ಹಾರ್ದಿಕ್ ಗೆ ಒಲಿದಳಾ ಅದೃಷ್ಟ ದೇವತೆ? – ಪಾಂಡ್ಯ ಪವರ್ ಹಿಂದೆ ಮಹಿಕಾ ಮಹಿಮೆ?
2026ಕ್ಕೂ ವಿಶ್ವಕಪ್ ಹೀರೋ ಆಗ್ತಾರಾ?

ಪ್ರತಿಷ್ಠಿತ ಟಿ-20 ವಿಶ್ವಕಪ್ಗೆ ಇನ್ನೊಂದೇ ತಿಂಗಳು ಬಾಕಿ. ಫೆಬ್ರವರಿ 7ರಿಂದ ವಿಶ್ವಕಪ್ ಆರಂಭವಾಗಲಿದ್ದು ಹಾಲಿ ಚಾಂಪಿಯನ್ ಭಾರತ ಈ ಸಲವೂ ಕಪ್ ತಮ್ಮಲ್ಲೇ ಉಳಿಸಿಕೊಳ್ಳೋ ಟಾರ್ಗೆಟ್ನಲ್ಲಿದೆ. ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ 15 ಸದಸ್ಯರ ಟೀಂ ಕೂಡ ಅನೌನ್ಸ್ ಆಗಿದೆ. ಅಭಿಷೇಕ್ ಶರ್ಮಾರಂಥ ಪವರ್ಹಿಟ್ಟರ್ ಬ್ಯಾಟರ್, ಜಸ್ಪ್ರೀತ್ ಬುಮ್ರಾನಂತ ವರ್ಲ್ಡ್ ಕ್ಲಾಸ್ ಬೌಲರ್ ತಂಡದಲ್ಲಿದ್ದಾರೆ. ಆದ್ರೆ ಟಿ-20 ವಿಶ್ವಕಪ್ನಲ್ಲಿ ಭಾರತದ ಪಾಲಿನ ಅಸಲಿ ಮ್ಯಾಚ್ ವಿನ್ನರ್ ಹಾರ್ದಿಕ್ ಪಾಂಡ್ಯ ಅಂತಾ ಎಬಿ ಡಿವಿಲಿಯರ್ಸ್ ಹೇಳಿದ್ದಾರೆ. ಎಬಿಡಿ ಹೀಗೆ ಹೇಳೋದಕ್ಕೆ ಕಾರಣವೂ ಇದೆ.
ಇದನ್ನೂ ಓದಿ : IND Vs BAN ಸರಣಿಗಳೇ ಬ್ಯಾನ್? – ಪಾಕಿಸ್ತಾನದಂತೆಯೇ ಆಗುತ್ತಾ ಬಾಂಗ್ಲಾ?
ಭಾರತದ ಟಿ-20ಐ ಸ್ಕ್ವಾಡ್ ಸೂಪರ್ ಸ್ಟ್ರಾಂಗ್ ಆಗಿದೆ. ಬಲಿಷ್ಠ ಬ್ಯಾಟಿಂಗ್ ಲೈನಪ್ ಇದೆ. ಕ್ಯಾಪ್ಟನ್ ಸೂರ್ಯರನ್ನ ಬಿಟ್ರೆ ಉಳಿದವ್ರೆಲ್ಲಾ ಒಳ್ಳೆ ಫಾರ್ಮ್ನಲ್ಲಿದ್ದಾರೆ. ಹಾಗೇ ಬೌಲಿಂಗ್ ಟೀಂ ಕೂಡ ಚೆನ್ನಾಗಿದೆ. ಬಟ್ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡ್ರಲ್ಲೂ ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ನೀಡೋ ಪ್ಲೇಯರ್ ಅಂದ್ರೆ ಅದು ಒನ್ ಌಂಡ್ ಓನ್ಲಿ ಹಾರ್ದಿಕ್ ಪಾಂಡ್ಯ. ಪ್ರಸ್ತುತ ಅದ್ಭುತ ಫಾರ್ಮ್ನಲ್ಲಿರುವ ಪಾಂಡ್ಯ ಡೊಮೆಸ್ಟಿಕ್ ಕ್ರಿಕೆಟ್ನಲ್ಲೂ ಬ್ಯಾಟಿಂಗ್ನಲ್ಲಿ ಅಬ್ಬರಿಸಿದ್ರು. ವಿಶ್ವಕಪ್ ತಂಡದಲ್ಲಿ ಮೇನ್ ಪ್ಲೇಯರ್ ಆಗಿರೋದ್ರಿಂದಲೇ ಏಕದಿನ ತಂಡದಿಂದ ರೆಸ್ಟ್ ನೀಡಲಾಗಿದೆ. ಇದೇ ಕಾರಣಕ್ಕೆ ಭಾರತಕ್ಕೆ ಟಿ-20 ವಿಶ್ವಕಪ್ ಗೆಲ್ಲಲು ದೊಡ್ಡ ಆಸ್ತಿ ಅಂತಾ ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.
10 ವರ್ಷಗಳಿಂದಲೂ ಟಿ-20 ವಿಶ್ವಕಪ್ ಆಡ್ತಿದ್ದಾರೆ ಪಾಂಡ್ಯ!
10ನೇ ಆವೃತ್ತಿಯ ಟಿ-20 ವಿಶ್ವಕಪ್ಗೆ ಇನ್ನೇನು ಅಂತಿಮ ಹಂತದ ಸಿದ್ಧತೆಗಳು ನಡೀತಿವೆ. 10 ವರ್ಷಗಳ ನಂತ್ರ ಭಾರತ ಮತ್ತೊಮ್ಮೆ ಟಿ-20 ವಿಶ್ವಕಪ್ ಆಯೋಜನೆ ಮಾಡ್ತಿದೆ. ಬಟ್ ಈ ಸಲ ಲಂಕಾ ಸಹ ಪ್ರಾಯೋಜಕತ್ವದಲ್ಲಿ ಟೂರ್ನಿ ನಡೆಯಲಿದೆ. ಕೊನೇ ಬಾರಿ 2016 ರಲ್ಲಿ ಭಾರತ ಮಾತ್ರ ಹೋಸ್ಟಿಂಗ್ ಮಾಡಿತ್ತು. ಆ ಟೈಮಲ್ಲಿ ಎಮ್ಎಸ್ ಧೋನಿ ಭಾರತ ತಂಡದ ಕ್ಯಾಪ್ಟನ್ ಆಗಿದ್ರು. 2016 ರಿಂದ 2026 ರ ಟೂರ್ನಿಗೆ ಹೋಲಿಸಿದ್ರೆ ಭಾರತ ತಂಡದಲ್ಲಿ ಇಬ್ಬರು ಮಾತ್ರವೇ ಆಡ್ತಿದ್ದಾರೆ. ಅಂದ್ರೆ ಕಳೆದ 10 ವರ್ಷಗಳಿಂದ ಜಸ್ಪ್ರೀತ್ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯ ಟಿ-20 ವಿಶ್ವಕಪ್ನಲ್ಲಿ ಆಡ್ತಿದ್ದಾರೆ. 2016 ರಲ್ಲಿ ತಂಡದ ಭಾಗವಾಗಿದ್ದರು. ಅಲ್ಲಿಂದ ಈಚೆಗೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಈಗ ಸೂರ್ಯಕುಮಾರ್ ನಾಯಕತ್ವದಲ್ಲೂ ಪಾಂಡ್ಯ ಅಖಾಡಕ್ಕೆ ಇಳಿಯೋಕೆ ಸಜ್ಜಾಗಿದ್ದಾರೆ.
ಟಿ-20ಐ ಮಾದರಿಯಲ್ಲಿ ಬ್ಯಾಟಿಂಗ್ & ಬೌಲಿಂಗ್ ಬ್ರಹ್ಮಾಸ್ತ್ರ!
2016ರ ಟಿ20 ವಿಶ್ವಕಪ್ ಟೈಮಲ್ಲಿ ಪಾಂಡ್ಯ ಟೀಮ್ಗೆ ಇನ್ನೂ ಹೊಸಬರಾಗಿದ್ರು. ಹೀಗಿದ್ರೂ ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ನೀಡಿದ್ರು. ಅದ್ರಲ್ಲೂ ಬಾಂಗ್ಲಾದೇಶ ವಿರುದ್ಧ ಸೂಪರ್ 10 ಮ್ಯಾಚ್ ಟೈಮಲ್ಲಿ ಲಾಸ್ಟ್ ಓವರ್ ಬೌಲಿಂಗ್ ಮಾಡಿದ್ರು. ಆ ಪಂದ್ಯದಲ್ಲಿ ಭಾರತ ಒಂದು ರನ್ನಿಂದ ರಣರೋಚಕವಾಗಿ ಗೆದ್ದಿತ್ತು. ಅಲ್ಲಿಂದ ಈಚೆಗೆ ವೈಟ್-ಬಾಲ್ ಕ್ರಿಕೆಟ್ನಲ್ಲಿ ಭಾರತದ ಅತ್ಯುತ್ತಮ ಆಲ್ರೌಂಡರ್ಗಳಲ್ಲಿ ಒಬ್ಬರಾಗಿ ಪಾಂಡ್ಯ ಬೆಳೆದಿದ್ದಾರೆ. ಈಗ 2026 ರಲ್ಲಿ ವಿಶ್ವದ ಅತ್ಯುತ್ತಮ ಆಲ್ರೌಂಡರ್ಗಳಲ್ಲಿ ಒಬ್ಬರು. ಟಿ20ಐನಲ್ಲಿ 2000 ಕ್ಕೂ ಹೆಚ್ಚು ರನ್ಗಳು ಮತ್ತು 100 ಕ್ಕೂ ಹೆಚ್ಚು ವಿಕೆಟ್ಗಳನ್ನು ಪಡೆದಿದ್ದಾರೆ. ಌಂಡ್ ಟಿ-20 ಮಾದರಿಯಲ್ಲಿ 100ಕ್ಕೂ ಹೆಚ್ಚು ಸಿಕ್ಸರ್ಗಳನ್ನೂ ಬಾರಿಸಿದ್ದಾರೆ. ಇನ್ನು ಭಾರತ 2024ರಲ್ಲಿ ಟಿ-20 ವಿಶ್ವಕಪ್ ಗೆಲ್ಲುವಲ್ಲಿ ಪಾಂಡ್ಯ ಪ್ರಮುಖ ಪಾತ್ರ ವಹಿಸಿದ್ರು. ಬೌಲಿಂಗ್ನಲ್ಲಿ ಪ್ರಮುಖ 3 ವಿಕೆಟ್ಗಳನ್ನ ಬೇಟೆಯಾಡಿದ್ರು. ಈಗ ಈ ಬಾರಿಯ ವಿಶ್ವಕಪ್ನಲ್ಲೂ ಗೇಮ್ ಚೇಂಜಿಂಗ್ ಪರ್ಫಾಮೆನ್ಸ್ ನೀಡೋದ್ರಲ್ಲಿ ಅನುಮಾನವೇ ಇಲ್ಲ. ಆದ್ರೆ 2024ರ ಟಿ-20 ವಿಶ್ವಕಪ್ ಗೆಲ್ಲೋ ಮುನ್ನ ಪಾಂಡ್ಯ ಅಕ್ಷರಶಃ ಅಗ್ನಿಪರೀಕ್ಷೆ ಎದುರಿಸಿದ್ರು. ಪರ್ಸನಲ್ ಲೈಫ್ನಲ್ಲಿ ಆದ ಕೆಲ ತಿರುವುಗಳು, ಮುಂಬೈ ಕ್ಯಾಪ್ಟನ್ಸಿ ಎಲ್ಲವೂ ಕೂಡ ಪಾಂಡ್ಯರನ್ನ ಹಿಂಡಿ ಹಿಪ್ಪೆ ಮಾಡಿದ್ವು. ಏನೆಲ್ಲಾ ಆಗಿತ್ತು ಅನ್ನೋದನ್ನ ನೋಡೋದಾದ್ರೆ..
ಪಾಂಡ್ಯ ಬದುಕಿನ 2.O ಮಹಿಕಾ!
2024ರ ಆರಂಭದಿಂದಲೂ ಹಾರ್ದಿಕ್ & ನತಾಶ ಬಾಳಲ್ಲಿ ಬಿರುಕು
ಸೋಶಿಯಲ್ ಮೀಡಿಯಾದಲ್ಲಿ ವೈಮನಸ್ಸಿನ ಬಗ್ಗೆ ಪೋಸ್ಟ್ ಗಳ ಸದ್ದು
2024ರಲ್ಲಿ ರೋಹಿತ್ ಕೆಳಗಿಳಿಸಿ ಮುಂಬೈ ತಂಡದ ಕ್ಯಾಪ್ಟನ್ ಚಾನ್ಸ್
ರೋಹಿತ್ ರನ್ನ ದಿಢೀರ್ ಇಳಿಸಿದ್ದಕ್ಕೆ ಅಭಿಮಾನಿಗಳ ಆಕ್ರೋಶ
ಮೈದಾನದಲ್ಲಿ ಪಂದ್ಯಗಳ ವೇಳೆ ಪಾಂಡ್ಯ ವಿರುದ್ಧ ಫ್ಯಾನ್ಸ್ ಕೂಗು
ಪರ್ಸನಲ್, ಕ್ರಿಕೆಟ್ ಎರಡರಲ್ಲೂ ಸಾಕಷ್ಟು ನೊಂದಿದ್ದ ಪಾಂಡ್ಯ
ಟಿ-20 ವಿಶ್ವಕಪ್ ನಲ್ಲಿ ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್
ಅಲ್ಲಿಂದ ಈಚೆಗೆ ಪಾಂಡ್ಯ ಬದುಕಲ್ಲಿ ಬದಲಾವಣೆ, ಮತ್ತೆ ಅಬ್ಬರ
ಪಾಂಡ್ಯ ಬಾಳಲ್ಲಿ ಅದೃಷ್ಟ ದೇವತೆಯಾಗಿ ಬಂದ ಮಹಿಕಾ ಶರ್ಮಾ
ಮಹಿಕಾ ಶರ್ಮಾ ಪಾಂಡ್ಯ ಬದುಕಲ್ಲಿ ಬಂದ ಮೇಲೆ ಪಾಂಡ್ಯ ಫುಲ್ ಚಿಲ್ ಆಗಿದ್ದಾರೆ. ಮಹಿಕಾ ಜೊತೆ ಮದುವೆಗೆ ಸಿದ್ಧವಾಗ್ತಿದ್ದು ಮೈದಾನದಲ್ಲೂ ಫೈರ್ಬ್ರಾಂಡ್ ರೀತಿ ಅಬ್ಬರಿಸ್ತಿದ್ದಾರೆ. ಈವನ್ ಪಂದ್ಯಗಳ ಟೈಮಲ್ಲೂ ಮಹಿಕಾ ಮೈದಾನಕ್ಕೆ ಹೋಗಿ ಸಪೋರ್ಟ್ ಮಾಡ್ತಿದ್ದಾರೆ. ಟಿ-20ಐನಲ್ಲಿ 100 ವಿಕೆಟ್ಗಳ ಸಾಧನೆ ಮಾಡಿದಾಗ ಮಹಿಕಾ 100Babyyyyyy Rockstar Legend hero ಎಂಬ ಟೈಟಲ್ ನಡಿ ಪೋಸ್ಟ್ ಮಾಡಿದ್ರು. ಇತ್ತೀಚೆಗೆ ಮೋದಿ ಸ್ಟೇಡಿಯಮ್ನಲ್ಲಿ ಭಾರತದ ಪರ 2ನೇ ವೇಗದ ಅರ್ಧಶತಕ ಸಿಡಿಸಿದಾಗ ಗ್ಯಾಲರಿಯಲ್ಲಿದ್ದ ಮಹಿಕಾಗೆ ಫ್ಲೈಯಿಂಗ್ ಕಿಸ್ ಕೊಟ್ಟಿದ್ರು. ಹಾಗೇ ಮೈದಾನದ ಹೊರಗೂ ಕೂಡ ಪಾಂಡ್ಯ ಮತ್ತು ಮಹಿಕಾ ಒಟ್ಟೊಟ್ಟಿಗೆ ಕಾಣಿಸಿಕೊಳ್ತಿದ್ದಾರೆ. ಇವೆಂಟ್ಗಳಿಗೂ ಒಟ್ಟೊಟ್ಟಿಗೆ ಹೋಗ್ತಿದ್ದಾರೆ. ಇಬ್ಬರ ನಡುವೆ ಎಂಗೇಜ್ಮೆಂಟ್ ಕೂಡ ಆಗಿದೆ ಅನ್ನೋ ಸುದ್ದಿ ಇದೆ. ಒಟ್ನಲ್ಲಿ ಪಾಂಡ್ಯ ಹಾರ್ದಿಕ್ ಪಾಂಡ್ಯ ಕ್ರಿಕೆಟ್ ಕರಿಯರ್ ಮತ್ತು ರಿಯಲ್ ಲೈಫ್ ಎರಡ್ರಲ್ಲೂ ಸುದ್ದಿಯಲ್ಲೇ ಇರ್ತಾರೆ. ಎರಡ್ರಲ್ಲೂ ಸಕ್ಸಸ್ ಸಿಗ್ಲಿ.

ನೋಡಿರಿ

