಕಿಂಗ್ಸ್​​ನ ಮೆಂಟರ್ ಅಥವಾ ಹೆಡ್ ಕೋಚ್ ಆಗುವ ಸಾಧ್ಯತೆಯೇ ಹೆಚ್ಚಿದೆ. ಇನ್ನು ಶ್ರೀಲಂಕಾದಲ್ಲಿ ಹುಟ್ಟಿಕೊಳ್ತಾ ಇರೋ ಈ ಬೇಬಿ ಮಲಿಂಗಾ ಬಗ್ಗೆ ಒಂದಷ್ಟು ಹೇಳಲೇಬೇಕು. ಮತೀಶ ಪತಿರಾಣ ಬೌಲಿಂಗ್ ಸ್ಟೈಲ್ ಹಿಂದಿರೋದೆ ಲಸಿತ್ ಮಾಲಿಂಗ. ಕೇವಲ ಇನ್​ಸ್ಪಿರೇಷನ್ ಆಗಿಯಷ್ಟೇ ಅಲ್ಲ. ಮಲಿಂಗಾರನ್ನ ನೋಡಿ ಆ ಶೈಲಿಯಲ್ಲಿ ಈ ಯಂಗ್​ಸ್ಟರ್ಸ್​​ಗಳು ಬೌಲಿಂಗ್ ಪ್ರಾಸ್ಟೀಸ್ ಮಾಡಿರೋದಷ್ಟೇ ಅಲ್ಲ, ಖುದ್ದು ಲಸಿತ್ ಮಲಿಂಗಾ ಇವ್ರನ್ನ ಟ್ರೈನ್ ಮಾಡಿದ್ದಾರೆ. ತಮ್ಮ ಶೈಲಿಯಲ್ಲೇ ಬೌಲಿಂಗ್​ ಮಾಡಬೇಕು ಅಂತಾ ಬಯಸೋ ಯಂಗ್​​ಸ್ಟರ್ಸ್​ಗಳಿಗೆ ಲಸಿತ್ ಮಲಿಂಗಾ ಶ್ರೀಲಂಕಾದಲ್ಲಿ ಟ್ರೈನಿಂಗ್ ಕೊಡ್ತಾ ಇದ್ದಾರೆ. ತಮ್ಮದೇ ಒಂದು ಬೌಲಿಂಗ್ ಅಕಾಡೆಮಿಯನ್ನ ಓಪನ್ ಮಾಡಿದ್ದಾರೆ. ಮತೀಶ ಪತಿರಾಣ, ಕುಗಾದಾಸ್ ಮತುಲಾನ್ ಕೂಡ ಲಸಿತ್ ಮಲಿಂಗಾ ಅಂಡರ್​ನಲ್ಲೇ ಪ್ರಾಕ್ಟೀಸ್ ಮಾಡಿದ್ದಾರೆ. ಈ ಸ್ಲಿಂಗಾ ಸ್ಟೈಲ್​ನಲ್ಲಿ ಬೌಲಿಂಗ್ ಮಾಡುವಂಥಾ ಸಾಕಷ್ಟು ಯಂಗ್​ಸ್ಟರ್ಸ್​ಗಳು ಶ್ರೀಲಂಕಾದಲ್ಲಿ ಬೆಳೀತಾ ಇದ್ದಾರೆ. ಹೀಗಾಗಿ ಲಸಿತ್ ಮಲಿಂಗಾ ಕೂಡ ತಮ್ಮ ಲೀಗಸಿಯನ್ನ ನೆಕ್ಸ್ಟ್ ಜನರೇಷನ್ ಬೌಲರ್ಸ್​ಗಳು ಕಂಟಿನ್ಯೂ ಮಾಡಲಿ ಅಂತಾ ಸಾಕಷ್ಟು ಎಫರ್ಟ್ ಹಾಕ್ತಿದ್ದಾರೆ. ಈ ಪೈಕಿ ಇಬ್ಬರನ್ನ ಈಗಾಗ್ಲೇ ಎಂ.ಎಸ್.ಧೋನಿ ತಮ್ಮ ತೆಕ್ಕೆಗೆ ಸೇರಿಸಿಕೊಂಡಿದ್ದಾರೆ.

ನಿಮಗೆ ಶ್ರೀಲಂಕಾದ ದಿಗ್ಗಜ ವೇಗಿ ಲಸಿತ್ ಮಾಲಿಂಗ ಬಗ್ಗೆ ಗೊತ್ತೇ ಇದೆ. ಶ್ರೀಲಂಕಾ ಕ್ರಿಕೆಟ್‌ ತಂಡದಲ್ಲಿ ದೀರ್ಘಕಾಲ ಕೀ ವೇಗಿಯಾಗಿ ಆಡಿದ್ದ ಲಸಿತ್‌ ಮಾಲಿಂಗ ಬಾಲ್ ಹಾಕೋ ಸ್ಟೈಲ್‌ ಎಲ್ಲರಿಗೂ ಚಿರಪರಿಚಿತ. ಈ ಸೀನಿಯರ್ ಮಾಲಿಂಗನ ಬೌಲಿಂಗ್ ಸ್ಟೈಲ್ ಮಿಸ್ ಮಾಡ್ಕೊಂಡವ್ರಿಗೆ ಈಗ ಬೇಬಿ ಮಾಲಿಂಗ ಸಿಕ್ಕಿದ್ದಾರೆ. ಲಂಕಾ ಐಕಾನ್ ಲಸಿತ್ ಮಾಲಿಂಗ ರೀತಿಯೇ ಬೌಲಿಂಗ್ ಮಾಡೋ ಪತಿರಾನಾಗೆ ಈಗಾಗಲೇ ಬೇಬಿ ಮಾಲಿಂಗ ಅಂತಾ ಕರೆಯಲಾಗ್ತಿದೆ. ಇನ್ನೊಂದು ವಿಚಾರ ಹೇಳಲೇಬೇಕು. ಪತಿರಾನ ಸಹೋದರಿ ವಿಶುಕಾ ಒಂಜು ಮಾತನ್ನು ಹಿಂದೊಮ್ಮೆ ಹೇಳಿದ್ದರು. ನನ್ನ ಸಹೋದರ ತಲಾ ಧೋನಿ ತೆಕ್ಕೆಯಲ್ಲಿದ್ದಾನೆ. ಹೀಗಾಗಿ ನನ್ನ ತಮ್ಮನಿಗೆ ಉಜ್ವಲ ಭವಿಷ್ಯವಿದೆ ಎಂದಿದ್ದರು. ಅದೇ ರೀತಿ ಪತಿರಾಣ ಸಾಧನೆ ಮಾಡಿ ತೋರಿಸಿದ್ದಾರೆ. ಶ್ರೀಲಂಕಾ ಕ್ರಿಕೆಟ್ ಟೀಮ್‌ಗೆ ಒಬ್ಬ ಶ್ರೇಷ್ಠ ಬೌಲರ್‌ ಸಿಗಲು ಕಾರಣ ಕೂಡಾ ಧೋನಿ ಎಂದರೂ ತಪ್ಪಾಗಲಾರದು. ಐಪಿಎಲ್ ವಿಚಾರಕ್ಕೆ ಬಂದ್ರೂ ಅಷ್ಟೇ. ಪತಿರಾನ ಧೋನಿಯ ಫೆವರೇಟ್ ಬಾಯ್. ಜೊತೆಗೆ ಪತಿರಾನ ಅತ್ಯುತ್ತಮ ಡೆತ್ ಬೌಲರ್ ಎಂದು ಸ್ವತಃ ಧೋನಿಯೇ ಹೇಳಿದ್ದಾರೆ.  ಅದರಲ್ಲೂ ಏಪ್ರಿಲ್ 14ರಂದು ಮುಂಬೈ ಇಂಡಿಯನ್ಸ್ ಟೀಮ್‌ನ್ನ ಹೋಮ್‌ಗ್ರೌಂಡ್‌ನಲ್ಲಿ ಬ್ಯಾಟಿಂಗ್ ಬೆನ್ನೆಲುಬು ಮುರಿದಿದ್ದು ಕೂಡಾ ಇದೇ ಬೇಬಿ ಮಾಲಿಂಗ. ಮುಂಬೈ ವಿರುದ್ಧದ ಪಂದ್ಯದ ಮಹೀಶ ಪತಿರಾನ ನಾಲ್ಕು ವಿಕೆಟ್‌ ಕಬಳಿಸಿ, ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಇದರ ಮಧ್ಯೆ ಪತಿರಾನ ಸೆಲೆಬ್ರೇಷನ್ ಮಾಡೋ ಕ್ಷಣ ಕೂಡಾ ಡಿಫರೆಂಟ್ ಆಗಿದೆ.

ಹೌದು. ಪ್ರತಿ ವಿಕೆಟ್‌ ಕಿತ್ತಾಗಲೂ ಪತಿರಾನ ತಮ್ಮ ಎರಡೂ ಕೈಗಳ ಎಂಟು ಬೆರಳುಗಳನ್ನು ಎದೆಯ ಮೇಲೆ ಕಟ್ಟಿ ಕಣ್ಣು ಮುಚ್ಚಿ ಪ್ರಾರ್ಥನೆ ಸಲ್ಲಿಸುವ ರೀತಿ ಈಗ ಎಲ್ಲರ ಗಮನ ಸೆಳೆದಿದೆ.. ಫುಟ್ಬಾಲ್‌ ದಂತಕತೆ ಕ್ರಿಶ್ಚಿಯಾನೋ ರೊನಾಲ್ಡೋ ಅವರ ಡೈಹಾರ್ಟ್‌ ಫ್ಯಾನ್‌ ಆಗಿರುವ ಪತಿರಾನ ಸೆಲೆಬ್ರೇಷನ್‌ನಲ್ಲಿ ರೊನಾಲ್ಡೋ ಅವರನ್ನು ಫಾಲೋ ಮಾಡುವಂತಿದೆ.. ರೊನಾಲ್ಡೋ ಕೂಡ ಗೋಲ್‌ ಹೊಡೆದಾಗ ಇದೇ ರೀತಿಯಲ್ಲಿ ಸೆಲೆಬ್ರೇಟ್‌ ಮಾಡ್ತಾರೆ.. ಕೆಲವೊಮ್ಮೆ ಎದೆಯ ಮೇಲೆ ಎರಡೂ ಕೈಗಳನ್ನಿಟ್ಟು ಅಥವಾ ಬೆರಳುಗಳನ್ನು ಬೆಸೆದು ರೊನಾಲ್ಡೋ ಸೆಲೆಬ್ರೇಟ್‌ ಮಾಡ್ತಾರೆ.. ಆದ್ರೆ ಪತಿರಾನ ಸೆಲೆಬ್ರೇಷನ್‌ ಸೀಕ್ರೆಟ್‌ ಕೇವಲ ಇಷ್ಟಕ್ಕೇ ಉಳಿದಿಲ್ಲ.. ಮಹೀಶ ಪತಿರಾನ, ಬೌದ್ಧ ಧರ್ಮೀಯರಾಗಿದ್ದು, ಬುದ್ದಿಸಂ ಅನ್ನು ನಿಷ್ಠೆಯಿಂದ ಫಾಲೋ ಮಾಡ್ತಾರೆ.. ಅಲ್ಲದೆ ಬಾಲ್ಯದಿಂದಲೂ ಬೌದ್ಧ ಮಂದಿರಗಳಿಗೆ ಹೋಗಿ ಅವರು ಶ್ರದ್ಧೆಯಿಂದ ಪ್ರಾರ್ಥನೆ ಸಲ್ಲಿಸುತ್ತಿದ್ದರು.. ಪತಿರಾನ ಅವರ ತಂದೆ ಹೇಳುವ ಪ್ರಕಾರ, ಅವರ ಮಗ, ಬುದ್ಧನ ಅಷ್ಟಪದಿಯಲ್ಲಿ ನಂಬಿಕೆಯಿಟ್ಟವರಾಗಿದ್ದಾರಂತೆ.. ಬಹುಷಃ ಅದೇ ಕಾರಣಕ್ಕಾಗಿ ತಮ್ಮ ಎಂಟು ಬೆರಳುಗಳನ್ನು ಎದೆಯ ಮೇಲೆ ಕಟ್ಟಿ ವಿಕೆಟ್‌ ಕಬಳಿಸಿದಾಗ ಪತಿರಾನ ಪ್ರಾರ್ಥನೆ ಸಲ್ಲಿಸುತ್ತಾರೆ.. ಅದಾದ ನಂತರ ಅವರು ಸೆಲೆಬ್ರೇಷನ್‌ನಲ್ಲಿ ಭಾಗಿಯಾಗುತ್ತಾರೆ..

Sulekha