ಬಹು ನಿರೀಕ್ಷೆಯ ಅಟಲ್ ಬಿಹಾರಿ ವಾಜಪೇಯಿ ಪಾತ್ರದಲ್ಲಿ ಪಂಕಜ್ ತ್ರಿಪಾಠಿ
2023ರ ವೇಳೆಗೆ ಅಟಲ್ ಬಿಹಾರಿ ವಾಜಪೇಯಿ ಬಯೋಪಿಕ್ ಚಿತ್ರ ರಿಲೀಸ್

ಬಹು ನಿರೀಕ್ಷೆಯ ಅಟಲ್ ಬಿಹಾರಿ ವಾಜಪೇಯಿ ಪಾತ್ರದಲ್ಲಿ ಪಂಕಜ್ ತ್ರಿಪಾಠಿ 2023ರ ವೇಳೆಗೆ ಅಟಲ್ ಬಿಹಾರಿ ವಾಜಪೇಯಿ ಬಯೋಪಿಕ್ ಚಿತ್ರ ರಿಲೀಸ್

ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜೀವನ ಚರಿತ್ರೆಯಾಧರಿಸಿದ ಸಿನಿಮಾದಲ್ಲಿ ಬಾಲಿವುಡ್ ನಟ ಪಂಕಜ್ ತ್ರಿಪಾಠಿ ನಟಿಸಲಿದ್ದಾರೆ. ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಲು ಪಂಕಜ್ ತ್ರಿಪಾಠಿ ನಿರ್ಧರಿಸಿದ್ದಾರೆ. ಈ ಬಗ್ಗೆ ಸ್ವತಃ ಪಂಕಜ್ ತ್ರಿಪಾಠಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿ ಹಂಚಿಕೊಂಡಿದ್ದಾರೆ,

ಇದನ್ನೂ ಓದಿ:  ಅವಮಾನ ತಂದ ಉಬ್ಬು ಹಲ್ಲಿನಿಂದಲೇ ಸಿಕ್ಕಿತ್ತು ಜಗತ್ತಿನೆಲ್ಲೆಡೆ ಜನಪ್ರಿಯತೆ

ಹಿಂದಿ ಚಿತ್ರರಂಗ ಕಂಡ ಪ್ರತಿಭಾವಂತ ನಟ ಪಂಕಜ್ ತ್ರಿಪಾಠಿ. ಯಾವ ಪಾತ್ರ ಕೊಟ್ಟರೂ ಅದಕ್ಕೆ ನ್ಯಾಯ ಒದಗಿಸಬಲ್ಲ ಉತ್ತಮ ಕಲಾವಿದ ಪಂಕಜ್ ತ್ರಿಪಾಠಿ ಈಗ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಬಯೋಪಿಕ್​ನಲ್ಲಿ ನಟಿಸುವುದನ್ನ ಖಚಿತಪಡಿಸಿದ್ದಾರೆ. ಇನ್ನು ಈ ಬಯೋಪಿಕ್ ಚಿತ್ರಕ್ಕೆ  ‘ಮೇ ರಹೂ ಯಾ ನಾ ರಹೂ ಯೇ ದೇಶ್ ರೆಹ್ನಾ ಚಾಹಿಯೆ’ ಎಂಬ ಶೀರ್ಷಿಕೆ ಇಡಲಾಗಿದೆ.

ಈ ಚಿತ್ರದಲ್ಲಿ ಬಿಜೆಪಿಯ ಪ್ರಮುಖ ನಾಯಕ ಹಾಗೂ ದೇಶ ಕಂಡ ಅಪ್ರತಿಮ ನಾಯಕ ಅಟಲ್ ಬಿಹಾರಿ ವಾಜ್‌ಪೇಯಿ ಅವರ ಜೀವನದ ಕಥೆ ಇರಲಿದೆ. ಈ ಚಿತ್ರವನ್ನು ಮೂರು ಬಾರಿ ರಾಷ್ಟ್ರಪ್ರಶಸ್ತಿ ಪಡೆದಿರುವ ರವಿ ಜಾಧವ್ ಅವರು ನಿರ್ದೇಶನ ಮಾಡಲಿದ್ದಾರೆ.

ಇನ್ನು ಈ ಚಿತ್ರದಲ್ಲಿ ನಟಿಸುವ ಬಗ್ಗೆ ಖಚಿತ ಪಡಿಸಿದ ನಟ ಪಂಕಜ್ ತ್ರಿಪಾಠಿ, ‘ಇಂತಹ ರಾಜಕಾರಣಿ ಪಾತ್ರದಲ್ಲಿ ಕಾಣಿಸಿಕೊಳ್ಳಲು ನನಗೆ ಅವಕಾಶ ಸಿಕ್ಕಿದ್ದು ನನ್ನ ಗೌರವ. ಅವರು ಕೇವಲ ರಾಜಕಾರಣಿಯಾಗಿರಲಿಲ್ಲ. ಬರಹಗಾರ ಮತ್ತು ಹೆಸರಾಂತ ಕವಿ ಕೂಡ ಆಗಿದ್ದರು. ಅವರ ಪಾತ್ರದಲ್ಲಿ ನಟಿಸುವುದು ನನ್ನಂತಹ ನಟನಿಗೆ ಸಿಕ್ಕಿರುವ ಭಾಗ್ಯವಲ್ಲದೆ ಮತ್ತೇನೂ ಅಲ್ಲ’ ಎಂದಿದ್ದಾರೆ.

ಚಿತ್ರದ ಶೂಟಿಂಗ್ ಶೀಘ್ರವೇ ಆರಂಭಗೊಳ್ಳಲಿದೆ. ಕ್ರಿಸ್​ಮಸ್ 2023ರ ವೇಳೆಗೆ ಈ ಚಿತ್ರ ರಿಲೀಸ್ ಆಗಲಿದೆ. ವಾಜಪೇಯಿ ಅವರ 99ನೇ ವರ್ಷದ ಜನ್ಮದಿನಾಚರಣೆ ಅಂಗವಾಗಿ ಈ ಸಿನಿಮಾ ರಿಲೀಸ್ ಆಗಲಿದೆ.

suddiyaana