ಭಾರತ Vs ಪಾಕ್ ನ್ಯೂಕ್ಲಿಯರ್ ವಾರ್? ಯಾರ ಬತ್ತಳಿಕೆಯಲ್ಲಿ ಹೆಚ್ಚಿದೆ ಅಣ್ವಸ್ತ್ರ?
ಈಗ ಯಾಕೆ ಪರೀಕ್ಷೆ, ಬಳಸಿದ್ರೆ ಏನಾಗುತ್ತೆ?

ಪಹಲ್ಗಾಮ್ ಅಟ್ಯಾಕ್ ಆದ ಮೇಲೆ ಭಾರತ ಮತ್ತು ಪಾಕ್ ನಡುವೆ ಯುದ್ಧದ ಸನ್ನಿವೇಶ ಆರಂಭ ಆಗಿತ್ತು. ನಂತ್ರ ಅದು ಅಲ್ಲೇ ಸೈಲೆಂಟ್ ಕೂಡ ಆಯ್ತು.. ಆದ್ರೆ ಎರಡು ದೇಶದ ಸಂಬಂಧ ಈಗ ಬೂದಿ ಮುಚ್ಚಿದ ಕೆಂಡದಂತೆ ಇದ್ದು ಯಾವಾಗ ಬೇಕಾದ್ರೂ ಧಗಧಗ ಅಂತ ಹೊತ್ತಿಕೊಳ್ಳಬಹುದು.. ಆದ್ರೆ ಈಗ ನ್ಯೂಕ್ಲಿಯರ್ ಬಗ್ಗೆ ಎರಡು ದೇಶದಲ್ಲಿ ಚರ್ಚೆ ಆಗ್ತಿದೆ. ಅದ್ರಲ್ಲೂ ಟ್ರಂಪ್ ಪಾಕಿಸ್ತಾನ ಪರಮಾಣು ಪರೀಕ್ಷೆ ಮಾಡ್ತಿದೆ ಅಂತ ಹೇಳಿದ ಮೇಲೆ ಭಾರತದ ಕಣ್ಣು ಕೂಡ ಪಾಕ್ ಮೇಲೆ ಬಿದ್ದಿದೆ. ಯಾಕಂದ್ರೆ ಪಾಕಿಸ್ತಾನದ ದೊಡ್ಡ ಶತ್ರು ಅಂದ್ರೆ ಅದು ಭಾರತ.. ಯುದ್ಧ ನಡೆದ್ರೆ ಪಾಕ್ ಮತ್ತು ಭಾರತದ ನಡುವೆಯೇ ನಡೆಯೋದು.. ಹೀಗಾಗಿ ಪಾಕ್ ಯಾಕೆ ನ್ಯೂಕ್ಲಿಯಕ್ ಟೆಸ್ಟ್ ಮಾಡ್ತಿದೆ? ಯಾರ ಬಳಿ ಹೆಚ್ಚು ಪರಮಾಣು ಬಾಂಬ್ ಇದೆ ಅನ್ನೋ ಚರ್ಚೆ ಜೋರಾಗಿ ನಡೆಯುತ್ತಿದೆ.
ಇದನ್ನೂ ಓದಿ: ಭದ್ರತಾ ಪಡೆ ಭಯೋತ್ಪಾದಕರ ನಡುವೆ ಫೈರಿಂಗ್ – ನಾಲ್ವರು ಕುಕಿ ಉಗ್ರರು ಫಿನಿಷ್
ಭಾರತ ಮತ್ತು ಪಾಕಿಸ್ತಾನಗಳೆರಡೂ ತಮ್ಮ ಬತ್ತಳಿಕೆಗಳಲ್ಲಿ ಸಾಕಷ್ಟು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿವೆ. 2025ರ ಮಾರ್ಚ್ FAS ವರದಿ ಭಾರತದ ಬಳಿ ಅಂದಾಜು 180 ಅಣ್ವಸ್ತ್ರ ಸಿಡಿತಲೆಗಳಿದ್ದರೆ, ಪಾಕಿಸ್ತಾನದ ಬಳಿ ಅಂದಾಜು 170 ಅಣ್ವಸ್ತ್ರ ಸಿಡಿತಲೆಗಳಿವೆ ಎಂದಿದೆ. ಇದು ಅಧಿಕೃತವಾಗಿ, ಅನಧಿಕೃತವಾಗಿ ಎಷ್ಟಿದೆ ಅನ್ನೋ ಲೆಕ್ಕ ಗೊತ್ತಿಲ್ಲ. ಭಾರತ ಪರಮಾಣು ಕಾರ್ಯಕ್ರಮ 1974ರಲ್ಲಿ ಆರಂಭಗೊಂಡಿದ್ದು, ಭಾರತದ ಬಳಿ 10ರಿಂದ 40 ಕಿಲೋಟನ್ ತನಕದ ಸಿಡಿತಲೆಗಳಿವೆ. ಕೆಲವು ಅಂದಾಜಿನ ಪ್ರಕಾರ, ಭಾರತದ ಬಳಿ 200 ಕಿಲೋಟನ್ ತನಕದ ಸಿಡಿತಲೆಗಳೂ ಇವೆ. ಇನ್ನು 1998ರಿಂದ ಪರಮಾಣು ರಾಷ್ಟ್ರವಾಗಿರುವ ಪಾಕಿಸ್ತಾನದ ಬಳಿ ಭಾರತದ ಬಳಿ ಭಾರತದ ಪ್ರಬಲ, ಸಾಂಪ್ರದಾಯಿಕ ಸೇನಾಪಡೆಗಳನ್ನು ಎದುರಿಸಲು 5ರಿಂದ 12 ಕಿಲೋಟನ್ ತನಕದ ಸಿಡಿತಲೆಗಳಿವೆ. ಉಭಯ ದೇಶಗಳೂ ತಮ್ಮ ಪರಮಾಣು ಶಸ್ತ್ರಾಸ್ತ್ರಗಳ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುತ್ತಿದ್ದು, 2023ರಲ್ಲಿ ಭಾರತ ತನ್ನ ಪರಮಾಣು ಕಾರ್ಯಕ್ರಮಗಳಿಗೆ 2.7 ಬಿಲಿಯನ್ ಡಾಲರ್ ವೆಚ್ಚ ಮಾಡಿದ್ದರೆ, ಪಾಕಿಸ್ತಾನ 1 ಬಿಲಿಯನ್ ಡಾಲರ್ ವಿನಿಯೋಗಿಸಿತ್ತು ಎಂದು ICAN ವರದಿ ಮಾಡಿದೆ. ಹೀಗಾಗಿ ಆಯಾದ ದೇಶದಲ್ಲಿ ಎಷ್ಟಿದೆ ಅನ್ನೋ ಅಧಿಕೃತ ಮಾಹಿತಿ ಇಲ್ಲ.. ಹಾಗಂತ ಇಲ್ಲಿ ಪಾಕ್ ಆಗಲಿ ಭಾರತ ಆಗಲಿ ಒಂದೇ ಒಂದು ಸಲ ಕೂಡ ನ್ಯೂಕ್ಲಿಯರ್ ಬಳಸಿಲ್ಲ, ಮುಂದೆ ಬೆಳಸಿದ್ರೆ ಸಾಕಷ್ಟು ಜನ ಜೀವವನ್ನ ಕಳೆದುಕೊಳ್ಳುತ್ತಾರೆ.. ಲಕ್ಷ ಅಲ್ಲ ಕೋಟಿ ಕೋಟಿ ಸಂಖ್ಯೆಯಲ್ಲಿರುತ್ತೆ.
ಒಂದು ವೇಳೆ ನ್ಯೂಕ್ಲಿಯರ್ ವಾರ್ ನಡೆದ್ರೆ ಆ ದುರಂತವನ್ನ ನಾವು ಕಲ್ಪನೆ ಕೂಡ ಮಾಡಿಕೊಳ್ಳುವುದ್ದಕ್ಕೆ ಆಗಲ್ಲ. ರುಟ್‌ಗಜ್ ವಿಶ್ವವಿದ್ಯಾಲಯದ 2019ರ ಅಧ್ಯಯನವೊಂದರ ಪ್ರಕಾರ, ಭಾರತ 100 ಅಣ್ವಸ್ತ್ರ ಸಿಡಿತಲೆಗಳನ್ನು ಬಳಸಿದರೆ, ಮತ್ತು ಪಾಕಿಸ್ತಾನ 150 ಅಣ್ವಸ್ತ್ರ ಸಿಡಿತಲೆಗಳನ್ನು ಬಳಸಿದರೆ, 50ರಿಂದ 125 ಮಿಲಿಯನ್ ಜನ ತಕ್ಷಣ ಪ್ರಾಣ ಕಳೆದುಕೊಳ್ತಾರಂತೆ. ಅಂದ್ರೆ 5 ಕೋಟಿಯಿಂದ 12 ಕೋಟಿ ಜನ ಸಾಯಬಹುದಂತೆ.
ನೋಡಿ ನಿಮ್ಗೆ ಒಂದು ಅಂದಾಜಿಗೆ ಹೇಳುವುದಾದ್ರೆ.. ಆಗಸ್ಟ್ 1945ರಲ್ಲಿ ಅಮೆರಿಕಾ ಜಪಾನಿನ ಹಿರೋಷಿಮಾ ಮತ್ತು ನಾಗಸಾಕಿ ಮೇಲೆ ಪ್ರಯೋಗಿಸಿದ ಬಾಂಬ್ ದಾಳಿಯೂ ಇದರ ಮುಂದೆ ಏನೂ ಅಲ್ಲ ಅನ್ಸುತ್ತೆ. ಹಿರೋಷಿಮಾ ಮೇಲೆ ಪ್ರಯೋಗಿಸಿದ ‘ಲಿಟ್ಲ್ ಬಾಯ್’ ಬಾಂಬ್ 15 ಕಿಲೋಟನ್ ಸಾಮರ್ಥ್ಯ ಹೊಂದಿದ್ದು, 70,000 – 1,40,000 ಜನರ ಸಾವಿಗೆ ಕಾರಣವಾಗಿತ್ತು. ಇನ್ನು ನಾಗಸಾಕಿ ಮೇಲೆ ಪ್ರಯೋಗಿಸಿದ ‘ಫ್ಯಾಟ್ ಮ್ಯಾನ್’ ಬಾಂಬ್ 20 ಕಿಲೋಟನ್ ಸಾಮರ್ಥ್ಯ ಹೊಂದಿದ್ದು, 35,000 – 74,000 ಜನರನ್ನು ಕೊಂದಿತ್ತು.
ಈ ಪ್ರಮಾಣವನ್ನು ನಾವು ಊಹಿಸಿಕೊಂಡು ಪಾಕಿಸ್ತಾನ ದೆಹಲಿಯ ಮೇಲೆ ನಾಗಸಾಕಿಗೆ ಪ್ರಯೋಗಿಸಿದಂತಹ 20 ಕಿಲೋಟನ್ ಪರಮಾಣು ಸಿಡಿತಲೆಯನ್ನು ಪ್ರಯೋಗಿಸುವುದನ್ನು ಊಹಿಸಿಕೊಳ್ಳಿ. ಈ ಸ್ಫೋಟ ಅಂದಾಜು 7 ಚದರ ಕಿಲೋಮೀಟರ್ ಪ್ರದೇಶವನ್ನು ನಾಶಪಡಿಸಿ, ಅತ್ಯಂತ ಜನಭರಿತವಾದ ನಗರದಲ್ಲಿ 5 ಲಕ್ಷದಿಂದ 10 ಲಕ್ಷ ಜನರು ಕ್ಷಣಾರ್ಧದಲ್ಲಿ ಸಾವಿಗೀಡಾಗುವಂತೆ ಮಾಡಬಲ್ಲದು. ಅದರೊಡನೆ, ಆಸ್ಪತ್ರೆಗಳು, ಮನೆಗಳು, ಮತ್ತು ಮೂಲಭೂತ ವ್ಯವಸ್ಥೆಗಳು ನಾಶಗೊಂಡು, ಹಲವಾರು ದಿನಗಳ ಕಾಲ ಬೆಂಕಿ ಉರಿಯಬಹುದು. ಈಗ, ಭಾರತ ಇದಕ್ಕೆ ಪ್ರತಿಕ್ರಿಯೆಯಾಗಿ ಪಾಕಿಸ್ತಾನದ ಕರಾಚಿಯ ಮೇಲೆ 40 ಕಿಲೋಟನ್ ಸಿಡಿತಲೆಯನ್ನು ಪ್ರಯೋಗಿಸುವುದನ್ನು ಕಲ್ಪಿಸಿಕೊಳ್ಳಿ. ಇದು 10 ಚದರ ಕಿಲೋಮೀಟರ್ ಪ್ರದೇಶವನ್ನು ಧ್ವಂಸಗೊಳಿಸಿ, 6ರಿಂದ 12 ಲಕ್ಷ ಜನರನ್ನು ಸಾಯಿಸಿ, ಪಾಕಿಸ್ತಾನದ ಅತಿದೊಡ್ಡ ನಗರವಾದ ಲಾಹೋರನ್ನು ಸ್ಮಶಾನ ಸದೃಶವಾಗಿಸಬಲ್ಲದು. ಇವು ಕೇವಲ ಒಂದೊಂದು ಸಿಡಿತಲೆಯ ಉದಾಹರಣೆಗಳಷ್ಟೇ. ಎಲ್ಲಾ ಅಣ್ವಸ್ತ್ರ ಸಿಡಿತಲೆಗಳು ಹಾಕಿದ್ರೆ ಡಬಲ್ ಡಬಲ್ ಆಗುತ್ತಾ ಹೋಗುತ್ತೆ. ಆಧುನಿಕ ಸಿಡಿತಲೆಗಳು 12ರಿಂದ 100 ಕಿಲೋಟನ್ ಇದ್ದು, ಭಾರಿ ಹಾನಿ ಮಾಡುತ್ತೆ. ಪರಮಾಣು ಸ್ಫೋಟ ಸಂಭವಿಸಿದಾಗ ಭೂಮಿ ಶಾಖ ಹೆಚ್ಚಾಗುತ್ತೆ. ಜನರು ಸುಟ್ಟ ಗಾಯಗಳಿಂದ ಮತ್ತು ಹೊಗೆಯನ್ನು ಉಸಿರಾಡಿ ಅದ್ರಿಂದ ಸಾಯುತ್ತಾರೆ. ದೇಹದಲ್ಲಿರೋ ಅಂಗಗಳು ಹಾನಿಯಾಗಿ ಸಾಯುತ್ತಾರೆ. ಒಂದು ಪಾಕ್ ಮತ್ತು ಭಾರತ ನಡುವೆ ಕೆಲ ಸೆಕೆಂಡುಗಳಲ್ಲೇ ದೆಹಲಿ ಅಥವಾ ಕರಾಚಿಯಂತಹ ನಗರಗಳಲ್ಲಿ ಲಕ್ಷಾಂತರ ಜನರು ಸಾವಿಗೀಡಾದರೆ, ಬದುಕುಳಿದವರು ಸುಟ್ಟ ಗಾಯಗಳಿಂದ, ವಿಕಿರಣದ ವಿಷದಿಂದ ನರಳುತ್ತಾರೆ. ಇದರ ಪರಿಣಾಮವಾಗಿ ವಾಂತಿ, ಕೂದಲು ಉದುರುವುದು ಮತ್ತು ಅಂಗಾಂಗ ವೈಫಲ್ಯ ಕಾಣಿಸಿಕೊಳ್ಳಬಹುದು.

ನೋಡಿರಿ

