ಪರಮೇಶ್ವರ್ಗೆ ಡಿಸಿಎಂ ಸ್ಥಾನ – ಸಚಿವರಾಗಿ ಯತೀಂದ್ರ ಸಿದ್ದರಾಮಯ್ಯ, ಯು.ಟಿ ಖಾದರ್ ಪ್ರಮಾಣ ವಚನ ಸ್ವೀಕಾರಕ್ಕೆ ಸಿದ್ಧತೆ

ಸಿಎಂ ಡಿ.ಕೆ ಶಿವಕುಮಾರ್ ಪ್ರಮಾಣವಚನಕ್ಕೆ ಸಿದ್ಧತೆ ಭರದಿಂದ ಸಾಗಿದೆ. ಜೊತೆಗೆ ಡಿಕೆಶಿ ಜೊತೆ ಕೆಲ ಸಚಿವರು ಕೂಡಾ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ.
ಇದನ್ನೂ ಓದಿ:ಸಿದ್ದರಾಮಯ್ಯಗೆ ಎಐಸಿಸಿ ಮಹತ್ವದ ಹುದ್ದೆ – ಕಾಂಗ್ರೆಸ್ ಹೈಕಮಾಂಡ್ನಿಂದ ನೇಮಕ
ಹೈಕಮಾಂಡ್ ಕೊನೆಗೂ ಸಚಿವರು ಹಾಗೂ ಉಪಮುಖ್ಯಮಂತ್ರಿಯನ್ನ ಫೈನಲ್ ಮಾಡಿದ್ದಾರೆ. ಸಿಎಂ ಡಿಕೆಶಿ ಜೊತೆ 13 ಸಚಿವರು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಒಂದು ಡಿಸಿಎಂ ಹುದ್ದೆಗೆ ಕಾಂಗ್ರೆಸ್ ಹೈಕಮಾಂಡ್ ಒಪ್ಪಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ದೆಹಲಿಯಲ್ಲಿ ನಡೆದ ಹೈಕಮಾಂಡ್ ಮೀಟಿಂಗ್ ವೇಳೆ ಸಿದ್ದರಾಮಯ್ಯ ಪರಮೇಶ್ವರ್ಗೆ ಡಿಸಿಎಂ ಸ್ಥಾನ ನೀಡುವಂತೆ ಪಟ್ಟು ಹಿಡಿದಿದ್ರು. ಪರಮೇಶ್ವರ್ಗೆ ಡಿಸಿಎಂ ಸ್ಥಾನ ಸಿಕ್ಕಿದೆ.
ಸಂಭಾವ್ಯ ಸಚಿವರ ಪಟ್ಟಿ ಫೈನಲ್ ಸಾಲು ಸಾಲು ಸಭೆ ನಡೆಸಿದ ಹೈಕಮಾಂಡ್ ಕೊನೆಯದಾಗಿ ಈ ಶಾಸಕರ ಹೆಸರುಗಳನ್ನ ಫೈನಲ್ ಮಾಡಿದ್ದಾರೆ.
ಸಂಭಾವ್ಯ ಸಚಿವರ ಲಿಸ್ಟ್
- ಡಾ. ಜಿ ಪರಮೇಶ್ವರ್ ಡಿಸಿಎಂ, ಕಂದಾಯ
- ಸತೀಶ್ ಜಾರಕಿಹೊಳಿ, ಲೋಕೋಪಯೋಗಿ
- ಕೆ.ಜೆ ಜಾರ್ಜ್, ಇಂಧನ
- ಪ್ರಿಯಾಂಕ್ ಖರ್ಗೆ ಗೃಹ, ಐಟಿಬಿಟಿ
- ಕೃಷ್ಣ ಭೈರೇಗೌಡ, ಜಿಬಿಎ
- ರಾಮಲಿಂಗಾರೆಡ್ಡಿ, ಸಾರಿಗೆ ಖಾತೆ
- ಯತೀಂದ್ರ ಸಿದ್ದರಾಮಯ್ಯ ನಗರಾಭಿವೃದ್ಧಿ. ಹಿಂದುಳಿದ ವರ್ಗ
- ಎಂಬಿ ಪಾಟೀಲ್, ಬೃಹತ್ ಮತ್ತು ಮಧ್ಯಮ ಕೈಗಾರಿಕೆ
- ಈಶ್ವರ್ ಖಂಡ್ರೆ ಕೆ,
- ಹೆಚ್ ಮುನಿಯಪ್ಪ, ಆಹಾರ ಮತ್ತು ನಾಗರೀಕ ಸರಬರಾಜು
- ಯು.ಟಿ ಖಾದರ್ , ಆರೋಗ್ಯಖಾತೆ

ನೋಡಿರಿ

