ಪಾಂಡ್ಯರನ್ನು ಎತ್ತಿ ಕುಣಿಸಿದ ರೋಹಿತ್ – IPL ದ್ವೇಷ World Cupನಲ್ಲಿ ಕರಗಿತಾ?
ಅದೊಂದು ಕನಸಿಗಾಗಿ ಮುನಿಸು ಮರೆತ್ರಾ?

ಪಾಂಡ್ಯರನ್ನು ಎತ್ತಿ ಕುಣಿಸಿದ ರೋಹಿತ್ – IPL ದ್ವೇಷ World Cupನಲ್ಲಿ ಕರಗಿತಾ?ಅದೊಂದು ಕನಸಿಗಾಗಿ ಮುನಿಸು ಮರೆತ್ರಾ?

ರೋಹಿತ್ ಶರ್ಮಾ ಹಾಗೂ ಹಾರ್ದಿಕ್ ಪಾಂಡ್ಯ ನಡುವಿನ ಮುನಿಸು ಎಲ್ರಿಗೂ ಗೊತ್ತೇ ಇದೆ. ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಆದ ಮೇಲೆ ಇಬ್ಬರ ನಡುವೆ ಸಮರ ನಡೆಯುತ್ತಲೇ ಇತ್ತು. ಪಂದ್ಯದ ವೇಳೆ ಕೂಡ ಅದೂ ಬಹಿರಂಗವಾಗಿತ್ತು. ಬಟ್ ಈಗ ವಿಶ್ವಕಪ್​ನಲ್ಲಿ ಎಲ್ಲವೂ ಸರಿ ಹೋದಂತೆ ಕಾಣ್ತಿದೆ. ಫ್ರಾಂಚೈಸಿ ಪರ ಆಡುವಾಗ ದೂರಾಗಿದ್ದ ಆಟಗಾರರು ಈಗ ದೇಶಕ್ಕಾಗಿ ಆಡುವಾಗ ಮತ್ತೆ ಒಂದಾಗುತ್ತಿದ್ದಾರೆ. ಪಾಂಡ್ಯರ ಅದ್ಭುತ ಪ್ರದರ್ಶನ. ಒಬ್ಬ ನಾಯಕನಾಗಿ ರೋಹಿತ್ ಶರ್ಮಾ ತಂಡದ ಆಟಗಾರರನ್ನ ಹುರಿದುಂಬಿಸುತ್ತಿರೋ ಪರಿಯೇ ಇದಕ್ಕೆ ಸಾಕ್ಷಿ.

ಇದನ್ನೂ ಓದಿ: 3 ಮ್ಯಾಚ್.. 5 ರನ್.. KOHLI ಫೇಲ್ –  IPL ಹೀರೋ ವಿಶ್ವಕಪ್ ZERO

ರೋಹಿತ್ & ಪಾಂಡ್ಯ ಒಂದಾದ್ರಾ?

ಐಪಿಎಲ್ ನಲ್ಲಿ ಅಷ್ಟೇನು ಉತ್ತಮ ಪ್ರದರ್ಶನ ನೀಡದ ಹಾರ್ದಿಕ್ ಪಾಂಡ್ಯ ವಿಶ್ವಕಪ್​ನಲ್ಲಿ ಕಮ್ ಬ್ಯಾಕ್ ಮಾಡಿದ್ದಾರೆ. ಅದ್ರಲ್ಲೂ ನಮ್ಮ ಬದ್ಧವೈರಿ ಪಾಕಿಸ್ತಾನ ವಿರುದ್ಧದ ಟಿ-20 ವಿಶ್ವಕಪ್ ಪಂದ್ಯದಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳು ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡಿರಲಿಲ್ಲ. ಟಾಸ್ ಸೋತು ಬ್ಯಾಟಿಂಗ್​ಗಿಳಿದ ರೋಹಿತ್ ಬಳಗ ಕೇವಲ 119 ರನ್‌ಗಳಿಗೆ ಆಲೌಟ್ ಆಯಿತು. ಈ ಪಂದ್ಯ ಗೆಲ್ಲೋಕೆ ಬೌಲರ್‌ಗಳ ಮೇಲೆ ಹೆಚ್ಚಿನ ಜವಾಬ್ದಾರಿ ಇತ್ತು. ಜಸ್ಪ್ರೀತ್ ಬುಮ್ರಾ ಅದ್ಭುತ ಬೌಲಿಂಗ್ ಮಾಡಿ ಕೇವಲ 14 ರನ್ ನೀಡಿ 3 ವಿಕೆಟ್ ಪಡೆದರು. ಅವರ ಜೊತೆ ಹಾರ್ದಿಕ್ ಪಾಂಡ್ಯ ಪಾಕಿಸ್ತಾನ ವಿರುದ್ಧ 4 ಓವರ್‌ಗಳಲ್ಲಿ 24 ರನ್ ನೀಡಿ 2 ವಿಕೆಟ್ ಪಡೆದರು. ಫಖರ್ ಜಮಾನ್ ಮತ್ತು ಶಾದಾಬ್ ಖಾನ್ ಅವರನ್ನು ಔಟ್ ಮಾಡುವ ಮೂಲಕ ಪಾಕಿಸ್ತಾನದ ಬೆನ್ನು ಮುರಿದರು. ಪಾಂಡ್ಯ ಶಾದಾಬ್ ವಿಕೆಟ್ ಪಡೆದ ತಕ್ಷಣ ನಾಯಕ ರೋಹಿತ್ ಪಾಂಡ್ಯರನ್ನ ಎತ್ತಿಕೊಂಡು ಸಂಭ್ರಮಿಸಿದ್ರು. ಅಲ್ದೇ ಟಿ20 ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಉತ್ತಮ ಕೆಮಿಸ್ಟ್ರಿ ಹೊಂದಿದ್ದಾರೆ. ಐಪಿಎಲ್​ನ ಮುನಿಸನ್ನೆಲ್ಲಾ ಮರೆತು ಆಟವಾಡ್ತಿದ್ದಾರೆ. ಭಿನ್ನಾಭಿಪ್ರಾಯಗಳ ಹೊರತಾಗಿಯೂ, ಮೆನ್ ಇನ್ ಬ್ಲೂ ಜೆರ್ಸಿಯಲ್ಲಿ ರೋಹಿತ್ ಮತ್ತು ಪಾಂಡ್ಯ ಇಬ್ಬರೂ ಭಾರತವನ್ನು ಚಾಂಪಿಯನ್ ಮಾಡುವ ಗುರಿಯನ್ನು ಹೊಂದಿದ್ದಾರೆ. T20 ವಿಶ್ವಕಪ್ ನೋಡುತ್ತಿರೋರು ಟೀಂ ಇಂಡಿಯಾದಲ್ಲಿ ಇವರಿಬ್ಬರ ವರ್ತನೆಯನ್ನ ಗಮನಿಸಿರಬಹುದು. ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಆಗಾಗ್ಗೆ ಒಟ್ಟಿಗೆ ಕಾಣಿಸಿಕೊಳ್ತಿದ್ದಾರೆ. ರೋಹಿತ್ ಮತ್ತು ಪಾಂಡ್ಯ ವಿಕೆಟ್ ಪಡೆದ ಯಾವುದೇ ಬೌಲರ್ ಅನ್ನು ಅಭಿನಂದಿಸುವಲ್ಲಿ ಮುಂದಿರುತ್ತಾರೆ.

ಅಸಲಿಗೆ ವಿಶ್ವಕಪ್ ಆರಂಭಕ್ಕೂ ಮುನ್ನ ಈ ಇಬ್ಬರು ಕೂಡ ಒಬ್ಬರ ಮುಖವನ್ನ ಒಬ್ಬರು ಕಣ್ಣಿಟ್ಟು ನೋಡದಷ್ಟರ ಮಟ್ಟಿಗೆ ಭಿನ್ನಾಭಿಪ್ರಾಯಗಳನ್ನ ಹೊಂದಿದ್ದರು. ಅಸಲಿಗೆ ಮುಂಬೈ ಕ್ಯಾಪ್ಟನ್ಸಿಯಿಂದ ರೋಹಿತ್ ಶರ್ಮಾರನ್ನ ಕೆಳಗಿಳಿಸಿ ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್ ಆಗಿದ್ದೇ ಇದಕ್ಕೆಲ್ಲಾ ಕಾರಣವಾಗಿತ್ತು. ಹೀಗಾಗಿ ಮುಂಬೈ ತಂಡ ಐಪಿಎಲ್ ಟೂರ್ನಿಯಲ್ಲಿ ಒಳ್ಳೆ ಪ್ರದರ್ಶನ ಕೂಡ ನೀಡೋಕೆ ಸಾಧ್ಯವಾಗ್ಲಿಲ್ಲ. ಎಷ್ಟೋ ಬಾರಿ ಫೀಲ್ಡ್​​ನಲ್ಲಿ ಇಬ್ಬರ ನಡುವೆ ವಾಗ್ದಾದಗಳು ನಡೆದಿದ್ದವು. ಡ್ರೆಸ್ಸಿಂಗ್ ರೂಮ್​ನಲ್ಲೂ ಕೂಡ ಎಲ್ಲವೂ ಸರಿ ಇಲ್ಲ ಅನ್ನೋದು ಬಯಲಾಗಿತ್ತು. ಬಟ್ ಈಗ ದೇಶಕ್ಕಾಗಿ ಆಡುವಾಗಿ ಉಭಯ ಆಟಗಾರರು ಮತ್ತೆ ಒಂದೇ ದೋಣಿಯಲ್ಲಿ ಸಾಗುತ್ತಿದ್ದಾರೆ. ನಾಯಕನಾಗಿ ರೋಹಿತ್ ಶರ್ಮಾ ಹಾಗೇ ಉಪನಾಯಕನಾಗಿ ಹಾರ್ದಿಕ್ ಪಾಂಡ್ಯ ಇಡೀ ತಂಡವನ್ನ ಗೆಲುವಿನ ದಡ ಮುಟ್ಟಿಸೋಕೆ ಮುನಿಸು ಮರೆತು ಆಡ್ತಿದ್ದಾರೆ. ಈ ಜರ್ನಿ ಹೀಗೇ ಕಂಟಿನ್ಯೂ ಆಗ್ಲಿ. ಈ ಒಗ್ಗಟ್ಟು ಭಾರತಕ್ಕೆ ವಿಶ್ವಕಪ್ ಕೊಡಿಸಲಿ ಅಂತಾ ಕೋಟಿ ಕೋಟಿ ಭಾರತೀಯರು ವಿಶ್ ಮಾಡ್ತಿದ್ದಾರೆ.

Shwetha M