ಫ್ಲೈಟ್ ನಲ್ಲಿ ಮಕ್ಕಳಿಗೂ ಟಿಕೆಟ್ ಇದೆ ಎಂದಿದ್ದಕ್ಕೆ ಮಗುವನ್ನೇ ಬಿಟ್ಟು ಹೋದ ದಂಪತಿ!

ಫ್ಲೈಟ್ ನಲ್ಲಿ ಮಕ್ಕಳಿಗೂ ಟಿಕೆಟ್ ಇದೆ ಎಂದಿದ್ದಕ್ಕೆ ಮಗುವನ್ನೇ ಬಿಟ್ಟು ಹೋದ ದಂಪತಿ!

ಸಾಮಾನ್ಯವಾಗಿ ಬಸ್ಸಿನಲ್ಲಿ ಪ್ರಯಾಣಿಸೋ ಸಂದರ್ಭ ಪೋಷಕರೊಂದಿಗೆ ಮಕ್ಕಳು ಜೊತೆಗಿರುತ್ತಾರೆ. ಈ ವೇಳೆ ತಮ್ಮ ಟಿಕೆಟ್ ದರ ಮಾತ್ರ ಪಾವತಿಸುತ್ತಾರೆ. ಮಕ್ಕಳು ಇನ್ನೂ ಸಣ್ಣವರು ಅವರಿಗೆ ಟಿಕೆಟ್ ಅಗತ್ಯವಿಲ್ಲ. ನಮಗೆ ಮಾತ್ರ ಟಿಕೆಟ್ ಸಾಕು ಎಂದು ಹೇಳುವುದನ್ನು ನಾವು ಅನೇಕ ಬಾರಿ ಕೇಳಿದ್ದೇವೆ. ಈ ವೇಳೆ ಕಂಡಕ್ಟರ್ ಪೋಷಕರೊಂದಿಗೆ ವಾದಕ್ಕಿಳಿಯುವುದನ್ನು ನಾವು ನೋಡಿರುತ್ತೇವೆ. ಬಳಿಕ ಕಂಡಕ್ಟರ್ ಗೆ ಬೈದ ಮೇಲೆ ಮಕ್ಕಳಿಗೂ ಟಿಕೆಟ್ ಖರೀದಿಸುತ್ತಾರೆ. ಆದರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಫ್ಲೈಟ್ ನಲ್ಲಿ ಮಕ್ಕಳಿಗೂ ಟಿಕೆಟ್ ಇದೆ ಎಂದು ಹೇಳಿದ್ದಕ್ಕೆ ದಂಪತಿ ತಮ್ಮ ಮಗುವನ್ನು ನಿಲ್ದಾಣದಲ್ಲೇ ಬಿಟ್ಟು ಹೋಗಿದ್ದಾರೆ.

ಇದನ್ನೂ ಓದಿ: “ರೈತರಿಗೆ ಹೆಣ್ಣು ಕೊಡಲಿ, ಜನರ ಮನಸ್ಸು ಬದಲಾಗಲಿ” – ದೇವಿ ಮೊರೆಹೋದ ಯುವಕ

ಹೌದು, ಬೆಲ್ಜಿಯಂ ಪಾಸ್ ಪೋರ್ಟ್ ಹೊಂದಿರುವ ದಂಪತಿ ತಮ್ಮ ಮಗುವಿನೊಂದಿಗೆ ಬ್ರಸೆಲ್ಸ್ ಗೆ ಹೋಗೋ ಪ್ಲಾನ್ ಮಾಡಿದ್ದರು. ಹಾಗಾಗಿ ಈ ಕುಟುಂಬ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ. ಟರ್ಮಿನಲ್ 1 ಕೌಂಟರ್ ಗೆ ಪ್ರವೇಶಿಸುತ್ತಿದ್ದಂತೆ ಸಿಬ್ಬಂದಿ ಫ್ಲೈಟ್ ನಲ್ಲಿ ಪ್ರಯಾಣಿಸಲು ಮಗುವಿಗೂ ಟಿಕೆಟ್ ಖರೀದಿಸಬೇಕು. ಇಲ್ಲದಿದ್ದರೆ ಪ್ರಯಾಣ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಈ ವೇಳೆ ದಂಪತಿ ಮಗುವಿಗೆ ಟಿಕೆಟ್ ಖರೀದಿಸುತ್ತಾರೆ ಎಂದು ಸಿಬ್ಬಂದಿ ಅಂದುಕೊಂಡು ಸುಮ್ಮನಾಗಿದ್ದಾರೆ. ಆದರೆ ಅಲ್ಲಿ ನಡೆದಿದ್ದೇ ಬೇರೆ. ದಂಪತಿ ಟಿಕೆಟ್ ಖರೀದಿಸುವ ಬದಲಾಗಿ, ಮಗುವನ್ನು ಕ್ಯಾರಿಯರ್‌ನಲ್ಲೇ ಬಿಟ್ಟು ಓಡಿಹೋಗಿದ್ದಾರೆ.

ದಂಪತಿಯ ಈ ನಡೆಯನ್ನು ಕಂಡ ವಿಮಾನ ನಿಲ್ದಾಣ ಸಿಬ್ಬಂದಿ ಒಂದು ಕ್ಷಣ ಶಾಕ್ ಆಗಿದ್ದಾರೆ. ಬಳಿಕ ಭದ್ರತಾ ಸಿಬ್ಬಂದಿಯನ್ನು ಕರೆಸಿ ಅವರನ್ನು ಅಲ್ಲೇ ತಡೆದಿದ್ದಾರೆ. ಅಲ್ಲದೇ ಸ್ವಲ್ಪ ಸಮಯದ ನಂತರ ಮಗುವನ್ನು ವಾಪಸ್ ಪಡೆಯುವಂತೆ ಹೇಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ವಿಮಾನ ನಿಲ್ದಾಣಕ್ಕೆ ಆಗಮಿಸಿ ದಂಪತಿಯನ್ನು ವಶಕ್ಕೆ ಪಡೆದಿದ್ದಾರೆ.

ಘಟನೆ ಕುರಿತು ವಿಮಾನ ನಿಲ್ದಾಣದ ಸಿಬ್ಬಂದಿ ಮಾತನಾಡಿದ್ದು, ಫ್ಲೈಟ್ ನಲ್ಲಿ ಮಕ್ಕಳಿಗೂ ಟಿಕೆಟ್ ಇದೆ. ಜೂನಿಯರ್ ಟಿಕೆಟ್ ಮಾಡಿಸಿ ಎಂದು ದಂಪತಿಗೆ ಹೇಳಿದೆವು. ಈ ವೇಳೆ ದಂಪತಿ ಟಿಕೆಟ್ ತೆಗೆದುಕೊಳ್ಳುತ್ತಾರೆ ಅಂತಾ ನಾವು ಅಂದು ಕೊಂಡಿದ್ದೆವು. ಆದರೆ ಅವರು ಹೆತ್ತ ಮಗುವನ್ನೇ ಬಿಟ್ಟು ಹೋಗುವಷ್ಟು ಕೀಳು ಮಟ್ಟಕ್ಕೆ ಇಳಿಯುತ್ತಾರೆ ಅಂದುಕೊಂಡಿರಲಿಲ್ಲ. ನಾವು ನೋಡುತ್ತಿರುವುದು ನಿಜ ಎಂಬುದನ್ನು ತಿಳಿದುಕೊಳ್ಳಲು ನಮಗೆ ತುಂಬಾ ಸಮಯ ಹಿಡಿಯಿತು. ಹೆತ್ತ ಮಕ್ಕಳನ್ನು ಪೋಷಕರು ಈ ರೀತಿ ನಡು ನೀರಲ್ಲಿ ಬಿಟ್ಟು ಹೋಗುತ್ತಾರೆ ಅನ್ನೋದನ್ನು ತಿಳಿದು ನಾವು ಆಘಾತಕ್ಕೊಳಗಾದೆವು ಎಂದು ಹೇಳಿದ್ದಾರೆ.

suddiyaana