ಐಸಿಸಿ ಜೊತೆ PCB ಮಾತುಕತೆ – ಭಾರತ VS ಪಾಕ್ ಪಂದ್ಯ ನಡೆಯುತ್ತಾ?

ಐಸಿಸಿ ಜೊತೆ PCB ಮಾತುಕತೆ – ಭಾರತ VS ಪಾಕ್ ಪಂದ್ಯ ನಡೆಯುತ್ತಾ?

ಭಾರತ ಹಾಗೂ ಪಾಕಿಸ್ತಾನ ನಡುವಿನ  ಟಿ20 ಪಂದ್ಯ ನಡೆಯುತ್ತಾ ಇಲ್ವಾ ಅನ್ನೋದು ಯಕ್ಷ ಪ್ರಶ್ನೆಯಾಗಿದೆ. ಇದಕ್ಕೆ ಸಂಬಂಧ ಪಟ್ಟಂತೆ ದಿನಕ್ಕೊಂದು ಬೆಳವಣಿಗೆಗಳು ನಡೆಯುತ್ತವೆ. ಈಗ ಬರುತ್ತಿರುವ ಮಾಹಿತಿಗಳ ಪ್ರಕಾರ ಪಾಕಿಸ್ತಾನ ಕ್ರಿಕೆಟ್‌ ಬೋರ್ಡ್‌ ತನ್ನ ನಿರ್ಧಾರದಿಂದ ಯೂಟರ್ನ್‌ ಹೊಡೆಯುವ ಸಾಧ್ಯತೆ ಇದೆ.  ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದಾಗಿ ತಿಳಿಸಿತ್ತು. ಈಗ ಐಸಿಸಿ ಜೊತೆ  ಪಾಕ್ ಮಾತುಕತೆ ನೆಡೆಸಿದ್ದು, ಭಾರತ ಜೊತೆ ಪಂದ್ಯ ಆಡೋ ಸಾಧ್ಯತೆ ಹೆಚ್ಚಿದೆ.

ಭಾರತ ಹಾಗೂ ಪಾಕಿಸ್ತಾನ ತಂಡಗಳು ಎಲ್ಲವೂ ಅಂದುಕೊಂಡಂತೆ ನಡೆದರೆ, ಫೆಬ್ರವರಿ 15 ರಂದು ಕೊಲಂಬೊದಲ್ಲಿ ಮುಖಾಮುಖಿ ಆಗಲಿವೆ. ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಜೊತೆ ಪಿಸಿಬಿ ಮಾತುಕತೆ ನಡೆಸಿದೆ. ಪಿಸಿಬಿ ಮೂಲಗಳ ಪ್ರಕಾರ ಭಾರತದ ವಿರುದ್ಧ ಪಾಕ್‌ ಕಣಕ್ಕೆ ಇಳಿಯಲಿದೆ ಎಂದು ತಿಳಿದು ಬಂದಿದೆ. ಅಲ್ಲದೆ ಟೂರ್ನಿಯ ವೇಳಾಪಟ್ಟಿಯಂತೆ ಎರಡೂ ತಂಡಗಳು ಕಾದಾಟ ನಡೆಸಲಿವೆ.
ಇದನ್ನೂ ಓದಿ:   ವ್ಯಾಲೆಂಟೈನ್ಸ್ ಡೇಗೆ ನಂದಿಹಿಲ್ಸ್ ಹೋಗುವ ಪ್ಲ್ಯಾನ್ ಇದ್ಯಾ- ನಿಮ್ಮ ಪ್ಲ್ಯಾನ್ ಈಗಲೇ ಚೇಂಜ್ ಮಾಡಿ, ಯಾಕೆ ಗೊತ್ತಾ?

ಭಾರತದ ವಿರುದ್ಧದ ಪಂದ್ಯವನ್ನು ಬಾಯ್ಕಟ್‌ ಮಾಡುವ ಪಿಸಿಬಿ ನಿರ್ಧಾರದ ಬಗ್ಗೆ ಮಾತುಕತೆ ನಡೆಸಲು ಇಬ್ಬರು ಐಸಿಸಿ ಅಧಿಕಾರಿಗಳು ಲಾಹೋರ್‌ಗೆ ಬಂದಿದ್ದರು ಎಂದು ವರದಿಗಳಾಗಿವೆ. ಈ ವೇಳೆ ಪಿಸಿಬಿ ತನ್ನ ನಿರ್ಧಾರದಿಂದ ಹಿಂದೆ ಸರಿಯುವ ಧಾಟಿಯಲ್ಲಿ ಮಾತುಗಳನ್ನು ಆಡಿದ ಎಂದು ತಿಳಿದು ಬಂದಿದೆ. ಒಗ್ಗಟ್ಟನ್ನು ಪ್ರದರ್ಶಿಸಿದ್ದ ಪಾಕ್‌ ಭದ್ರತಾ ಕಾರಣಗಳನ್ನು ನೀಡಿ ಬಾಂಗ್ಲಾದೇಶ ಭಾರತಕ್ಕೆ ಪ್ರವಾಸವನ್ನು ಬೆಳೆಸದಿರಲು ನಿರ್ಧರಿಸಿತ್ತು. ಅಲ್ಲದೆ ಐಸಿಸಿಯಲ್ಲಿ ಸ್ಥಳ ಹಾಗೂ ಗುಂಪು ಬದಲಾವಣೆಗೆ ಬೇಡಿಕೆ ಇಟ್ಟಿತ್ತು. ಆದರೆ ಇದಕ್ಕೆಲ್ಲ ಆಸ್ಪದ ಕೊಡದ ಐಸಿಸಿ ಆಡುವುದಿದ್ದರೆ ಭಾರತದಲ್ಲಿ ಆಡಿ ಎಂದು ಸೂಚಿಸಿತ್ತು. ಬಾಂಗ್ಲಾ ಭಾರತಕ್ಕೆ ಪ್ರವಾಸ ಬೆಳೆಸುವುದಿಲ್ಲ ಎಂದು ಸ್ಪಷ್ಟ ಪಡಿಸಿದಾಗ ಬಾಂಗ್ಲಾ ತಂಡವನ್ನು ಟೂರ್ನಿಯಿಂದ ಹೊರಗಿಟ್ಟು, ಸ್ಕಾಟ್ಲೆಂಡ್ ತಂಡಕ್ಕೆ ಅವಕಾಶ ನೀಡಿತು. ಇನ್ನು ಬಾಂಗ್ಲಾದೇಶಕ್ಕೆ ಬೆಂಬಲವಾಗಿ ನಿಂತು ಒಗ್ಗಟ್ಟನ್ನು ಪ್ರದರ್ಶಿಸಬೇಕು ಎಂಬ ನಿಟ್ಟಿನಲ್ಲಿ ಪಾಕಿಸ್ತಾನ, ಭಾರತದ ವಿರುದ್ಧದ ಪಂದ್ಯವನ್ನು ಬಾಯ್ಕಟ್‌ ಮಾಡುವುದಾಗಿ ತಿಳಿಸಿತ್ತು.

ಪಾಕಿಸ್ತಾನ ಭಾರತದ ವಿರುದ್ಧದ ಪಂದ್ಯವನ್ನು ಬಾಯ್‌ಕಾಟ್‌ ಮಾಡುವುದಾಗಿ ಸ್ವತಃ ಪಾಕ್ ಪ್ರಧಾನಿ ಕ್ಯಾಬಿನೇಟ್‌ ಸಭೆಯಲ್ಲಿ ಮಂಡಿಸಿದರು. ಈ ತೀರ್ಮಾನ ಹೊರ ಬಿಳುತ್ತಿದ್ದಂತೆ ಹೊಸ ವಿವಾದ ಸೃಷ್ಟಿಕೊಂಡಿತು. ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಿದರೆ ಪಾಕ್‌ ದೊಡ್ಡ ಮೊತ್ತವನ್ನು ಭರಿಸಬೇಕಾಗುತ್ತದೆ ಎಂದು ಐಸಿಸಿ ಎಚ್ಚರಿಕೆ ನೀಡಿತ್ತು. ಲಾಹೋರ್‌ನಲ್ಲಿ ನಡೆದ ಸಭೆಯಲ್ಲಿ ಪಾಕ್‌ ತನ್ನ ಧೋರಣೆಯನ್ನು ಪರಾಮರ್ಶಿಸುತ್ತಿದೆ ಎಂದು ತಿಳಿದು ಬಂದಿದೆ.

Kishor KV

Leave a Reply

Your email address will not be published. Required fields are marked *