27 ಕೋಟಿ ಕೊಟ್ಟಿದ್ದು ಸುಮ್ಮನೆ ಅಲ್ಲ – ವೈಭವ್ ಆಟ ನೋಡಿ ಕಲೀರಿ ಎಂದು ಪಂತ್‌ಗೆ ವಾರ್ನಿಂಗ್

27 ಕೋಟಿ ಕೊಟ್ಟಿದ್ದು ಸುಮ್ಮನೆ ಅಲ್ಲ – ವೈಭವ್ ಆಟ ನೋಡಿ ಕಲೀರಿ ಎಂದು ಪಂತ್‌ಗೆ ವಾರ್ನಿಂಗ್

ಲಖನೌ ತಂಡದ ಕ್ಯಾಪ್ಟನ್  ರಿಷಭ್ ಪಂತ್ ಲಾಸ್ಟ್ ಸೀಸನ್‌ನಲ್ಲಿ ಕಳಪೆ ಫಾರ್ಮ್‌ನಿಂದ ನಿರಾಶೆಗೊಂಡಿದ್ದರು. ಈ ಬಾರಿಯ ಐಪಿಎಲ್‌ನಲ್ಲಿ ಪಂತ್ ಕಮ್‌ಬ್ಯಾಕ್ ಮಾಡುತ್ತಾರೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ರಿಷಭ್ ಬ್ಯಾಟ್ ಸೌಂಡು ಮಾಡುತ್ತಿಲ್ಲ. ಇದರಿಂದ ಬೇಸತ್ತ ಇಂಗ್ಲೆಂಡ್ ಮಾಜಿ ನಾಯಕ ಪಂತ್‌ಗೆ ವಾರ್ನ್ ಮಾಡಿದ್ದಾರೆ.

ಇದನ್ನೂ ಓದಿ:ಮೊದಲ ಪಂದ್ಯದಲ್ಲಿ ಮಾಡಿದ ಅದೇ ತಪ್ಪು ಮತ್ತೆ ಮಾಡಿದ ಶ್ರೇಯಸ್ ಪಡೆ – ಪಂಜಾಬ್ ಕಿಂಗ್ಸ್ ತಂಡದ ಎಲ್ಲಾ ಆಟಗಾರರಿಗೆ ಶಿಕ್ಷೆ..!

27 ಕೋಟಿ  ಮೊತ್ತದ ದುಬಾರಿ ಆಟಗಾರ ರಿಷಬ್ ಪಂತ್ ಬ್ಯಾಟಿಂಗ್ ವೈಫಲ್ಯ ಒಂದು ಕಡೆಯಾದರೆ, ಮತ್ತೊಂದೆಡೆ ಹದಿನೈದರ ಹರೆಯದ ವೈಭವ್ ಸೂರ್ಯವಂಶಿ ಅವರ ಅಬ್ಬರದ  ಬ್ಯಾಟಿಂಗ್ ಪ್ರದರ್ಶನ. ಈಗ ಈ ಇಬ್ಬರ ನಡುವಿನ ಹೋಲಿಕೆ ಶುರುವಾಗಿದೆ. ಯಾಕೆಂದರೆ, ಕಳೆದ ಬಾರಿಯಂತೆ ಲಕ್ನೋ ಸೂಪರ್‌ಜೈಂಟ್ಸ್ ನಾಯಕ ರಿಷಬ್ ಪಂತ್ ಕಳಪೆ ಫಾರ್ಮ್ ಮುಂದುವರೆದಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಪಂತ್ ರನೌಟ್ ಆಗಿದ್ದರು. ಪಂತ್ ನಿರಾಶಾದಾಯಕ ಬ್ಯಾಟಿಂಗ್ ನೋಡಿ ಇಂಗ್ಲೆಂಡ್‌ನ ಮಾಜಿ ನಾಯಕ ಮೈಕೆಲ್ ವಾನ್ ವೈಭವ್ ಸೂರ್ಯವಂಶಿಯಿಂತೆ ಬ್ಯಾಟಿಂಗ್ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.

ರಿಷಭ್ ಪಂತ್ ಬಗ್ಗೆ ಮಾತನಾಡಿದ ಮೈಕೆಲ್ ವಾಘನ್, ಪಂತ್ ಪ್ರತಿಭೆಗೆ ಯಾವುದೇ ಕೊರತೆಯಿಲ್ಲದ ಭಾರತ ತಂಡದಲ್ಲಿ ಆಡುತ್ತಿದ್ದಾರೆ. ಅವರ ಸಾಮರ್ಥ್ಯ ಮತ್ತು ವಿಕೆಟ್ ಕೀಪಿಂಗ್‌ನಿಂದಾಗಿ, ಅವರು ವಿಶ್ವದ ಬೇರೆ ಯಾವುದೇ ತಂಡದಲ್ಲಿ ಸ್ಥಾನ ಗಳಿಸುತ್ತಿದ್ದರು, ಆದರೆ ಭಾರತದಲ್ಲಿ ಇಶಾನ್ ಕಿಶನ್, ಸಂಜು ಸ್ಯಾಮ್ಸನ್ ಮತ್ತು ಜಿತೇಶ್ ಶರ್ಮಾ ಅವರಂತಹ ಅತ್ಯುತ್ತಮ ವಿಕೆಟ್ ಕೀಪರ್, ಬ್ಯಾಟ್ಸ್‌ಮನ್‌ಗಳ ಸಮೂಹವಿದೆ, ಆದ್ದರಿಂದ ಅವರ ಹಾದಿ ಸುಗಮವಾಗಿರಲು ಸಾಧ್ಯವಿಲ್ಲ ಎಂದಿದ್ದಾರೆ. ಪಂತ್, 15 ವರ್ಷದ ಸೂರ್ಯವಂಶಿಯಂತೆ ನಿರ್ಭಯವಾಗಿ ಬ್ಯಾಟಿಂಗ್ ಮಾಡಬೇಕು. ಪಂತ್ 48 ಎಸೆತಗಳಲ್ಲಿ ಶತಕದ ಗುರಿ ಹೊಂದಬೇಕು. 3 ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುವಾಗ ಚೆಂಡನ್ನು ಸ್ಟೇಡಿಯಂನಿಂದ ಆಚೆಗೆ ಹೊಡೆಯಲು ಪ್ರಯತ್ನಿಸಿ ಟೀಕಾಕಾರರ ಬಾಯಿ ಮುಚ್ಚಿಸಬೇಕು ಎಂದು ಮೈಕೆಲ್ ವಾನ್ ಹೇಳಿದ್ದಾರೆ.

Sulekha