ಡಿಸಿಎಂ ಸ್ಥಾನ ಸಿಗದಿದ್ದಕ್ಕೆ ತ್ಯಾಗದ ತೇಪೆ ಹಚ್ಚಿದ ಪರಮೇಶ್ವರ್ – ಎಲ್ಲವೂ ಮುಗಿಯಿತೆಂದು ಸೈಲೆಂಟ್!  

 ಡಿಸಿಎಂ ಸ್ಥಾನ ಸಿಗದಿದ್ದಕ್ಕೆ ತ್ಯಾಗದ ತೇಪೆ ಹಚ್ಚಿದ ಪರಮೇಶ್ವರ್ – ಎಲ್ಲವೂ ಮುಗಿಯಿತೆಂದು ಸೈಲೆಂಟ್!  

ನಾನು ಸಿಎಂ ಕುರ್ಚಿಯ ಆಕಾಂಕ್ಷಿ. ಸಿಎಂ ಸ್ಥಾನ ಸಿಗದಿದ್ರೂ ಡಿಸಿಎಂ ಸ್ಥಾನ ಆದ್ರೂ ಕೊಡ್ಲೇಬೇಕು ಅಂತಾ ಮಾಜಿ ಡಿಸಿಎಂ ಡಾಕ್ಟರ್ ಜಿ. ಪರಮೇಶ್ವರ್ ಹಠಕ್ಕೆ ಬಿದ್ದಿದ್ರು. ಆದರೆ ಈಗ ನಾನು ಡಿಸಿಎಂ ಸ್ಥಾನ ಕೇಳಿಯೇ ಇಲ್ಲ ಅಂತಾ ಉಲ್ಟಾ ಹೊಡೆದಿದ್ದಾರೆ. ಸಿಎಂ ಕುಸ್ತಿ ನಡುವೆ ಗುರುವಾರ ಡಿ.ಕೆ ಶಿವಕುಮಾರ್ ಒಬ್ಬರೇ ಡಿಸಿಎಂ ಎಂದು ಹೈಕಮಾಂಡ್ ಅನೌನ್ಸ್ ಮಾಡಿದ ಬಳಿಕ ಪರಮೇಶ್ವರ್ ಸಿಡಿಮಿಡಿಗೊಂಡಿದ್ರು. ದಲಿತ ಸಮುದಾಯದ 37 ಶಾಸಕರಿದ್ದೀವಿ ನಮಗೆ ಸ್ಥಾನಮಾನ ನೀಡದಿದ್ರೆ ನಮ್ಮ ಪ್ರತಿಕ್ರಿಯೆ ಸ್ವಾಭಾವಿಕವಾಗಿರುತ್ತೆ ಎಂದು ಖಾರವಾಗೇ ಹೇಳಿದ್ರು. ಆದರೆ ತಮಗೆ ಉಪಮುಖ್ಯಮಂತ್ರಿ ಸ್ಥಾನ ಸಿಗೋದು ಡೌಟ್ ಎಂದು ಗೊತ್ತಾಗುತ್ತಿದ್ದಂತೆ ತ್ಯಾಗದ ಮಾತನಾಡಿದ್ದಾರೆ.

ಇದನ್ನೂ ಓದಿ : ರಾಜ್ಯದಲ್ಲಿ ಸಚಿವ ಸ್ಥಾನಕ್ಕೆ ಭಾರಿ ಕಸರತ್ತು – ಸಿದ್ದು, ಡಿಕೆಶಿಗೂ ಮೊದಲೇ ದೆಹಲಿಗೆ ತೆರಳಿದ ಶಾಸಕರು!

ಡಿಸಿಎಂ ಹುದ್ದೆ ಅದು ಪರವಾಗಿಲ್ಲ. ನಾವೆಲ್ಲರೂ ಈ ಸಮಯದಲ್ಲಿ ತ್ಯಾಗ ಮಾಡಬೇಕು. ನಡೆಯುತ್ತಿರುವುದು ಒಳ್ಳೆಯದೇ ಎಂದಿದ್ದಾರೆ. ಹಾಗೇ ಡಿಸಿಎಂ ಹುದ್ದೆ ಕೊಡಿ ಅಂತಾ ನಾನು ಯಾರಿಗೂ ಕೇಳಿಲ್ಲ ಎಂದು ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ. ಈ ಕುರಿತು ಸಿದ‍್ಧರಾಮಯ್ಯ ನಿವಾಸದ ಬಳಿ ಮಾತನಾಡಿದ ಪರಮೇಶ್ವರ್, ನಾನು ಉಪಮುಖ್ಯಮಂತ್ರಿ  ಸ್ಥಾನ ಕೊಡಿ ಅಂತ ಯಾರಿಗೂ ಕೇಳಿಲ್ಲ. ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಭಿನ್ನಾಭಿಪ್ರಾಯ ಶಮನವಾಗಿದೆ. ನಾನಾಗಲಿ ಇನ್ನೊಬ್ಬರಾಗಲಿ ಕೇಳುವುದೆಲ್ಲವೂ ಮುಗಿಯಿತು. ಕೇಳಿದ್ದಕ್ಕೆ ಎಲ್ಲವೂ ಅಗುತ್ತೆ ಎಂದು ಹೇಳುವುದಕ್ಕೆ ಆಗುವುದಿಲ್ಲ. ಹೈಕಮಾಂಡ್ ಗಮನದಲ್ಲಿಟ್ಟುಕೊಂಡು ತೀರ್ಮಾನ ಮಾಡುತ್ತದೆ  ಎಂದರು.

5 ದಿನಗಳ ಸಿಎಂ ಕುರ್ಚಿ ಕಾದಾಟದಲ್ಲಿ ಸಿದ್ದರಾಮಯ್ಯ ಸಿಎಂ ಆಗಿ ಆಯ್ಕೆಯಾಗಿದ್ರೆ ಡಿ.ಕೆ ಶಿವಕುಮಾರ್ ಉಪಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಮೇ 20ರಂದು ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಕ್ಷಿಪ್ರ ರಾಜಕೀಯ ಬೆಳವಣಿಗೆಗಳ ನಡುವೆ ಲಿಂಗಾಯತ ಮುಖಂಡ ಎಂ.ಬಿ.ಪಾಟೀಲ್ ಮತ್ತು ದಲಿತ ಮುಖಂಡ ಜಿ.ಪರಮೇಶ್ವರ್ ಅವರು ಉಪಮುಖ್ಯಮಂತ್ರಿ ಹುದ್ದೆ ನಿರಾಕರಣೆಗೆ ಅಸಮಾಧಾನಗೊಂಡಿದ್ದಾರೆ ಎಂಬ ಚರ್ಚೆಗಳು ನಡೀತಿವೆ.

suddiyaana