ಸೂರ್ಯನ ದೊಡ್ಡ ಭಾಗ ಒಡೆದು ಸೃಷ್ಟಿಯಾಯ್ತು ಸುಳಿ – ಭಾಸ್ಕರನ ಕೋಪಕ್ಕೆ ವಿಜ್ಞಾನಲೋಕವೇ ದಿಗ್ಭ್ರಮೆ..!

ಸೂರ್ಯನ ದೊಡ್ಡ ಭಾಗ ಒಡೆದು ಸೃಷ್ಟಿಯಾಯ್ತು ಸುಳಿ – ಭಾಸ್ಕರನ ಕೋಪಕ್ಕೆ ವಿಜ್ಞಾನಲೋಕವೇ ದಿಗ್ಭ್ರಮೆ..!

ಖಗೋಳಶಾಸ್ತ್ರದಲ್ಲಿ ಉಂಟಾಗುವ ಬದಲಾವಣೆಗಳು ವಿಜ್ಞಾನಿಗಳಿಗೆ ಅಚ್ಚರಿಯ ಜೊತೆ ಆತಂಕವನ್ನೂ ಸೃಷ್ಟಿಸಿಬಿಡುತ್ತವೆ.  ಸದ್ಯ ಸೂರ್ಯನ ಬೆಳವಣಿಗೆಯೊಂದು ಖಗೋಳಶಾಸ್ತ್ರಜ್ಞರನ್ನ ದಿಗ್ಭ್ರಮೆಗೊಳಿಸಿದೆ. ಸೂರ್ಯನ ಒಂದು ದೊಡ್ಡ ಭಾಗವು ಅದರ ಮೇಲ್ಮೈಯಿಂದ ಒಡೆದು ಅದರ ಉತ್ತರ ಧ್ರುವದ ಸುತ್ತ ಸುಂಟರಗಾಳಿಯಂತಹ ಸುಳಿಯನ್ನು ಸೃಷ್ಟಿಸಿದೆ.

ಇದನ್ನೂ ಓದಿ : SSLV-D2 ರಾಕೆಟ್ ಉಡಾವಣೆ ಯಶಸ್ವಿ – ಕಕ್ಷೆ ಸೇರಿದ ಮೂರು ಉಪಗ್ರಹಗಳು

ಇಡೀ ಜಗತ್ತನ್ನೇ ಬೆಳಗುತ್ತಿರೋ ಸೂರ್ಯನ ಈ ಬೆಳವಣಿಗೆ ಖಗೋಳಶಾಸ್ತ್ರಜ್ಞರಲ್ಲಿ ಅಚ್ಚರಿ ಮೂಡಿಸಿದೆ. ಸೂರ್ಯನ ಒಂದು ದೊಡ್ಡ ಭಾಗವು ಅದರ ಮೇಲ್ಮೈಯಿಂದ ಒಡೆದು ಅದರ ಉತ್ತರ ಧ್ರುವದ ಸುತ್ತ ಸುಂಟರಗಾಳಿಯಂತಹ ಸುಳಿಯನ್ನು ಸೃಷ್ಟಿಸಿದೆ. ವಿಜ್ಞಾನಿಗಳು ಇದು ಹೇಗೆ ಸಂಭವಿಸಿತು ಎಂಬುದನ್ನು ವಿಶ್ಲೇಷಿಸಲು ಪ್ರಯತ್ನಿಸುತ್ತಿದ್ದಾಗ ಈ ಬಗ್ಗೆ ಅಚ್ಚರಿಯ ಸಂಗತಿಗಳು ಗೊತ್ತಾಗಿವೆ. ಈ ಬಗೆಗಿನ ಒಂದು ವಿಡಿಯೋ ಕೂಡ ಪತ್ತೆಯಾಗಿದೆ. ಈ ಗಮನಾರ್ಹ ವಿದ್ಯಮಾನವನ್ನು ನಾಸಾದ ಜೇಮ್ಸ್ ವೆಬ್ ಟೆಲಿಸ್ಕೋಪ್ ಕಂಡುಹಿಡಿದಿದ್ದಾರೆ. ಮತ್ತು ಕಳೆದ ವಾರ ಬಾಹ್ಯಾಕಾಶ ಹವಾಮಾನ ಮುನ್ಸೂಚಕರಾದ ಡಾ.ತಮಿತಾ ಸ್ಕೋವ್ ಅವರು ಈ ಬಗ್ಗೆ ಅವರ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಸೂರ್ಯನು ಜ್ವಾಲೆಗಳನ್ನ ಹೊರಸೂಸುತ್ತಲೇ ಇರುತ್ತಾನೆ, ಅದು ಕೆಲವೊಮ್ಮೆ ಭೂಮಿಯ ಮೇಲಿನ ಸಂವಹನದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ವಿಜ್ಞಾನಿಗಳು ಇತ್ತೀಚಿನ ಬೆಳವಣಿಗೆಯ ಬಗ್ಗೆ ಹೆಚ್ಚು ಕಾಳಜಿ ವಹಿಸಿದ್ದಾರೆ.

ಪೋಲಾರ್ ವೋರ್ಟೆಕ್ಸ್ ಬಗ್ಗೆ ಮಾತನಾಡಿದ ಅವರು ಉತ್ತರದ ಪ್ರಾಮುಖ್ಯತೆಯ ವಸ್ತುವು ಮುಖ್ಯ ತಂತುಗಳಿಂದ ದೂರ ಸರಿದಿದೆ ಮತ್ತು ಈಗ ನಮ್ಮ ನಕ್ಷತ್ರದ ಉತ್ತರ ಧ್ರುವದ ಸುತ್ತಲೂ ಬೃಹತ್ ಧ್ರುವ ಸುಳಿಯಲ್ಲಿ ಪರಿಚಲನೆ ಮಾಡುತ್ತಿದೆ. ಇಲ್ಲಿ 55 ಡಿಗ್ರಿಗಿಂತ ಹೆಚ್ಚಿನ ಸೂರ್ಯನ ವಾತಾವರಣದಿಂದ ಸೂರ್ಯನು ಸೌರ ಜ್ವಾಲೆ ಉಂಟು ಮಾಡಿದೆ ಎಂದು ಡಾ ಸ್ಕೋವ್ ಕಳೆದ ವಾರ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. NASA ಪ್ರಕಾರ, ಸೂರ್ಯನು ಸೌರ ಜ್ವಾಲೆಯ ಮೇಲ್ಮೈಯಿಂದ ಹೊರಕ್ಕೆ ವಿಸ್ತರಿಸುವ ದೊಡ್ಡ ಪ್ರಕಾಶಮಾನವಾದ ಲಕ್ಷಣಗಳು ಉಂಟಾಗಿದೆ. ಈ ಹಿಂದೆ ಇಂತಹ ಹಲವಾರು ನಿದರ್ಶನಗಳಿವೆ. ಆದರೆ ಇದು ವೈಜ್ಞಾನಿಕ ಲೋಕವನ್ನು ದಿಗ್ಭ್ರಮೆಗೊಳಿಸಿದೆ.

ದಶಕಗಳಿಂದ ಸೂರ್ಯನನ್ನು ಗಮನಿಸುತ್ತಿರುವ US ನ್ಯಾಷನಲ್ ಸೆಂಟರ್ ಫಾರ್ ಅಟ್ಮಾಸ್ಫಿಯರಿಕ್ ರಿಸರ್ಚ್‌ನ ಸೌರ ಭೌತಶಾಸ್ತ್ರಜ್ಞ ಸ್ಕಾಟ್ ಮೆಕಿಂತೋಷ್, Space.com ಎಂಬ ವೆಬ್​ಸೈಟ್​ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಸೂರ್ಯನು ಸೌರ ಜ್ವಾಲೆಗಳ ತುಣುಕು ಹೊಡೆದು ಈ ಘಟನೆ ಸಂಭವಿಸಿ ಒಂದು ಸುಳಿಯನ್ನು ಸೃಷ್ಟಿ ಮಾಡಿದೆ.   ಸೂರ್ಯನಲ್ಲಿ ಈ ಬದಲಾವಣೆಯನ್ನು ಯಾವತ್ತೂ ಕಂಡಿಲ್ಲ. ಬಾಹ್ಯಾಕಾಶ ವಿಜ್ಞಾನಿಗಳು ಈ ವಿಚಿತ್ರ ಘಟನೆಯ ಬಗ್ಗೆ ಹೆಚ್ಚಿನ ವಿವರಗಳನ್ನು ಸಂಗ್ರಹಿಸಲು ಮತ್ತು ಸ್ಪಷ್ಟವಾದ ಚಿತ್ರವನ್ನು ಪ್ರಸ್ತುತಪಡಿಸಲು ಈ ಬಗ್ಗೆ ವಿಶ್ಲೇಷಿಸುತ್ತಿದ್ದಾರೆ.

suddiyaana