ಕಾರಲ್ಲೇ ಪಾನ್ ಶಾಪ್ – ವಿಡಿಯೋ ವೈರಲ್ ಆದ ಬೆನ್ನಲ್ಲೇ ಹರಿದು ಬಂದ ಗ್ರಾಹಕರು

ಕಾರಲ್ಲೇ ಪಾನ್ ಶಾಪ್ – ವಿಡಿಯೋ ವೈರಲ್ ಆದ ಬೆನ್ನಲ್ಲೇ ಹರಿದು ಬಂದ ಗ್ರಾಹಕರು

ಹೊಸ ಹೊಸ ತಂತ್ರಜ್ಞಾನ ಬಂದಂತೆಲ್ಲಾ ಜನ ಅದಕ್ಕೆ ಸಮನಾಗಿ ಹೊಂದಿಕೊಂಡು ಹೋಗುತ್ತಾರೆ. ಅಷ್ಟೇ ಅಲ್ಲದೆ ಕೆಲವು ಮಂದಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೊಸ ಆವಿಷ್ಕಾರಗಳನ್ನು ಮಾಡುತ್ತಾರೆ. ಇಂತಹ ಸಾಕಷ್ಟು ವಿಡಿಯೋಗಳು ಪ್ರತಿದಿನ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತವೆ. ಇಂಥದ್ದೇ ಒಂದು ವಿಡಿಯೋ ಈಗ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್ ಆಗುತ್ತಿದೆ.

ಲಕ್ನೋದಲ್ಲಿ ವ್ಯಕ್ತಿಯೊಬ್ಬ ಹೊಸ ಆವಿಷ್ಕಾರ ಮಾಡಿ ಎಲ್ಲೆಡೆ ಸುದ್ದಿಯಾಗಿದ್ದಾರೆ. ತನ್ನ ಮಾರುತಿ 800 ಕಾರಿನ ಮೇಲ್ಬಾಗವನ್ನು ಕತ್ತರಿಸಿ ಪಾನ್ ಶಾಪ್ ಮಾಡಿಕೊಂಡಿದ್ದಾರೆ. ಪಾನ್ ಶಾಪ್ ಅನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ವ್ಯಾಪಾರ ನಡೆಸುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಬೆನ್ನ ಮೇಲೆ ಕತ್ತೆ ಹೊತ್ತು ಬಸ್ ಹತ್ತಿದ ವ್ಯಕ್ತಿ- ವಿಡಿಯೋ ವೈರಲ್

ಈ ಪಾನ್ ಶಾಪ್ ನ ಫೋಟೋ, ವಿಡಿಯೋಗಳನ್ನು ಟ್ವಿಟ್ಟರ್ ನಲ್ಲಿ  ಪೋಸ್ಟ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವೈರಲ್ ಆಗುತ್ತಿರುವ ವಿಡಿಯೋದಿಂದಾಗಿ ಹೆಚ್ಚಿನ ಮಂದಿ ಇಲ್ಲಿಗೆ ಬಂದು ಪಾನ್ ಖರೀದಿಸುತ್ತಿದ್ದಾರಂತೆ.

ಇದೊಂದು ವ್ಯಾಪಾರ ಮಾಡುವ ಹೊಸ ವಿಧಾನವೂ ಹೌದು ಎನ್ನಬಹುದು. ವ್ಯಾಪಾರಿಗಳು ತಮ್ಮ ಗ್ರಾಹಕರನ್ನು ಸೆಳೆಯಲು ಹೊಸ ಹೊಸ ರೀತಿಯಲ್ಲಿ ಆಲೋಚನೆ ಮಾಡುತ್ತಾರೆ ಅಷ್ಟೇ ಅಲ್ಲದೆ ಒಂದು ವೇಳೆ ಅಂಗಡಿ ಸ್ಥಳಾಂತರ ಮಾಡುವ ಸಂದರ್ಭ ಬಂದರೂ ಯಾವುದೇ ತೊಂದರೆ ಇಲ್ಲದೆ ಇನ್ನೊಂದು ಕಡೆಗೆ ಸುಲಭವಾಗಿ ಸ್ಥಳಾಂತರಿಸಬಹುದಾಗಿದೆ.

suddiyaana