ಯಾವುದೇ ಕೆಲಸಕ್ಕೆ ಕೈ ಹಾಕುವಾಗ ನಿಮಗೂ ಕಾಡುತ್ತಾ ಭಯ – ನಿಮ್ಮೊಳಗಿನ ಅಂಜಿಕೆಯನ್ನ ಮೆಟ್ಟಿ ನಿಲ್ಲುವುದು ಹೇಗೆ ಗೊತ್ತಾ?

ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು. ಹೊಸ ಕೆಲಸಕ್ಕೆ ಕೈ ಹಾಕಬೇಕು ಎಂದಾಗ ತುಂಬಾ ಜನರಿಗೆ ಭಯ ಕಾಡುತ್ತದೆ. ಯಾವುದಾದರೂ ಹೊಸ ಬ್ಯುಸಿನೆಸ್ ಮಾಡಬೇಕು, ಇಲ್ಲ ದೃಢ ನಿರ್ಧಾರ ಕೈಗೊಳ್ಳಬೇಕು ಎಂದಾಗಲೆಲ್ಲಾ ಭಯ ಶುರುವಾಗುತ್ತೆ. ಇಂತಹ ಸೋಲನ್ನು ಹೇಗೆ ಮೆಟ್ಟಿ ನಿಲ್ಲಬೇಕು ಅನ್ನೋದು ಕೂಡ ಮಹತ್ವದ್ದಾಗಿದೆ.
ಕೈತುಂಬಾ ಹಣ ಇದ್ದರೂ ಅದನ್ನ ಹೇಗೆ ಬಳಸಿಕೊಳ್ಳಬೇಕು, ಎಲ್ಲಿ ಇನ್ವೆಸ್ಟ್ ಮಾಡಬೇಕು ಅನ್ನೋದೇ ಗೊತ್ತಾಗಲ್ಲ. ಇನ್ನೂ ಕೆಲವರಿಗೆ ಇರೋ ಕೆಲಸ ಬಿಟ್ಟು ಬೇರೆ ಕಡೆ ಸೇರೋಕೂ ಭಯ ಪಡ್ತಾರೆ. ಹಿಂದಿನ ಯಾವುದೋ ಒಂದು ಸೋಲು ನಮ್ಮನ್ನ ಹಿಂಜರಿಯುವಂತೆ ಮಾಡುತ್ತದೆ. ಆದರೆ ಸೋಲು ಯಾವತ್ತೂ ಕೆಟ್ಟದ್ದಲ್ಲ ಅನ್ನೋದನ್ನ ನಾವು ಅರ್ಥ ಮಾಡಿಕೊಳ್ಳಬೇಕು. ಸೋಲು ನಮಗೆ ಹೊಸದನ್ನ ಕಲಿಯಲು ಸಹಾಯ ಮಾಡುತ್ತದೆ. ಮನಸ್ಸನ್ನ ಗಟ್ಟಿ ಮಾಡುತ್ತದೆ. ಬದುಕಿನ ಪಾಠ ಕಲಿಸುತ್ತದೆ. ಹೀಗಾಗಿ ಸೋಲಿಗೆ ಹಿಂಜರಿಯದೆ ಹೊಸ ಕೆಲಸಕ್ಕೆ ಕೈ ಹಾಕಬೇಕು. ಆತ್ಮೀಯರ ಜೊತೆ ಚರ್ಚಿಸಿ ಅವರಿಂದಲೂ ಸಲಹೆ ಪಡೆದುಕೊಳ್ಳಬೇಕು. ಇಲ್ಲವಾದಲ್ಲಿ ಮನೋತಜ್ಞರ ಸಲಹೆ ಪಡೆದುಕೊಳ್ಳಬೇಕು.
ಇದನ್ನೂ ಓದಿ : ‘ಹ್ಯಾಪಿ ಬರ್ತಡೇ ಹಸ್ಬೆಂಡ್’ – ಚಿರಂಜೀವಿ ಹುಟ್ಟುಹಬ್ಬಕ್ಕೆ ಮೇಘನಾ ಸರ್ಜಾ ಭಾವುಕ ಪೋಸ್ಟ್
ಎಲ್ಲಾ ಸೋಲುಗಳು ನಿಮಗೆ ಹೊಸ ಅನುಭವವನ್ನು ನೀಡುತ್ತದೆ ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳಬೇಕು. ಸೋಲಿನಿಂದಾಗಿ ಹೊಸದನ್ನು ಕಲಿಯಲು ಸಾಧ್ಯವಾಗುತ್ತದೆ. ಇದು ಮುಂದೆ ಸಾಗಲು ನಿಮಗೆ ಸಹಾಯ ಮಾಡುತ್ತದೆ. ಸೋಲು-ಗೆಲುವು ನಾಣ್ಯದ ಎರಡು ಮುಖಗಳು ನಿಮ್ಮ ಜೀವನವನ್ನು ಸಮತೋಲನಗೊಳಿಸುತ್ತವೆ, ನೀವು ಪ್ರತಿ ಬಾರಿ ಗೆದ್ದರೆ, ನೀವು ಗೆಲುವಿನ ರುಚಿ ಮತ್ತು ಸೋಲಿನ ಪಾಠ ಎರಡರಿಂದಲೂ ವಂಚಿತರಾಗುತ್ತೀರಿ. ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಿ ಭಯವನ್ನು ಜಯಿಸಲು ಸುಲಭವಾದ ಮಾರ್ಗವೆಂದರೆ ನಿಮ್ಮ ಭಯವನ್ನು ವ್ಯಕ್ತಪಡಿಸುವುದು. ನೀವು ಯಾವುದಕ್ಕೂ ಹೆದರುತ್ತಿದ್ದರೆ, ಅದರ ಬಗ್ಗೆ ನಿಮ್ಮ ಸಂಗಾತಿ ಅಥವಾ ಉತ್ತಮ ಸ್ನೇಹಿತನೊಂದಿಗೆ ಮಾತನಾಡಿ, ಬಗೆಹರಿಸಿಕೊಳ್ಳಿ. ಇದರಿಂದ ಆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಇದರಿಂದ ಮಾನಸಿಕವಾಗಿ ಸದೃಢರಾಗುತ್ತೀರಿ. ಹೊಸ ಸವಾಲುಗಳಿಗೆ ಸಿದ್ಧರಾಗಿರಿ ಮತ್ತು ಅವುಗಳನ್ನು ಎದುರಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡಿ. ನಿಮ್ಮನ್ನು ಯಾವುದೇ ರೀತಿಯಲ್ಲಿ ದುರ್ಬಲ ಎಂದು ಪರಿಗಣಿಸಬೇಡಿ. ನಿಮ್ಮ ಭಯವನ್ನು ಬಲವಾಗಿ ಎದುರಿಸಿ ಮತ್ತು ಮುಂದುವರೆಯಿರಿ.