ವಿಶ್ವ ಗೆದ್ದ ಪಾಂಡ್ಯಗೆ ನಂ.1 ಗಿಫ್ಟ್ – ಸವಾಲು ಮೆಟ್ಟಿ ಹಾರ್ದಿಕ್ ಸಾಧಿಸಿದ್ದೆಷ್ಟು?
ICC Rankingನಲ್ಲಿ ಯಾರೆಲ್ಲಾ ಇದ್ದಾರೆ?

ಅದೆಷ್ಟು ನೋವು. ಅದೆಷ್ಟು ಹತಾಶೆ. ಆಟದಲ್ಲಿ ಪದೇಪದೆ ಫೆಲ್ಯೂರ್. ಅಭಿಮಾನಿಗಳಿಂದಲೂ ಟೀಕೆ. ಸೋಶಿಯಲ್ ಮೀಡಿಯಾದಲ್ಲೂ ಟ್ರೋಲ್. ಹೋಗ್ಲಿ ಪರ್ಸನಲ್ ಲೈಫ್ ಆದ್ರೂ ಚೆನ್ನಾಗಿದ್ಯಾ ಅಂದ್ರೆ ಅದೂ ಇಲ್ಲ. ಪತ್ನಿ ಜೊತೆ ಮನಸ್ತಾಪ, ಡಿವೋರ್ಸ್ ಬಿರುಗಾಳಿ. ಹೀಗೆ ನಾಲ್ಕೈದು ತಿಂಗಳಿಂದ ನೊಂದು ಬೆಂದು ಹೋಗಿದ್ದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಪಟ್ಟ ಪಾಡು ಅಷ್ಟಿಷ್ಟಲ್ಲ. ಭಾರತದ ಅಭಿಮಾನಿಗಳೇ ಚಪ್ರಿ ಚಪ್ರಿ ಅಂತ ಹಾರ್ದಿಕ್ ಪಾಂಡ್ಯರನ್ನು ಟೀಕಿಸಿದ್ರು. ಹಾರ್ದಿಕ್ ಆ್ಯಟಿಟ್ಯೂಡ್ ಸರಿ ಇಲ್ಲ. ಅಹಂಕಾರ ಜಾಸ್ತಿ ಆಯ್ತು. ಕ್ರಿಕೆಟ್ ಆಡಿಸಬೇಡಿ ಅಂತೆಲ್ಲಾ ಫ್ಯಾನ್ಸ್ ಕೋಪಗೊಂಡಿದ್ರು. ಹಾರ್ದಿಕ್ ಹಾಗೂ ರೋಹಿತ್ ಶರ್ಮಾ ನಡುವಿನ ಸಂಬಂಧ ಕೂಡ ಹದಗೆಟ್ಟಿದೆ ಅನ್ನೋ ಊಹಾಪೋಹ ಕೇಳಿ ಬಂದಿತ್ತು. ಇಷ್ಟೆಲ್ಲಾ ನೋವು ಅನುಭವಿಸಿದ್ದ ಪಾಂಡ್ಯ ಈಗ ಟಿ20 ವಿಶ್ವಕಪ್‌ನ ರಿಯಲ್ ಹೀರೋ. ಇದೀಗ ಹಾರ್ದಿಕ್ ಪಾಂಡ್ಯಗೆ ಮತ್ತೊಂದು ಬಂಪರ್ ನ್ಯೂಸ್ ಸಿಕ್ಕಿದೆ. ಟಿ20 ಆಲ್ರೌಂಡರ್ ರ‍್ಯಾಂಕಿಂಗ್ ನಲ್ಲಿ ಪಾಂಡ್ಯ ನಂಬರ್ 1 ಸ್ಥಾನಕ್ಕೇರಿದ್ದಾರೆ.
ಇದನ್ನೂ ಓದಿ: HITಮ್ಯಾನ್ಗೆ ಪಟ್ಟ ಕಟ್ಟುತ್ತಾ RCB? – ರೋಹಿತ್ಗೆ ಕೊಹ್ಲಿ ಬಂಪರ್ ಆಫರ್
ಪಾಂಡ್ಯ ನಂಬರ್ 1!
ಟಿ20 ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ಐಸಿಸಿ ನೂತನ ಟಿ20 ಶ್ರೇಯಾಂಕ ಪಟ್ಟಿಯನ್ನು ಪ್ರಕಟಿಸಿದೆ. ಈ ಬಾರಿ ಟಿ20 ಬ್ಯಾಟರ್ಗಳ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ಅಗ್ರಸ್ಥಾನ ಅಲಂಕರಿಸಿದರೆ, ಬೌಲರ್ಗಳ ಪಟ್ಟಿಯಲ್ಲಿ ಇಂಗ್ಲೆಂಡ್ನ ಆದಿಲ್ ರಶೀದ್ ಮೊದಲ ಸ್ಥಾನದಲ್ಲಿದ್ದಾರೆ. ಇನ್ನು ಟಿ20 ಆಲ್ರೌಂಡರ್ ಶ್ರೇಯಾಂಕದಲ್ಲಿ ಟೀಮ್ ಇಂಡಿಯಾದ ಹಾರ್ದಿಕ್ ಪಾಂಡ್ಯ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಾರಿಯ ಟಿ20 ವಿಶ್ವಕಪ್ನಲ್ಲಿ 8 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಹಾರ್ದಿಕ್ ಪಾಂಡ್ಯ 6 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿದ್ದರು. ಈ ವೇಳೆ ಒಟ್ಟು 144 ರನ್ ಕಲೆಹಾಕಿದ್ದಾರೆ. ಹಾಗೆಯೇ ಬೌಲಿಂಗ್ನಲ್ಲಿ 25 ಓವರ್ಗಳನ್ನು ಎಸೆದಿದ್ದ ಪಾಂಡ್ಯ 191 ರನ್ ನೀಡಿ ಒಟ್ಟು 11 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಈ ಭರ್ಜರಿ ಪ್ರದರ್ಶನದ ಫಲವಾಗಿ ಇದೀಗ ಟಿ20 ಆಲ್ರೌಂಡರ್ಗಳ ಶ್ರೇಯಾಂಕದಲ್ಲಿ ಹಾರ್ದಿಕ್ ಪಾಂಡ್ಯ ಅಗ್ರಸ್ಥಾನ ಅಲಂಕರಿಸಿದ್ದಾರೆ. ಶ್ರೀಲಂಕಾದ ವನಿಂದು ಹಸರಂಗ 2ನೇ ಸ್ಥಾನಲ್ಲಿದ್ರೆ ಆಸ್ಟ್ರೇಲಿಯಾದ ಮಾರ್ಕಸ್ ಸ್ಟೋಯಿನಿಸ್ 3ನೇ ಪ್ಲೇಸ್ನಲ್ಲಿದ್ದಾರೆ. ಜಿಂಬಾಬ್ವೆಯ ಸಿಕಂದರ್ ರಾಝ 4ನೇ ಸ್ಥಾನದಲ್ಲಿದ್ರೆ ಬಾಂಗ್ಲಾದ ಶಕೀಬ್ ಅಲ್ ಹಸನ್ ಫಿಪ್ತ್ ಪ್ಲೇಸ್ನಲ್ಲಿದ್ದಾರೆ. ಇನ್ನು ಟಿ20 ಬ್ಯಾಟರ್ಗಳ ಪಟ್ಟಿಯಲ್ಲಿ ಟಾಪ್-10 ನಲ್ಲಿ ಕೇವಲ ಇಬ್ಬರು ಭಾರತೀಯರು ಮಾತ್ರ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಒಂದೇ ಒಂದು ಪಂದ್ಯವಾಡದ ಯುವ ಎಡಗೈ ದಾಂಡಿಗ ಯಶಸ್ವಿ ಜೈಸ್ವಾಲ್ 7ನೇ ಸ್ಥಾನವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ಫಸ್ಟ್ ಪ್ಲೇಸ್ನಲ್ಲಿದ್ರೆ ಸೂರ್ಯಕುಮಾರ್ ಯಾದವ್ ಸೆಕೆಂಡ್ ಪ್ಲೇಸ್ನಲ್ಲಿದ್ದಾರೆ. ಫಿಲ್ಸಾಲ್ಟ್ ಮೂರು, ಬಾಬರ್ ಆಝಂ ನಾಲ್ಕನೇ ಸ್ಥಾನದಲ್ಲಿದ್ದಾರೆ. ಮೊಹಮ್ಮದ್ ರಿಝ್ವಾನ್ ಐದನೇ ಸ್ಥಾನದಲ್ಲಿದ್ದಾರೆ. ಇನ್ನು ಟಿ20 ಬೌಲರ್ಗಳ ಪಟ್ಟಿಯಲ್ಲಿ ಅಗ್ರ ಹತ್ತರಲ್ಲಿ ಭಾರತದ ಇಬ್ಬರು ಬೌಲರ್ಗಳು ಸ್ಥಾನ ಪಡೆದಿದ್ದಾರೆ. ಆದ್ರೂ ಕೂಡ ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಟಾಪ್-10 ನಲ್ಲಿ ಕಾಣಿಸಿಕೊಂಡಿಲ್ಲ. ಟಿ20 ಬೌಲರ್ಗಳ ನೂತನ ಶ್ರೇಯಾಂಕ ಪಟ್ಟಿಯಲ್ಲಿ ಬುಮ್ರಾ 12ನೇ ಸ್ಥಾನದಲ್ಲಿದ್ದಾರೆ. ಟಿ20 ಬೌಲರ್ಗಳ ಟಾಪ್ 1 ಸ್ಥಾನದಲ್ಲಿ ಇಂಗ್ಲೆಂಡ್ ಆದಿಲ್ ರಶೀದ್ ಇದ್ರೆ 2ನೇ ಸ್ಥಾನದಲ್ಲಿ ಸೌತ್ ಆಫ್ರಿಕಾದ ಹೆನ್ರಿಕ್ ನೋಕಿಯಾ ಇದ್ದಾರೆ. ಮೂರರಲ್ಲಿ ವನಿಂದು ಹಸರಂಗ, ನಾಲ್ಕನೇ ಪ್ಲೇಸ್ನಲ್ಲಿ ರಶೀದ್ ಖಾನ್, ಐದರಲ್ಲಿ ಜೋಶ್ ಹ್ಯಾಝಲ್ವುಡ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಅಕ್ಷರ್ ಪಟೇಲ್ 7ನೇ ಸ್ಥಾನದಲ್ಲಿದ್ದಾರೆ.
ಒಟ್ನಲ್ಲಿ ಟಿ-20 ವಿಶ್ವಕಪ್ಗೆ ಆಯ್ಕೆಯೇ ಆಗಲ್ಲ ಅನ್ಕೊಂಡಿದ್ದ ಹಾರ್ದಿಕ್ ಪಾಂಡ್ಯ ಈ ಸಲ ಹೀರೋ ಆಗಿದ್ದಾರೆ. ಅಂದು ತೆಗಳಿದ್ದ ಅಭಿಮಾನಿಗಳೇ ಮುಕ್ತ ಕಂಠದಿಂದ ಹೊಗಳುತ್ತಿದ್ದಾರೆ. ಇದೀಗ ಐಸಿಸಿ ಆಲ್ರೌಂಡರ್ಗಳ ಶ್ರೇಯಾಂಕದಲ್ಲಿ ಫಸ್ಟ್ ಪ್ಲೇಸ್ ಗಿಟ್ಟಿಸಿಕೊಂಡಿದ್ದಾರೆ. ಇದಕ್ಕೇ ಅಲ್ವಾ ಹೇಳೋದು ಕಾಲ ಎಲ್ಲವನ್ನೂ ಬದಲಿಸುತ್ತೆ ಅಂತಾ.