6 ವರ್ಷ ಪ್ರೀತಿ, ಮಗುವಾದ ಮೇಲೆ ಮದುವೆ! – ಪ್ಯಾಟ್ ಕಮಿನ್ಸ್ Love ಸ್ಟೋರಿ
ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ರನ್ ಮಳೆ ಸುರಿಸುತ್ತಲೇ ಇದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಸ್ಟ್ರಾಂಗ್ ಆಗಿರೋ ಎಸ್ ಹೆಚ್ ಆರ್ ಹಿಂದಿರೋ ಶಕ್ತಿಯೇ ಪ್ಯಾಟ್ ಕಮಿನ್ಸ್. ನೋಡೋಕೆ ಸಖತ್ ಹ್ಯಾಂಡ್ಸಮ್. ಕ್ಯಾಪ್ಟನ್ಸಿ ವಿಚಾರಕ್ಕೆ ಬಂದ್ರೆ ಖಡಕ್ ಲೀಡರ್.. ಪ್ರೀತಿ ವಿಚಾರಕ್ಕೆ ಬಂದ್ರೆ ರೋಮ್ಯಾಂಟಿಕ್ ಲವರ್.. ಪ್ಯಾಟ್ ಕಮಿನ್ಸ್ ಲವ್ ಸ್ಟೋರಿ ಯಾವ ಸಿನಿಮಾ ಸ್ಟೋರಿಗೂ ಕಡಿಮೆಯಿಲ್ಲ.
ಇದನ್ನೂ ಓದಿ: ರಚಿನ್ ಜೊತೆಗಿರುವ ಚೆಲುವೆ ಯಾರು? – CSK ಆಟಗಾರನ ಲವ್ ಸ್ಟೋರಿ!
ಕ್ಯಾಪ್ಟನ್ಸಿ ಮತ್ತು ಬೌಲಿಂಗ್ ಮೂಲಕ ಕ್ರಿಕೆಟ್ ಪ್ರೇಮಿಗಳ ಮನಸ್ಸು ಗೆದ್ದಿದ್ದಾರೆ ಪ್ಯಾಟ್ ಕಮ್ಮಿನ್ಸ್. ಪ್ಯಾಟ್ ಕಮ್ಮಿನ್ಸ್ ನೇತೃತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್‌ನಲ್ಲಿ ಸಖತ್ ಫರ್ಫಾಮೆನ್ಸ್ ನೀಡ್ತಿದೆ. ತಂಡದ ಅದ್ಭುತ ಪ್ರದರ್ಶನದ ಜೊತೆಗೆ ಬೌಲಿಂಗ್ ಕೂಡಾ ಸ್ಟ್ರಾಂಗ್ ಆಗಿದೆ. ಇದಕ್ಕೆ ಕಾರಣ ತಂಡದ ಕ್ಯಾಪ್ಟನ್ ಪ್ಯಾಟ್ ಕಮಿನ್ಸ್ ಅವರ ಕಮಿಟ್‌ಮೆಂಟ್. ಇನ್ನು ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಕಮ್ಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ತಂಡವು ವಿಶ್ವಕಪ್ ಗೆದ್ದುಕೊಂಡಿದ್ದು ನಿಮಗೆಲ್ಲರಿಗೂ ಗೊತ್ತೇ ಇದೆ. ಆಸ್ಟ್ರೇಲಿಯಾಗೆ ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕ, ಹೈದರಾಬಾದ್ ತಂಡವನ್ನೂ ಅದ್ಭುತವಾಗಿ ಮುನ್ನಡೆಸಿಕೊಂಡು ಹೋಗ್ತಿದ್ದಾರೆ. ಇದರ ಮಧ್ಯೆ ಕಮ್ಮಿನ್ಸ್ ಲವ್ ಸ್ಟೋರಿ ರಿವೀಲ್ ಆಗಿದೆ.
ಕಮ್ಮಿನ್ಸ್ ಪತ್ನಿ ಹೆಸರು ಬೆಕಿ ಬೋಸ್ಟನ್. ಇಬ್ಬರ ಪ್ರೀತಿಯ ಕಹಾನಿ ಥೇಟ್ ಫಿಲ್ಮ್ ಸ್ಟೋರಿ ಥರಾ ಇದೆ. ಪಿಕ್ನಿಕ್ ಸ್ಪಾಟ್ ಒಂದರಲ್ಲಿ ಸಿನಿಮಾ ಸ್ಟೈಲ್ನಲ್ಲಿ ಕಮ್ಮಿನ್ಸ್ ತಾವು ಪ್ರೀತಿಸುತ್ತಿದ್ದ ಹುಡುಗಿಗೆ ಪ್ರಪೋಸ್ ಮಾಡಿದ್ದರಂತೆ. ಕಮಿನ್ಸ್ ಬೆಕಿ ಅವರನ್ನು ಪಿಕ್ನಿಕ್ ಸ್ಪಾಟ್‌ಗೆ ಕರೆದೊಯ್ದು ಶಾಂಪೇನ್ ಬಾಟಲಿಯನ್ನು ಹಿಡಿದು ಬಾಲಿವುಡ್ ಶೈಲಿಯಲ್ಲಿ ಮೊಣಕಾಲುಗಳ ಮೇಲೆ ಕುಳಿತು ಪ್ರಪೋಸ್ ಮಾಡಿದರು ಎಂದು ಖುದ್ದು ಬೆಕಿ ಬೋಸ್ಟನ್ ಅವರೇ ಇತ್ತೀಚೆಗೆ ನಡೆದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ವಾಸ್ತವವಾಗಿ, ಇಬ್ಬರು ಮದುವೆಯಾಗಲು ಬಯಸಿದ್ದರು. ಆದರೆ ಕೊರೊನಾ ವೈರಸ್ ಕಾಟದಿಂದ ಮದುವೆ ವಿಳಂಬವಾಯಿತು.
ಮದುವೆಗೆ ಮೊದಲೇ ಬೆಕಿ ತಾಯಿಯಾದ್ರು. ಮಗುವಾದ ಮೇಲೆ ಹೆತ್ತವರ ಸಮ್ಮುಖದಲ್ಲಿ ಮದುವೆಯಾದ್ರು. ಇವರಿಬ್ಬರಿಗೆ ಮುದ್ದಾದ ಮಗನಿದ್ದಾನೆ. ಬೆಕಿ ಅವರು ಇಂಗ್ಲೆಂಡ್‌ನ ಬೋಸ್ಟನ್ ನಿವಾಸಿ. ವೃತ್ತಿಯಲ್ಲಿ ಇಂಟೀರಿಯರ್ ಡಿಸೈನರ್. ಬೆಕಿ ಬೋಸ್ಟನ್, ಕಮ್ಮಿನ್ಸ್ಗಿಂತ ಸುಮಾರು ಎರಡೂವರೆ ವರ್ಷ ದೊಡ್ಡವರಂತೆ. ಪ್ಯಾಟ್ ಕಮಿನ್ಸ್, ಬೆಕಿ ಬಾಸ್ಟನ್ ಜೊತೆ 6 ವರ್ಷಗಳ ಕಾಲ ಡೇಟಿಂಗ್ ಮಾಡಿದ್ದರು. ಇದು ಆಸೀಸ್ ಕ್ಯಾಪ್ಟನ್ ಪ್ಯಾಟ್ ಕಮಿನ್ಸ್ ಪ್ರೇಮ್ ಕಹಾನಿ.