ಸಾಲು ಸಾಲು ಸೋಲು.. ಅಂತ್ಯ ಆರಂಭ – PAK ಕ್ರಿಕೆಟ್ ಕಥೆ ಮುಗಿಯಿತಾ?

ದಶಕಗಳ ಬಳಿಕ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಹೋಸ್ಟ್ ಮಾಡಿದ್ದ ಪಾಕಿಸ್ತಾನದ ಮಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗಿತ್ತು. 2 ಪಂದ್ಯ ಆಡಿ ಎರಡನ್ನೂ ಸೋತು ಸುಣ್ಣವಾಗಿದ್ರು. ಹೀಗಾಗಿ ಸ್ಟಾರ್ ಆಟಗಾರರಿಗೆಲ್ಲಾ ಕೊಕ್ ಕೊಟ್ಟಿದ್ದ ಪಿಸಿಬಿ ಡೊಮೆಸ್ಟಿಕ್ ಪ್ಲೇಯರ್ಗಳನ್ನೆಲ್ಲಾ ಸೇರಿಸಿ ಹೊಸ ಟೀಂ ಕಟ್ಟಿತ್ತು. ನ್ಯೂಜಿಲೆಂಡ್ ವಿರುದ್ಧ ಟಿ-20 ಹಾಗೇ ಏಕದಿನ ಸರಣಿಯಲ್ಲಿ ಕಣಕ್ಕಿಳಿಸಿತ್ತು. ಬಟ್ ಈಗ ಎರಡೂ ಸರಣಿಗಳಲ್ಲೂ ಅಟ್ಟರ್ ಫ್ಲ್ಯಾಪ್ ಪರ್ಫಾಮೆನ್ಸ್ ನೀಡಿದ್ದಾರೆ.
ಇದನ್ನೂ ಓದಿ : RCB Vs GT.. ಕಳೆದ ಪಂದ್ಯದಂತೆಯೇ ಪ್ಲೇಯಿಂಗ್ 11 – ಗುಜರಾತ್ ತಂಡದಲ್ಲಿದ್ದಾರೆ ಡೇಂಜರಸ್ ಸ್ಪಿನ್ನರ್ಸ್!
ಸದ್ಯ ನ್ಯೂಜಿಲೆಂಡ್ನ ಸೂಪರ್ ಸ್ಟಾರ್ ಪ್ಲೇಯರ್ಗಳೆಲ್ಲಾ ಐಪಿಎಲ್ನಲ್ಲಿ ಬ್ಯುಸಿಯಾಗಿದ್ದಾರೆ. ಕೇನ್ ವಿಲಿಯಮ್ಸನ್, ಮಿಚೆಲ್ ಸ್ಯಾಂಟ್ನರ್, ರಚಿನ್ ರವೀಂದ್ರ, ಡೆವೊನ್ ಕಾನ್ವೆ, ಲಾಕಿ ಫರ್ಗುಸನ್, ಗ್ಲೆನ್ ಫಿಲಿಪ್ಸ್, ಮ್ಯಾಟ್ ಹೆನ್ರಿ, ಕೈಲ್ ಜೇಮಿಸನ್, ಟಾಮ್ ಲ್ಯಾಥಮ್, ವಿಲ್ ಯಂಗ್, ಇಶ್ ಸೋಧಿ ಎಲ್ರೂ ಐಪಿಎಲ್ ಆಡ್ತಿದ್ದಾರೆ. ಹೀಗಾಗಿ ಅಷ್ಟೇನು ಅನುಭವ ಇಲ್ಲದ ಆಟಗಾರರನ್ನೇ ಪಾಕ್ ವಿರುದ್ಧದ ಸರಣಿಗೆ ಕಣಕ್ಕಿಳಿಸಿತ್ತು. ಬಟ್ ಅನನುಭವಿಗಳ ಮುಂದೆಯೂ ಪಾಕ್ನ ಸ್ಟಾರ್ ಆಟಗಾರರು ಮಕಾಡೆ ಮಲಗಿದ್ದಾರೆ. ಈ ಹಿಂದೆ ನಡೆದಿದ್ದ 5 ಪಂದ್ಯಗಳ ಟಿ-20 ಸರಣಿಯಲ್ಲಿ ಪಾಕಿಸ್ತಾನ ನಾಲ್ಕು ಪಂದ್ಯಗಳನ್ನ ಸೋತಿತ್ತು. ಕಿವೀಸ್ ಪಡೆ 4-1 ಅಂತರದಿಂದ ಸರಣಿ ಕೈವಶ ಮಾಡಿಕೊಂಡಿತ್ತು. ಇದೀಗ ಮೂರು ಪಂದ್ಯಗಳ ಏಕದಿನ ಸರಣಿಯನ್ನ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಗೆದ್ದು ಬೀಗಿದೆ. ಮಾರ್ಚ್ 29ರಂದು ನಡೆದಿದ್ದ ಮೊದಲ ಏಕದಿನ ಪಂದ್ಯದಲ್ಲಿ ಕಿವೀಸ್ ಪಡೆ 344 ರನ್ ಕಲೆ ಹಾಕಿತ್ತು. ಆದ್ರೆ ಟಾರ್ಗೆಟ್ ಬೆನ್ನತ್ತಿದ್ದ ಪಾಕ್ ಆಟಗಾರರು 271 ರನ್ ಗಳಿಗೆ ಆಲೌಟ್ ಆಗಿದ್ರು. ಇನ್ನು ಏಪ್ರಿಲ್ 2ರಂದು ನಡೆದ 2ನೇ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ 50 ಓವರ್ಗಳಲ್ಲಿ 292 ರನ್ ಗಳಿಸಿತ್ತು. ಬಟ್ ಪಾಕಿಸ್ತಾನ 208 ರನ್ ಗಳಿಸುವಷ್ಟ್ರಲ್ಲೇ ಎಲ್ಲಾ ವಿಕೆಟ್ ಗಳು ಉರುಳಿ ಹೋಗಿವೆ. ಈ ಮೂಲಕ ಮೂರನೇ ಪಂದ್ಯಕ್ಕೂ ಮುನ್ನವೇ ಸೋತು ಸುಣ್ಣವಾಗಿದ್ದಾರೆ.
ಎರಡನೇ ಏಕದಿನ ಪಂದ್ಯದ ವೇಳೆ ಒಂದು ಇಂಟ್ರೆಸ್ಟಿಂಗ್ ವಿಚಾರ ನಡೆದಿದೆ. ಪಾಕಿಸ್ತಾನದ ಆಟಗಾರ ನಸೀಮ್ ಶಾ ಹೊಸ ದಾಖಲೆ ಸೃಷ್ಟಿಸಿದ್ದಾರೆ. 11ನೇ ಸ್ಲಾಟ್ನಲ್ಲಿ ಬ್ಯಾಟಿಂಗ್ ಮಾಡಿದ ನಸೀಮ್ ಅದ್ಭುತ ಅರ್ಧಶತಕ ಬಾರಿಸಿದ್ದಾರೆ. ಕೇವಲ 41 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರಾದರೂ, ಪಾಕಿಸ್ತಾನ ತಂಡವನ್ನು ಗೆಲ್ಲಿಸುವಲ್ಲಿ ವಿಫಲರಾದರು. 44 ಎಸೆತಗಳಲ್ಲಿ 4 ಫೋರ್, 4 ಸಿಕ್ಸ್ ಜೊತೆ 51 ರನ್ ಬಾರಿಸಿ ಔಟಾಗಿದ್ದಾರೆ. ಈ ಮೂಲಕ 11ನೇ ಕ್ರಮಾಂಕದಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಶ್ವದ 2ನೇ ಬ್ಯಾಟ್ಸ್ಮನ್ ಎಂಬ ದಾಖಲೆ ಬರೆದಿದ್ದಾರೆ. ಪಾಕಿಸ್ತಾನ ಪರ ನಸೀಮ್ 11ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಬಂದಿದ್ದರು. ಅವರು ಬೌಲರ್ ಆದರೂ, ತಂಡಕ್ಕೆ ಅವಶ್ಯವಾದ ರನ್‌ಗಳನ್ನು ಸಿಡಿಸಿದ್ರು. ಏಕದಿನ ಪಂದ್ಯದಲ್ಲಿ 11ನೇ ಸ್ಥಾನದಲ್ಲಿ ಅತಿ ದೊಡ್ಡ ಇನ್ನಿಂಗ್ಸ್ ಆಡಿದ ದಾಖಲೆ ಪಾಕಿಸ್ತಾನದ ಮೊಹಮ್ಮದ್ ಆಮಿರ್ ಹೆಸರಿನಲ್ಲಿದೆ. 2016ರಲ್ಲಿ ಇಂಗ್ಲೆಂಡ್ ವಿರುದ್ಧ 11ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುವಾಗ 58 ರನ್ ಗಳಿಸಿದ್ದರು.