ಪಾಂಡ್ಯ-ನತಾಶಾ PATCH UP – ಮುನಿಸು ಮರೆತಿದ್ದೇಗೆ ಹಾರ್ದಿಕ್ ಪತ್ನಿ?
ವಿಶ್ವಕಪ್ ಆರ್ಭಟ ವರ್ಕೌಟ್ ಆಯ್ತಾ?

ಪಾಂಡ್ಯ-ನತಾಶಾ PATCH UP – ಮುನಿಸು ಮರೆತಿದ್ದೇಗೆ ಹಾರ್ದಿಕ್ ಪತ್ನಿ?ವಿಶ್ವಕಪ್ ಆರ್ಭಟ ವರ್ಕೌಟ್ ಆಯ್ತಾ?

ಟೀಂ ಇಂಡಿಯಾ ಸ್ಟಾರ್ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ ಟಿ-20 ವಿಶ್ವಕಪ್​ನಲ್ಲಿ ಭರ್ಜರಿ ಪರ್ಫಾಮೆನ್ಸ್ ನೀಡ್ತಿದ್ದಾರೆ. ಬಾಂಗ್ಲಾ ವಿರುದ್ಧದ ಅಭ್ಯಾಸ ಪಂದ್ಯ ಹಾಗೇ ಐರ್ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲೇ ತಾವೆಷ್ಟು ಕ್ವಾಲಿಟಿ ಪ್ಲೇಯರ್ ಅನ್ನೋದನ್ನ ಪ್ರೂವ್ ಮಾಡಿದ್ದಾರೆ. ಐಪಿಎಲ್​ನಲ್ಲಿ ಆದ ಅವಮಾನ, ಟ್ರೋಲ್​ಗಳಿಗೆ ಟೀಂ ಇಂಡಿಯಾದಲ್ಲಿ ಉತ್ತಮ ಪ್ರದರ್ಶನ ನೀಡೋ ಮೂಲಕ ಉತ್ತರ ಕೊಡ್ತಿದ್ದಾರೆ. ಬಟ್ ಕ್ರಿಕೆಟ್ ಕರಿಯರ್ ಅಷ್ಟೇ ಅಲ್ಲ ದಾಂಪತ್ಯ ಬದುಕಿನಲ್ಲೂ ಗ್ರೇಟ್ ಕಮ್ ಬ್ಯಾಕ್ ಮಾಡ್ತಿದ್ದಾರೆ. ಪತ್ನಿ ನತಾಶಾ ಜೊತೆಗಿನ ಬಿರುರು ಪ್ಯಾಚಪ್ ಆಗ್ತಿದೆ. ಅಷ್ಟಕ್ಕೂ ಡಿವೋರ್ಸ್ ಹಂತಕ್ಕೆ ಹೋಗಿದ್ದ ದಾಂಪತ್ಯ ಸರಿ ದಾರಿಗೆ ಬಂದಿದ್ದೇಗೆ? ಪಾಂಡ್ಯರನ್ನ ಬಿಡೋಕೆ ಸಿದ್ಧವಾಗಿದ್ದ ನತಾಶಾ ಬದಲಾಗಿದ್ದೇಗೆ? ಪಾಂಡ್ಯ ಒಳ್ಳೇ ಫಾರ್ಮ್​ಗೆ ಬಂದಿದ್ದೇಗೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಪ್ರೀತಿಯ ಹುಡುಕಾಟದಲ್ಲಿ ಮೂಗುತಿ ಸುಂದರಿ – ಸಾನಿಯಾ ಮಿರ್ಜಾ ಮತ್ತೆ LOVE ಲೈಫ್  

ಐಪಿಎಲ್​ನಲ್ಲೇ ಸಾಕಷ್ಟು ವಿವಾದ, ಟ್ರೋಲ್​ಗೆ ಒಳಗಾಗಿದ್ದ ಹಾರ್ದಿಕ್ ಪಾಂಡ್ಯ ಕಳಪೆ ಫಾರ್ಮ್​ನಿಂದ ತಮ್ಮ ಕ್ರಿಕೆಟ್ ಕರಿಯರ್​ನೇ ಕಳೆದುಕೊಳ್ಳೋ ಭೀತಿಯಲ್ಲಿದ್ರು. ವಿರೋಧದ ನಡುವೆಯೂ ಟೀಂ ಇಂಡಿಯಾಗೆ ಸೆಲೆಕ್ಟ್ ಆಗಿದ್ರು. ಬಟ್ ಸಿಕ್ಕ ಅವಕಾಶವನ್ನ ಸದುಪಯೋಗ ಪಡಿಸಿಕೊಂಡ ಪಾಂಡ್ಯ ಮೈದಾನದಲ್ಲಿ ಉತ್ತಮ ಪ್ರದರ್ಶನ ನೀಡ್ತಿದ್ದಾರೆ. ಬ್ಯಾಟಿಂಗ್ ಮತ್ತೆ ಬೌಲಿಂಗ್ ಎರಡರಲ್ಲೂ ತಾನಿನ್ನೂ ಫಾರ್ಮ್​ನಲ್ಲೇ ಇದ್ದೇನೆ ಅನ್ನೋದನ್ನ ಕ್ರಿಕೆಟ್ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಗೇಲಿ ಮಾಡಿದವರೇ ಇಂದು ಶಹಬ್ಬಾಸ್​ ಅಂತಿದ್ದಾರೆ. ಕ್ರಿಕೆಟ್​ನಲ್ಲಿ ಪಾಂಡ್ಯ ಕಮ್ ಬ್ಯಾಕ್ ಕಂಡು ಖುಷಿಯಲ್ಲಿದ್ದ ಫ್ಯಾನ್ಸ್​ಗೆ ಈಗ ಅವ್ರ ದಾಂಪತ್ಯ ಜೀವನ ಕೂಡ ಹಳಿಗೆ ಬರ್ತಿರೋದು ಸಂತಸಕ್ಕೆ ಕಾರಣವಾಗಿದೆ. ಐಪಿಎಲ್ ಟೂರ್ನಿ ಬಳಿಕ ಹಾರ್ದಿಕ್ ಪಾಂಡ್ಯ ಹಾಗೂ ಮಾಡೆಲ್​, ಡ್ಯಾನ್ಸರ್ ನತಾಶಾ ಸ್ಟಾಂಕೋವಿಕ್ ದಂಪತಿ ವೈಯಕ್ತಿಕ ಕಾರಣಗಳಿಂದ ಸುದ್ದಿಯಲ್ಲಿದ್ರು. ಇಬ್ಬರೂ ಸ್ವತಃ ಯಾವುದೇ ಹೇಳಿಕೆ ನೀಡದೇ ಇದ್ದರೂ ವಿಚ್ಛೇದನದ ವದಂತಿ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಇದು ಸ್ಟಾರ್ ಕಪಲ್‌ಗಿರುವ ಅಪಾರ ಸಂಖ್ಯೆಯ ಅಭಿಮಾನಿಗಳಿಗೆ ಶಾಕ್ ಕೂಡ ನೀಡಿತ್ತು. ಅಭಿಮಾನಿಗಳ ಅನುಮಾನಕ್ಕೆ ಪುಷ್ಠಿ ನೀಡುವಂತಹ ಕಾರಣಗಳೂ ಇದ್ವು. ಹಾರ್ದಿಕ್ ಮತ್ತು ನತಾಶಾ ತುಂಬಾ ದಿನಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ಪರಸ್ಪರರ ಚಿತ್ರಗಳನ್ನು ಹಂಚಿಕೊಂಡಿಲ್ಲ. ಇವರಿಬ್ಬರೂ ಒಟ್ಟಿಗಿರುವ ಯಾವುದೇ ಫೋಟೋ-ವಿಡಿಯೋಗಳನ್ನೂ ಅಭಿಮಾನಿಗಳು ಬಹಳ ದಿನಗಳಿಂದ ನೋಡಿಲ್ಲ. ಅಷ್ಟೇ ಯಾಕೆ ಈ ಬಾರಿಯ ಐಪಿಎಲ್‌ನಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ತಂಡದ ಪಂದ್ಯದ ವೇಳೆಯೂ ನತಾಶಾ ಸ್ಟೇಡಿಯಂಗಳಲ್ಲಿ ಕಾಣಿಸಿಕೊಳ್ಳಲಿಲ್ಲ . ಈ ವಿಚಾರಗಳು ದಂಪತಿ ನಡುವಿನ ಬಿರುಕಿನ ಸುದ್ದಿಗೆ ರೆಕ್ಕೆ ಪುಕ್ಕ ಸೃಷ್ಟಿಸಿತ್ತು. ನತಾಶಾ ಕೂಡ ಪಾಂಡ್ಯ ಜೊತೆಗಿನ ಫೋಟೋಗಳನ್ನ ಡಿಲೀಟ್ ಮಾಡಿದ್ರು. ಡಿವೋರ್ಸ್ ಸುದ್ದಿ ದೊಡ್ಡದಾಗುತ್ತಿದ್ದಂತೆ ನತಾಶಾ ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ನ ಸ್ಟೋರಿ ಸೆಕ್ಷನ್​ನಲ್ಲಿ ಫೋಟೋವೊಂದನ್ನ ಹಂಚಿಕೊಂಡಿದ್ರು. ಯೇಸು ಮತ್ತು ಕುರಿಮರಿಯ ಚಿತ್ರವದು. ಲಾರ್ಡ್ ಜೀಸಸ್ ಕುರಿಮರಿಯ ಹಿಂದೆ ನಡೆಯುತ್ತಿದ್ದು, ಫೋಟೋಗೆ ಯಾವುದೇ ಕ್ಯಾಪ್ಷನ್​​ ಕೊಟ್ಟಿರಲಿಲ್ಲ. ಈ ಫೋಟೋ ಪೋಸ್ಟ್ ಆದ ಮೇಲಂತೂ ವಿಚ್ಚೇಧನ ಸುದ್ದಿ ಅಂತೆಕಂತೆಗಳ ನಡುವೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

ಅಲ್ಲದೇ ತುಂಬಾ ದಿನಗಳಿಂದ ದಂಪತಿ ಬೇರೆ ಬೇರೆಯಾಗಿ ವಾಸಿಸುತ್ತಿದ್ದಾರೆ. ವಿಚ್ಛೇದನ ಪಡೆಯುತ್ತಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು. ಬಟ್ ಈಗ ಈ ಇಬ್ಬರ ಮಧ್ಯೆ ಪ್ಯಾಚಪ್ ಆದಂತಿದೆ. ಸಾಮಾಜಿಕ ಜಾಲತಾಣದಲ್ಲಿ ಹಾರ್ದಿಕ್ ಹಾಗೂ ನತಾಶಾ ದೂರವಾಗ್ತಾರೆ ಎಂಬ ಬಗ್ಗೆ ಎಷ್ಟೇ ಸುದ್ದಿ ಬಂದ್ರೂ ದಂಪತಿ ಮಾತ್ರ ಬಾಯಿ ಬಿಟ್ಟಿಲ್ಲ. ಈ ಬಗ್ಗೆ ಒಂದೇ ಒಂದು ಪ್ರತಿಕ್ರಿಯೆಯನ್ನೂ ನೀಡಿಲ್ಲ. ಆದ್ರೆ ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಕೆಲ ಪೋಸ್ಟ್ ಹಾಕುವ ಮೂಲಕ ಮತ್ತೆ ಒಂದಾದ ಹಿಂಟ್ ನೀಡಿದ್ದಾರೆ. ಈ ಹಿಂದೆ ನತಾಶಾ ಅವರು ಸಾಮಾಜಿಕ ಜಾಲತಾಣದಲ್ಲಿದ್ದ ಹಾರ್ದಿಕ್ ಹಾಗೂ ತಮ್ಮ ಮದುವೆ ಫೋಟೋಗಳನ್ನು ತೆಗೆದಿದ್ದರು. ಬಳಿಕ ಇತ್ತೀಚೆಗೆ ಅವುಗಳನ್ನ ರೀ ಸ್ಟೋರ್ ಮಾಡಿದ್ದರು. ಈಗ ನಮ್ಮಿಬ್ಬರ ಮಧ್ಯೆ ಎಲ್ಲ ಸರಿಯಾಗಿದೆ ಎನ್ನುವ ಕುರಿತು ನತಾಶಾ ಮತ್ತೊಂದು ಸುಳಿವು ನೀಡಿದ್ರು. ಹಾಗೇ ಇನ್ಸ್ಟಾ ಪೋಸ್ಟ್ ನಲ್ಲಿ ತಮ್ಮ ಪ್ರೀತಿಯ ಡಾಗ್ ಫೋಟೋವನ್ನು ಹಂಚಿಕೊಂಡಿದ್ದಾರೆ. ನಾಯಿಗೆ ಸ್ವೆಟರ್ ಹಾಕಲಾಗಿದ್ದು, ಸ್ವೆಟರ್ ಮೇಲೆ ಪಾಂಡಾ ಚಿತ್ರ ಇದೆ. ನಾಯಿಯ ಸುಂದರ ಫೋಟೋವನ್ನು ಪೋಸ್ಟ್ ಮಾಡಿದ ನತಾಶಾ, ಬೇಬಿ ರೋವರ್ ಪಾಂಡ್ಯ ಎಂದು ಶೀರ್ಷಿಕೆ ಹಾಕಿದ್ದಾರೆ. ವಿಚ್ಛೇದನದ ಚರ್ಚೆ ಮಧ್ಯೆ ನತಾಶಾ, ಪಾಂಡ್ಯ ಸರ್​ನೇಮ್ ಬಳಸಿದ್ದು ಅಭಿಮಾನಿಗಳಿಗೆ ಸಂತೋಷ ನೀಡಿದೆ.  ಅಲ್ದೇ ನತಾಶಾ ಇನ್ನೂ ಕೂಡ ಹಾರ್ದಿಕ್ ಮನೆಯಲ್ಲೇ ಇದ್ದಾರೆಂದು ಅಭಿಮಾನಿಗಳು ಹೇಳ್ತಿದ್ದಾರೆ. ನತಾಶಾ, ಇನ್ಸ್ಟಾಗ್ರಾಮ್ ನಲ್ಲಿ ಸಕ್ರಿಯರಾಗಿದ್ದು, ಅನೇಕ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕೆಲ ಲಿಫ್ಟ್ ಫೋಟೋವನ್ನು ಅವರು ಹಂಚಿಕೊಂಡಿದ್ದು, ಅದು ಹಾರ್ದಿಕ್ ಮನೆ ಲಿಫ್ಟ್ ಎಂದು ಬಳಕೆದಾರರು ಹೇಳಿದ್ದಾರೆ. ಹಾಗೇ ನತಾಶಾ ಪಾಂಡ್ಯ ಜೊತೆಗಿನ ಫೋಟೋಗಳನ್ನ ರಿಸ್ಟೋರ್ ಮಾಡಿರೋದು ಇಬ್ಬರು ಒಂದಾಗಿದ್ದಾರೆ ಎಂಬ ಸೂಚನೆ ನೀಡ್ತಿದೆ.

ಅಸಲಿಗೆ ಹಾರ್ದಿಕ್ ಪಾಂಡ್ಯ ಹಾಗೇ ನತಾಶಾ ಪರಿಚಯವಾಗಿದ್ದು ಹಾಗೇ ಮದುವೆ ಆಗಿದ್ದೇ ವಿಚಿತ್ರವಾಗಿದೆ. ಮಿಡಲ್ ಕ್ಲಾಸ್ ಫ್ಯಾಮಿಲಿಯಲ್ಲಿ ಹುಟ್ಟಿ ಬೆಳೆದ ಪಾಂಡ್ಯ ತಮ್ಮ ಬದುಕಿನಲ್ಲಿ ಹಲವು ಏಳು ಬೀಳುಗಳನ್ನ ಕಂಡಿದ್ದಾರೆ. ಟೀಂ ಇಂಡಿಯಾದಲ್ಲಿ ಮಿಂಚುತ್ತಿರುವ ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ಅವರ ನಡುವೆ ಪ್ರೀತಿ ಹುಟ್ಟಿದ್ದೇ ಕುತೂಹಲಕಾರಿ ಸಂಗತಿ. ವಾಸ್ತವವಾಗಿ ನತಾಶಾ ಭಾರತೀಯರಲ್ಲ. ಅವರು ಸೆರ್ಬೀಯಾ ದೇಶದವರು. ಇವರಿಬ್ಬರು ನೈಟ್ ಕ್ಲಬ್​ವೊಂದ್ರಲ್ಲಿ ಮೊದಲು ಭೇಟಿಯಾಗಿದ್ರು. ಒಬ್ಬರ ನಡುವೆ ಒಡನಾಟ ಹೆಚ್ಚಾಗಿದ್ದು, 2019 ರಲ್ಲಿ ಹಾರ್ದಿಕ್ ಪಾಂಡ್ಯ ಮೊದಲ ಬಾರಿಗೆ ನತಾಶಾ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬೆಸ್ಟ್ ಫ್ರೆಂಡ್ ಎಂದು ಬರೆದುಕೊಂಡಿದ್ರು. ಹೀಗಿರುವಾಗ್ಲೇ ಇಬ್ಬರ ನಡುವಿನ ಸ್ನೇಹ ಪ್ರೀತಿಯಾಗಿ ತಿರುಗಿತ್ತು. 2020 ರ ಜನವರಿ 1 ರಂದು ಅಂದರೆ, ಹೊಸ ವರ್ಷದ ಪಾರ್ಟಿಯಲ್ಲಿ ಹಾರ್ದಿಕ್ ಪಾಂಡ್ಯ ತಮ್ಮ ಪ್ರೇಯಸಿ ನತಾಶಾಗೆ ಸ್ಪೆಷಲ್ ಆಗಿ ಪ್ರಪೋಸ್ ಮಾಡಿದರು. ಉಂಗುರ ತೊಡಿಸುವ ಮೂಲಕ ಪ್ರೇಮ ನಿವೇದನೆಯನ್ನೂ ಮಾಡಿದರು. ಅದೇ ವರ್ಷ ಅಂದರೆ ಮೇ 31 ರಂದು ನತಾಶಾ ಗರ್ಭಿಯಾಗಿರುವ ವಿಚಾರವನ್ನು ಹೊರ ಜಗತ್ತಿಗೆ ಹೇಳಿದ್ದರು. ಜುಲೈ 30, 2020 ರಂದು ದಂಪತಿಗಳು ಗಂಡು ಮಗುವನ್ನು ಬರಮಾಡಿಕೊಂಡಿದ್ದರು. ಈ ಮಗುವಿಗೆ ಅಗಸ್ತ್ಯ ಎಂದು ನಾಮಕರಣ ಕೂಡ ಮಾಡಿದ್ರು. ಒಟ್ಟಿಗೆ ಜೀವನ ಪ್ರಾರಂಭಿಸಿ 4 ವರ್ಷಗಳ ಬಳಿಕ ಅಂದರೆ ಫೆಬ್ರವರಿ 14, 2023 ರಂದು ಹಾರ್ದಿಕ್​ ಪಾಂಡ್ಯ ಹಾಗೂ ನತಾಶಾ ​ ಜೋಡಿ ಎಲ್ಲರ ಸಮ್ಮುಖದಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ಮದುವೆ ಆಗಿದ್ದರು. ಒಟ್ನಲ್ಲಿ ಲವ್, ಪ್ರಪೋಸ್, ಮದುವೆ ವಿಚಾರವಾಗೇ ಸಾಕಷ್ಟು ಸದ್ದು ಮಾಡಿದ್ದ ಪಾಂಡ್ಯ ಮದುವೆ ಬಳಿಕವೂ ಟ್ರೋಲಿಗರಿಗೆ ಆಹಾರವಾಗಿದ್ರು. ಆದ್ರೀಗ ಕ್ರಿಕೆಟ್ ಭವಿಷ್ಯ, ದಾಂಪತ್ಯ ಜೀವನ ಹಳಿಗೆ ಬಂದಂತಿದೆ. ಟೀಂ ಇಂಡಿಯಾ ಪರ ಉತ್ತಮ ಪ್ರದರ್ಶನ ನೀಡ್ತಿದ್ದಾರೆ. ಇದು ಹೀಗೆ ಕಂಟಿನ್ಯೂ ಆಗ್ಲಿ ಅಂತಾ ಫ್ಯಾನ್ಸ್ ಕೂಡ ಶುಭ ಕೋರಿದ್ದಾರೆ.

Shwetha M

Leave a Reply

Your email address will not be published. Required fields are marked *