ಅಬ್ಬಬ್ಬಾ.. ಏಕಕಾಲಕ್ಕೆ 6 ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ! – ವೈದ್ಯ ಲೋಕಕ್ಕೆ ಅಚ್ಚರಿ!

ಪಾಕಿಸ್ತಾನದಲ್ಲಿ ಅಪರೂಪದಲ್ಲಿ ಅಪರೂಪದ ಘಟನೆಯೊಂದು ನಡೆದಿದೆ. ಮಹಾತಾಯಿಯೊಬ್ಬಳು ಒಂದರ ನಂತರ ಒಂದರಂತೆ ಏಕಕಾಲಕ್ಕೆ ಆರು ಮಕ್ಕಳಿಗೆ ಜನ್ಮ ನೀಡಿದ್ದು, ಇಡೀ ವೈದ್ಯ ಲೋಕಕ್ಕೆ ಅಚ್ಚರಿ ಮೂಡಿಸಿದೆ.
ಇದನ್ನೂ ಓದಿ: ಹುಬ್ಬಳ್ಳಿ – ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ದಿಂಗಾಲೇಶ್ವರ ಸ್ವಾಮೀಜಿ ಯೂಟರ್ನ್! – ನಾಮಪತ್ರ ವಾಪಸ್ ಪಡೆಯಲು ನಿರ್ಧಾರ?
ಹೌದು, ಪಾಕಿಸ್ತಾನದ ನಿವಾಸಿಯಾಗಿರುವಂತಹ ಮೊಹಮ್ಮದ್ ವಹೀದ್ ಎಂಬವರ ಪತ್ನಿ ಜೀನತ್ ವಹೀದ್ ಎಂಬ 27 ವರ್ಷದ ಮಹಿಳೆ ಒಂದು ಗಂಟೆಯೊಳಗೆ ಬರೋಬ್ಬರಿ ಆರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಪಾಕಿಸ್ತಾನದ ರಾವಲ್ಪಿಂಡಿಯ ಜಿಲ್ಲಾಸ್ಪತ್ರೆಯಲ್ಲಿ ಜೀನತ್ ನಾಲ್ಕು ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಶಿಶುಗಳನ್ನು ಇನ್ಕ್ಯುಬೇಟರ್ ಗಳಲ್ಲಿ ಇರಿಸಲಾಗಿದ್ದು, ತಾಯಿ ಮತ್ತು ಮಕ್ಕಳು ಆರೋಗ್ಯವಾಗಿದ್ದಾರೆ ಅಂತಾ ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ.
ಜೀನತ್ ಗೆ ಇದು ಚೊಚ್ಚಲ ಹೆರಿಗೆಯಾಗಿದೆ. ಏ.18 ರಂದು ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಅವರನ್ನು ಕುಟುಂಬಸ್ಥರು ರಾವಲ್ಪಿಂಡಿಯ ಜಿಲ್ಲಾಸ್ಪತ್ರೆಗೆ ದಾಖಲಿಸಿದರು. ನಂತರ ಏ.18 ರಂದು ಒಂದು ಗಂಟೆಯ ಅವಧಿಯೊಳಗೆ ಜೀನತ್ ಒಂದರ ನಂತರ ಒಂದರಂತೆ ಆರು ಮಕ್ಕಳಿಗೆ ಜನ್ಮವನ್ನು ನೀಡಿದ್ದಾರೆ. ಆರು ಮಕ್ಕಳು ಎರಡು ಪೌಂಡ್ ಗಳಿಗಿಂತ ಕಡಿಮೆ ತೂಕವನ್ನು ಹೊಂದಿವೆ. ಎಲ್ಲಾ ಶಿಶುಗಳು ಕೂಡಾ ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಇಂತಹ ಪ್ರಕರಣಗಳು ತೀರ ವಿರಳವಾಗಿ ಸಂಭವಿಸುತ್ತದೆ. ಪ್ರತಿ 4.5 ಬಿಲಿಯನ್ ಮಹಿಳೆಯರಲ್ಲಿ ಯಾರಾದರೂ ಒಬ್ಬರು ಹೀಗೆ ಏಕಕಾಲಕ್ಕೆ ಆರು ಮಕ್ಕಳಿಗೆ ಜನ್ಮವನ್ನು ನೀಡುತ್ತಾರೆ ಎಂದು ವೈದ್ಯರು ತಿಳಿಸಿದ್ದಾರೆ.