ಯಾರಿವನು ಮಾಸ್ಟರ್​​ಮೈಂಡ್ ಝಾ? – ಸಂಸತ್‌ ಮೇಲೆ ದಾಳಿ ಮಾಡುವ ಮುನ್ನ ಆತನ ಪ್ಲಾನ್‌ ಹೇಗಿತ್ತು ಗೊತ್ತಾ?

ಯಾರಿವನು ಮಾಸ್ಟರ್​​ಮೈಂಡ್ ಝಾ? – ಸಂಸತ್‌ ಮೇಲೆ ದಾಳಿ ಮಾಡುವ ಮುನ್ನ ಆತನ ಪ್ಲಾನ್‌ ಹೇಗಿತ್ತು ಗೊತ್ತಾ?

ಪಾರ್ಲಿಮೆಂಟ್ ಮೇಲೆ ನಡೆದ ಮತ್ತೊಂದು ದಾಳಿ ಇಡೀ ದೇಶವನ್ನೇ ತಲೆ ತಗ್ಗಿಸುವಂತೆ ಮಾಡಿರೋದು ಸುಳ್ಳಲ್ಲ. ಎಲ್ಲಿ ಇಂಥಾ ಘಟನೆಗಳು ನಡೆಯಬಾರದೋ, ಅಲ್ಲೇ ದೊಡ್ಡ ದುರಂತ ಸಂಭವಿಸಿದೆ. ಆದ್ರೆ ಇಂಥಾ ಪ್ರತಿ ದಾಳಿಯ ಹಿಂದೆಯೂ ಒಬ್ಬ ಮಾಸ್ಟರ್​ಮೈಂಡ್ ಅಂತಾ ಇರ್ತಾನೆ. ಅಟ್ಯಾಕ್​ ಯಾವಾಗ ನಡೀಬೇಕು..ಹೇಗೆ ನಡೀಬೇಕು.. ಎಷ್ಟು ಜನ ಇರ್ಬೇಕು.. ಹೇಗೆಲ್ಲಾ ತಯಾರಿ ನಡೆಸಬೇಕು.. ಇವೆಲ್ಲವನ್ನೂ ಆತನೇ ಪ್ಲ್ಯಾನ್ ಮಾಡಿರ್ತಾನೆ. ಸಂಸತ್​ ಒಳಗೆ ನುಗ್ಗಿದವರು, ಹೊರಗೆ ಹಂಗಾಮ ಮಾಡಿದವರಿಗಿಂತ ಮೋಸ್ಟ್ ಡೇಂಜರಸ್ ಅಂದ್ರೆ ಆ ಮಾಸ್ಟರ್​ಮೈಂಡ್. ಐದು ಮಂದಿ ಸಂಸತ್​ ಆವರಣಕ್ಕೆ ಎಂಟ್ರಿ ಕೊಟ್ಟಿದ್ರೂ, ಮಾಸ್ಟರ್​ಮೈಂಡ್ ಮಾತ್ರ ಅದೆಲ್ಲೋ ಕುಳಿತು ಇಡೀ ಸ್ವೀಕ್ವೆನ್ಸ್​ಗೆ ಆ್ಯಕ್ಷನ್ ಕಟ್ ಹೇಳಿರ್ತಾನೆ. ಆತನ ಜಾಲ ಜಾಲ ಎಲ್ಲಿವರೆಗೆ ಬೇಕಾದ್ರೂ ಹರಡಿರಬಹುದು. ಎಂಥಾ ದೇಶದ್ರೋಹಿ ಜೊತೆಗೆ ಬೇಕಿದ್ರೂ ಲಿಂಕ್ ಹೊಂದಿರಬಹುದು. ಆತನ ಉದ್ದೇಶವೇ ಬೇರೆಯಾಗಿರಬಹುದು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೋಸ್ಟ್​ ವಾಂಟೆಡ್ ಮೇನ್ ಕಲ್ಪ್ರಿಟ್ ಆಗಿರೋ ಮಾಸ್ಟರ್​​ಮೈಂಡ್ ಸೇರಿ ಐವರು ಅರೆಸ್ಟ್‌ ಆಗಿದ್ದಾರೆ. ಸಂಸತ್​ ಮೇಲಿನ ದಾಳಿಯ ಮಾಸ್ಟರ್​​ಮೈಂಡ್ ಬಗ್ಗೆ ಜೊತೆಗೆ ಸ್ವಾತಂತ್ರ್ಯ ಹೋರಾಟಗಾರ ಶಹೀದ್ ಭಗಂತ್​ಸಿಂಗ್​​ರಿಂದ ಈ ಕ್ರಿಮಿನಲ್​​ಗಳು ಇನ್​ಸ್ಪ್ರೈರ್ ಆಗಿದ್ಯಾಕೆ ಅನ್ನೋ ಬಗ್ಗೆ ಮಾಹಿತಿ ಇಲ್ಲಿದೆ..

ಇದನ್ನೂ ಓದಿ: ಸಂಸತ್‌ನಲ್ಲಿ  ಭದ್ರತಾ ಲೋಪ ಪ್ರಕರಣ – ಮಾಸ್ಟರ್‌ಮೈಂಡ್‌ ಲಲಿತ್‌ ಝಾ ಅರೆಸ್ಟ್‌!

ಲಲಿತ್ ಝಾ.. ದಿ ಮಾಸ್ಟರ್ ಮೈಂಡ್.. ಈತ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದು ದೆಹಲಿಯಿಂದ 125 ಕಿಲೋ ಮೀಟರ್​ ದೂರದಲ್ಲಿರುವ ನೀಮ್ರಾಣ ಅನ್ನೋ ಪಟ್ಟಣದಲ್ಲಿ. ಹಳೆಯ ಸಂಸತ್​ ಭವನದ ಮೇಲೆ ಉಗ್ರರ ದಾಳಿಯಾಗಿ 22 ವರ್ಷವಾದ ದಿನದಂದೇ ಮತ್ತೆ ಅಟ್ಯಾಕ್ ಮಾಡಬೇಕು ಅಂತಾ ಪ್ಲ್ಯಾನ್ ಮಾಡಿ ಡೇಟ್ ಫಿಕ್ಸ್  ಮಾಡಿದ್ದೇ ಈ ಲಲಿತ್ ಝಾ. ಕೊಲ್ಕತ್ತಾ ಮೂಲದವನಾದ ಈತ ಬೈ ಪ್ರೊಷೆನ್ ಒಬ್ಬ ಟೀಚರ್. ಸ್ವಾತಂತ್ರ್ಯ ಹೋರಾಟಗಾರ ಶಹೀದ್ ಭಗತ್​ಸಿಂಗ್​ನಿಂದ ಈತ ಇನ್​ಸ್ಪೈರ್ ಆಗಿದ್ನಂತೆ. ಇಡೀ ದೇಶದ ಗಮನ ಸೆಳೀಬೇಕು.. ನ್ಯೂಸ್​​ ಚಾನೆಲ್​​ಗಳಲ್ಲಿ, ಸೋಷಿಯಲ್​ ಮೀಡಿಯಾದಲ್ಲೆಲ್ಲಾ ತನ್ನ ಹೆಸರು ಬರಬೇಕು..ದೇಶಾದ್ಯಂತ ಸುದ್ದಿಯಾಗಬೇಕು. ಎಲ್ಲರ ಅಟೆನ್ಷನ್ ತನ್ನತ್ತ ಫೋಕಸ್ ಆಗಬೇಕು ಅಂದುಕೊಂಡಿದ್ನಂತೆ. ಅದಕ್ಕಾಗಿ ಈತ ಟಾರ್ಗೆಟ್ ಮಾಡಿರೋದು ಸಂಸತ್ ಭವನವನ್ನ. ಈತ ಭಗತ್​ಸಿಂಗ್​ ಇನ್​ಸ್ಪೈರ್ ಆಗಿರೋದು ಯಾವ ವಿಚಾರದಲ್ಲಿ ಅನ್ನೋದನ್ನ ನಾವಿಲ್ಲಿ ಅರ್ಥ ಮಾಡಿಕೊಳ್ಳಬಹುದು. 94 ವರ್ಷಗಳ ಹಿಂದೆ ಅಂದ್ರೆ, 1929 ಏಪ್ರಿಲ್ 8ರಂದು ಸ್ವಾತಂತ್ರ್ಯ ಹೋರಾಟಗಾರರಾದ ಭಗತ್​ಸಿಂಗ್ ಮತ್ತು ಬತುಕೇಶ್ವರ್ ದತ್ ಇಬ್ಬರೂ ದೆಹಲಿಯ ಅಸೆಂಬ್ಲಿಯೊಳಗೆ ಖಾಕಿ ಧಿರಿಸಿನಲ್ಲಿ ಬಂದು ವಿಸಿಟರ್ಸ್ ಗ್ಯಾಲರಿಯಲ್ಲಿ ಕುಳಿತಿದ್ರು. ಬಳಿಕ ಎರಡು ಬಾಂಬ್​ಗಳನ್ನ ಚೇಂಬರ್ ಆಫ್​ ಹೌಸ್​ನೊಳಕ್ಕೆ ಎಸೆದಿದ್ರು. ಅಸೆಂಬ್ಲಿಯಲ್ಲಿ ಅಂದು ಎರಡು ಸಣ್ಣ ಪ್ರಮಾಣದ ಬಾಂಬ್​ಗಳು ಸ್ಫೋಟಗೊಂಡಿತ್ತು. ಇದು ಸ್ವಾತಂತ್ರ್ಯ ಹೋರಾಟದಲ್ಲಿ ಕ್ರಾಂತಿಕಾರಕ ಮಾರ್ಗ ಹಿಡಿದು ಭಗತ್​ಸಿಂಗ್ ಬ್ರಿಟೀಷರ ವಿರುದ್ಧ ಮಾಡಿದ ಧೈರ್ಯದ ಕೆಲಸವಾಗಿತ್ತು. ಆದ್ರೆ ಈ ಕೃತ್ಯಕ್ಕಾಗಿ ಭಗತ್​ಸಿಂಗ್​ಗೆ ಜೀವಾವಧಿ ಶಿಕ್ಷೆ ನೀಡಲಾಗುತ್ತೆ. ಬಳಿಕ ಬ್ರಿಟಿಷ್ ಅಧಿಕಾರಿಯನ್ನ ಹತ್ಯೆಗೈದ ಆರೋಪದಲ್ಲಿ ನೇಣಿಗೇರಿಸಲಾಗುತ್ತೆ. ಆದ್ರೀಗ ಈ ಲಲಿತ್ ಝಾ ತಾನೊಬ್ಬ ಭಗತ್​ಸಿಂಗ್ ಅನುಯಾಯಿ ಅಂತಾ ಹೇಳ್ಕೊಂಡು ಅಕ್ಷರಶ: ದೇಶದ್ರೋಹದ ಕೃತ್ಯ ಎಸಗಿದ್ದಾನೆ. ಅಂದು ಭಗತ್​ಸಿಂಗ್ ಸ್ವಾತಂತ್ರ್ಯದ ಏಕೈಕ ಗುರಿಯೊಂದಿಗೆ ಬ್ರಿಟೀಷರನ್ನ ಗುರಿಯಾಗಿಸಿ ಬಾಂಬ್ ಹಾಕಿದ್ರೆ, ಈಗ ಈ ಕಿರಾತಕರು ಎಲ್ಲರ ಗಮನ ಸೆಳೆಯೋಕೆ, ಫೇಮಸ್ ಆಗೋಕೆ ಸಂಸತ್​​ನಲ್ಲಿ ಸ್ಮೋಕ್ ಬಾಂಬ್ ಸಿಡಿಸಿದ್ದಾರೆ.

ಈ ಮಾಸ್ಟರ್ ಮೈಂಡ್ ಲಲಿತ್ ಝಾ ಭಗತ್ ಸಿಂಗ್ ಫ್ಯಾನ್​ ಕ್ಲಬ್ ಹೆಸರಲ್ಲಿ ಸೋಷಿಯಲ್ ಮೀಡಿಯಾ ಪೇಜ್ ಮತ್ತು ವಾಟ್ಸಪ್ ಗ್ರೂಪ್​ ಕೂಡ ಮಾಡ್ಕೊಂಡಿದ್ದ. ಸಂಸತ್​ ಮೇಲೆ ದಾಳಿ ಮಾಡುತ್ತಲೇ ಅದ್ರ ವಿಡಿಯೋವನ್ನ ಲಲಿತ್ ಝಾ ತನ್ನ ಸ್ನೇಹಿತನಿಗೆ ವಾಟ್ಸ್​​ಪ್​ನಲ್ಲಿ ಕಳುಹಿಸಿದ್ದ. ಜೊತೆಗೆ ಮೀಡಿಯಾ ಕವರೇಜ್ ದೇಕಿಯೇ ಇಸ್​ಕೋ.. OR ವಿಡಿಯೋ ಸೇಫ್ ರಖ್​ನಾ ಅಂತಾ ಮೆಸೇಜ್​​ ಬೇರೆ ಕಳಿಸಿದ್ದ. ಆ ಕಡೆಯಿಂದ ಲಲಿತ್ ಸ್ನೇಹಿತ ಟೀಕ್ ಹೇ ಲಲಿತ್ ಜೀ.. ಯೇ ಕಹಾ ಪೆ ಹುವಾ ತಾ? ಅಂತಾ ರಿಪ್ಲೈ ಮಾಡ್ತಾನೆ. ಇಲ್ಲಿ ಲಲಿತ್ ಝಾ ಆ ವಿಡಿಯೋವನ್ನ ತನ್ನ ಸ್ನೇಹಿತನಿಗೆ ಕಳಿಸಿರೋದ್ರ ಉದ್ದೇಶ ಇಷ್ಟೇ, ವಿಡಿಯೋ ತನ್ನ ಮೊಬೈಲ್​​ನಿಂದ ಡಿಲೀಟ್ ಮಾಡಿ, ಸ್ನೇಹಿತ ಮೊಬೈಲ್​ನಲ್ಲಿ ಸೇಫ್ ಆಗಿ ಇಟ್ಕೊಳ್ಳೋದು. ಆ ಕಡೆ ವಿಡಿಯೋ ರಿಸೀವ್ ಮಾಡಿದವನಿಗೆ ಮೊದಲು ಇದು ಎಲ್ಲಿಯ ವಿಡಿಯೋ ಅನ್ನೋ ವಿಚಾರವೇ ಗೊತ್ತಿರಲಿಲ್ಲ. ಅದ್ಕೆ ಆತ ಯೇ ಕಹಾ ಪೆ ಹುವಾ ತಾ? ಅಂತಾ ಪ್ರಶ್ನಿಸಿ ರಿಪ್ಲೈ ಮಾಡಿದ್ದ. ಇದು ಮಾಸ್ಟರ್ ಮೈಂಡ್ ಲಲಿತ್ ಝಾನ ಕಥೆಯಾಯ್ತು. ಇನ್ನು, ಲೋಕಸಭೆಯೊಳಕ್ಕೆ ನುಗ್ಗಿದ್ದ ಸಾಗರ್​ ದಾಳಿಗೂ ಮುನ್ನ ಇನ್​ಸ್ಟಾಗ್ರಾಂನಲ್ಲೊಂದು ಪೋಸ್ಟ್ ಹಾಕಿದ್ದ. ಅದ್ರಲ್ಲಿ I WILL WRITE HISTORY..WILL DIE AFTER DOING SOMETHING ಅಂತಾ ಬರೆದುಕೊಂಡಿರ್ತಾನೆ. ಅಂತೂ ಈ ಕಿರಾತಕರೆಲ್ಲಾ ನಾವೇನೋ ದೊಡ್ಡ ಸಾಧನೆ ಮಾಡ್ತಿದ್ದೀವಿ, ತಮ್ಮನ್ನ ತಾವು ಭಗತ್​ಸಿಂಗ್ ಅಂದುಕೊಂಡಿದ್ದಾರೆ. ಇಲ್ಲಿ ಇನ್ನೊಂದು ವಿಚಾರವನ್ನ ಕೂಡ ಹೇಳಲೇಬೇಕು. ಈಗ ಅರೆಸ್ಟ್​ ಆಗಿರೋ ನಾಲ್ಕೂ ಮಂದಿಯ ಮೆಂಟಾಲಿಟಿ ಒಂದೇ. ಸಮಾನಮನಸ್ಕರು.. ಇವರ ಮನೆಯಲ್ಲಿ ಸಾಕಷ್ಟು ಪುಸ್ತಕಗಳು ಕೂಡ ಪತ್ತೆಯಾಗಿವೆ. ಬಹುತೇಕ ಪುಸ್ತಕಗಳು ಭಗತ್​ಸಿಂಗ್, ಚೆಗುವೆರಾ ಸೇರಿದಂತೆ ಕ್ರಾಂತಿಕಾರಿ ಹೋರಾಟಗಾರರ ಪುಸ್ತಕಗಳೇ. ಎಲ್ಲರೂ ಓದ್ಬೇಕಾದಂಥಾ ಪುಸ್ತಕಗಳೇ. ಈ ಎಲ್ಲಾ ಕ್ರಾಂತಿಕಾರಿಗಳಿಂದ ಇನ್​ಸ್ಪಿರೇಷನ್ ಪಡೆಯೋದ್ರಲ್ಲಿ ಯಾವುದೇ ತಪ್ಪಿಲ್ಲ. ಆದ್ರೆ ಆ ಕ್ರಾಂತಿಯ ಕಿಚ್ಚನ್ನ ಯಾವಾಗ, ಎಲ್ಲಿ, ಯಾವ ಉದ್ದೇಶಕ್ಕಾಗಿ ಬಳಸಬೇಕೋ ಅಲ್ಲೇ ಬಳಸಬೇಕು. ಈ ರೀತಿ ಸಂಸತ್​​ನ್ನ ಟಾರ್ಗೆಟ್​ ಮಾಡಿ, ದೇಶದ ಸಾರ್ವಭೌಮತ್ವದ ಮೇಲೆ ದಾಳಿ ಮಾಡೋದಲ್ಲಿ. ಇಷ್ಟೂ ಮಂದಿ ಆರೋಪಿಗಳು ಓದಿ ದಬಾಕ್ಕೊಂಡಿರೋದು ಇಷ್ಟೇ.. ಅರೆಬೆಂದ ತಲೆಗಳು ಅಂತಾರಲ್ಲ.. ಇವರದ್ದೂ ಅದೇ ಕಥೆ. ಅದಕ್ಕೇ ಇಂಥಾ ದುಷ್ಕೃತ್ಯಕ್ಕೆ ಕೈ ಹಾಕಿರೋದು.

Shwetha M