ಸರೋವರದ ಮಧ್ಯೆ ಸಪ್ತಪದಿ ತುಳಿದ ಪರಿಣಿತಿ ಚೋಪ್ರಾ ಮತ್ತು ಎಎಪಿ ಮುಖಂಡ ರಾಘವ್ ಚಡ್ಡಾ

ಸರೋವರದ ಮಧ್ಯೆ ಸಪ್ತಪದಿ ತುಳಿದ ಪರಿಣಿತಿ ಚೋಪ್ರಾ ಮತ್ತು ಎಎಪಿ ಮುಖಂಡ ರಾಘವ್ ಚಡ್ಡಾ

ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಮತ್ತು ಎಎಪಿ ಮುಖಂಡ ರಾಘವ್ ಚಡ್ಡಾ ಮದುವೆ ಅದ್ದೂರಿಯಾಗಿ ನೆರವೇರಿದೆ. ರಾಜಸ್ಥಾನದ ಉದಯಪುರದ ಲೀಲಾ ಪ್ಯಾಲೇಸ್‌ನಲ್ಲಿ ಸೆ.24ರಂದು ನಡೆದ ಮದುವೆಯಲ್ಲಿ ಪರಿಣಿತಿ ಮತ್ತು ರಾಘವ್ ಸಪ್ತಪದಿ ತುಳಿದಿದ್ದಾರೆ. ಬಿಗಿ ಭದ್ರತೆಯಲ್ಲಿ ನಡೆದ ಈ ಮದುವೆಯಲ್ಲಿ ಎರಡು ಕುಟುಂಬಗಳ ಆಪ್ತರು, ಬಂಧು-ಮಿತ್ರರು ಭಾಗಿಯಾಗಿದ್ದರು.

ಇದನ್ನೂ ಓದಿ: ಬಾಕ್ಸ್‌ ಆಫೀಸ್‌ನಲ್ಲಿ ಹಣದ ಸುರಿಮಳೆಗೈದ ಜವಾನ್..! – 15 ದಿನದಲ್ಲಿ ಸಿನಿಮಾದ ಕಲೆಕ್ಷನ್‌ ಎಷ್ಟು?

ಉದಯಪುರದ ಲೀಲಾ ಪ್ಯಾಲೇಸ್ ಹೋಟೆಲ್‌ನಲ್ಲಿ ಪರಿಣಿತಿ ಚೋಪ್ರಾ ಹಾಗೂ ರಾಘವ್ ಚಡ್ಡಾ ವಿವಾಹ ನೆರವೇರಿದೆ. ಅದ್ದೂರಿಯಾಗಿ ಮದುವೆ ಸಮಾರಂಭ ಜರುಗಿದೆ. ಲೀಲಾ ಪ್ಯಾಲೇಸ್ ಹೋಟೆಲ್ ಸಮೀಪದ ಸರೋವರದ ಮಧ್ಯೆ ಈ ಮದುವೆ ನಡೆದಿದೆ. ಈ ಜೋಡಿ ಬೋಟ್ ಮೂಲಕ ಮಂಟಪಕ್ಕೆ ತೆರಳಿತು. ಮಧ್ಯಾಹ್ನ 3:30ರ ಸುಮಾರಿಗೆ ಇಬ್ಬರೂ ಮದುವೆ ಆದರು. 4 ಗಂಟೆಗೆ ಸಪ್ತಪದಿ ತುಳಿದರು. ಈ ಮದುವೆಗೆ ಹರ್ಭಜನ್ ಸಿಂಗ್, ಸಾನಿಯಾ ಮಿರ್ಜಾ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಂಜಾಬ್ ಮುಖ್ಯಮಂತ್ರಿ ಭಗ್ವಂತ್ ಮಾನ್ ಭಾಗವಹಿಸಿ ನವಜೋಡಿಗೆ ಶುಭ ಹಾರೈಸಿದ್ದಾರೆ.

ಮದುವೆ ಬಗ್ಗೆ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ. ‘ಕೊನೆಗೂ ಮಿಸ್ಟರ್ & ಮಿಸಸ್ ಆಗಲು ಪುಣ್ಯ ಮಾಡಿದ್ದೇವೆ. ಒಬ್ಬರನ್ನೊಬ್ಬರು ಬಿಟ್ಟು ಬದುಕಲು ಸಾಧ್ಯವಿಲ್ಲ, ನಮ್ಮ ಶಾಶ್ವತವಾದ ಈ ಪ್ರಯಾಣ ಈಗ ಆರಂಭವಾಗುತ್ತಿದೆ’ ಎಂದು ಪರಿಣಿತಿ ಚೋಪ್ರಾ ಬರೆದುಕೊಂಡಿದ್ದಾರೆ. ಈ ಪೋಸ್ಟ್‌ಗೆ ಪರಿಣಿತಿ ಸೋದರ ಸಂಬಂಧಿ ಪ್ರಿಯಾಂಕಾ ಚೋಪ್ರಾ ಕೂಡ ಪ್ರತಿಕ್ರಿಯಿಸಿದ್ದು, ನವ ಜೋಡಿಗೆ ಶುಭ ಹಾರೈಸಿದ್ದಾರೆ. ನನ್ನ ಆಶೀರ್ವಾದ ಸದಾ ಇರುತ್ತದೆ ಎಂದು ಪಿಗ್ಗಿ ಕಾಮೆಂಟ್ ಮಾಡಿದ್ದಾರೆ.  ಈ ಪೋಸ್ಟ್‌ಗೆ ಅನೇಕ ಸೆಲೆಬ್ರಿಟಿಗಳು ಶುಭಹಾರೈಸಿದ್ದಾರೆ.

ಪರಿಣಿತಿ ಚೋಪ್ರಾ ಹಾಗೂ ರಾಘವ್ ಚಡ್ಡಾ ಅವರು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ರಾಘವ್ ಚಡ್ಡಾ ರಾಜಕಾರಣಿಯಾಗಿ ಗುರುತಿಸಿಕೊಂಡರೆ, ಪರಿಣಿತಿ ಚೋಪ್ರಾ ಬಾಲಿವುಡ್‌ನ ಫೇಮಸ್ ನಟಿಯಾಗಿದ್ದಾರೆ. ಇದೀಗ ಪರಿಣಿತಿ ಚೋಪ್ರಾ ಸಿನಿಮಾ ಕೆಲಸಗಳಿಂದ ಬ್ರೇಕ್ ಪಡೆದಿದ್ದು, ಸ್ವಲ್ಪ ದಿನ ಪತಿಯ ಜೊತೆ ಸುತ್ತಾಡಲಿದ್ದಾರೆ.

Sulekha