ಪಾಕಿಸ್ತಾನದಲ್ಲಿ ತೀವ್ರವಾಗ್ತಿದೆ ಹಣದುಬ್ಬರ – ಆರ್ಥಿಕ ಬಿಕ್ಕಟ್ಟಿನಿಂದ ಜೀವನ ದುಸ್ತರ

ಪಾಕಿಸ್ತಾನದಲ್ಲಿ ತೀವ್ರವಾಗ್ತಿದೆ ಹಣದುಬ್ಬರ – ಆರ್ಥಿಕ ಬಿಕ್ಕಟ್ಟಿನಿಂದ ಜೀವನ ದುಸ್ತರ

ಪಾಕಿಸ್ತಾನದಲ್ಲಿ ಈಗ ಆರ್ಥಿಕ ಪರಿಸ್ಥಿತಿ ತೀವ್ರವಾಗಿ ಹದಗೆಡುತ್ತಿದೆ. ಹಣದುಬ್ಬರದಿಂದ ಸೃಷ್ಟಿಯಾಗಿರುವ ಬಿಕ್ಕಟ್ಟು ಮತ್ತಷ್ಟೂ ಬಿಗಡಾಯಿಸುವ ಆತಂಕ ಎದುರಾಗಿದೆ. ಜನರ ಜೀವನವೇ  ಬುಡಮೇಲಾಗುತ್ತಿದೆ. ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರುತ್ತಿದ್ದು, ಜನ ಅಸಹಾಯಕಾರಿದ್ದಾರೆ. ಪಾಕಿಸ್ತಾನದ ಗೋಧಿ ದಾಸ್ತಾನು ಇನ್ನೇನು ಮುಗಿಯುವ ಹಂತದಲ್ಲಿದೆ. ರಾವಲ್ಪಿಂಡಿಯಲ್ಲಿ ಒಂದು ಕೆಜಿ ಗೋಧಿ ಹಿಟ್ಟು 150 ರಿಂದ 200 ರೂಪಾಯಿಗೆ ಮಾರಾಟವಾಗುತ್ತಿದೆ. ಕರಾಚಿಯಲ್ಲಿ ಗೋಧಿ ಹಿಟ್ಟಿನ ಬೆಲೆ ಕೆ.ಜಿಗೆ 160 ರೂಪಾಯಿ ದಾಟಿದೆ. ಬಲೂಚಿಸ್ತಾನ ಪ್ರದೇಶದಲ್ಲಿ 20 ಕೆ. ಜಿ ಗೋದಿಹಿಟ್ಟಿಗೆ 3,100 ರೂಪಾಯಿ ತಲುಪಿದೆ. ಅದೇ ಸಮಯದಲ್ಲಿ ಡಜನ್ ಮೊಟ್ಟೆಯ ಬೆಲೆ 330 ರೂಪಾಯಿ ದಾಟಿದೆ.  ಕೋಳಿ ಮಾಂಸ ಕೆಜಿಗೆ 650 ರೂಪಾಯಿ, ಹಾಲು ಲೀಟರ್‌ಗೆ 190 ರೂಪಾಯಿ, ಎಣ್ಣೆ ಕೆಜಿಗೆ 580 ರೂಪಾಯಿಗಳಷ್ಟು ಮಾರಾಟವಾಗುತ್ತಿದೆ.

ಇದನ್ನೂ ಓದಿ:  ನಾಲ್ಕನೇ ಡೋಸ್ ಪಡೆಯುವ ಅಗತ್ಯವಿಲ್ಲ – ಗೊಂದಲಕ್ಕೆ ತೆರೆ ಎಳೆದ ಎಸ್‌ಜೆಐಸಿಎಸ್ಆರ್

ಆರ್ಥಿಕ ಸುಧಾರಣೆಗೆ ಪಾಕಿಸ್ತಾನದ ಸರ್ಕಸ್

ಪಾಕಿಸ್ತಾನ ಸರ್ಕಾರ ಹಣ ಉಳಿಸಲು ಸರ್ಕಸ್‌ ಮಾಡುತ್ತಿದೆ. ರಾತ್ರಿ 8 ಗಂಟೆಯ ನಂತರ ಮಾರುಕಟ್ಟೆಯನ್ನು ಮುಚ್ಚುವಂತೆ ಪಾಕಿಸ್ತಾನ ಸರ್ಕಾರ ಆದೇಶಿಸಿದೆ. ಇದಲ್ಲದೆ ರಾತ್ರಿ 8 ಗಂಟೆಯ ನಂತರ ಅಂಗಡಿಗಳು, ಶಾಪಿಂಗ್ ಮಾಲ್‌ಗಳೂ ಬಂದ್‌ ಆಗಲಿವೆ. ಹೀಗೆ ಮಾಡುವುದರಿಂದ ಶೇ.30ರಷ್ಟು ವಿದ್ಯುತ್ ಉಳಿತಾಯವಾಗುತ್ತದೆ ಎಂದು ಹೇಳಲಾಗಿದೆ. ಇದರಿಂದ 6,200 ಕೋಟಿ ರೂ. ಉಳಿತಾಯವಾಗಲಿದೆ.

ಹಣದುಬ್ಬರದಿಂದ ದಿವಾಳಿಯತ್ತ ಸಾಗುತ್ತಿರುವ ಪಾಕಿಸ್ತಾನದ ಈ ಸ್ಥಿತಿಗೆ ಪಾಕಿಸ್ತಾನವೇ ಕಾರಣವಾಯ್ತಾ ಎನ್ನಲಾಗ್ತಿದೆ. ಅಭಿವೃದ್ಧಿಗಿಂತ ಮಿಲಿಟರಿಗೆ ಹೆಚ್ಚು ಖರ್ಚು ಮಾಡಿರುವುದು ಕೂಡಾ ಆರ್ಥಿಕ ನಷ್ಟಕ್ಕೆ ಕಾರಣವಾಗ್ತಿದೆ ಎನ್ನಲಾಗ್ತಿದೆ.

ಜಾಗತಿಕ ನೆರವು ಬಯಸಿದ ಪಾಕಿಸ್ತಾನಕ್ಕೆ ಸೌದಿ ಅರೇಬಿಯಾದ ರಾಜಕುಮಾರ ನೆರವಿಗೆ ಬಂದಿದ್ದಾನೆ. ಮೊಹಮ್ಮದ್ ಬಿನ್ ಸಲ್ಮಾನ್ ಪಾಕಿಸ್ತಾನದ ನೆರವಿಗೆ ಧಾವಿಸಿದ್ದು, 10 ಶತಕೋಟಿ ಡಾಲರ್ ಹೂಡಿಕೆ ಮಾಡುವುದಾಗಿ ಘೋಷಿಸಿದ್ದಾರೆ. ಪಾಕಿಸ್ತಾನದ ಕೇಂದ್ರೀಯ ಬ್ಯಾಂಕ್‌ಗೆ 5 ಶತಕೋಟಿ ಡಾಲರ್ ಠೇವಣಿ ಇಡುವುದಾಗಿ ಪ್ರಕಟಿಸಿದ್ದಾರೆ.

suddiyaana