ಭಾರತದ ಗೆಲುವಿಗೆ ಆಸ್ಟ್ರೇಲಿಯಾ & ಇಂಗ್ಲೆಂಡ್ ಕ್ಯಾತೆ – ಟೀಂ ಇಂಡಿಯಾಗೆ ಒಂದೇ ಪಿಚ್ ಪ್ಲಸ್?

2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಆತಿಥ್ಯ ಪಾಕಿಸ್ತಾನಕ್ಕೆ ಸಿಕ್ಕಾಗಲೇ ಭಾರತ ಸರ್ಕಾರ ಟೀಂ ಇಂಡಿಯಾವನ್ನ ಪಂದ್ಯಗಳಿಗಾಗಿ ಪಾಕಿಸ್ತಾನಕ್ಕೆ ಕಳಿಸಲ್ಲ. ಭದ್ರತೆಯ ಕಾರಣದಿಂದ ಬೇರೆ ಸ್ಥಳದಲ್ಲಿ ನಮ್ಮ ಪಂದ್ಯಗಳನ್ನ ನಿಗದಿ ಪಡಿಸಿ. ಇಲ್ಲದಿದ್ರೆ ಟೂರ್ನಿಯಿಂದಲೇ ಹೊರಗುಳಿಯೋದಾಗಿ ತಾಕೀತು ಮಾಡಿತ್ತು. ಕ್ರಿಕೆಟ್ ಲೋಕದ ದೊಡ್ಡಣ್ಣನಾಗಿರೋ ಭಾರತವನ್ನ ಬಿಟ್ಟು ಐಸಿಸಿ ಟೂರ್ನಿ ಆಡಿಸೋದು ದೊಡ್ಡ ಲಾಸ್ ಅನ್ನೋದು ಐಸಿಸಿಗೂ ಗೊತ್ತಿತ್ತು. ಸೋ ಕೊನೆಗೆ ಭಾರತದ ಎಲ್ಲಾ ಪಂದ್ಯಗಳನ್ನ ದುಬೈನ ಅಂತಾರಾಷ್ಟ್ರೀಯ ಸ್ಟೇಡಿಯಮ್ನಲ್ಲಿ ಫಿಕ್ಸ್ ಮಾಡಲಾಯ್ತು. ಅದ್ರಂತೆ ಈಗಾಗ್ಲೇ ಭಾರತ ಎರಡು ಪಂದ್ಯಗಳನ್ನ ಆಡಿದೆ. ಎರಡಕ್ಕೆ ಎಡರನ್ನೂ ಗೆದ್ದು ಸೆಮೀಸ್ಗೆ ಕಾಲಿಟ್ಟಿದೆ. ಇತ್ತ ಎ ಗುಂಪಿನಲ್ಲಿರೋ ನ್ಯೂಜಿಲೆಂಡ್ ಪಡೆ ಕೂಡ ನಾಕೌಟ್ ಹಂತ ತಲುಪಿದೆ. ಬಟ್ ಭಾರತದ ಗೆಲುವಿಗೆ ಮಾತ್ರ ಆಸ್ಟ್ರೇಲಿಯಾ ಆಟಗಾರ ಪ್ಯಾಟ್ ಕಮಿನ್ಸ್ ಕಿರಿಕ್ ತೆಗೆದಿದ್ದಾರೆ. ಹಾಗೇ ಇಂಗ್ಲೆಂಡ್ ಮಾಜಿ ಕ್ರಿಕೆಟರ್ ಮೈಕೆಲ್ ಅಥರ್ಟನ್ ಕೂಡ ಇಟ್ಸ್ ನಾಟ್ ಫೇರ್ ಅಂತಾ ಕಿಡಿ ಕಾಡಿದ್ದಾರೆ.
ಇದನ್ನೂ ಓದಿ : CTಯಲ್ಲಿ ಕನ್ನಡಿಗ ರಚಿನ್ ರಣಾರ್ಭಟ- ರಕ್ತ ಬಿದ್ದ ನೆಲದಲ್ಲೇ ಸುನಾಮಿ ಸೆಂಚುರಿ
ಆಸ್ಟ್ರೇಲಿಯಾದ ಸ್ಟಾರ್ ಆಟಗಾರ ಪ್ಯಾಟ್ ಕಮಿನ್ಸ್ ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡ್ತಿಲ್ಲ. ಇಂಜುರಿ ಕಾರಣದಿಂದ ಟೂರ್ನಿಯಿಂದ ಹೊರಗಿದ್ದಾರೆ. ಸ್ಟೀವ್ ಸ್ಮಿತ್ ಆಸ್ಟ್ರೇಲಿಯಾ ತಂಡವನ್ನು ಲೀಡ್ ಮಾಡ್ತಿದ್ದಾರೆ. ಆದ್ರೀಗ ಭಾರತದ ಪಂದ್ಯಗಳ ಬಗ್ಗೆ ಕಮಿನ್ಸ್ ಮಾತ್ನಾಡಿದ್ದಾರೆ. ಟೀಮ್ ಇಂಡಿಯಾ ಒಂದೇ ಮೈದಾನದಲ್ಲಿ ಪಂದ್ಯಗಳನ್ನು ಆಡುತ್ತಿದೆ. ಆದರೆ ಉಳಿದ ತಂಡಗಳನ್ನು ಒಟ್ಟು ಮೂರು ಮೈದಾನದಲ್ಲಿ ಆಡಿಸಲಾಗುತ್ತಿದೆ. ಇಲ್ಲಿ ಭಾರತ ತಂಡವು ಒಂದೇ ಸ್ಥಳದಲ್ಲಿ ಆಡುತ್ತಿರುವುದರಿಂದ ಅವ್ರಿಗೆ ಹೆಚ್ಚಿನ ಅಡ್ವಾಂಟೇಜಸ್ ಸಿಗುತ್ತೆ ಎಂದಿದ್ದಾರೆ. ಅಲ್ದೇ ಭಾರತ ಮೊದಲೇ ಬಲಿಷ್ಠ ತಂಡ. ಇದೀಗ ಅವರು ದುಬೈ ಮೈದಾನದಲ್ಲಿ ಮಾತ್ರ ಆಡುತ್ತಿರುವುದರಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಒಂದು ತಂಡಕ್ಕೆ ಮಾತ್ರ ಒಂದೇ ಸ್ಟೇಡಿಯಂನಲ್ಲಿ ಆಡಲು ಅನುಕೂಲ ಮಾಡಿ ಕೊಡುತ್ತಿರುವುದು ಸರಿಯಾದ ಕ್ರಮವಲ್ಲ ಎನ್ನುವಂತೆ ಮಾತ್ನಾಡಿದ್ದಾರೆ. ಟೀಮ್ ಇಂಡಿಯಾಗೆ ಸಿಕ್ಕಿರುವ ಹೆಚ್ಚುವರಿ ಅನುಕೂಲಗಳ ಬಗ್ಗೆಯೂ ಪ್ರಶ್ನಿಸಿದ್ದಾರೆ. ಉಳಿದ ತಂಡಗಳಿಗೆ ಈ ಅನುಕೂಲ ಸಿಗಲ್ಲ ಎಂದಿದ್ದಾರೆ. ಅಸಲಿಗೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಕಣಕ್ಕಿಳಿದಿರುವ 8 ತಂಡಗಳಲ್ಲಿ 7 ಟೀಮ್ಗಳು ರಾವಲ್ಪಿಂಡಿ, ಕರಾಚಿ, ಲಾಹೋರ್ ಹಾಗೂ ದುಬೈನಲ್ಲಿ ಪಂದ್ಯಗಳನ್ನಾಡುತ್ತಿದೆ. ಆದರೆ ಭಾರತ ತಂಡವು ದುಬೈನಲ್ಲಿ ಮಾತ್ರ ಆಡುತ್ತಿದೆ.
ಕಮಿನ್ಸ್ ಮಾತ್ರವಲ್ಲದೆ ಇಂಗ್ಲೆಂಡ್ ತಂಡ ಮಾಜಿ ಆಟಗಾರ ಮೈಕೆಲ್ ಅಥರ್ಟನ್ ಕೂಡ ಭಾರತದ ಪಂದ್ಯಗಳ ಬಗ್ಗೆ ಮಾತ್ನಾಡಿದ್ದಾರೆ. ಭಾರತ ಇಲ್ಲಿಯವರೆಗೆ ಟೂರ್ನಮೆಂಟ್‌ನಲ್ಲಿ ಅತ್ಯುತ್ತಮ ತಂಡವಾಗಿ ಕಾಣಿಸಿಕೊಂಡಿದೆ ಮತ್ತು ಗೆಲುವನ್ನ ಸಾಧಿಸಿದೆ. ದುಬೈನಲ್ಲಿ ಮಾತ್ರ ಆಡೋದ್ರಿಂದ ಹೆಚ್ಚಿನ ಪ್ರಯೋಜನ ಪಡೆಯುತ್ತಿದೆ. ಆದ್ರೆ ಇದನ್ನ ನಮ್ಮಿಂದಲೂ ನಿರಾಕರಿಸೋಕೆ ಸಾಧ್ಯವಿಲ್ಲ. ಒಂದೇ ಪಿಚ್ನಲ್ಲಿ ಆಡೋದ್ರಿಂದ ಆಟಗಾರರ ಸೆಲೆಕ್ಷನ್ ಬಗ್ಗೆಯೂ ಜಾಸ್ತಿ ಯೋಚನೆ ಇರೋದಿಲ್ಲ. ಹೀಗಾಗೇ ಭಾರತಕ್ಕೆ ಸೆಮಿಫೈನಲ್ ನಲ್ಲೂ ಪ್ಲಸ್ ಆಗುತ್ತೆ. ಇಲ್ಲಿಯವರೆಗೆ ಭಾರತ ಎರಡು ಮ್ಯಾಚ್ ಆಡಿದೆ. ಎರಡರಲ್ಲೂ ಚೇಸಿಂಗ್ ಮಾಡಿದ್ದು ಆರಾಮದಾಯಕ ಗೆಲುವುಗಳನ್ನು ದಾಖಲಿಸಿದೆ. ಆದ್ರೆ ಭಾರತದ ಜೊತೆ ಸೆಮಿಫೈನಲ್‌ಗಾಗಿ ದುಬೈಗೆ ಹೋಗುವ ಯಾವುದೇ ತಂಡಕ್ಕೆ ಅಲ್ಲಿನ ಪಿಚ್ ಬಗ್ಗೆ ಜಡ್ಜ್ ಮಾಡೋಕೆ ಕಷ್ಟಸಾಧ್ಯ. ಸೋ ಟೀಂ ಫೈನಲ್ ಮಾಡೋಕೆ ಟೈಮ್ ಕೂಡ ಜಾಸ್ತಿ ಇಲ್ದೇ ಇರೋದ್ರಿಂದ ಅದು ಭಾರತಕ್ಕೆ ಉಪಯೋಗವಾಗುತ್ತೆ ಎಂದಿದ್ದಾರೆ.