ಸಂಸತ್‌ನಲ್ಲಿ  ಭದ್ರತಾ ಲೋಪ ಪ್ರಕರಣ – ಮಾಸ್ಟರ್‌ಮೈಂಡ್‌ ಲಲಿತ್‌ ಝಾ ಅರೆಸ್ಟ್‌!

ಸಂಸತ್‌ನಲ್ಲಿ  ಭದ್ರತಾ ಲೋಪ ಪ್ರಕರಣ – ಮಾಸ್ಟರ್‌ಮೈಂಡ್‌ ಲಲಿತ್‌ ಝಾ ಅರೆಸ್ಟ್‌!

ಲೋಕಸಭೆಯಲ್ಲಿ ಸಂಭವಿಸಿದ ಭದ್ರತಾ ವೈಫಲ್ಯ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಕಲಾಪ ನಡೆಯುತ್ತಿದ್ದ ಸಂದರ್ಭದಲ್ಲಿ ಇಬ್ಬರು ಸಂಸತ್‌ ಒಳಗೆ ಟಿಯರ್‌ ಗ್ಯಾಸ್‌ ದಾಳಿ ನಡೆಸಿದ್ದರು ಆತಂಕದ ವಾತಾವರಣ ಸೃಷ್ಟಿಸಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಸ್ಟರ್‌ಮೈಂಡ್‌ ಲಲಿತ್‌ ಝಾರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಸಂಸತ್ತಿನಲ್ಲಿ ಭಾರಿ ಭದ್ರತಾ ಲೋಪ – ಕಲಾಪದ ವೇಳೆ ಪ್ರತಿಭಟಿಸಿದ ಐವರು ಕಾಂಗ್ರೆಸ್​ ಸಂಸದರು ಲೋಕಸಭೆಯಿಂದ ಅಮಾನತು

ಕಳೆದ ಬುಧವಾರ ಮಧ್ಯಾಹ್ನ ಲೋಕಸಭೆಯ ಶೂನ್ಯ ವೇಳೆಯಲ್ಲಿ ಇಬ್ಬರು ಯುವಕರು ಸದನದೊಳಗೆ ನುಗ್ಗಿ ಸ್ಮೋಕ್​ ಬಾಂಬ್​ ಎಸೆದಿದ್ದರು. ಇದರಿಂದ ಇಡೀ ಸದನವೇ ದಟ್ಟ ಹೊಗೆಯಿಂದ ಕೂಡಿತ್ತು.  ಸಾಗರ್​ ಹಾಗೂ ಮನೋರಂಜನ್ ಎಂಬುವವರನ್ನು ತಕ್ಷಣವೇ ಬಂಧಿಸಲಾಗಿತ್ತು. ಸಂಸತ್ತಿನ ಹೊರಗೆ ಘೋಷಣೆ ಕೂಗುತ್ತಿದ್ದ ನೀಲಂ ಮತ್ತು ಅನ್ಮೋಲ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆದರೆ ಈ ಪ್ರಕರಣದ ಮಾಸ್ಟರ್‌ ಮೈಂಡ್‌ ಲಲಿತ್ ಝಾ ತಲೆಮರೆಸಿಕೊಂಡಿದ್ದ.  ರಾಜಸ್ಥಾನದಲ್ಲಿ ಎಲ್ಲೋ ಇದ್ದಾನೆ ಎಂದು ಹೇಳಲಾಗಿತ್ತು. ಇದೀಗ ಆತ ಗುರುವಾರ ರಾತ್ರಿ ಪೊಲೀಸರಿಗೆ ಶರಣಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮೂಲಗಳ ಪ್ರಕಾರ ಆರೋಪಿಗಳೆಲ್ಲರೂ ಒಂದೂವರೆ ವರ್ಷದ ಹಿಂದೆ ಮೈಸೂರಿನಲ್ಲಿ ಭೇಟಿಯಾಗಿದ್ದರು. ಜುಲೈನಲ್ಲಿ ಸಾಗರ್ ಲಕ್ನೋದಿಂದ ದೆಹಲಿಗೆ ಬಂದಿದ್ದರು, ಆದರೆ ಸಂಸತ್ ಭವನವನ್ನು ಪ್ರವೇಶಿಸಲು ಸಾಧ್ಯವಾಗಲಿಲ್ಲ. ಡಿಸೆಂಬರ್ 10 ರಂದು ಉಳಿದ ಆರೋಪಿಗಳು ತಮ್ಮ ರಾಜ್ಯಗಳಿಂದ ದೆಹಲಿ ತಲುಪಿದ್ದಾರೆ. ಇಂಡಿಯಾ ಗೇಟ್ ಬಳಿ ಜಮಾಯಿಸಿದ ಅವರು ಬಣ್ಣಬಣ್ಣದ ಪಟಾಕಿಗಳನ್ನು ವಿತರಿಸಿದರು. ಸಂಸತ್ ಭವನದೊಳಗೆ ಆಕ್ಷೇಪಾರ್ಹ ವಸ್ತುಗಳನ್ನು ರಹಸ್ಯವಾಗಿ ತೆಗೆದುಕೊಂಡು ಹೋಗಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣಗಳು ದಾಖಲಾಗಿವೆ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120 ಬಿ, 453, 153, 186, 353 ಮತ್ತು ಯುಎಪಿಎ ಸೆಕ್ಷನ್ 16 ಮತ್ತು 18 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Shwetha M