ಸಂಜು ಏಟಿಗೆ ಗಂಭೀರ್ ಶೇಪ್ ಔಟ್ – ತಪ್ಪೊಪ್ಪಿಕೊಂಡಿದ್ದೇಕೆ ಸೂರ್ಯ?
ಹಾರ್ದಿಕ್ ಕ್ಯಾಪ್ಟನ್ ಆಗ್ಬೇಕಾ?

ಸಂಜು ಏಟಿಗೆ ಗಂಭೀರ್ ಶೇಪ್ ಔಟ್ – ತಪ್ಪೊಪ್ಪಿಕೊಂಡಿದ್ದೇಕೆ ಸೂರ್ಯ?ಹಾರ್ದಿಕ್ ಕ್ಯಾಪ್ಟನ್ ಆಗ್ಬೇಕಾ?

ಸೌತ್ ಆಫ್ರಿಕಾ ವಿರುದ್ಧದ ಟಿ-20ಐ ಸರಣಿ ಗೆಲುವಿನೊಂದಿಗೆ ಟೀಂ ಇಂಡಿಯಾ ಈ ವರ್ಷದ ಶೆಡ್ಯೂಲ್​ಗೆ ಗುಡ್​ಬೈ ಹೇಳಿದೆ. ಇನ್ನೇನಿದ್ರೂ ನೆಕ್ಸ್​ಟ್ ಇಯರ್​ ಬ್ಯಾಟಲ್​ಗೆ ಕಾಯ್ಬೇಕಷ್ಟೇ. ಇಂಟ್ರೆಸ್ಟಿಂಗ್ ಅಂದ್ರೆ ನರೇಂದ್ರ ಮೋದಿ ಸ್ಟೇಡಿಯಮ್​ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧ ಕೊನೇ ಮ್ಯಾಚಲ್ಲಿ ಭಾರತದ ಪರ್ಫಾಮೆನ್ಸ್ ನೆಕ್ಸ್​ಟ್ ಲೆವೆಲ್​ನಲ್ಲಿತ್ತು. ಌಂಡ್ ಈ ಮ್ಯಾಚಲ್ಲಿ ಬಿಸಿಸಿಐಗೆ ಒಂದಷ್ಟು ಕ್ಲಾರಿಟಿ ಸಿಕ್ಕಿದೆ. ಸಂಜು ಸ್ಯಾಮ್ಸನ್ ವರ್ಸಸ್ ಶುಬ್​ಮನ್ ಗಿಲ್ ಕನ್ಫ್ಯೂಷನ್​ಗೆ ಉತ್ತರ ಸಿಕ್ಕಿದೆ. ಆದ್ರೆ ಸೂರ್ಯನ ತಲೆಬಿಸಿ ಕಂಟಿನ್ಯೂ ಆಗಿದೆ. ಕ್ಯಾಪ್ಟನ್ಸಿ ಬದಲಾವಣೆಯ ಕೂಗೂ ಎದ್ದಿದೆ.

ಇದನ್ನೂ ಓದಿ : ಸೂರ್ಯ ದಿ ಬ್ಯಾಟರ್ ಕಾಣೆಯಾಗಿದ್ದಾರೆ – ನಾಯಕ ಸೂರ್ಯಕುಮಾರ್ಗೆ ದಿಢೀರ್ ಜ್ಞಾನೋದಯ

ಸೌತ್ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ-20ಐ ಸರಣಿಯನ್ನ ಭಾರತ 3-1 ಅಂತರದಲ್ಲಿ ಗೆದ್ದು ಬೀಗಿದೆ. ಗೆಲುವಿನೊಂದಿಗೆ ಈ ವರ್ಷದ ಪಂದ್ಯಗಳೆಲ್ಲಾ ಮುಗಿದಿವೆ. ಪಂದ್ಯಕ್ಕೂ ಮುನ್ನ ಟಾಸ್ ಸೋತ ಭಾರತ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 231 ರನ್ ಗಳಿಸಿದ್ರೆ ದಕ್ಷಿಣ ಆಫ್ರಿಕಾ 8 ವಿಕೆಟ್‌ಗೆ 201 ರನ್ ಗಳಿಸಿ ಸೋಲನ್ನೊಪ್ಪಿಕೊಂಡಿತು. ಇನ್ನು ಈಮ್ಯಾಚಲ್ಲಿ ಹಾರ್ದಿಕ್ ಪಾಂಡ್ಯ ಆಲ್​ರೌಂಡ್ ಪ್ರದರ್ಶನ ನೀಡಿದ್ರು. ಟಿ-20ಐ ಬ್ಯಾಟಿಂಗ್​ನಲ್ಲಿ ಎರಡನೇ ಅತೀವೇಗದ ಅರ್ಧಶತಕ ದಾಖಲು ಮಾಡಿದ್ರು. ಒಟ್ಟಾರೆ 25 ಎಸೆತಗಳಲ್ಲಿ 63 ರನ್ ಗಳಿಸಿ ಔಟಾದ್ರು. ಇನ್ನು ಬೌಲಿಂಗ್​ನಲ್ಲಿ 1 ವಿಕೆಟ್ ಎಗರಿಸಿದ್ರು. ಹಾಗಾಗಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಬಂತು. ಌಂಡ್ ವರುಣ್ ಚಕ್ರವರ್ತಿ 4 ವಿಕೆಟ್ ಪಡೆದು ಪಂದ್ಯದ ದಿಕ್ಕನ್ನೇ ಬದಲಿಸಿದ್ರು. ಪ್ಲೇಯರ್ ಆಫ್ ದಿ ಸಿರೀಸ್ ಪ್ರಶಸ್ತಿಗೆ ಮುತ್ತಿಟ್ರು. ಸೋ ಇಡೀ ಟೀಂ ಪರ್ಫಾಮೆನ್ಸ್ ಌಂಡ್ ವಿನ್ನಿಂಗ್ ಮೂಮೆಂಟ್ ಬೊಂಬಾಟ್ ಆಗಿತ್ತು. ಬಟ್ ಈಗ ಆಫ್ಟರ್ ದಿ ಮ್ಯಾಚ್ ಕ್ಯಾಪ್ಟನ್ ಆಡಿರೋ ಮಾತುಗಳೇ ಅಚ್ಚರಿ ಮೂಡಿಸಿವೆ.

ಸೂರ್ಯ ಕಾಣೆಯಾಗಿದ್ದಾನೆಂದು ತಪ್ಪು ಒಪ್ಪಿಕೊಂಡ ಕ್ಯಾಪ್ಟನ್!

ಭಾರತದ ಪರ ನಿನ್ನೆ ಮ್ಯಾಚಲ್ಲಿ ಎಲ್ರೂ ಶೈನ್ ಆದ್ರೂ ಸೂರ್ಯಕುಮಾರ್ ಯಾದವ್ ಕಂ ಬ್ಯಾಕ್ ಮಾಡ್ಲಿಲ್ಲ. ಈ ಹಿಂದೆ ಮೂರನೇ ಪಂದ್ಯದ ಬಳಿಕ ಮಾತ್ನಾಡಿದ್ದ ಸೂರ್ಯ ನಾನು ಫಾರ್ಮ್​ನಲ್ಲಿ ಇದ್ದೇನೆ. ಬಟ್ ರನ್ಸ್ ಬರ್ತುಲ್ಲ ಅಷ್ಟೇ ಅಂದಿದ್ರು. ಆದ್ರೆ 7 ಎಸೆತಗಳಲ್ಲಿ 5 ರನ್ ಗಳಿಸಿ ಔಟಾದ್ರು. ಈಗ ತಮ್ಮ ಆಟದ ಬಗ್ಗೆ ಸೂರ್ಯನಿಗೆ ಜ್ಞಾನೋದಯವಾಗಿವೆ. ಪಂದ್ಯದ ಬಳಿಕ ಮಾತ್ನಾಡಿದ ಸೂರ್ಯ ತಮ್ಮ ಫೇಲ್ಯೂರ್​ನ ಒಪ್ಪಿಕೊಂಡ್ರು. ತಂಡದ ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ರು. ಆದ್ರೆ ತನ್ನ ಕಡೆಯಿಂದ ಉತ್ತಮ ಪ್ರದರ್ಶನ ಬಂದಿಲ್ಲ ಅನ್ನೋ ಮೂಲಕ ಸತ್ಯ ಒಪ್ಪಿಕೊಂಡಿದ್ದಾರೆ. ನಮಗೆ ಸೂರ್ಯ ದಿ ಬ್ಯಾಟರ್ ಕಾಣಿಸದಿರುವುದು ಒಂದೇ ಕೊರತೆ. ಅವನು ಎಲ್ಲೋ ಕಾಣೆಯಾಗಿದ್ದಾನೆ ಅಂತ ನನಗೆ ಅನಿಸುತ್ತದೆ!. ಆದರೆ ಖಂಡಿತವಾಗಿಯೂ ಅವನು ಇನ್ನೂ ಬಲಿಷ್ಠನಾಗಿ ಕಂಬ್ಯಾಕ್ ಮಾಡಲಿದ್ದಾನೆ ಅಂತಾ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದ್ರೆ ಸೂರ್ಯ ಉದಯ ಆಗುವಷ್ಟ್ರಲ್ಲಿ ಹೊಸ ಕ್ಯಾಪ್ಟನ್ ನೇಮಕವಾದ್ರೂ ಅಚ್ಚರಿ ಇಲ್ಲ.

ಕ್ಯಾಪ್ಟನ್ಸಿ ಬಾಗಿಲಲ್ಲಿ ನಿಂತ ಹಾರ್ದಿಕ್ ಪಾಂಡ್ಯ!

ಸೂರ್ಯ ಪದೇಪದೆ ಫೇಲ್ಯೂರ್ ಆಗ್ತಿದ್ದಂತೆ ತಂಡದಿಂದ ಕೈಬಿಡುವಂತೆ ಒತ್ತಡ ಹೆಚ್ಚಾಗ್ತಿದೆ. ಅದೂ ಅಲ್ದೇ ಒಂದೂವರೆ ತಿಂಗಳಲ್ಲಿ ಟಿ-20 ವಿಶ್ವಕಪ್ ಬೇರೆ ಇದೆ. ಹೀಗಾಗಿ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯಗೆ ಕ್ಯಾಪ್ಟನ್ಸಿ ಕೊಡಿ ಅನ್ನೋ ಕೂಗು ಎದ್ದಿದೆ. ಅಲ್ದೇ ಪಾಂಡ್ಯ ಪರ್ಫಾಮೆನ್ಸ್ ಕೂಡ ನೆಕ್ಸ್​ಟ್ ಲೆವೆಲ್​ನಲ್ಲಿದೆ. ಕಟಕ್​ನಲ್ಲಿ ಕಡೆದ ಮೊದಲ ಮ್ಯಾಚಲ್ಲಿ ಪಾಂಡ್ಯ ಮಾತ್ರನೇ ಅರ್ಧಶತಕ ಬಾರಿಸಿದ್ದು. ಌಂಡ್ ಸರಣಿಯ 3 ಇನ್ನಿಂಗ್ಸ್​ಗಳಲ್ಲಿ 142 ರನ್ ಗಳಿಸಿ ಟಾಪ್ 3 ಹೈಯೆಸ್ಟ್ ಸ್ಕೋರರ್ ಆಗಿದ್ದಾರೆ. ಹಾಗೇ ಮೂರು ವಿಕೆಟ್ ತೆಗೆದಿದ್ದಾರೆ. ಆದ್ರೆ ಸೂರ್ಯ 4 ಇನ್ನಿಂಗ್ಸ್​ಗಳಿಂದ 34 ರನ್ ಗಳಿಸಿದ್ದಾರಷ್ಟೇ. ಹೀಗಾಗಿ ಸೂರ್ಯನಿಗಿಂತ ಪಾಂಡ್ಯ ಬೆಟರ್ ಅನ್ನೋ ಮಾತುಗಳು ಕೇಳಿ ಬರ್ತಿವೆ.

ಇನ್ನು ಇದೆಲ್ಲದ್ರ ನಡುವೆ ಸಂಜು ಸ್ಯಾಮ್ಸನ್ ಗೆ ಚಾನ್ಸ್ ಸಿಕ್ಕಿದ್ದೂ ಕೂಡ ಎಫೆಕ್ಟ್ ಆಗಿದೆ. ಅಭಿ ಮತ್ತು ಸಂಜು ಪವರ್ ಪ್ಲೇನಲ್ಲೇ ಧಮಾಕ ಸೃಷ್ಟಿಸಿದ್ರು. ಸಂಜು 22 ಬಾಲ್​ಗಳಲ್ಲಿ 37 ರನ್ಸ್ ಕಲೆ ಹಾಕಿ ವಿಕೆಟ್ ಒಪ್ಪಿಸಿದ್ರು. ಬಟ್ ಗಿಲ್​ಗಿಂತ ಬೆಸ್ಟ್ ಅನ್ನೋದು ಗೊತ್ತಾಗ್ತಿತ್ತು. ಬ್ಯಾಟಿಂಗ್ ಆರ್ಡರ್​ನಲ್ಲಿ ರನ್ಸ್ ರೇಟ್ ಚೆನ್ನಾಗಿತ್ತು. ಇನ್ನು ಸಂಜು ವಿಕೆಟ್ ಕೀಪಿಂಗ್​ನಲ್ಲೂ ತುಂಬಾನೇ ಶಾರ್ಪ್ ಆಗಿದ್ದು ಕರೆಕ್ಟ್ ಜಡ್ಜ್​ಮೆಂಟ್ ಮೂಲಕ ವಿಕೆಟ್ ಎಗರಿಸಿದ್ರು. ಹೀಗಾಗಿ ಸಂಜು ಪ್ರದರ್ಶನ ಗೌತಮ್ ಗಂಭೀರ್​ಗೆ ಶೇಪ್ ಔಟ್ ಆಗುವಂತೆ ಮಾಡಿದೆ.

Shantha Kumari