ಅಮಿತ್ ಶಾ ಅಂಬೇಡ್ಕರ್ ವಿಡಿಯೋ ಅಪ್ಲೋಡ್, ಕಾಂಗ್ರೆಸ್‌ಗೆ ಎಕ್ಸ್‌ನಿಂದ ನೋಟಿಸ್
ಹೆಬ್ಬಾಳ್ಕರ್‌ಗೆ CT ರವಿ ಪ್ರಾ**ಟ್ ಅಂದ್ರಾ?

ಅಮಿತ್ ಶಾ ಅಂಬೇಡ್ಕರ್ ವಿಡಿಯೋ ಅಪ್ಲೋಡ್, ಕಾಂಗ್ರೆಸ್‌ಗೆ ಎಕ್ಸ್‌ನಿಂದ ನೋಟಿಸ್ಹೆಬ್ಬಾಳ್ಕರ್‌ಗೆ CT ರವಿ ಪ್ರಾ**ಟ್ ಅಂದ್ರಾ?

 

ಅಂಬೇಡ್ಕರ್‌.. ಅಂಬೇಡ್ಕರ್‌.. ಸಂಸತ್‌ನಲ್ಲಿ ಇದೇ ವಿಚಾರ ಗದ್ದಲ್ಲ ಗಲಾಟೆಯನ್ನ ಎಬ್ಬಿಸಿದೆ.. ಕೇವಲ ಸಂಸತ್‌ನಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿ ಧಗಧಗಿಸೋಕೆ ಕಾರಣವಾಗಿದೆ. ಕರ್ನಾಟಕದ ವಿಧಾನಸಭೆಯಲ್ಲಿ ಈ ವಿಚಾರ ಸಖತ್ ಸದ್ದು ಮಾಡಿದೆ.   ಇಷ್ಟೆಲ್ಲಾ ಗಲಾಟೆ ಗದ್ದಲಕ್ಕೆ ಕಾರಣ ಅಮಿತ್ ಶಾ ಅವರ ಹೇಳಿಕೆ ಆಗಿದೆ.  ಸಂವಿಧಾನಕ್ಕೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ಸಂಸತ್‌ನಲ್ಲಿ ನಡೆದ ಚರ್ಚೆಯ ವೇಳೆ ರಾಜ್ಯಸಭೆಯನ್ನು ಉದ್ದೇಶಿಸಿ ಅಮಿತ್‌ ಶಾ ಮಾತನಾಡಿ, ಕಾಂಗ್ರೆಸ್‌ಗೆ ಟಾಂಗ್‌ ನೀಡಲು ಮುಂದಾದ್ರು.  ‘ಅಂಬೇಡ್ಕರ್‌, ಅಂಬೇಡ್ಕರ್‌ ಎನ್ನುವುದು ಈಗ ಫ್ಯಾಷನ್‌ ಆಗಿದೆ. ಇಷ್ಟು ಬಾರಿ ದೇವರ ಹೆಸರನ್ನು ಜಪ ಮಾಡಿದ್ದರೆ 7 ಜನ್ಮದಲ್ಲಿ ನಿಮಗೆ ಸ್ವರ್ಗ ಪ್ರಾಪ್ತಿಯಾಗುತ್ತಿತ್ತು, ಅವರ ಹೆಸರನ್ನು 100 ಸಲ ಬೇಕಿದ್ದರೂ ಹೇಳಿ. ಆದರೆ ಅವರ ಬಗ್ಗೆ ನಿಮ್ಮ ಭಾವನೆ ಏನು ಎಂದು ನಾನು ಹೇಳಲು ಬಯಸುತ್ತೇನೆ”.ಎಂದು ಮಾತು ಮುಂದುವರಿಸಿದ್ರು.. ಆದ್ರೆ ಇದನ್ನೇ ಅಸ್ತ್ರವಾಗಿ ಉರುಳಿಸಿದ ಕಾಂಗ್ರೆಸ್ ಆಡಳಿತ ಪಕ್ಷದ ಮೇಲೆ ಮುಗಿ ಬಿದ್ವು.. ಪ್ರತಿಭಟನೆ , ಕೂಗಾಟ ತಳ್ಳಾಟ ಜೋರಾಯ್ತು.. ಅಮಿತ್ ಶಾ ಹೇಳಿಕೆಗೆ ದೇಶ ವ್ಯಾಪಿ ಆಕ್ರೋಶ ಹೆಚ್ಚಾಯ್ತು..

 ಬಿಜೆಪಿ ಸಂಸದರನ್ನ ತಳ್ಳಿದ್ರಾ ರಾಹುಲ್ ಗಾಂಧಿ?

ಸಂಸತ್ ಆವರಣದಲ್ಲಿ ಇದೇ ವಿಚಾರಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ ಹೈಡ್ರಾಮ ನಡೆದಿದೆ. ಪ್ರತಿಭಟನೆ ವೇಳೆ ಬಿಜೆಪಿ ಸಂಸದ ಪ್ರತಾಪ್ ಚಂದ್ರ ಸಾರಂಗಿ ಅವರು ಗಾಯಗೊಂಡಿದ್ದಾರೆ. ಇವರನ್ನು ಸದ್ಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಪ್ರತಿಭಟನೆ ವೇಳೆ ಬಿಜೆಪಿ ಸಂಸದರೊಬ್ಬರನ್ನು ರಾಹುಲ್ ಗಾಂಧಿ ಅವರನ್ನು ತಡೆದಿದ್ದಾರೆ. ಇದರಿಂದ ಕೋಪಗೊಂಡ ರಾಹುಲ್ ಗಾಂಧಿ ಅವರು ಸಂಸದ ಚಂದ್ರ ಸಾರಂಗಿ ಅವರನ್ನು ತಳ್ಳಿದ್ದರಿಂದ ಅವರು ಬಿದ್ದು ಗಾಯಗೊಂಡಿದ್ದಾರೆ ಎಂದು ಬಿಜೆಪಿ ಆರೋಪ ಮಾಡಿದೆ. ಇದೇ ವೇಳೆ ಬಿಜೆಪಿಯಿಂದ ವಿಡಿಯೋ ಕೂಡ ಬಿಡುಗಡೆಯಾಗಿದೆ. “ನಾನು ಮೆಟ್ಟಿಲುಗಳ ಬಳಿ ನಿಂತಿದ್ದಾಗ ರಾಹುಲ್ ಗಾಂಧಿ ಬಂದು ನನ್ನನ್ನು ತಳ್ಳಿದರು” ಎಂದು ಸಾರಂಗಿ ಆರೋಪ ಮಾಡಿದ್ದಾರೆ. ಪ್ರತಿಭಟನೆಯ ವೇಳೆ ಇಬ್ಬರು ಬಿಜೆಪಿ ಸಂಸದರ ಮೇಲೆ ರಾಹುಲ್ ಗಾಂಧಿ ಹಲ್ಲೆ ನಡೆಸಿದ್ದಾರೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಆರೋಪಿಸಿದ್ದಾರೆ. ಆದರೆ ಇದನ್ನು ಕಾಂಗ್ರೆಸ್  ನಿರಾಕರಿಸಿದೆ.

 Full Gfx: ಕಾಂಗ್ರೆಸ್‌ಗೆ ಟಾಂಗ್ ಕೊಟ್ಟ ಅಮಿತ್ ಶಾ

ತನ್ನ ಮೇಲೆ ಆರೋಪ ಬರುತ್ತಿದ್ದಂತೆ ಅಮಿತ್ ಶಾ ಕಾಂಗ್ರೆಸ್‌ ಮೇಲೆ ಮತ್ತೆ ವಾಗ್ದಾಳಿ ನಡೆಸಿ, ನನ್ನ ವಿಡಿಯೋ ತಿರುಚಿದ್ದಾರೆಂದು ಆರೋಪಿಸಿದ್ದಾರೆ. ಕಾಂಗ್ರೆಸ್‌ ಪಕ್ಷವು ಡಾ.ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರಿಗೆ ಭಾರತ ರತ್ನ ಸಿಗದಂತೆ ನೋಡಿಕೊಂಡರು. ಅವರ ಜಯಂತಿಯನ್ನು ಆಚರಿಸದಂತೆ ಮಾಡಿದ್ದರು. ಅಂಬೇಡ್ಕರ್‌ ಅವರ ಜನ್ಮಸ್ಥಳದಲ್ಲಿ ಸ್ಮಾರಕ ಸ್ಥಾಪನೆಗೂ ನೆಹರೂ ತೊಡಕು ಹಾಕಿದ್ದರು” ಎಂದು ಟೀಕಿಸಿದರು. ಕಾಂಗ್ರೆಸ್‌ ಪಕ್ಷವು ಪ್ರಧಾನ ಮೋದಿಯವರ ಹಾಗೂ ತನ್ನ ವಿಡಿಯೋಗಳನ್ನು ಎಡಿಟ್‌ ಮಾಡಿ, ಭಾಷಣವನ್ನು ಎಐ ಬಳಸಿ ಬದಲಾಯಿಸಿ ಹಂಚಿಕೊಳ್ಳುತ್ತಿದ್ದಾರೆ. ಆ ಮೂಲಕ ಸಾರ್ವಜನಿಕರಲ್ಲಿ ಕಾಂಗ್ರೆಸ್‌ ಗೊಂದಲ ಸೃಷ್ಟಿಸುತ್ತಿದೆ. ವಿಡಿಯೋಗಳನ್ನು ತುಂಡು ತುಂಡು ಮಾಡಿ, ಎಐ ಬಳಸಿ ಎಡಿಟ್‌ ಮಾಡುವ ಮೂಲಕ ಅದನ್ನು ದೇಶದಲ್ಲಿ ಪ್ರಸಾರ ಮಾಡುವಂತೆ ಮಾಡುತ್ತಿದ್ದಾರೆ ಎಂದು ಅಮಿತ್‌ ಶಾ ಆರೋಪಿಸಿದರು. ಅಮಿತ್ ಶಾ ಭಾಷಣದ ವಿಡಿಯೋವನ್ನು ಅಪ್ಲೋಡ್‌ ಮಾಡಿದ ಕಾಂಗ್ರೆಸ್‌ ನಾಯಕರಿಗೆ  ಎಕ್ಸ್‌ನಿಂದ ನೋಟಿಸ್‌ ಬಂದಿದೆ.

Full Gfx:  ಅಂಬೇಡ್ಕರ್ ಬಾವಚಿತ್ರವಿಟ್ಟು ಕಾಂಗ್ರೆಸ್ ಪ್ರೊಟೆಸ್ಟ್

ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಕಲಾಪದ ವೇಳೆ ಅಮಿತ್‌ ಶಾ ಹೇಳಿಕೆಯನ್ನು ಕಾಂಗ್ರೆಸ್ ಶಾಸಕರು ತೀವ್ರವಾಗಿ  ಖಂಡಿಸಿ ಪ್ರತಿಭಟನೆ ನಡೆಸಿದ್ರು.  ಈ ವೇಳೆ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಅಮಿತ್ ಶಾ ಅವರನ್ನು ಸಮರ್ಥಿಸಿ ಸದನದಿಂದ ಹೊರ ನಡೆದರು. ಬಳಿಕ ಆಡಳಿತ ಪಕ್ಷದ ಸದಸ್ಯರು ತಮ್ಮ ಆಸನಗಳ ಎದುರು ಅಂಬೇಡ್ಕರ್ ಅವರ ಭಾವಚಿತ್ರವನ್ನ ಜೋಡಿಸಿಟ್ರು. ಸಿಎಂ ಸಿದ್ದರಾಮಯ್ಯ ಕೂಡ ಅಂಬೇಡ್ಕರ್ ಬಾವಚಿತ್ರ ಹಿಡಿದು ಕುಳಿತಿದ್ರು.

Full Gfx: ಲಕ್ಷ್ಮೀ ಹೆಬ್ಬಾಳ್ಕರ್‌ ವಿರುದ್ಧ ಕೆಟ್ಟ ಪದ ಬಳಸಿದ್ರಾ ಸಿಟಿ ರವಿ?

ಅಂಬೆೇಡ್ಕರ್ ವಿರುದ್ಧ ಪ್ರತಿಭಟನೆ ವೇಳೆ ಪರಿಷತ್ತಿನಲ್ಲಿ ಬಿಜೆಪಿ ಸದಸ್ಯ ಸಿ.ಟಿ. ರವಿ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಶ್ಲೀಲ ಪದ ಬಳಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.  ಕೆಟ್ಟ ಪದವನ್ನು ಬಳಕೆ ಮಾಡಿದ್ದರಿಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಣ್ಣಿರು ಹಾಕುತ್ತಾ ಪರಿಷತ್ತಿನಿಂದ ಹೊರಗೆ ಹೋಗಿದ್ದಾರೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಸದಸ್ಯರು ಸಿಟಿ ರವಿ ವಿರುದ್ಧ ಮುಗಿಬಿದ್ದಿದ್ದು, ಸೂಕ್ತ ಕ್ರಮಕೈಗೊಳ್ಳುವಂತೆ ಸಭಾಪತಿಗೆ ಮನವಿ ಮಾಡಿದ್ದಾರೆ. ಒಟ್ನಲ್ಲಿ ಅಮಿತ್ ಶಾ ಹೇಳಿಕೆಯಿಂದ ಇಡೀ ದೇಶವೇ ಧಗಧಗಿಸುತ್ತಿದ್ದು,  ಈ ಕಿಚ್ಚು ಎಲ್ಲಾ ರಾಜ್ಯಗಳಲ್ಲಿ ಹರಡಿದೆ.

Kishor KV

Leave a Reply

Your email address will not be published. Required fields are marked *