ನಿಶ್ವಿತಾರ್ಥಕ್ಕೂ ಮುನ್ನ ವಧುವಿನ ತಂದೆಯೊಂದಿಗೆ ಓಡಿಹೋದ ವರನ ತಾಯಿ!

ನಿಶ್ವಿತಾರ್ಥಕ್ಕೂ ಮುನ್ನ ವಧುವಿನ ತಂದೆಯೊಂದಿಗೆ ಓಡಿಹೋದ ವರನ ತಾಯಿ!

ಪ್ರೀತಿ ಅನ್ನೋದೇ ಹಾಗೇ.. ಯಾವಾಗ, ಯಾರ ಮೇಲೆ ಲವ್‌ ಆಗುತ್ತೆ ಅಂತಾ ಹೇಳೋಕೆ ಸಾಧ್ಯ ಇಲ್ಲ.. ಅದಕ್ಕೆ ಪ್ರೀತಿ ಕುರುಡು ಅಂತಾ ಎನ್ನುತ್ತಾರೆ. ಇದೀಗ  ಇದೀಗ ಮಧ್ಯ ಪ್ರದೇಶದಲ್ಲಿ ಅಂತಹದ್ದೊಂದು ಮುಜುಗರದ ಪ್ರಕರಣ ವರದಿಯಾಗಿದೆ. ಮಕ್ಕಳ ನಿಶ್ಚಿತಾರ್ಥಕ್ಕೂ ಮುನ್ನ ವಧುವಿನ ತಂದೆ ಮತ್ತು ವರನ ತಾಯಿ ಓಡಿ ಹೋಗಿದ್ದಾರೆ.

ಇದನ್ನೂ ಓದಿ: ಕಾಂತಾರ ಚಾಪ್ಟರ್ 1 ಹೊಸ ಇತಿಹಾಸ – ಕರ್ನಾಟಕದಲ್ಲಿ 250 ಕೋಟಿ ಗಳಿಕೆ ಮಾಡಿದ ಮೊದಲ ಕನ್ನಡ ಸಿನಿಮಾ!

ಈ ವಿಲಕ್ಷಣಕಾರಿ ಘಟನೆ ಮಧ್ಯ ಪ್ರದೇಶದ ಉಜ್ಜೈನಿಯಲ್ಲಿ ನಡೆದಿದೆ. 8 ದಿನಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಚಿಕ್ಲಿಯ ಮಧ್ಯ ವಯಸ್ಕ ರೈತನ ಪತ್ನಿ ಕೆಲವು ದಿನಗಳ ಹಿಂದೆ ಮೃತಪಟ್ಟಿದ್ದರು. ಆತ ತನ್ನ ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದ. ಇತ್ತೀಚೆಗೆ ಆತನ ಪುತ್ರಿಯ ನಿಶ್ಚಿತಾರ್ಥವನ್ನು ನಾಪತ್ತೆಯಾದ ಮಹಿಳೆಯ ಪುತ್ರನೊಂದಿಗೆ ನಡೆಸಲು ಸಿದ್ಧತೆ ಆರಂಭವಾಗಿತ್ತು. ನಿಶ್ಚಿತಾರ್ಥದ ಓಡಾಟದ ವೇಳೆ ಇಬ್ಬರು ಮಧ್ಯ ವಯಸ್ಕರ ನಡುವೆ ಪ್ರೇಮಾಂಕುರವಾಗಿತ್ತು. ಹೀಗಾಗಿ ಒಟ್ಟಿಗೆ ಬದುಕಲು ನಿರ್ಧರಿಸಿ ಓಡಿ ಹೋಗಿದ್ದರು. ಈ ವಿಚಾರ ಮನೆಯವರಿಗೆ ತಿಳಿದಿರಲಿಲ್ಲ. ಹೀಗಾಗಿ ಮಹಿಳೆಯ ಮಗ 8 ದಿನಗಳ ಹಿಂದೆ ತಾಯಿ ನಾಪತ್ತೆಯಾಗಿದ್ದಾಳೆ ಎಂದು ದೂರು ನೀಡಿದ್ದರು. ಇದೀಗ ಪೊಲೀಸರು ತನಿಖೆ ನಡೆಸಿದ್ದು, ಈ ಕಿಲಾಡಿ ಜೋಡಿಯನ್ನು ಪತ್ತೆ ಹಚ್ಚಿದ್ದಾರೆ.

7   ಗುರುವಾರ (ಅಕ್ಟೋಬರ್‌ 30) ಪೊಲೀಸರು ಆಕೆಯನ್ನು ಚಿಕ್ಲಿ ಗ್ರಾಮದಲ್ಲಿ ಪತ್ತೆ ಹಚ್ಚಿದ್ದಾರೆ. ಅಲ್ಲಿ 50 ವರ್ಷದ ರೈತನೊಂದಿಗೆ ಆಕೆ ವಾಸಿಸುತ್ತಿದ್ದಳು. ವಿಚಿತ್ರ ಎಂದರೆ ಈ ರೈತ ಆಕೆಯ ಮಗನ ಭಾವಿ ಪತ್ನಿಯ ತಂದೆ! ಅಂದರೆ ಈ ರೈತನ ಮಗಳೊಂದಿಗೆ 45 ವರ್ಷದ ಮಹಿಳೆಯ ಮಗನ ವಿವಾಹ ನಿಗದಿಯಾಗಿತ್ತು. ಮಕ್ಕಳ ನಿಶ್ವಿತಾರ್ಥಕ್ಕೂ ಮುನ್ನ ಈ ಮಧು ವಯಸ್ಕ ಜೋಡಿ ಓಡಿ ಹೋಗಿತ್ತು. ಮಕ್ಕಳ ಮದುವೆಗೆ ಮುನ್ನವೇ ಇವರು ಒಟ್ಟಿಗೆ ವಾಸಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.

ಪತ್ತೆಯಾದ ನಂತರವೂ ಮಹಿಳೆ ತನ್ನ ಪ್ರಿಯತಮನನ್ನು ಬಿಟ್ಟು ಬರಲು ನಿರಾಕರಿಸಿ ಆತನೊಂದಿಗೆ ಇರಲು ಬಯಸುವುದಾಗಿ ಹೇಳಿದ್ದಾಳೆ. ಕುಟುಂಬ ಸದಸ್ಯರು ಅವಳನ್ನು ಮನೆಗೆ ಮರಳುವಂತೆ ಮನವೊಲಿಸಲು ಪ್ರಯತ್ನಿಸಿದರೂ ಆಕೆ ತನ್ನ ನಿರ್ಧಾರ ಬದಲಾಯಿಸಿಲ್ಲ ಎನ್ನಲಾಗಿದೆ. ಈ ಘಟನೆಯಿಂದ ಎರಡೂ ಮನೆಯವರು ಮುಜುಗರಕ್ಕೊಳಗಾಗಿದ್ದಾರೆ. ಸದ್ಯ ಈ ಘಟನೆ ದೇಶಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

Shwetha M