ಸಂಸತ್ತು ಗೆಲುವಿನ ದುರಹಂಕಾರ ಪ್ರದರ್ಶನಕ್ಕೆ ವೇದಿಕೆ ಆಗಬಾರದು – ಅಧಿವೇಶ ಆರಂಭಕ್ಕೂ ಮುನ್ನ ಪ್ರಧಾನಿ ಮೋದಿ ಕಿವಿಮಾತು

ಸಂಸತ್ತಿನ ಚಳಿಗಾಲದ ಅಧಿವೇಶ ಇಂದಿನಿಂದ ಆರಂಭಗೊಂಡಿದೆ. ಅಧಿವೇಶನ ಆರಂಭಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವಿಪಕ್ಷಗಳು ಸೋಲಿನ ಹತಾಶೆ ನಿವಾರಿಸಿಕೊಳ್ಳಬೇಕು ಮತ್ತು ಸಂಸತ್‌ನಲ್ಲಿ ಬಲವಾದ ಸಮಸ್ತೆಗಳನ್ನು ಎತ್ತುವ ಮೂಲಕ ತಮ್ಮ ಜವಾಬ್ದಾರಿ ನಿರ್ವಹಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇದನ್ನೂ ಓದಿ: ರಾಜ್ಯ ಕಾಂಗ್ರೆಸ್‌ನಲ್ಲಿ ಗದ್ದುಗೆ ಗುದ್ಧಾಟ – ಕುರ್ಚಿ ಕದನ ನಿಲ್ಲಿಸಲು ಸೋನಿಯಾ ಗಾಂಧಿ ಎಂಟ್ರಿ!
18ನೇ ಲೋಕಸಭೆಯ 6ನೇ ಅಧಿವೇಶನ ಮತ್ತು ರಾಜ್ಯಸಭೆಯ 269ನೇ ಅಧಿವೇಶ ಇಂದಿನಿಂದ ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ಡಿ.19ರಂದು ಕೊನೆಗೊಳ್ಳಲಿದೆ. ಎರಡೂ ಸದನಗಳು ತಲಾ 15 ಕಲಾಪಗಳನ್ನು ನಡೆಸಲಿದ್ದು, ಒಟ್ಟು 14 ಮಸೂದೆಗಳನ್ನ ಮಂಡಿಸುವ ನಿರೀಕ್ಷೆಯಿದೆ. ಅಧಿವೇಶ ಆರಂಭಕ್ಕೂ ಮುನ್ನ ಪ್ರಧಾನಿ ಮೋದಿ ಸಂಸತ್ ಭವನದ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.
ಭಾರತ ಪ್ರಜಾಪ್ರಭುತ್ವವು ನೀಡಬಲ್ಲದು ಎಂಬುದನ್ನ ಸಾಬೀತುಪಡಿಸಿದೆ. ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣ ಮಾಡುವ ಪ್ರಯತ್ನಗಳಿಗೆ ಇನ್ನೂ ಹೆಚ್ಚಿನ ಶಕ್ತಿ ತುಂಬಲು ಈ ಅಧಿವೇಶನ ಒಂದು ಅವಕಾಶ. ಹಾಗಾಗಿ ಪ್ರತಿಪಕ್ಷಗಳು ಸೋಲಿತ ಹತಾಶೆಯನ್ನ ಬಿಟ್ಟು ಬಲವಾದ ಸಮಸ್ಯೆಗಳನ್ನ ಎತ್ತಬೇಕು. ಸೋಲಿನ ಹತಾಶೆ ಅಥವಾ ಗೆಲುವಿನ ದುರಹಂಕಾರಕ್ಕೆ ವೇದಿಕೆಯಾಗಬಾರದು. ಹೊಸ ಪೀಳಿಯು ಈ ಸಂಸತ್ತಿನ ಪ್ರಯೋಜನ ಪಡೆಯಬೇಕು ಎಂದು ಕಿವಿಮಾತು ಹೇಳಿದರು.
ಸಾರ್ವಜನಿಕ ಪ್ರತಿನಿಧಿಗಳಾಗಿ, ಭವಿಷ್ಯದ ಬಗ್ಗೆ ಯೋಚಿಸುವಾಗ ನಾವು ದೇಶದ ಜನರ ಜವಾಬ್ದಾರಿ ಮತ್ತು ನಿರೀಕ್ಷೆಗಳನ್ನು ಅತ್ಯಂತ ಸಮತೋಲನ ಮತ್ತು ಜವಾಬ್ದಾರಿಯಿಂದ ನಿರ್ವಹಿಸಬೇಕು. ರಾಷ್ಟ್ರೀಯ ನೀತಿಗೆ ಸಕಾರಾತ್ಮಕತೆ ಅತ್ಯಗತ್ಯ. ಈ ಅಧಿವೇಶನವು ದೇಶದ ಬಗ್ಗೆ ಏನು ಯೋಚಿಸುತ್ತದೆ? ದೇಶಕ್ಕಾಗಿ ಅದು ಏನು ಮಾಡಲು ಬಯಸುತ್ತದೆ ಎಂಬುದರ ಮೇಲೆ ಕೇಂದ್ರೀಕರಿಸಬೇಕು. ಹಾಗಾಗಿ ಸದನದಲ್ಲಿ ಯಾವುದೇ ನಕಾರಾತ್ಮಕತೆ ಇರಬಾರದು. ಪ್ರತಿಪಕ್ಷಗಳು ತಮ್ಮ ಕಾರ್ಯತಂತ್ರವನ್ನ ಬದಲಾಯಿಸಿ, ಜವಾಬ್ದಾರಿಯನ್ನ ಪೂರೈಸಬೇಕು ಎಂದು ಕರೆ ನೀಡಿದರಲ್ಲದೇ, ತಮ್ಮ ಸೋಲನ್ನು ಇಂದಿಗೂ ಒಪ್ಪಿಕೊಳ್ಳಲು ಸಾಧ್ಯವಾಗದ ಕೆಲವು ಪಕ್ಷಗಳಿವೆ ಎಂದು ಕುಟುಕಿದರು.

ನೋಡಿರಿ

