ಬಲೂಚ್ ಹೋರಾಟಗಾರರ ವಿರುದ್ಧ ಪಾಕ್ ಸೇನೆ ಶರುಣ?- 500 ಕ್ಕೂ ಹೆಚ್ಚು ಸೈನಿಕರನ್ನ ಪಾಂಜಾಬ್‌ಗೆ ಕಳುಹಿಸಿದ ಬಲೂಚ್ ಆರ್ಮಿ!?

ಭಾರತದ ವಿರುದ್ದ ಸೋತು ಸುಣ್ಣವಾದ ಪಾಕ್ ಈಗ ಮತ್ತೊಂದು ಸೋಲು ಅನುಭವಿಸಿದೆ. ಪಾಕಿಸ್ತಾನ ಸೇನೆಯ ಸುಮಾರು 500ಕ್ಕೂ ಅಧಿಕ ಸೈನಿಕರು ಬಲೂಚಿಸ್ತಾನ ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ಶರಣಾಗಿದ್ದಾರೆ ಅನ್ನೋ ಬಗ್ಗೆ ವರದಿಯಾಗಿದೆ. ಈ ಬಗ್ಗೆ ಬಲೂಚಿಸ್ತಾನ ಹೋರಾಟಗಾರ ಮೀರ್ ಯಾರ್ ಬಲೂಚ್ ಎಕ್ಸ್ ನಲ್ಲಿ ಮಾಹಿತಿ ನೀಡಿದ್ದಾರೆ. ಪಾಕಿಸ್ತಾನಿ ಸೇನೆ ಮತ್ತು ಪೊಲೀಸರ 500 ಕ್ಕೂ ಹೆಚ್ಚು ಸಿಬ್ಬಂದಿ ಬಲೂಚ್ ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ಹೋರಾಡಲು ನಿರಾಕರಿಸಿ ಬಲೂಚ್ ಸ್ವಾತಂತ್ರ್ಯ ಹೋರಾಟಗಾರರ ಎದುರು ಶರಣಾಗಿದ್ದಾರೆ ಎಂದು ಪೋಸ್ಟ್ ಹಾಕಲಾಗಿದೆ.
500 ಕ್ಕೂ ಹೆಚ್ಚು ಪಾಕಿಸ್ತಾನಿ ಸೈನಿಕರು ಮತ್ತು ಪೊಲೀಸ್ ಸಿಬ್ಬಂದಿಗಳು ಬಲೂಚ್ ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ಹೋರಾಡಲು ನಿರಾಕರಿಸಿದ್ದಾರೆ. ಹಾಗೇ ಅವರು ಪಂಜಾಬ್‌ಗೆ ವಾಪಸ್ ಆಗಿದ್ದಾರೆಂದು ತಿಳಿಸಿದ್ದಾರೆ. ಅಷ್ಟೇ ಅಲ್ಲ ಶರಣಾದ ಸೈನಿಕರನ್ನು ವಿಶೇಷ ಬಸ್ ಗಳ ಮೂಲಕ ಪಾಕಿಸ್ತಾನಕ್ಕೆ ಹಿಂದಿರುಗಿಸಲಾಗಿದ್ದು, ಅವರನ್ನು ಪಾಕಿಸ್ತಾನದಲ್ಲಿ ಸಂಭಾವ್ಯ ನ್ಯಾಯಾಲಯ-ಸಮರ ಪ್ರಕ್ರಿಯೆಗಳಿಗೆ ಒಡ್ಡುವ ಸಾಧ್ಯತೆ ಇದೆ ಎಂದು ಬಲೂಚ್ ಸ್ವಾತಂತ್ರ್ಯ ಹೋರಾಟಗಾರ ಮೀರ್ ಯಾರ್ ಬಲೂಚ್ ಟ್ವೀಟ್ ಮಾಡಿದ್ದಾರೆ.
93,000 ಸೈನಿಕರ ಸಂಬಂಧಿಕರು ಶರಣಾಗುತ್ತಿದ್ದಾರೆ. ಯಾಕಂದ್ರೆ ಪಾಕಿಸ್ತಾನ ಸೈನ್ಯವು ಬಲೂಚಿಸ್ತಾನದಲ್ಲಿ ಯುದ್ಧವನ್ನು ಸೋತಿದೆ ಎಂದು ಅವರಿಗೆ ತಿಳಿದಿದೆ. ಆದ್ದರಿಂದ ಬಲೂಚಿಸ್ತಾನ ಸ್ವಾತಂತ್ರ್ಯ ಹೋರಾಟಗಾರರಿಂದ ಸಾಯೋ ಬದಲು ತಮ್ಮದೇ ಸೈನ್ಯದ ಮುಂದೆ ಶರಣಾಗುವುದು ಉತ್ತಮ. ಬಲೂಚಿಸ್ತಾನದಲ್ಲಿ 500 ಪಂಜಾಬಿ ಸೈನಿಕರ ಶರಣಾದ ನಂತರ, ಈಗ ಅಕಾಲಿಕ ನಿವೃತ್ತಿಯ ಪ್ರವೃತ್ತಿ ಪ್ರಾರಂಭವಾಗಿದೆ. ಬಲೂಚಿಸ್ತಾನದಲ್ಲಿ ಬೀಡುಬಿಟ್ಟಿರುವ ಪಾಕಿಸ್ತಾನ ಮಿಲಿಟರಿ ಮತ್ತು ಪೊಲೀಸ್ ಸಿಬ್ಬಂದಿಯಲ್ಲಿ ಭಯದ ಭಾವನೆ ಹೆಚ್ಚುತ್ತಿದೆ ಎಂದು ಬಲೂಟ್ ಆರ್ಮಿ ಹೇಳಿದೆ.

ನೋಡಿರಿ

