ನಟಿ ಪರಿಣಿತಿ ಚೋಪ್ರಾ, ಆಪ್ ನಾಯಕ ರಾಘವ್ ಚಡ್ಡಾ ನಡುವೆ ನಿಶ್ಚಿತಾರ್ಥಕ್ಕೆ ಸಿದ್ಧತೆ?

ನಟಿ ಪರಿಣಿತಿ ಚೋಪ್ರಾ, ಆಪ್ ನಾಯಕ ರಾಘವ್ ಚಡ್ಡಾ ನಡುವೆ ನಿಶ್ಚಿತಾರ್ಥಕ್ಕೆ ಸಿದ್ಧತೆ?

ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡಾ ನಡುವೆ ಏನೋ ಇದೆ ಅಂತಾ ಇಷ್ಟು ದಿನ ಗಾಸಿಪ್ ಮಾತ್ರ ಆಗ್ತಾ ಇತ್ತು. ಈ ಬಗ್ಗೆ ರಾಘವ್ ಚಡ್ಡಾ ಹತ್ತಿರ ಕೇಳಿದಾಗ ನನಗೆ ಏನಿದ್ರೂ ರಾಜನೀತಿ ಮಾತ್ರ ಗೊತ್ತು ಪರಿಣಿತಿ ಗೊತ್ತೇ ಇಲ್ಲ ಅಂತಾ ಹೇಳಿದ್ದರು. ಇದೀಗ ಪರಿಣಿತಿ ಮತ್ತು ರಾಘವ್ ಚಡ್ಡಾ ಮದುವೆಯಾಗುವುದು ಪಕ್ಕಾ ಅನ್ನೋ ಸುದ್ದಿ ಓಡಾಡ್ತಿದೆ.  ಇಷ್ಟು ದಿನ ಜೊತೆಯಲ್ಲೇ ಓಡಾಡುತ್ತಿದ್ದ ಈ ಸೆಲೆಬ್ರಿಟಿ ಜೋಡಿ ಈಗ ಜೀವನದಲ್ಲೂ ಜೊತೆಯಾಗುತ್ತಿದ್ದಾರೆ ಎನ್ನಲಾಗ್ತಿದೆ.

ಇದನ್ನೂ ಓದಿ: ಅಪ್ಪನನ್ನ ಮತ್ತೆ ಸಿಎಂ ಮಾಡಲು ಪುತ್ರನ ಮಿಂಚಿನ ಸಂಚಾರ – ವರುಣಾದಲ್ಲಿ ಸಿದ್ದು ಪುತ್ರ ಯತೀಂದ್ರ ಪ್ರಚಾರ!

ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡಾ ಸದ್ಯದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ದೆಹಲಿಯಲ್ಲಿ ಈ ವಾರ ಅದ್ದೂರಿ ನಿಶ್ಚಿತಾರ್ಥ ನಡೆಯಲಿದೆ. ಪ್ರಿಯಾಂಕಾ ಚೋಪ್ರಾ ಸಂಬಂಧಿಯಾಗಿರುವ ನಟಿ ಪರಿಣಿತಿ ಚೋಪ್ರಾ ಕಳೆದ ಕೆಲ ದಿನಗಳಿಂದ ರಾಘವ್ ಚಡ್ಡಾ ಜೊತೆಗೆ ಓಡಾಡುತ್ತಿರುವ ಸುದ್ದಿ ಚರ್ಚೆಗೂ ಕಾರಣವಾಗಿತ್ತು. ಇತ್ತೀಚೆಗೆ ಲಂಡನ್ ಮತ್ತು ಮುಂಬೈ ಏರ್‌ಪೋರ್ಟ್‌ನಲ್ಲೂ ಒಟ್ಟಿಗೆ ಕಾಣಿಸಿಕೊಂಡಿದ್ದರು. ಈ ವಾರವೇ ದೆಹಲಿಯಲ್ಲಿ ರಾಜಕಾರಣಿ ರಾಘವ್ ಜೊತೆ ಪರಿಣಿತಿ ಎಂಗೇಜ್ಮೆಂಟ್ ಫಿಕ್ಸ್ ಆಗಿದೆ. ಅದಕ್ಕಾಗಿ ಈಗಾಗಲೇ ಪರಿಣಿತಿ ಚೋಪ್ರಾ ದೆಹಲಿಗೆ ತೆರಳಿದ್ದಾರೆ. ನಿಶ್ಚಿತಾರ್ಥದ ಸಿದ್ಧತೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಪರಿಣಿತಿ ಚೋಪ್ರಾ ಎಂಗೇಜ್ಮೆಂಟ್‌ನಲ್ಲಿ ಭಾಗಿಯಾಗಲು ಈಗಾಗಲೇ ಪ್ರಿಯಾಂಕಾ ಚೋಪ್ರಾ- ನಿಕ್ ಜೋನಸ್ ಮತ್ತು ಮೀರಾ ಚೋಪ್ರಾ ಕೂಡ ದೆಹಲಿಯಲ್ಲಿದ್ದಾರೆ.

suddiyaana