ಪರೀಕ್ಷೆಯಿದೆ ಟಿವಿ ನೋಡಬೇಡ ಎಂದ ಪೋಷಕರು – 9ನೇ ಕ್ಲಾಸ್ ವಿದ್ಯಾರ್ಥಿ ನೇಣಿಗೆ ಶರಣು..!

ಈಗ ಪರೀಕ್ಷೆಯ ಸಮಯ. ಪೋಷಕರು ಮಕ್ಕಳಿಗೆ ಟಿವಿ ನೋಡಲು ಬಿಡುವುದಿಲ್ಲ. ಆದರೆ, ಪೋಷಕರ ಈ ನಿರ್ಧಾರವೇ ಮಕ್ಕಳಿಗೆ ಮುಳುವಾದರೇ ಅದಕ್ಕಿಂತ ದುರಂತ ಇನ್ನೇನಿದೆ ಹೇಳಿ.
ಇದನ್ನೂ ಓದಿ:ಸ್ಲೀಪರ್ ಕೋಚ್ ಬಸ್ನಲ್ಲಿ 90 ಲಕ್ಷ ಅಬೇಸ್ – ಪಕ್ಕಾ ಪ್ಲಾನ್ ಮಾಡಿ ಕದ್ದ ಖತರ್ನಾಕ್ಗಳು
ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಗಣೇಶನಗರದಲ್ಲಿ ಒಂದು ದಾರುಣ ಘಟನೆ ನಡೆದಿದೆ. 15 ವರ್ಷದ ಶುಭಂ ನಾಗೇಶ್ ನಾಯ್ಕ್ 9ನೇ ತರಗತಿಯಲ್ಲಿ ಓದುತ್ತಿದ್ದ. ಪರೀಕ್ಷೆ ಸಮಯವಾಗಿದ್ದರಿಂದ ಪೋಷಕರು ಟಿವಿ ನೋಡಬೇಡ ಎಂದು ಹೇಳಿದ್ದಾರೆ. ಶುಭಂ ಶಿರಸಿಯ ಪ್ರತಿಷ್ಠಿತ ಮಾರಿಕಾಂಬ ಪ್ರೌಢಶಾಲೆಯಲ್ಲಿ ಓದುತ್ತಿದ್ದ. ಪರೀಕ್ಷೆ ನಡೆಯುತ್ತಿತ್ತು. ಹೀಗಾಗಿ ಪೋಷಕರು ಟಿವಿ ನೋಡಬೇಡ ಮಗನೇ, ಪುಸ್ತಕ ಹಿಡಿದುಕೊಂಡು ಓದು ಅಂದಿದ್ದಾರೆ. ಇದೇ ಮಾತು ಶುಭಂಗೆ ಬೇಸರ ತಂದಿದೆ. ಪರೀಕ್ಷೆಯ ಒತ್ತಡವೋ, ಪೋಷಕರ ನಿರ್ಬಂಧವೋ, 15 ವರ್ಷದ ಶುಭಂ ನಾಗೇಶ ನಾಯ್ಕ್ ನೇಣಿಗೆ ಶರಣಾಗಿದ್ದಾನೆ.
ತಂದೆ-ತಾಯಿ ಮನೆಯಲ್ಲಿ ಇಲ್ಲದ ಸಮಯ ನೋಡಿ ಶುಭಂ ಈ ಕೆಟ್ಟ ನಿರ್ಧಾರಕ್ಕೆ ಬಂದಿದ್ದಾನೆ. ಸ,ುಭಂ ನೇಣಿನ ಕುಣಿಕೆಗೆ ಕೊರಳೊಡ್ಡಿದ ಕೆಲ ಸಮಯದಲ್ಲೇ ತಂದೆ ತಾಯಿ ಮನೆಗೆ ಬಂದಿದ್ದಾರೆ. ಬಂದವರಿಗೆ ಈ ದಾರುಣ ದೃಶ್ಯ ಕಣ್ಣಿಗೆ ಬಿದ್ದಿದೆ. ತಡಮಾಡದೇ ಮಗನನ್ನು ಶಿರಸಿಯ ಟಿಎಸ್ಎಸ್(TSS) ಆಸ್ಪತ್ರೆಗೆ ದಾಖಲಿಸಿದರು. ಆದರೆ, ಅಷ್ಟರಲ್ಲಾಗಲೇ ತೀವ್ರವಾಗಿ ಅಸ್ವಸ್ಥನಾಗಿದ್ದ ಶುಭಂ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಆಸ್ಪತ್ರೆಯ ಆವರಣದಲ್ಲಿ ಪೋಷಕರ ಆಕ್ರಂದನ ನಿಜಕ್ಕೂ ಮನಕಲಕುವಂತಿದೆ. ಈಗಿನ ಮಕ್ಕಳಿಗೆ ಬುದ್ದಿ ಹೇಳುವ ಹಾಗಿಲ್ಲ. ಸ್ಕೂಲ್ನಲ್ಲಿ ಟೀಚರ್ ಹೊಡೆಯುವ ಹಾಗೂ ಇಲ್ಲ. ಮಕ್ಕಳನ್ನು ಪರೀಕ್ಷೆಗೆ ಸಜ್ಜು ಗೊಳಿಸುವುದೇ ಪೋಷಕರಿಗೆ ನಿಜವಾದ ಸವಾಲಾಗಿದೆ.

ನೋಡಿರಿ

