ಕಿಸ್ ಕೊಟ್ರೆ ಫೋನ್ ಕೊಡ್ತೀನಿ.. ಅಪ್ರಾಪ್ತೆಗೆ ಬಸ್ ಡ್ರೈವರ್ನಿಂದ ಕಿರುಕುಳ! – ಕಾಮುಕನಿಗೆ ಬಿತ್ತು ಧರ್ಮದೇಟು!

ಬಸ್ಗಳಲ್ಲಿ ಹೆಣ್ಣುಮಕ್ಕಳು ಒಂಟಿಯಾಗಿ ಓಡಾಡುವ ಮುನ್ನ ಎಚ್ಚರ.. ಇಲ್ಲೊಬ್ಬ ಕಾಮುಕ ಬಸ್ ಡ್ರೈವರ್ ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡಿರುವ ಘಟನೆ ಬೆಳಕಿಗೆ ಬಂದಿದೆ. ಬಾಲಕಿಗೆ ಕಿರುಕುಳ ಕೊಟ್ಟ ಡ್ರೈವರ್ ಗೆ ಆಕೆಯ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಇದನ್ನೂ ಓದಿ:ಭಾರತ ಪಾಕ್ ಮ್ಯಾಚ್ ರದ್ದು ಕೋರಿ ಪಿಐಎಲ್ – ಮ್ಯಾಚ್ ನಡೆಸೋಕೆ ಸುಪ್ರೀಂ ಗ್ರೀನ್ ಸಿಗ್ನಲ್
ಏನಿದು ಘಟನೆ?
15 ವರ್ಷದ ಅಪ್ರಾಪ್ತ ಬಾಲಕಿ ಹೈದರಾಬಾದ್ನಿಂದ ಬೆಂಗಳೂರಿಗೆ ಇಂಡಿಯಾ ಖಾಸಗಿ ಸ್ಲೀಪರ್ ಬಸ್ಸಿನಲ್ಲಿ ಬಸ್ನಲ್ಲಿ ಪ್ರಯಾಣಿಸಿದ್ದಾಳೆ. ಈ ವೇಳೆ ಮೊಬೈಲ್ ಚಾರ್ಜ್ ಮಾಡಲು ಡ್ರೈವರ್ ಆರೀಫ್ ಗೆ ಫೋನ್ ನೀಡಿದ್ದಳು. ಸ್ವಲ್ಪ ಸಮಯದ ಬಳಿಕ ಮೊಬೈಲ್ ವಾಪಸ್ ಕೇಳಿದಾಗ ಸ್ಪೇರ್ ಡ್ರೈವರ್ ಅಸಭ್ಯವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ. ನೀನು ನನಗೆ ಕಿಸ್ ಕೊಟ್ಟರೆ ಮೊಬೈಲ್ ಕೊಡ್ತೀನಿ ಎಂದಿದ್ದಾನೆ. ಅಲ್ಲದೇ ಯುವತಿ ಮಲಗಿದ್ದ ಸೀಟ್ಗೆ ಬಂದು ಕಿರುಕುಳ ನೀಡಿದ್ದಾನೆ. ಇದರಿಂದ ಗಾಬರಿಯಾದ ಅಪ್ರಾಪ್ತೆ, ಪೋಷಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ.
ಬಾಲಕಿಯ ಪೋಷಕರು ಬಸ್ ಬೆಂಗಳೂರಿಗೆ ಬರುತ್ತಿದ್ದಂತೆ ಅಡ್ಡಗಟ್ಟಿದ್ದಾರೆ. ಬೆಂಗಳೂರಿನ ಚಾಲುಕ್ಯ ಸರ್ಕಾಲ್ ಬಳಿ ತಾಯಿ ಮತ್ತು ಅಣ್ಣ ಬಸ್ ನಿಲ್ಲಿಸಿ, ಸ್ಪೇರ್ ಡ್ರೈವರ್ ಆರೀಫ್ನ ಬಸ್ಸಿನಿಂದ ಕೆಳಗಿಳಿಸಿ ವಿಚಾರಿಸಿದ್ದಾರೆ. ಬಳಿಕ ಆತನಿಗೆ ಸರಿಯಾಗಿ ಥಳಿಸಿದ್ದಾರೆ.. ಕೊನೆಗೆ ಆರೀಫ್ ತಪ್ಪಾಯ್ತು ಎಂದು ಕ್ಷಮೆ ಕೇಳಿದ್ದಾನೆ. ಬಳಿಕ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿ, ಆತನನ್ನ ವಿಚಾರಣೆ ನಡೆಸುತ್ತಿದ್ದಾರೆ.

ನೋಡಿರಿ

