ಚಳಿಗಾಲ ಅಧಿವೇಶನ: ಯುವ ಸಂಸದರಿಗೆ ಅವಕಾಶ ನೀಡಿ – ಹಿರಿಯ ನಾಯಕರಿಗೆ ಮೋದಿ ಮನವಿ

ಚಳಿಗಾಲ ಅಧಿವೇಶನ: ಯುವ ಸಂಸದರಿಗೆ ಅವಕಾಶ ನೀಡಿ – ಹಿರಿಯ ನಾಯಕರಿಗೆ ಮೋದಿ ಮನವಿ

ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನವು ಇಂದು ಆರಂಭವಾಗಿದ್ದು, ಡಿ. 29ರವರೆಗೆ ನಡೆಯಲಿದೆ. ಈ ಬಾರಿ ಚಳಿಗಾಲ ಅಧಿವೇಶನದ ಸಂದರ್ಭದಲ್ಲಿಒಟ್ಟು 16 ಹೊಸ ಮಸೂದೆಗಳು, ಟ್ರೇಡ್ ಮಾರ್ಕ್ (ತಿದ್ದುಪಡಿ) ಮಸೂದೆ, 2022, ಮತ್ತು ಬಹು-ರಾಜ್ಯ ಸಹಕಾರ ಸಂಘಗಳ (ತಿದ್ದುಪಡಿ) ಮಸೂದೆ, 2022 ಅನ್ನು ಮಂಡಿಸಲಾಗುತ್ತದೆ.

ಚಳಿಗಾಲ ಅಧಿವೇಶನ ಆರಂಭಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಸುದ್ದಿಗಾರರೊಂದಿಗೆ ಮಾತನಾಡಿ, ಹೊಸ ಸಂಸದರಿಗೆ ಮಾತನಾಡಲು ಹೆಚ್ಚಿನ ಅವಕಾಶ ನೀಡುವಂತೆ ಎಲ್ಲಾ ಪಕ್ಷಗಳ ನಾಯಕರಲ್ಲಿ ಮನವಿ ಮಾಡಿದ್ದಾರೆ. ಚಳಿಗಾಲದ ಅಧಿವೇಶನ ಪ್ರಾರಂಭವಾಗುವ ಮೊದಲು ಸಂಸತ್ತಿನಲ್ಲಿ ಅಡೆತಡೆಗಳನ್ನು ತಪ್ಪಿಸಬೇಕು ಮತ್ತು ಹೊಸ ಸಂಸದರ ನೋವನ್ನು ಅರ್ಥಮಾಡಿಕೊಳ್ಳಬೇಕು ಎಂದು ರಾಜಕೀಯ ಪಕ್ಷಗಳಿಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಕಲಾಪದ ವೇಳೆ ಫೇಸ್ ಬುಕ್ ಲೈವ್ – ಶಾಸಕನನ್ನು ಅಮಾನತುಗೊಳಿಸಿದ ಸ್ಪೀಕರ್

ಸದನದಲ್ಲಿ ಕಲಾಪಕ್ಕೆ ಅಡ್ಡಿ ಉಂಟಾದಾಗ ಯುವ ಸಂಸದರು ನಿರಾಶೆಗೊಳಗಾಗುತ್ತಾರೆ. ಹೀಗಾಗಿ ಎಲ್ಲಾ ಪಕ್ಷಗಳು ಯುವ ಸದಸ್ಯರಿಗೆ ತಮ್ಮ ಉಜ್ವಲ ಭವಿಷ್ಯಕ್ಕಾಗಿ ಚರ್ಚೆಗಳಲ್ಲಿ ಭಾಗವಹಿಸಲು ಅವಕಾಶ ನೀಡಬೇಕು ಎಂದು ಹೇಳಿದರು.

suddiyaana