ಐರೋಪ್ಯ ದೇಶಗಳಲ್ಲಿ ಕಾಡುತ್ತಿದೆ ಸಾಂಕ್ರಾಮಿಕ ಗಿಳಿ ಜ್ವರ – ಮಾರಣಾಂತಿಕ ಕಾಯಿಲೆಗೆ ಐವರು ಬಲಿ!

ಐರೋಪ್ಯ ದೇಶಗಳಲ್ಲಿ ಕಾಡುತ್ತಿದೆ ಸಾಂಕ್ರಾಮಿಕ ಗಿಳಿ ಜ್ವರ – ಮಾರಣಾಂತಿಕ ಕಾಯಿಲೆಗೆ ಐವರು ಬಲಿ!

ಕೊರೊನಾ ವೈರಸ್‌ನಿಂದ ಎರಡು ವರ್ಷಗಳ ಕಾಲ ವಿಶ್ವವನ್ನೇ ಆಳಿತ್ತು. ಇದರ ರೌದ್ರ ನರ್ತನಕ್ಕೆ ಜನರು ಹೈರಾಣಾಗಿ ಹೋಗಿದ್ದರು. ಲೆಕ್ಕವಿಲ್ಲದಷ್ಟು ಜನರು ಸಾವನ್ನಪ್ಪಿದ್ದರು. ಈ ವೈರಸ್‌ ಬಳಿಕ ಹೊಸ ಹೊಸ ರೋಗಾಣುಗಳ ಹಾವಳಿ ವಿಶ್ವದಾದ್ಯಂತ ತೀವ್ರಗೊಂಡಿದೆ. ಬ್ಯಾಕ್ಟೀರಿಯಾ, ವೈರಸ್, ಫಂಗಸ್‌ ಸೂಕ್ಷ್ಮಾಣು ಜೀವಿಗಳ ಆರ್ಭಟದಿಂದ ಹೊಸ ಬಗೆಯ ರೋಗಗಳು ಸೃಷ್ಟಿಯಾಗುತ್ತಿವೆ. ಇದೀಗ ಬ್ರಿಟನ್ ಸೇರಿದಂತೆ ಹಲವು ಐರೋಪ್ಯ ದೇಶಗಳ ಜನತೆಗೆ ಗಿಳಿ ಜ್ವರ ಕಾಡುತ್ತಿದೆ.

ಇದನ್ನೂ ಓದಿ: ಎರಡನೇ ದಿನದಾಟದಲ್ಲಿ ಬೊಂಬಾಟ್ ಬ್ಯಾಟಿಂಗ್ – ರೋಹಿತ್-ಗಿಲ್ ಸೆಂಚುರಿ ಧಮಾಕ

ಕಳೆದ ಕೆಲವು ತಿಂಗಳಿನಿಂದ ಬ್ರಿಟನ್ ಸೇರಿದಂತೆ ಹಲವು ಐರೋಪ್ಯ ದೇಶಗಳಲ್ಲಿ ಗಿಳಿ ಜ್ವರ ಕಾಣಿಸಿಕೊಂಡಿದೆ. ಅನೇಕರು ಈ ಮಾರಣಾಂತಿಕ ರೋಗಕ್ಕೆ ತುತ್ತಾಗುತ್ತಿದ್ದಾರೆ. ಇದೀಗ ಗಿಳಿ ಜ್ವರ ಎಂದು ಕರೆಯಲ್ಪಡುವ ಸಿಟ್ಟಾಕೋಸಿಸ್‌ ಸೋಂಕಿನಿಂದ ಈವರೆಗೆ ಐವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಮೂಲಗಳ ಪ್ರಕಾರ.. ಈ ಸೋಂಕು 2023ರಲ್ಲೇ ಕಾಣಿಸಿಕೊಂಡಿದೆ. ಆದರೆ 2024ರ ವರ್ಷಾರಂಭದಲ್ಲಿ ಈ ಸೋಂಕಿನ ಆರ್ಭಟ ಹೆಚ್ಚಾಗಿದೆ. ಪಕ್ಷಿಗಳ ಸಮೀಪ ಇರುವವರಿಗೆ ಈ ಸೋಂಕು ಬಹುಬೇಗ ಹರಡುತ್ತಿದೆ. ಸೋಂಕಿತ ಪಕ್ಷಿಗಳಿಂದ ಇನ್ನಿತರ ಪಕ್ಷಿಗಳು ಹಾಗೂ ಮನುಷ್ಯರಿಗೂ ಹರಡಬಹುದಾಗಿದೆ. ಪಕ್ಷಿಗಳ ಉಸಿರಾಟ ಹಾಗೂ ಮಲ, ಮೂತ್ರ ವಿಸರ್ಜನೆ ಮೂಲಕ ಬ್ಯಾಕ್ಟೀರಿಯಾಗಳು ಹರಡುತ್ತವೆ. ಧೂಳಿನ ಕಣಗಳು, ನೀರಿನ ಹನಿಗಳ ಮೂಲಕವೂ ಈ ಸೋಂಕು ಹರಡಬಹುದಾಗಿದೆ ಎಂದು ಅಮೆರಿಕದ ಸೋಂಕು ನಿಯಂತ್ರಣ ಕೇಂದ್ರ ಹೇಳಿದೆ. ಒಂದು ವೇಳೆ ಪಕ್ಷಿಗಳು ಮನುಷ್ಯನಿಗೆ ಕಚ್ಚಿದರೂ ಸೋಂಕು ಹರಡಬಹುದಾಗಿದೆ ಎಂದು ತಿಳಿಸಿದೆ.

Shwetha M