ದೇಶ ತೊರೆಯುತ್ತಿದ್ದಾರೆ ಪಾಕಿಸ್ತಾನಿ ಪ್ರಜೆಗಳು – 6 ತಿಂಗಳಲ್ಲಿ ಬರೋಬ್ಬರಿ 8 ಲಕ್ಷ ಜನ ಪಲಾಯನ!

ದೇಶ ತೊರೆಯುತ್ತಿದ್ದಾರೆ ಪಾಕಿಸ್ತಾನಿ ಪ್ರಜೆಗಳು – 6 ತಿಂಗಳಲ್ಲಿ ಬರೋಬ್ಬರಿ 8 ಲಕ್ಷ ಜನ ಪಲಾಯನ!

ಪಾಕಿಸ್ತಾನ ದಿನೇ ದಿನೇ ಆರ್ಥಿಕವಾಗಿ ಕುಸಿಯುತ್ತಿದೆ. ಹಣದುಬ್ಬರ, ನಿರುದ್ಯೋಗ, ರಾಜಕೀಯ ಅವ್ಯವಸ್ಥೆಯಿಂದ ಜನ ಕಂಗೆಟ್ಟಿದ್ದಾರೆ. ಹೀಗಾಗಿ ಪಾಕಿಸ್ತಾನದಲ್ಲಿ ಇತ್ತೀಚೆಗೆ ದಾಖಲೆಯ ಸಂಖ್ಯೆಯಲ್ಲಿ ಜನ ಪಲಾಯನ ಮಾಡ್ತಿದ್ದಾರೆ. ಕಳೆದ 6 ತಿಂಗಳಲ್ಲಿ ಬರೋಬ್ಬರಿ 8 ಲಕ್ಷ ಜನ ದೇಶ ತೊರೆದಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ – ಪೊಲೀಸರನ್ನು ಕೊಂದು ಶಸ್ತ್ರಾಸ್ತ್ರ ದೋಚಿದ ಕಿಡಿಗೇಡಿಗಳು

ಪಾಕಿಸ್ತಾನ ತೊರೆದ 8 ಲಕ್ಷ ಪ್ರಜೆಗಳ ಪೈಕಿ ಹೆಚ್ಚಾಗಿ ವೈದ್ಯರು, ಎಂಜಿನಿಯರ್‌ಗಳು, ಮಾಹಿತಿ ತಂತ್ರಜ್ಞಾನ ತಜ್ಞರು ಸೇರಿದಂತೆ ಬಹುತೇಕ ವಿದ್ಯಾವಂತರೇ ಇತರ ದೇಶಗಳಿಗೆ ಪರಾರಿಯಾಗುತ್ತಿದ್ದಾರೆ. ಪಾಕಿಸ್ತಾನ ಸ್ಟ್ಯಾಟಿಸ್ಟಿಕ್ಸ್ ಬ್ಯೂರೋ ಅಂಕಿಅಂಶದ ಪ್ರಕಾರ ಈ ವರ್ಷದ ಜೂನ್‍ವರೆಗೆ 8.32 ಲಕ್ಷ ಪಾಕಿಸ್ತಾನಿಯರು ತಮ್ಮ ದೇಶವನ್ನು ತೊರೆದಿದ್ದಾರೆ. ಅದರಲ್ಲಿ ಸುಮಾರು 4 ಲಕ್ಷ ಜನ ವಿದ್ಯಾವಂತರು ಹಾಗೂ ಉನ್ನತ ಹುದ್ದೆ ಹೊಂದಿದವರೇ ಆಗಿದ್ದಾರೆ ಎಂದು ಗೊತ್ತಾಗಿದೆ.

ಪಾಕಿಸ್ತಾನದಲ್ಲಿ ಭಾರತದ ಜೊತೆ ಗಡಿಯಾಗಿರುವ ಪಂಜಾಬ್ ಪ್ರಾಂತ್ಯದಿಂದಲೇ ಬಹುತೇಕ ಜನರು ದೇಶವನ್ನು ತೊರೆಯುತ್ತಿದ್ದಾರೆ. ಸುಮಾರು 27,000 ಜನ ಪಾಕ್ ಆಕ್ರಮಿತ ಕಾಶ್ಮೀರದಿಂದ (POK) ಬಂದವರು ಎನ್ನಲಾಗಿದೆ. 2021ರಲ್ಲಿ 2.25 ಲಕ್ಷ ಪಾಕಿಸ್ತಾನಿಗಳು ವಿದೇಶಕ್ಕೆ ತೆರಳಿದ್ದಾರೆ. ಇದು 2022ಕ್ಕೆ ಹೋಲಿಸಿದರೆ ವಲಸೆ ಹೋದವರ ಸಂಖ್ಯೆ 3 ಪಟ್ಟು ಹೆಚ್ಚಾಗುತ್ತದೆ. 2020ರಲ್ಲಿ 2.8 ಲಕ್ಷ ಜನ ದೇಶ ತೊರೆದಿದ್ದಾರೆ. ಗಮನಾರ್ಹ ವಿಚಾರ ಏನೆಂದರೆ 2020-21ರಲ್ಲಿ ಪ್ರಪಂಚ ಕೊರೊನಾದ ಸಂಕಷ್ಟ ಎದುರಿಸುತ್ತಿತ್ತು ಮಾತ್ರವಲ್ಲದೇ ಬಹುತೇಕ ದೇಶಗಳಲ್ಲಿ ಪ್ರಯಾಣದ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿತ್ತು.

suddiyaana