ಸತತ ಸೋಲಿನ ಬೆನ್ನಲ್ಲೇ ಕಾಂಗರೂಗಳಿಗೆ ಶಾಕ್ – ಟೆಸ್ಟ್ ಸರಣಿಯಿಂದ ಹೊರಬಿದ್ದ ಆಸೀಸ್ ನಾಯಕ

ಸತತ ಸೋಲಿನ ಬೆನ್ನಲ್ಲೇ ಕಾಂಗರೂಗಳಿಗೆ ಶಾಕ್ – ಟೆಸ್ಟ್ ಸರಣಿಯಿಂದ ಹೊರಬಿದ್ದ ಆಸೀಸ್ ನಾಯಕ

ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿಯ ಸಲುವಾಗಿ ಭಾರತ ಪ್ರವಾಸದಲ್ಲಿರುವ ಆಸ್ಟ್ರೇಲಿಯಾಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಕೌಟುಂಬಿಕ ಕಾರಣಗಳಿಂದಾಗಿ ತವರಿಗೆ ಮರಳಿದ ಆಸೀಸ್ ನಾಯಕ ಪ್ಯಾಟ್ ಕಮ್ಮಿನ್ಸ್ ಉಳಿದೆರಡು ಟೆಸ್ಟ್ ಪಂದ್ಯಗಳಿಗೆ ಗೈರಾಗಲಿದ್ದಾರೆ. ಈಗಾಗಲೇ ಆರಂಭಿಕ ದಾಂಡಿಗ ಡೇವಿಡ್ ವಾರ್ನರ್ ಇಂಜುರಿ ಸಮಸ್ಯೆಯಿಂದ ಟೆಸ್ಟ್ ಸರಣಿಯಿಂದ ಹೊರನಡೆದಿದ್ದಾರೆ. ಈಗ ಕ್ಯಾಪ್ಟನ್ ಕೂಡಾ ತಾಯಿ ಅನಾರೋಗ್ಯದಿಂದಾಗಿ ತಂಡಕ್ಕೆ ಮರಳುತ್ತಿಲ್ಲ. ಹೀಗಾಗಿ ನಾಗ್ಪುರ ಮತ್ತು ದೆಹಲಿ ಟೆಸ್ಟ್​ನಲ್ಲಿ ಹೀನಾಯ ಸೋಲು ಕಂಡಿದ್ದ ಕಾಂಗರೂಗಳಿಗೆ ಇದೀಗ ಮತ್ತೊಂದು ದೊಡ್ಡ ಹೊಡೆತ ಬಿದ್ದಿದೆ.

ಇದನ್ನೂ ಓದಿ:  ಆಸ್ಟ್ರೇಲಿಯಾ ತಂಡಕ್ಕೆ ಮತ್ತೊಂದು ಶಾಕ್- ‘ಬಾರ್ಡರ್- ಗವಾಸ್ಕರ್’ ಟೆಸ್ಟ್ ಸರಣಿಯಿಂದ ಹೊರಬಿದ್ದ ಡೇವಿಡ್ ವಾರ್ನರ್

ಪ್ಯಾಟ್ ಕಮಿನ್ಸ್ ಅವರ ತಾಯಿಯ ಆರೋಗ್ಯ ಹದಗೆಟ್ಟಿದೆ. ಹೀಗಾಗಿ ತಮ್ಮ ತಾಯಿಯೊಂದಿಗೆ ಪ್ಯಾಟ್ ಕಮಿನ್ಸ್ ಇರಲು ಬಯಸಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ. ಇನ್ನು ಈ ಕುರಿತು ಹೇಳಿಕೆ ನೀಡಿರುವ ಕಮಿನ್ಸ್, ತಾನು ಇನ್ನೂ ಭಾರತಕ್ಕೆ ಮರಳುವುದಿಲ್ಲ. ಈ ಸಮಯದಲ್ಲಿ ನಾನು ತನ್ನ ಕುಟುಂಬದೊಂದಿಗೆ ಇರಬೇಕಾಗಿದೆ. ನನಗೆ ಬೆಂಬಲ ನೀಡಿದ ನನ್ನ ತಂಡಕ್ಕೆ ಧನ್ಯವಾದಗಳು ಎಂದು ಹೇಳಿಕೊಂಡಿದ್ದಾರೆ. ಮೊದಲೇ ಸತತ ಸೋಲಿನಿಂದ ಕಂಗೆಟ್ಟಿರುವ ಆಸೀಸ್ ತಂಡಕ್ಕೆ ಇಬ್ಬರು ಸ್ಟಾರ್ ಆಟಗಾರರ ಅನುಪಸ್ಥಿತಿ ಕಾಡಲಿದೆ.

suddiyaana