11 ವರ್ಷಗಳಲ್ಲಿ 9 ಪ್ರಶಸ್ತಿಗಳನ್ನ ಗೆದ್ದ ಹಾರ್ದಿಕ್ & ಕೃನಾಲ್ – ಐಪಿಎಲ್ ನಲ್ಲಿ ಸಕ್ಸಸ್ ಫುಲ್ ಬ್ರದರ್ಸ್!

11 ವರ್ಷಗಳಲ್ಲಿ 9 ಪ್ರಶಸ್ತಿಗಳನ್ನ ಗೆದ್ದ ಹಾರ್ದಿಕ್ & ಕೃನಾಲ್ – ಐಪಿಎಲ್ ನಲ್ಲಿ ಸಕ್ಸಸ್ ಫುಲ್ ಬ್ರದರ್ಸ್!

ಐಪಿಎಲ್ ಪ್ರಪಂಚದ ಶ್ರೀಮಂತ ಲೀಗ್ ಅನ್ನೋದು ಇಡೀ ಕ್ರೀಡಾ ಜಗತ್ತಿಗೇ ಗೊತ್ತಿದೆ. 18 ಸೀಸನ್​ಗಳನ್ನ ಯಶಸ್ವಿಯಾಗಿ ಕಂಪ್ಲೀಟ್ ಮಾಡಿದೆ. 10 ಫ್ರಾಂಚೈಸಿಗಳ ನಡುವಿನ ಈ ಪೈಪೋಟಿಯಲ್ಲಿ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಂ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದೆ. ಇಂಟ್ರೆಸ್ಟಿಂಗ್ ಅಂದ್ರೆ ಐಪಿಎಲ್​ನಲ್ಲಿ ಸಕ್ಸಸ್ ಕಂಡವರೂ ಇದ್ದಾರೆ, ಮೇಡನ್ ಟ್ರೋಫಿಗಾಗಿ ಕಾಯ್ತಾ ಇರೋರೂ ಇದ್ದಾರೆ. ಈ ಪೈಕಿ ಸಕ್ಸಸ್ ಜರ್ನಿಯಲ್ಲಿ ಪಾಂಡ್ಯ ಬ್ರದರ್ಸ್ ಸಿಕ್ಕಾಪಟ್ಟೆ ಶೈನ್ ಆಗಿದ್ದಾರೆ.

ಇದನ್ನೂ ಓದಿ : ಬೆಂಗಳೂರಿನ ಇನ್ಸಿಡೆಂಟ್ ಬಳಿಕ ಎಚ್ಚೆತ್ತ ಬಿಸಿಸಿಐ – ಐಪಿಎಲ್ ನಲ್ಲಿ ಮುಂದಿನ ಸೀಸನ್ ಗಳಲ್ಲಿ ಹೊಸ ರೂಲ್ಸ್

2008ರಿಂದ ಆರಂಭವಾದ ಐಪಿಎಲ್​ ಸದ್ಯ 18 ಸೀಸನ್​ಗಳನ್ನ ಕಂಪ್ಲೀಟ್ ಮಾಡಿದೆ. ಪ್ರಸ್ತುತ ಟೂರ್ನಿಯಲ್ಲಿ 10 ತಂಡಗಳು ಆಡ್ತಿವೆ. ಇಂಟ್ರೆಸ್ಟಿಂಗ್ ಅಂದ್ರೆ ಈ ಪೈಕಿ ಮೂರು ತಂಡಗಳು ಇನ್ನೂ ಕೂಡ ತಮ್ಮ ಚೊಚ್ಚಲ ಗೆಲುವಿಗಾಗಿ ಕಾಯ್ತಿದೆ. 2025ರ ಸೀಸನ್​ನಲ್ಲಿ ಆರ್​ಸಿಬಿ ಟೈಟಲ್ ಗೆಲ್ಲೋ ಮೂಲಕ ತಮ್ಮ 18 ವರ್ಷಗಳ ಕಪ್ ಬರವನ್ನ ನೀಗಿಸಿಕೊಂಡಿದೆ. ಆದ್ರೆ ಡೆಲ್ಲಿ ಮತ್ತು ಪಂಜಾಬ್ ತಂಡಗಳು ಇನ್ನೂ ಒಂದೇ ಒಂದು ಕಪ್​ಗಾಗಿ ಕಾಯ್ತಿವೆ. ಹಾಗೇ 2022ರಲ್ಲಿ ಐಪಿಎಲ್​ಗೆ ಜಾಯ್ನ್ ಆದ ಲಕ್ನೋ ಸೂಪರ್ ಜೇಂಟ್ಸ್ ಈವರೆಗೂ ನಾಲ್ಕು ಸೀಸನ್​ಗಳನ್ನ ಆಡಿದ್ದು ಅವ್ರೂ ಕೂಡ ಕಪ್ ಗೆದ್ದಿಲ್ಲ. ಬಟ್ ಮುಂಬೈ ಮತ್ತು ಚೆನ್ನೈ ತಂಡಗಳು ಯಶಸ್ವಿ ತಂಡಗಳು ಎನಿಸಿಕೊಂಡಿವೆ. ಇವ್ರ ಜೊತೆಗೆ ಪಾಂಡ್ಯ ಬ್ರದರ್ಸ್ ಕೂಡ ಸಾಲು ಸಾಲು ಕಪ್​ಗಳಿಗೆ ಮುತ್ತಿಕ್ಕಿದ್ದಾರೆ.

ಈ ಸೀಸನ್​ನಲ್ಲಿ ಆರ್​ಸಿಬಿ ಪರ ಫೈನಲ್ ಪಂದ್ಯದಲ್ಲಿ ಬೆಸ್ಟ್ ಪರ್ಪಾಮೆನ್ಸ್ ನೀಡಿದ ಕೃನಾಲ್ ಪಾಂಡ್ಯ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ರು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಫೈನಲ್ ಪಂದ್ಯಗಳಲ್ಲಿ ಎರಡು ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಗೆದ್ದ ಮೊದಲ ಆಟಗಾರನಾಗಿದ್ದಾರೆ. 2017 ರ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಆಡುವ ವೇಳೆ ಮೊದಲ ಬಾರಿಗೆ ಆರ್‌ಪಿಎಸ್ ವಿರುದ್ಧದ ಫೈನಲ್‌ನಲ್ಲಿ ಕೃನಾಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಅಲ್ದೇ ಕಳೆದ 11 ವರ್ಷಗಳ ಐಪಿಎಲ್ ಜರ್ನಿಯಲ್ಲಿ ಪಾಂಡ್ಯ ಬ್ರದರ್ಸ್ 9 ಐಪಿಎಲ್ ಟ್ರೋಫಿಗಳನ್ನು ಗೆದ್ದಿದ್ದಾರೆ.

ಐಪಿಎಲ್​ನಲ್ಲಿ ಕಳೆದ 11 ವರ್ಷಗಳಲ್ಲಿ ಕೃನಾಲ್ ಪಾಂಡ್ಯ 4 ಬಾರಿ ಚಾಂಪಿಯನ್ ಆಗಿದ್ರೆ ಹಾರ್ದಿಕ್ ಪಾಂಡ್ಯ 5 ಬಾರಿ ಟೈಟಲ್ ಗೆದ್ದ ತಂಡದಲ್ಲಿದ್ದಾರೆ. ಕೃನಾಲ್ ಪಾಂಡ್ಯ ಅವರ ಐಪಿಎಲ್ ಪ್ರಯಾಣವು 2016 ರಲ್ಲಿ ಮುಂಬೈ ಇಂಡಿಯನ್ಸ್ ಪರ ಪ್ರಾರಂಭವಾಯಿತು. ಅವರು 2017, 2019 ಮತ್ತು 2020 ರ ಋತುಗಳಲ್ಲಿ ಆ ಫ್ರಾಂಚೈಸಿಗಾಗಿ ಮೂರು ಪ್ರಶಸ್ತಿಗಳನ್ನು ಗೆದ್ದರು. ಇದೀಗ ಆರ್​ಸಿಬಿ ಪರವಾಗಿ ನಾಲ್ಕನೇ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಹಾಗೇ ಇವ್ರ ಸೋದರ ಹಾರ್ದಿಕ್ ಪಾಂಡ್ಯ ಅವರು 2015 ರಲ್ಲಿ ಮುಂಬೈ ಇಂಡಿಯನ್ಸ್ ಪರ ಐಪಿಎಲ್‌ಗೆ ಪಾದಾರ್ಪಣೆ ಮಾಡಿದರು. ಆ ಬಳಿಕ 2015, 2017, 2019 ಮತ್ತು 2020 ರ ಋತುಗಳಲ್ಲಿ ಆ ಫ್ರಾಂಚೈಸಿಗಾಗಿ ಪ್ರಶಸ್ತಿಗಳನ್ನು ಗೆದ್ದರು. ನಂತರ  2022 ರಲ್ಲಿ ಗುಜರಾತ್ ಟೈಟಾನ್ಸ್ ತಂಡದ ನಾಯಕರಾಗಿ ತಮ್ಮ ಐದನೇ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡ್ರು. ಈ ಮೂಲಕ ಪಾಂಡ್ಯ ಸಹೋದರರು ಒಟ್ಟಿಗೆ 9 ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ಇನ್ನು ಆಟಗಾರರಾಗಿ ಅತಿ ಹೆಚ್ಚು ಐಪಿಎಲ್ ಪ್ರಶಸ್ತಿಗಳನ್ನು ಗೆದ್ದ ಆಟಗಾರರ ಬಗ್ಗೆ ನೋಡುವುದಾದರೆ, ರೋಹಿತ್ ಶರ್ಮಾ 6  ಡೆಕ್ಕನ್ ಚಾರ್ಜರ್ಸ್, ಮುಂಬೈ ಸೇರಿ ಒಟ್ಟು 6 ಸಲ ಚಾಂಪಿಯನ್ ಆಗಿದ್ದಾರೆ. ಇನ್ನು ಅಂಬಟಿ ರಾಯುಡು-6 (ಮುಂಬೈ, ಸಿಎಸ್‌ಕೆ), ಎಂಎಸ್ ಧೋನಿ-5 (ಸಿಎಸ್‌ಕೆ), ಕೀರನ್ ಪೊಲಾರ್ಡ್ -5 (ಮುಂಬೈ), ಹಾರ್ದಿಕ್ ಪಾಂಡ್ಯ-5 (ಮುಂಬೈ, ಗುಜರಾತ್) ಟಾಪ್ 5ರ ಲಿಸ್ಟ್​ನಲ್ಲಿದ್ದಾರೆ. ಒಟ್ನಲ್ಲಿ ಪಾಂಡ್ಯ ಬ್ರದರ್ಸ್ ಆನ್ ಫೀಲ್ಡ್, ಆಫ್ ಫೀಲ್ಡ್ ಎರಡೂ ಕಡೆಯೂ ಸುದ್ದಿಯಲ್ಲಿದ್ದು ಪ್ರಶಸ್ತಿ ಬೇಟೆಯಲ್ಲೂ ಮುಂಚೂಣಿಯಲ್ಲಿದ್ದಾರೆ.

Shantha Kumari

Leave a Reply

Your email address will not be published. Required fields are marked *