ಪ್ರೇಯಸಿ ಮಹಿಕಾಗೆ ಫೆರಾರಿ ಕಾರು ಗಿಫ್ಟ್ ಕೊಟ್ಟ ಪಾಂಡ್ಯ – ಹಾರ್ದಿಕ್ ಜೊತೆ ಗೆಳೆತಿಯ ಜಾಲಿ ರೈಡ್

ಪ್ರೇಯಸಿ ಮಹಿಕಾಗೆ ಫೆರಾರಿ ಕಾರು ಗಿಫ್ಟ್ ಕೊಟ್ಟ ಪಾಂಡ್ಯ – ಹಾರ್ದಿಕ್ ಜೊತೆ ಗೆಳೆತಿಯ ಜಾಲಿ ರೈಡ್

ಟಿ20 ವಿಶ್ವಕಪ್ ಗೆದ್ದ ಸಂಭ್ರಮದಲ್ಲಿರುವ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ಪ್ರೇಯಸಿ ಮಹಿಕಾ ಶರ್ಮಾ ಜೊತೆ ಜೋರಾಗಿಯೇ ಸೆಲೆಬ್ರೇಷನ್ ಮಾಡಿದ್ದರು. ಇದೀಗ ಗರ್ಲ್‌ಫ್ರೆಂಡ್ ಮಹಿಕಾ ಶರ್ಮಾಗೆ ದುಬಾರಿ ಕಾರು ಗಿಫ್ಟ್ ನೀಡುವ ಮೂಲಕ ಮತ್ತೊಮ್ಮೆ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ:ಸಿಎಸ್‌ಕೆ ಪ್ಲೇಯಿಂಗ್ 11ನಿಂದ ಧೋನಿ ಔಟ್ – ಚೆನ್ನೈ ತಂಡದಿಂದ ಧೋನಿಯನ್ನು ಹೊರಗಿಟ್ಟಿದ್ದು ಯಾಕೆ?

ಟಿ20 ವಿಶ್ವಕಪ್ ಗೆಲುವಿನ ಸಂಭ್ರಮದ ಬೆನ್ನಲ್ಲೇ, ಟೀಂ ಇಂಡಿಯಾ ಆಟಗಾರ ಹಾರ್ದಿಕ್ ಪಾಂಡ್ಯ ತನ್ನ ಗರ್ಲ್‌ಫೆಂರ್ಡ್ ಮಹಿಕಾ ಶರ್ಮಾಗೆ ಫೆರಾರಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಫೆರಾರಿ ಕಾರಿನ ಬೆಲೆ 10 ಕೋಟಿ ರೂಪಾಯಿ ಮೌಲ್ಯದ್ದು ಎನ್ನಲಾಗಿದೆ. ಮಹಿಕಾ ಶರ್ಮಾ ಹೊಸ ಕಾರಿಗೆ ಪೂಜೆ ಮಾಡಿದ್ದು, ಹಾರ್ದಿಕ್ ಪಾಂಡ್ಯ ಕಾರಿನಲ್ಲಿ ಕುಳಿತು ವಿಡಿಯೋ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರೋ ವಿಡಿಯೋದಲ್ಲಿ, ಮಹಿಕಾ ಶರ್ಮಾ ಒಬ್ಬ ಪುರೋಹಿತರ ಸಮ್ಮುಖದಲ್ಲಿ ಮಂತ್ರಗಳೊಂದಿಗೆ ಹೊಸ ಕಾರಿಗೆ ಪೂಜೆ ಮಾಡುತ್ತಿದ್ದಾರೆ. ಕಾರಿನೊಳಗೆ ಪಾಂಡ್ಯ ಕುಳಿತುಕೊಂಡು ಮೊಬೈಲ್‌ನಲ್ಲಿ ವಿಡಿಯೋ ಮಾಡುತ್ತಿದ್ದಾರೆ. ವೇಗ ಮತ್ತು ಐಷಾರಾಮಿತನದ ಸಂಕೇತವಾಗಿರುವ ಫೆರಾರಿ 12 ಸಿಲಿಂಡ್ರಿ ಕಾರನ್ನು ಹಾರ್ದಿಕ್ ಉಡುಗೊರೆಯಾಗಿ ನೀಡಿದ್ದಾರೆ. ಹಾರ್ದಿಕ್ ಬಳಿ ಈಗಾಗಲೇ ಸುಮಾರು 8 ಕೋಟಿ ರೂ. ಮೌಲ್ಯದ ರೋಲ್ಸ್ ರಾಯ್ಸ್ ಕಲ್ಲಿನನ್, 5 ಕೋಟಿ ರೂ. ಮೌಲ್ಯದ ಲಂಬೋರ್ಗಿನಿ, 4 ಕೋಟಿ ರೂ. ಮೌಲ್ಯದ ಮರ್ಸಿಡಿಸ್ ಮತ್ತು 70-80 ಲಕ್ಷ ರೂ. ಬೆಲೆಯ ಆಡಿ ಎ6 ಕಾರುಗಳಿವೆ. ಈ ಹಿಂದೆ, ಅವರು ತಮ್ಮ ಮೊದಲ ಪತ್ನಿ ನತಾಶಾ ಸ್ಟಾಂಕೋವಿಕ್ ಮತ್ತು ಮಗನಿಗೂ ಐಷಾರಾಮಿ ಕಾರನ್ನು ಉಡುಗೊರೆಯಾಗಿ ನೀಡಿದ್ದರು.

Sulekha