ಗಗನಕ್ಕೇರಿದ ಟೊಮ್ಯಾಟೋ ದರ – ಬೆಲೆಯೇರಿಕೆ ಬಿಸಿಯಲ್ಲಿರುವಾಗಲೇ ಟೊಮ್ಯಾಟೋದಲ್ಲಿಯೇ ಮಗಳ ತುಲಾಭಾರ ಮಾಡಿದ ಹೆತ್ತವರು..!

ಗಗನಕ್ಕೇರಿದ ಟೊಮ್ಯಾಟೋ ದರ – ಬೆಲೆಯೇರಿಕೆ ಬಿಸಿಯಲ್ಲಿರುವಾಗಲೇ ಟೊಮ್ಯಾಟೋದಲ್ಲಿಯೇ ಮಗಳ ತುಲಾಭಾರ ಮಾಡಿದ ಹೆತ್ತವರು..!

ತುಲಾಭಾರ ಮಾಡುವವರು ಅಕ್ಕಿ, ಧಾನ್ಯಗಳು, ಹಣ್ಣು, ಬೆಲ್ಲ, ಬೆಳ್ಳಿ ಬಂಗಾರ ಹೀಗೆ ಅವರವರ ಇಷ್ಟದ ಪ್ರಕಾರ ಮಾಡುತ್ತಾರೆ. ಆದರೆ, ಇಲ್ಲೊಬ್ಬರು ತಮ್ಮ  ಮಗಳಿಗೆ ಟೊಮ್ಯಾಟೋದಲ್ಲಿ ತುಲಾಭಾರ ಮಾಡಿಸಿದ್ದಾರೆ. ದೇಶದಲ್ಲಿಯೇ ಟೊಮ್ಯಾಟೋ ಬೆಲೆ ಗಗನಕ್ಕೇರಿದೆ. ಕೆಂಪುಸುಂದರಿಯನ್ನು ಕೊಳ್ಳಲು ಜೇಬು ಗಟ್ಟಿಯಿರಬೇಕು ಎಂಬ ಮಟ್ಟಿಗೆ ಟೊಮ್ಯಾಟೋ ದರ ಏರಿಕೆಯಾಗಿದೆ. ಪರಿಸ್ಥಿತಿ ಹೀಗಿರುವಾಗಲೇ ಟೊಮ್ಯಾಟೋದಲ್ಲೇ ತುಲಾಭಾರ ಮಾಡಿಸುವ ಮೂಲಕ ಇಲ್ಲೊಂದು ಕುಟುಂಬ ಎಲ್ಲರ ಗಮನ ಸೆಳೆದಿದೆ.

ಇದನ್ನೂ ಓದಿ: ಟೊಮ್ಯಾಟೊ ಕಾಯಲು ಬೌನ್ಸರ್! – ʼಬಿಜೆಪಿ ಟೊಮ್ಯಾಟೋಗಳಿಗೆ ಜೆಡ್ ಪ್ಲಸ್’ ನೀಡಿ ಎಂದು ಅಖಿಲೇಶ್ ಯಾದವ್ ಲೇವಡಿ

ಆಂಧ್ರಪ್ರದೇಶದ ಅನಕಪಲ್ಲಿ ಜಿಲ್ಲೆಯ ನಿವಾಸಿ, ಮಲ್ಲ ಜಗ್ಗ ಅಪ್ಪಾರಾವ್ ಮತ್ತು ಮೋಹಿನಿ ದಂಪತಿಯ ಪುತ್ರಿ ಭವಿಷ್ಯಾ ಅವರಿಗೆ ಟೊಮ್ಯಾಟೋದಲ್ಲಿ ತುಲಾಭಾರ ಮಾಡಿದ್ದಾರೆ. ನೂಕಾಲಮ್ಮ ದೇವಸ್ಥಾನದಲ್ಲಿ ಈ ಕಾರ್ಯಕ್ರಮ ನಡೆದಿದೆ. ಈ ತುಲಾಭಾರದಲ್ಲಿ 50 ಕೆ.ಜಿ ಟೊಮೆಟೊವನ್ನು ಇರಿಸಲಾಗಿತ್ತು. ಅದಕ್ಕೆ ಜತೆಯಾಗಿ ಬೆಲ್ಲ ಮತ್ತು ಸಕ್ಕರೆಯನ್ನು ಕೂಡ ಇಡಲಾಗಿತ್ತು. ಈ ತುಲಾಭಾರದಲ್ಲಿ ಇಡಲಾಗಿದ್ದ, ಟೊಮೆಟೊ ಮತ್ತು ಸಕ್ಕರೆಯನ್ನು ದೇವಾಲಯದಲ್ಲಿ ನೀಡುವ ನಿತ್ಯಾನ್ನದಾನಕ್ಕೆ ಬಳಸಲಾಗುವುದು ಎಂದು ದೇವಸ್ಥಾನದ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಕೆಜಿಗೆ 120 ರೂ. ಇದರಿಂದ ದರ್ಶನಕ್ಕೆ ಬಂದ ಭಕ್ತರು ಈ ತುಲಾಭಾರ ಕಣ್ತುಂಬಿಕೊಂಡಿದ್ದಾರೆ.

suddiyaana