ಮಹಿಳಾ ಕ್ರಿಕೆಟರ್ಸ್ ಗೂ PAK ಶಾಕ್ – ನಷ್ಟ ಭರಿಸಲು ಚೀಪ್ ಪ್ಲ್ಯಾನ್ ಬೇಕಿತ್ತಾ?

ಐಸಿಸಿ ಟೂರ್ನಿ ಆಯೋಜನೆ ಮಾಡಿ ಎಲ್ಲಾ ರಾಷ್ಟ್ರಗಳು ಲಾಭ ಮಾಡ್ಕೊಂಡ್ರೆ ಪಾಕಿಸ್ತಾನ ಮಾತ್ರ ನಷ್ಟದ ಸುಳಿಯಲ್ಲಿ ಬಿದ್ದು ಒದ್ದಾಡ್ತಿದೆ. ಚಾಂಪಿಯನ್ಸ್ ಟ್ರೋಫಿ ಮುಗ್ದು ನ್ಯೂಜಿಲೆಂಡ್ ವಿರುದ್ಧ ಸರಣಿ ಆಡ್ತಿರೋ ಪಾಕಿಸ್ತಾನ ಮತ್ತೆ ಸುದ್ದಿಯಲ್ಲಿದೆ. ಅದ್ರಲ್ಲೂ ಈ ಬಾರಿ ಆಟಗಾರರ ವೇತನ ಕಡಿತದಿಂದ ವಿಶ್ವ ಮಟ್ಟದಲ್ಲಿ ಟೀಕೆಗೆ ಗುರಿಯಾಗಿದೆ.
ಇದನ್ನೂ ಓದಿ : ಮುಂಬೈ ಕ್ಯಾಪ್ಟನ್ಸಿ ಒಪ್ಪದ ರೋಹಿತ್ ಶರ್ಮಾ – ಪಾಂಡ್ಯನಿಲ್ಲದ ಮೊದಲ ಪಂದ್ಯಕ್ಕೆ ಸೂರ್ಯಕುಮಾರ್ ನಾಯಕ
ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಯೋಜಿಸಿ ಲಾಸ್ ಮಾಡ್ಕೊಂಡಿರೋ ಪಿಸಿಬಿ ಇತ್ತೀಚೆಗಷ್ಟೇ ದೇಶೀಯ ಕ್ರಿಕೆಟ್ ಆಡುವ ಆಟಗಾರರ ವೇತವನ್ನು ಕಡಿತಗೊಳಿಸಿತ್ತು. ಈ ಹಿಂದೆ ಆಟಗಾರರಿಗೆ ಪಂದ್ಯ ಶುಲ್ಕವಾಗಿ 40,000 ರೂ. (PKR) ನೀಡಲಾಗುತ್ತಿತ್ತು. ಆದರೆ ಈ ಬಾರಿಯಿಂದ ದೇಶೀಯ ಟೂರ್ನಿಯಲ್ಲಿ ಕಣಕ್ಕಿಳಿಯುವ ಆಟಗಾರರಿಗೆ 10,000 ರೂ. ಪಂದ್ಯ ಶುಲ್ಕ ನೀಡಲು ಪಿಸಿಬಿ ನಿರ್ಧರಿಸಿದೆ. ಈ ವೇತನ ಕಡಿತದ ಸುದ್ದಿ ಬಗ್ಗೆ ಸಾಕಷ್ಟು ಚರ್ಚೆ ಆಗ್ತಿದೆ. ಆದ್ರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಪಿಸಿಬಿ ಮತ್ತೊಂದು ಹೆಜ್ಜೆಯನ್ನಿಟ್ಟಿದೆ. ಅದು ಸಹ ಮಹಿಳಾ ಕ್ರಿಕೆಟಿಗರ ವೇತನಕ್ಕೂ ಕತ್ತರಿ ಹಾಕುವ ಮೂಲಕ. ಪಾಕಿಸ್ತಾನದ ದೇಶೀಯ ಮಹಿಳಾ ಕ್ರಿಕೆಟಿಗರ ಪಂದ್ಯ ಶುಲ್ಕದಲ್ಲೂ ಕಡಿತಗೊಳಿಸಿದೆ. ಇಷ್ಟು ದಿನ 25,000 ಪಾಕಿಸ್ತಾನ ರೂಪಾಯಿ ನೀಡ್ತಿದ್ದ ಪಿಸಿಬಿ ಇನ್ಮುಂದೆ ಕೇವಲ 5 ಸಾವಿರ ನಿಡೋಕೆ ಮುಂದಾಗಿದೆ. ಅಷ್ಟೇ ಅಲ್ದೇ ಇನ್ಮುಂದೆ ದೇಶೀಯ ಟೂರ್ನಿ ಆಡುವ ಮಹಿಳಾ ಆಟಗಾರ್ತಿಯರಿಗೆ 20,000 ಪಾಕಿಸ್ತಾನ ರೂಪಾಯಿ ಮಾತ್ರ ನೀಡುವುದಾಗಿ ಪಿಸಿಬಿ ತಿಳಿಸಿದೆ. 20 ಸಾವಿರ ಪಿಕೆಆರ್ ಎಂದರೆ ಭಾರತೀಯ ರೂಪಾಯಿ ಮೌಲ್ಯ ಕೇವಲ 6000 ರೂಪಾಯಿಗಳು ಮಾತ್ರ. ಈ ಮೂಲಕ ಮಹಿಳಾ ಕ್ರಿಕೆಟಿಗರ ವೇತನಕ್ಕೂ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಕೈ ಹಾಕಿದೆ.
ಇಲ್ಲಿ ಪಿಸಿಬಿ ಸ್ಯಾಲರಿ ಮಾತ್ರ ಕಟ್ ಮಾಡ್ತಿಲ್ಲ. ಕೊಡೋ ಹಣವನ್ನೂ ತಿಂಗಳುಗಟ್ಟಲೆ ಕಾಯಿಸ್ತಿದೆ. ಪಾಕಿಸ್ತಾನ್ ದೇಶೀಯ ಸೀಸನ್ ಒಪ್ಪಂದಗಳ ಪಟ್ಟಿಯಲ್ಲಿ 10 ಪಾಕಿಸ್ತಾನಿ ಆಟಗಾರ್ತಿಯರು, 62 ಉದಯೋನ್ಮುಖ ಆಟಗಾರ್ತಿಯರು ಮತ್ತು 18 ಅಂಡರ್-19 ಆಟಗಾರ್ತಿಯರು ಇದ್ದಾರೆ. ಕ್ಯಾಪ್ಡ್ ಆಟಗಾರ್ತಿಯರ ಪಟ್ಟಿಯಲ್ಲಿ ನಿದಾ ದಾರ್ ಮತ್ತು ಆಲಿಯಾ ರಿಯಾಜ್ ಕೂಡ ಸೇರಿದ್ದಾರೆ. ಇದಾಗ್ಯೂ ಅವರು ಕೇಂದ್ರ ಒಪ್ಪಂದದಲ್ಲಿ ಇಲ್ಲ. ಅಲ್ದೇ ದೇಶೀಯ ಒಪ್ಪಂದಗಳನ್ನ ಮಾಡಿಕೊಂಡಿ ಆಟಗಾರ್ತಿಯರಿಗೆ ಸುಮಾರು ಒಂಬತ್ತು ತಿಂಗಳಿಂದ ವೇತನ ನೀಡಿಲ್ಲ. ಆಟಗಾರ್ತಿಯರಿಗೆ ಮಾಸಿಕ 35,000 ಪಾಕಿಸ್ತಾನಿ ರೂಪಾಯಿ ಅಂದ್ರೆ ಭಾರತೀಯ ಕರೆನ್ಸಿ ಪ್ರಕಾರ 10000 ರೂ.ಗಳ ವೇತನವನ್ನು ಮಾತ್ರ ನೀಡಲಾಗಿದೆ. ಇದು ಪಾಕಿಸ್ತಾನದಲ್ಲಿ ಕಾರ್ಮಿಕರಿಗೆ ನಿಗದಿಪಡಿಸಿದ ಕನಿಷ್ಠ ವೇತನಕ್ಕಿಂತಲೂ ಕಡಿಮೆ ಇದೆ ಅನ್ನೋದೇ ಅಚ್ಚರಿ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಈ ನಿರ್ಧಾರಗಳು ಮಹಿಳಾ ಕ್ರಿಕೆಟಿಗರ ತೊಂದರೆಗಳನ್ನು ಹೆಚ್ಚಿಸಿವೆ. ಅಲ್ಲದೆ ಕಡಿಮೆ ಸಂಬಳ ಮತ್ತು ಕಡಿಮೆ ಅವಕಾಶಗಳಿಂದಾಗಿ, ಅನೇಕ ಪ್ರತಿಭಾನ್ವಿತ ಆಟಗಾರ್ತಿಯರು ಕ್ರಿಕೆಟ್ ತೊರೆಯುವ ಸಾಧ್ಯತೆ ಹೆಚ್ಚಿದೆ.