‘ಶೋಲೆ-2 ಕಮಿಂಗ್ ಸೂನ್’ – ರಾಂಚಿ ರ‍್ಯಾಂಬೋ ಜೊತೆ ಪಾಂಡ್ಯ ರೈಡಿಂಗ್

‘ಶೋಲೆ-2 ಕಮಿಂಗ್ ಸೂನ್’ – ರಾಂಚಿ ರ‍್ಯಾಂಬೋ ಜೊತೆ ಪಾಂಡ್ಯ ರೈಡಿಂಗ್

ರಾಂಚಿ: ಮಹೇಂದ್ರ ಸಿಂಗ್ ಧೋನಿ ತವರು ರಾಂಚಿಯಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ಮೊದಲ ಟಿ20 ಪಂದ್ಯ ನಡೆಯಲಿದೆ. ಈಗಾಗಲೇ ರಾಂಚಿ ತಲುಪಿರುವ ಟೀಮ್ ಇಂಡಿಯಾದ ಟಿ20 ನಾಯಕ ಹಾರ್ದಿಕ್ ಪಾಂಡ್ಯ, ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಜೊತೆ ರಿಲ್ಯಾಕ್ಸ್ ಮೂಡ್‌ಲ್ಲಿದ್ದಾರೆ.  ರಾಂಚಿಗೆ ಬಂದ ಹಾರ್ದಿಕ್ ಪಾಂಡ್ಯ, ಧೋನಿಯನ್ನು ಭೇಟಿ ಮಾಡಿ ಹಳೆಯ ಬೈಕ್ ಒಂದರಲ್ಲಿ ಕೂತು ಫೋಸ್ ನೀಡಿದ್ದಾರೆ. ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಪಾಂಡ್ಯ,  ಶೋಲೆ -2 ಕಮಿಂಗ್ ಸೂನ್ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:   ಆರಂಭಿಕ ಆಟಗಾರರ ಆಕರ್ಷಕ ಶತಕ – ರೋಹಿತ್ ಶರ್ಮಾ, ಗಿಲ್ ಭರ್ಜರಿ ಸೆಂಚುರಿ

ಧೋನಿ ರಾಂಚಿಯಲ್ಲಿರುವ ತಮ್ಮ ನಿವಾಸದಲ್ಲಿ ಹಳೆಯ ಬೈಕ್ ಮತ್ತು ಕಾರ್‌ಗಳನ್ನು ಸಂಗ್ರಹಿಸಿಟ್ಟಿದ್ದಾರೆ. ಧೋನಿ ಬೈಕ್ ಪ್ರಿಯರಾಗಿದ್ದು ತಮ್ಮಲ್ಲಿ ಹಲವು ಕಂಪನಿಯ ಪ್ರಸಿದ್ಧ ಬೈಕ್‍ಗಳನ್ನು ಇಟ್ಟುಕೊಂಡಿದ್ದಾರೆ. ಧೋನಿ ಜೊತೆ ಪಾಂಡ್ಯ ಉತ್ತಮ ಬಾಂಧವ್ಯ ಹೊಂದಿದ್ದು, ಧೋನಿ ನಾಯಕರಾಗಿದ್ದಾಗ 2016ರಲ್ಲಿ ಪಾಂಡ್ಯ ಟೀಂ ಇಂಡಿಯಾಗೆ ಎಂಟ್ರಿಕೊಟ್ಟಿದ್ದರು.

ಭಾರತ ಹಾಗೂ ನ್ಯೂಜಿಲೆಂಡ್‌ ನಡುವಿನ 3 ಪಂದ್ಯಗಳ ಟಿ20 ಸರಣಿಯ ಮೊದಲ ಟಿ20 ಪಂದ್ಯ ಜ.27 ರಂದು ರಾಂಚಿಯಲ್ಲಿ ನಡೆಯಲಿದೆ.

suddiyaana