ವಿದೇಶಗಳಲ್ಲಿ PAK ಭಿಕ್ಷುಕರ ಬ್ಯುಸಿನೆಸ್ – ಪಾಕಿಸ್ತಾನಕ್ಕೆ ಬೆಗ್ಗರ್‌ಗಳಿಂದಲೇ INCOME
25 ಕೋಟಿ ಜನರಲ್ಲಿ 4 ಕೋಟಿ ಭಿಕ್ಷುಕರು!

ವಿದೇಶಗಳಲ್ಲಿ PAK ಭಿಕ್ಷುಕರ ಬ್ಯುಸಿನೆಸ್ – ಪಾಕಿಸ್ತಾನಕ್ಕೆ ಬೆಗ್ಗರ್‌ಗಳಿಂದಲೇ INCOME25 ಕೋಟಿ ಜನರಲ್ಲಿ 4 ಕೋಟಿ ಭಿಕ್ಷುಕರು!

ಪಾಕಿಸ್ತಾನ.. ಈ ಹೆಸರು ಕೇಳಿದ್ರೆ ಮೈಯಲ್ಲಾ ಉರಿಯುತ್ತೆ.. ಪದೇೆಪದೆ ನಮ್ಮ ದೇಶದ ಸುದ್ದಿಗೆ ಬರೋ ಪಾಕ್‌ಗೆ ನಾವು ಈಗಾಗಲೇ ಆಪರೇಷನ್ ಸಿಂಧೂರ್ ಮೂಲಕ ಡಿಟ್ಟಿ ಕೊಟ್ಟಿದ್ದೇವೆ. ಆದ್ರೂ ಪಾಕಿಸ್ತಾನಕ್ಕೆ  ಬುದ್ದಿ ಬಂದಿಲ್ಲ.   ಐಎಂಎಫ್‌ನಿಂದ ಹಾಗೂ ಬೇರೆ ಬೇರೆ ದೇಶದಿಂದ ಸಾಲ ಪಡೆದು ಭಯೋತ್ಪಾದಕರಿಗೆ ಭರ್ಜರಿ ಬಾಡೂಟ ಹಾಕುತ್ತಿರೋ ಪಾಕಿಸ್ತಾನ ತಮ್ಮ ದೇಶದ ಜನರನ್ನ  ಭಿಕ್ಷೆ ಬಿಡೋಕೆ ಬಿಟ್ಟಿದೆ.

 ಜನರನ್ನ ಭಿಕ್ಷೆ ಬಿಡೋಕೆ ಬಿಟ್ಟ ಪಾಕಿಸ್ತಾನ 

ಹೌದು ಪಾಕಿಸ್ತಾನದ ಜನ ಬಿಕ್ಷೆ ಬೇಡುವುದ್ದನ್ನ ಫುಲ್ ಟೈಂ ಬ್ಯುಸನೆಸ್ ಮಾಡುತ್ತಿದ್ದಾರೆ.. ಸರಿಯಾಗಿ ತಿಳ್ಕೊಳ್ಳಿ ಇವರು ಬಿಕ್ಷೆ ಬಿಡುತ್ತಿರುವುದು ಇವರ ದೇಶದಲ್ಲಿ ಮಾತ್ರ ಅಲ್ಲ ಬೇರೆ ದೇಶಕ್ಕೆ ಹೋಗಿ ಬಿಕ್ಷೆ ಬೇಡುತ್ತಿದ್ದಾರೆ.  ಸಾಮಾನ್ಯ ಜನರು ವಿದೇಶಗಳಿಗೆ ಹೋಗಿ ಭಿಕ್ಷೆ ಬೇಡುತ್ತಿದ್ದಾರೆ. ಬೇರೆ ಬೇರೆ ದೇಶಗಳಿಗೆ ಪಾಕಿಸ್ತಾನಿ ಭಿಕ್ಷುಕರ ಕಾಟ ದಿನೇದಿನೆ ಹೆಚ್ಚಾಗುತ್ತಿದ್ದು, ಪಾಕಿಸ್ತಾನ ಬಿಕ್ಷರನ್ನ ಓಡಿಸಬೇಕಾದ ಸ್ಥಿತಿದೆ ಆ ದೇಶಗಳು ತಲುಪಿವೆ.   ಒಂದು ಮಾಹಿತಿಯ ಪ್ರಕಾರ ಸೌದಿ ಅರೇಬಿಯಾ 16 ತಿಂಗಳಲ್ಲಿ 5 ಸಾವಿರಕ್ಕೂ ಅಧಿಕ ಪಾಕ್‌ ಭಿಕ್ಷುಕರನ್ನು  ಓಡಿಸಿದ್ರೆ, ಇರಾನ್‌ 3 ವರ್ಷಗಳಲ್ಲಿ 50,000ಕ್ಕೂ ಅಧಿಕ ಭಿಕ್ಷುಕರನ್ನು ಒದ್ದೋಡಿಸಿದೆ.

  25 ಕೋಟಿ ಜನರಲ್ಲಿ 4 ಕೋಟಿ ಭಿಕ್ಷಕರು!

ಪಾಕ್‌ನ ಒಟ್ಟು ಜನಸಂಖ್ಯೆ 25 ಕೋಟಿಯಷ್ಟಿದ್ದರೆ, ಇದರಲ್ಲಿ 4 ಕೋಟಿಯಷ್ಟು ಜನ ಭಿಕ್ಷಾಟನೆ ಮಾಡುತ್ತಿದ್ದಾರೆ. ಇಲ್ಲಿನ ಜನರಿಗೆ ಇದೇ ಒಂದು ಬ್ಯುಸನೆಸ್ ತರ ಆಗಿದೆ.. ಹೀಗಾಗಿ ಈ ಜಾಲ ದಿನದಿನಕ್ಕೂ ಹೆಚ್ಚಾಗುತ್ತಿದೆ. ತಮ್ಮ ದೇಶ ಅಲ್ಲದೇ ತಮ್ಮ ಬಿಕ್ಷಾಟನೆಯ ಜಾಬ್ ವಿದೇಶದಲ್ಲೂ ಮಾಡುತ್ತಿದ್ದಾರೆ. ಶಾಕಿಂಗ್ ವಿಷ್ಯ ಅಂದ್ರೆ  ಪಾಕಿಸ್ತಾನಿ ಭಿಕ್ಷುಕರ ವಾರ್ಷಿಕ ಆದಾಯ 42 ಶತಕೋಟಿ ಡಾಲರ್‌ ತಲುಪಿದೆ ಅಂತ ಇತ್ತೀಚಿನ ವರದಿಯೊಂದು ತಿಳಿಸಿದೆ. ಅಂದ್ರೆ ಪಾಕ್‌ನಲ್ಲಿ ಬಿಕ್ಷೆ ಬೆಡುವವರೇ ಶ್ರೀಮಂತರಾಗಿದ್ದಾರೆ.  ಪಾಕ್‌ನಲ್ಲಿ ಸುಮಾರು 4 ಕೋಟಿ ಜನಕ್ಕೆ ಭಿಕ್ಷಾಟನೆಯೇ ವೃತ್ತಿಯಾಗಿದ್ದು, ಒಬ್ಬ ಭಿಕ್ಷುಕನ ದೇಶದ ಸರಾಸರಿ ಆದಾಯ ದಿನಕ್ಕೆ 850 ಪಾಕಿಸ್ತಾನಿ ರೂಪಾಯಿಗಳಷ್ಟಿದೆ.  ಒಂದು ದಿನಕ್ಕೆ ಭಿಕ್ಷುಕರು 32 ಶತಕೋಟಿ ಪಾಕಿಸ್ತಾನಿ ರೂಪಾಯಿಯನ್ನು ಪ್ರತಿದಿನ ಭಿಕ್ಷೆಯಾಗಿ ಪಡೆಯುತ್ತಿದ್ದಾರೆ. ವಾರ್ಷಿಕವಾಗಿ 117 ಲಕ್ಷ ಕೋಟಿ ಪಾಕಿಸ್ತಾನಿ ರೂಪಾಯಿಗಳಷ್ಟಿದೆ. ಭಿಕ್ಷುಕರ ಆದಾಯ ಹೆಚ್ಚುತ್ತಿರುವುದರಿಂದ ಇತರ ಕಾರ್ಮಿಕರು ಅದರತ್ತಲೇ ಆಸಕ್ತಿ ತೋರುತ್ತಿದ್ದಾರೆ ಅನ್ನೋ ಮಾಹಿತಿ ತಿಳಿದು ಬಂದಿದೆ. ದೇಶದ ಪ್ರಮುಖ ನಗರ ಕೇಂದ್ರಗಳ ಬೀದಿಗಳಲ್ಲಿ ಸುಮಾರು 12 ಲಕ್ಷ ಮಕ್ಕಳು ಭಿಕ್ಷಾಟನೆಯಲ್ಲಿ ತೊಡಗಿದ್ದಾರಂತೆ.

ಪಾಕಿಸ್ತಾನದಲ್ಲಿ ಭಿಕ್ಷಾಟನೆಗೆ ಕಾರಣಗಳೇನು?

ಪಾಕಿಸ್ತಾನದಲ್ಲಿ ಭಿಕ್ಷಾಟನೆ ಹೆಚ್ಚಾಗಲು ಹಲವು ಕಾರಣಗಳಿವೆ. ಮುಖ್ಯವಾಗಿ ಆರ್ಥಿಕ ಹಿಂಜರಿತ, ಬಡತನ, ನಿರುದ್ಯೋಗ, ಮತ್ತು ರಾಜಕೀಯ ಅಸ್ಥಿರತೆಯಿಂದ ದೇಶದ ಆರ್ಥಿಕ ಸ್ಥಿತಿ ಹದಗೆಟ್ಟಿರುವುದರಿಂದ, ಅನೇಕ ಜನರು ಜೀವನೋಪಾಯಕ್ಕಾಗಿ ಭಿಕ್ಷಾಟನೆಯ ಮೊರೆ ಹೋಗುತ್ತಿದ್ದಾರೆ. ಅಲ್ಲದೆ, ಉದ್ಯೋಗಾವಕಾಶಗಳ ಕೊರತೆಯಿಂದಾಗಿ, ಅನೇಕ ಜನರು ಕೆಲಸವಿಲ್ಲದೆ ಭಿಕ್ಷೆ ಬೇಡಲು ಮುಂದಾಗುತ್ತಿದ್ದಾರೆ. ಈ ಎಲ್ಲಾ ಅಂಶಗಳು ಸೇರಿ ಪಾಕಿಸ್ತಾನದಲ್ಲಿ ಭಿಕ್ಷಾಟನೆ ಹೆಚ್ಚಾಗಲು ಕಾರಣವಾಗಿವೆ. ಅಲ್ಲದೇ ಇದೇ ಭಿಕ್ಷಾಟನೆಯ ಜಾಲ ವಿದೇಶಗಳಿಗೂ ವ್ಯಾಪಿಸಿದೆ.

ವಿದೇಶಗಳಿಗೆ ಪಾಕ್ ಭಿಕ್ಷುಕರ ಕಾಟ

ಪಾಕಿಸ್ತಾನ ಸರ್ಕಾರವು ಭಿಕ್ಷೆ ಬೇಡಲು ವಿದೇಶಗಳಿಗೆ ಪ್ರಯಾಣಿಸುವ ಜನರ ಡೇಟಾವನ್ನು ಸಂಗ್ರಹಿಸಿದೆ. ವಿದೇಶಗಳಲ್ಲಿ ಸಿಕ್ಕಿಬಿದ್ದ ಭಿಕ್ಷುಕರಲ್ಲಿ 90 ಪ್ರತಿಶತ ಪಾಕಿಸ್ತಾನ ಮೂಲದವರೇ ಆಗಿರುವುದರಿಂದ ಈ ಅಂಕಿಅಂಶಗಳನ್ನು ಸಂಗ್ರಹಿಸಲಾಗುತ್ತಿದೆ. ಇರಾಕ್‌ ಮತ್ತು ಸೌದಿ ರಾಯಭಾರಿಗಳು ಈ ಬಗ್ಗೆ ಪಾಕಿಸ್ತಾನ ಸರ್ಕಾರಕ್ಕೆ ದೂರು ನೀಡಿದ್ದಾರೆ. ಹೀಗಾಗಿ ಧಾರ್ಮಿಕ ತೀರ್ಥಯಾತ್ರೆ ನೆಪದಲ್ಲಿ ಭಿಕ್ಷಾಟನೆಗೆ ಸೌದಿ ಅರೇಬಿಯಾ, ಇರಾಕ್ ಮತ್ತು ಇರಾನ್‌ನಂತಹ ದೇಶಗಳಿಗೆ ಹೋಗುವ ಸಾವಿರಾರು ಭಿಕ್ಷುಕರ ಪಾಸ್‌ಪೋರ್ಟ್‌ಗಳನ್ನ ಪಾಕಿಸ್ತಾನ ಸರ್ಕಾರ ಅಮಾನತುಗೊಳಿಸಿದೆ.

Kishor KV