ಹುಲಿ ಬಾಯಲ್ಲಿತ್ತು ಶೂ.. – ಬೋನಿನೊಳಗೆ ಹೋಗಿ ನೋಡಿದ ಸಿಬ್ಬಂದಿಗೆ ಕಾದಿತ್ತು ಬಿಗ್‌ ಶಾಕ್!

ಹುಲಿ ಬಾಯಲ್ಲಿತ್ತು ಶೂ.. – ಬೋನಿನೊಳಗೆ ಹೋಗಿ ನೋಡಿದ ಸಿಬ್ಬಂದಿಗೆ ಕಾದಿತ್ತು ಬಿಗ್‌ ಶಾಕ್!

ಕೆಲ ಪ್ರವಾಸಿಗರು ಮೃಗಾಲಯಕ್ಕೆ ಹೋದಾಗ ಕೆಲವೊಂದು ದುಸ್ಸಾಹಸ ಕೈಹಾಕುತ್ತಾರೆ. ಕ್ರೂರ ಪ್ರಾಣಿಗಳನ್ನು ಇಟ್ಟಿರುವ ಬೋನಿನೊಳೆ ಹೋಗುವುದು, ಪ್ರಾಣಿಗಳನ್ನು ಕಾಡಿಸಿ ಅವುಗಳಿಗೆ ಕೋಪ ಬರುವಂತೆ ಮಾಡಿ, ಅಪಾಯ ತಂದುಕೊಳ್ಳುತ್ತಾರೆ. ಇದೀಗ ಇಲ್ಲೊಬ್ಬ ಪ್ರವಾಸಿಗ ಗೊತ್ತಿದ್ದೋ, ಗೊತ್ತಿಲ್ಲದೆಯೋ ಹುಲಿಯ ಗೂಡಿನೊಳಗೆ ಹೋಗಿ ಅದರ ಬಾಯಿಗೆ ಆಹಾರವಾಗಿದ್ದಾನೆ.

ಇದನ್ನೂ ಓದಿ: ತೆಲಂಗಾಣದ 2 ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ರೇವಂತ್‌ ರೆಡ್ಡಿ

ಈ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಇಲ್ಲಿನ ಪಂಜಾಬ್‌ನ ಪೂರ್ವ ಪ್ರಾಂತ್ಯದ ಬಹವಾಲ್‌ಪುರದ ಶೇರ್‌ಬಾಗ್ ಮೃಗಾಲಯದಲ್ಲಿ ವ್ಯಕ್ತಿಯೊಬ್ಬ ಹುಲಿ ಇರುವ ಆವರಣಕ್ಕೆ ವ್ಯಕ್ತಿಯೊಬ್ಬ ಬಿದ್ದಿದ್ದಾನೆ. ಬೋನಿನಲ್ಲಿದ್ದ ಹುಲಿ ಆತನ ಮೇಲೆ ದಾಳಿ ಮಾಡಿ ಕೊಂದು ಹಾಕಿದೆ. ಮೃಗಾಲಯದ ಸಿಬ್ಬಂದಿ ಬೋನು ಶುಚಿಗೊಳಿಸುವ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ.

ಬುಧವಾರದಂದು ಎಂದಿನಂತೆ ಸಿಬ್ಬಂದಿ ಶುಚಿಗೊಳಿಸುತ್ತಿದ್ದ ಸಂದರ್ಭ ಹುಲಿಯ ಬಾಯಲ್ಲಿ ಶೂ ಕಾಣಿಸಿಕೊಂಡಿತ್ತು. ಹುಲಿಯ ಬಾಯಲ್ಲಿ ಶೂ ಕಾಣಿಸಿಕೊಳ್ಳುತ್ತಲೇ ಅನುಮಾನಗೊಂಡ ಸಿಬ್ಬಂದಿ ಗುಹೆಯೊಳಗೆ ಪರಿಶೀಲಿಸಿದ್ದಾರೆ. ಈ ವೇಳೆ ವ್ಯಕ್ತಿಯೊಬ್ಬನ ಶವ ಕಂಡುಬಂದಿದೆ. ಆದರೆ ಪ್ರವಾಸಿಗರು ಆಕಸ್ಮಿಕವಾಗಿ ಹುಲಿ ಇರುವ ಆವರಣದೊಳಗೆ ಬೀಳಲು ಸಾಧ್ಯವೇ ಇಲ್ಲ. ಅದರ ಗೇಟ್‌ಗಳು ಭದ್ರವಾಗಿದೆ. ಹೀಗಾಗಿ ವ್ಯಕ್ತಿ ತಾನಾಗಿಯೇ ಹುಲಿಯ ಆವರಣದೊಳಗೆ ಹೋಗಿರುವ ಶಂಕೆ ವ್ಯಕ್ತಗಿರುವುದಾಗಿ ಬಹವಾಲ್ಪುರದ ಹಿರಿಯ ಸರ್ಕಾರಿ ಅಧಿಕಾರಿ ಜಹೀರ್ ಅನ್ವರ್ ತಿಳಿಸಿದ್ದಾರೆ.

ಹುಲಿ ಇರುವ ಆವರಣ ಭದ್ರವಾಗಿದೆ. ಗುಹೆಯ ಹಿಂದೆ ಮೆಟ್ಟಿಲುಗಳಿವೆ. ಬಹುಶಃ ವ್ಯಕ್ತಿ ಅಲ್ಲಿಂದ ಜಿಗಿದಿರಬಹುದು. ಆದರೆ ಆತ ಯಾರು ಹಾಗೂ ಹೇಗೆ ಬಂದ ಎಂಬುದು ಇನ್ನೂ ನಿಖರವಾಗಿ ತಿಳಿದು ಬಂದಿಲ್ಲ. ಆತನ ಕಾಲು ಛಿದ್ರವಾಗಿದೆ. ಆತ ಸಾವನ್ನಪ್ಪಿ ಹಲವು ಗಂಟೆಗಳೇ ಆಗಿವೆ. ವಿಧಿವಿಜ್ಞಾನ ತಜ್ಞರು ಮೃತದೇಹವನ್ನು ಪರಿಶೀಲಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ವರದಿಗಳ ಪ್ರಕಾರ ಪಂಜಾಬ್‌ನ ವನ್ಯಜೀವಿ ವಿಭಾಗವು ಮೃಗಾಲಯವನ್ನು ನಡೆಸುತ್ತಿದೆ. ಒಬ್ಬ ವ್ಯಕ್ತಿ ಮೃಗಾಲಯದೊಳಗೆ ಪ್ರವೇಶಿಸಲು 50 ರೂ. ಟಿಕೆಟ್ ಖರೀದಿಸಬೇಕು. ಆದರೆ ಪಾಕಿಸ್ತಾನದ ಮೃಗಾಲಯಗಳಲ್ಲಿ ಪ್ರಾಣಿಗಳ ಕ್ಷೇಮವನ್ನು ಕಡೆಗಣಿಸಲಾಗುತ್ತಿದೆ ಎಂಬ ಆರೋಪ ಆಗಾಗ ಕೇಳಿಬಂದಿದೆ.

Shwetha M