ಕರ್ನಾಟಕದ ಆಟಗಾರರನ್ನು ಕೆಣಕಿದ ಜಮ್ಮುಕ್ಯಾಪ್ಟನ್ – ಅನೀಶ್ ಹೆಲ್ಮೆಟ್‌ಗೆ ಡಿಚ್ಚಿಕೊಟ್ಟು ಡೋಗ್ರಾ ಅತಿರೇಕದ ವರ್ತನೆ

ಕರ್ನಾಟಕದ ಆಟಗಾರರನ್ನು ಕೆಣಕಿದ ಜಮ್ಮುಕ್ಯಾಪ್ಟನ್ – ಅನೀಶ್ ಹೆಲ್ಮೆಟ್‌ಗೆ ಡಿಚ್ಚಿಕೊಟ್ಟು ಡೋಗ್ರಾ ಅತಿರೇಕದ ವರ್ತನೆ

ಹುಬ್ಬಳ್ಳಿಯಲ್ಲಿ ರಣಜಿ ಟೂರ್ನಿಯ ಫೈನಲ್ ಪಂದ್ಯ ನಡೆಯುತ್ತಿದೆ. ಮೊದಲ ದಿನ ಕರ್ನಾಟಕ ಬೌಲರ್‌ಗಳನ್ನು ಕಾಡಿದ ಜಮ್ಮು ಕಾಶ್ಮೀರ ಬ್ಯಾಟರ್‌ಗಳು ಎರಡನೇ ದಿನವೂ ಆಟ ಮುಂದುವರಿಸಿದ್ದಾರೆ. ಇದರ ಮಧ್ಯೆ ಜಮ್ಮು ಕಾಶ್ಮೀರ ಕ್ಯಾಪ್ಟನ್ ಪರಾಸ್ ಡೋಗ್ರಾ ಅತಿರೇಕ ವರ್ತನೆ ಕರ್ನಾಟಕದ ಅಭಿಮಾನಿಗಳ ಆಕ್ರೋಶಕ್ಕೂ ಕಾರಣವಾಗಿದೆ.

ಇದನ್ನೂ ಓದಿ:ಬ್ರೂಕ್ ಬಿರುಗಾಳಿ ಬ್ಯಾಟಿಂಗ್‌ಗೆ ಹೊರಬಿದ್ದ ಪಾಕಿಸ್ತಾನ – ಸೆಮಿಫೈನಲ್‌ಗೆ ಇಂಗ್ಲೆಂಡ್ ಎಂಟ್ರಿ

ಹುಬ್ಬಳ್ಳಿಯ ರಾಜನಗರದ ಕೆಎಸ್‌ಸಿಎ ಮೈದಾನದಲ್ಲಿ ರಣಜಿ ಫೈನಲ್‌ ಪಂದ್ಯ ನಡೆಯುತ್ತಿದೆ. ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಜಮ್ಮು ಮತ್ತು ಕಾಶ್ಮೀರ ತಂಡ ಮೊದಲ ದಿನ ಮೇಲುಗೈ ಸಾಧಿಸಿತ್ತು. ಇದೀಗ ಎರಡನೇ ದಿನವೂ ಕೂಡಾ ಜಮ್ಮು ಕಾಶ್ಮೀರ ತಂಡದ ಬ್ಯಾಟರ್‌ಗಳು ಕರ್ನಾಟಕದ ಬೌಲರ್‌ಗಳನ್ನು ಕಾಡುತ್ತಿದ್ದಾರೆ. ಇದಲ್ಲದೇ, ಕ್ಯಾಪ್ಟನ್ ಪರಾಸ್ ಡೋಗ್ರಾ ಅತಿರೇಕ ವರ್ತನೆ ಕರ್ನಾಟಕದ ಆಟಗಾರರು ಸಿಟ್ಟಾಗುವಂತೆ ಮಾಡಿದೆ. ಎರಡನೇ ದಿನದಾಟದಲ್ಲಿ ನಡೆದ ಹೈಡ್ರಾಮದಲ್ಲಿ ಡೋಗ್ರಾ ವರ್ತನೆಗೆ ಕರ್ನಾಟಕದ ಅಭಿಮಾನಿಗಳು ಕೂಡಾ ಬೇಸರ ವ್ಯಕ್ತಪಡಿಸಿದ್ದಾರೆ. 100ನೇ ಓವರ್‌ನಲ್ಲಿ ಪ್ರಸಿದ್ಧ್ ಕೃಷ್ಣ ಬೌಲಿಂಗ್ ಮಾಡುತ್ತಿದ್ದರು. ಕರ್ನಾಟಕದ ವೇಗಿ ಪ್ರಸಿದ್ಧ್ ಕೃಷ್ಣ 140.5 ಕಿ.ಮೀ ವೇಗದಲ್ಲಿ ತೀಕ್ಷ್ಣವಾದ ಎಸೆತವನ್ನು ಎಸೆದರು. ಚೆಂಡು ಸ್ವಲ್ಪ ಚಿಕ್ಕದಾಗಿದ್ದು, ಮಧ್ಯ ಮತ್ತು ಆಫ್ ಸ್ಟಂಪ್‌ಗೆ ಗುರಿಯಿಟ್ಟಿತ್ತು. ನಂತರ ಬಾಲ್ ಬೌಂಡರಿ ಸೇರಿಕೊಂಡಿದೆ. ಇದಾದ ತಕ್ಷಣವೇ ಜಮ್ಮು ಕಾಶ್ಮೀರ ನಾಯಕ ಪರಾಸ್ ಡೋಗ್ರಾ ಕರ್ನಾಟಕದ ಆಟಗಾರ ಅನೀಶ್‌ ಹೆಲ್ಮೆಟ್‌ ಗೆ ಬಂದು ತನ್ನ ಹೆಲ್ಮೆಟ್ ನ್ನು ತಾಗಿಸಿದ್ದಾರೆ. ಆಗ ತಕ್ಷಣವೇ ಮಯಾಂಕ್ ಅಗರ್ವಾಲ್ ಮಧ್ಯ ಪ್ರವೇಶಿಸಿದರು. ಅಂಪೈರ್ ಗಳು ಮಧ್ಯಪ್ರವೇಶಿಸಿ ಪರಿಸ್ಥಿತಿ ಶಾಂತಗೊಳಿಸಿದರು. ಈ ವೇಳೆ ಡೋಗ್ರಾ ಬಳಿ ಕ್ಷಮೆ ಕೇಳುವಂತೆ ಅಂಪೈರ್ ಹೇಳಿದ್ದಾರೆ. ನಂತರ ಜಮ್ಮು ಕಾಶ್ಮೀರ ಕ್ಯಾಪ್ಟನ್ ಡೋಗ್ರಾ ಕ್ಷಮೆ ಯಾಚಿಸಿದರು. ಆದರೆ, ಇವರ ಕ್ಷಮೆ ಸ್ವೀಕರಿಸಲು ಕರ್ನಾಟಕ ಆಟಗಾರ ಅನೀಶ್ ಇಷ್ಟಪಡಲಿಲ್ಲ.

Sulekha

Leave a Reply

Your email address will not be published. Required fields are marked *