ಪಾಕ್ ಗೆ ಇದೆಂಥಾ ದುಸ್ಥಿತಿ? – ಟೆಸ್ಟ್ ಸರಣಿ ಟಿಕೆಟ್ ₹15

ಸ್ಟೇಡಿಯಮ್ ನಲ್ಲಿ ಕುಳಿತು ಕ್ರಿಕೆಟ್ ಮ್ಯಾಚ್ ನೋಡೋದೇ ಚೆಂದ.. ಎರಡು ರಾಷ್ಟ್ರಗಳ ನಡುವಿನ ಕದನ ಅಂದ್ರಂತೂ ಅದ್ರ ಕ್ರೇಜೇ ಬೇರೆ. ಆಟಗಾರರ ಅಬ್ಬರ, ಅಭಿಮಾನಿಗಳ ಕೂಗಾಟ, ಸಿಕ್ಸ್, ಫೋರ್, ಔಟ್ ಆದಾಗೆಲ್ಲಾ ಮೈದಾನದಲ್ಲಿ ಕೇಳೋ ಆ ಸದ್ದು ಎಂಥವ್ರನ್ನೂ ಥ್ರಿಲ್ ಆಗುವಂತೆ ಮಾಡುತ್ತೆ. ಬಟ್ ಎಷ್ಟೋ ಜನರಿಗೆ ಕ್ರೀಡಾಂಗಣಕ್ಕೆ ಹೋಗಿ ಪಂದ್ಯ ನೋಡೋಕೆ ಆಗಲ್ಲ. ಟಿಕೆಟ್ ರೇಟ್ ದುಬಾರಿ ಅಂತಾ ಸುಮಾರು ಜನ ಮೈದಾನಗಳಿಗೆ ಹೋಗಲ್ಲ. ಬಟ್ ಈ ಎರಡು ರಾಷ್ಟ್ರಗಳ ನಡುವಿನ ಅಂತಾರಾಷ್ಟ್ರೀಯ ಪಂದ್ಯಕ್ಕೆ ಜಸ್ಟ್ ಫಿಫ್ಟೀನ್ ರುಪೀಸ್. ಯೆಸ್ ನೀವು ಕೇಳಿಸಿಕೊಂಡಿದ್ದು ಕರೆಕ್ಟಾಗೇ ಇದೆ. ಬರೀ ಹದಿನೈದು ರೂಪಾಯಿ. ಪಾಕಿಸ್ತಾನ ಮತ್ತು ಬಾಂಗ್ಲಾ ನಡುವಿನ ಸರಣಿಯ ಟಿಕೆಟ್ ರೇಟ್ ಬರೀ 15 ರೂಪಾಯಿ. ಜೊತೆಗೆ ಒಂದಷ್ಟು ಆಫರ್ಗಳೂ ಇವೆ. ಇಂಟರ್ನ್ಯಾಷನಲ್ ಮ್ಯಾಚ್ಗೆ ಇಷ್ಟು ಕಡಿಮೆ ಮೊತ್ತಕ್ಕೆ ಟಿಕೆಟ್ ರೇಟ್ ಇಟ್ಟಿದ್ದೇಕೆ? ಪಾಕಿಸ್ತಾನಕ್ಕೆ ಯಾಕೆ ಇಂಥಾ ಸ್ಥಿತಿ ಬಂತು ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ನಾಡಹಬ್ಬ ದಸರಾಗೆ ದಿನಗಣನೆ ಆರಂಭ – ಈ ಬಾರಿಯ ಜಂಬೂ ಸವಾರಿಯಲ್ಲಿ ಗಜಪಡೆಗೆ ಸಾರಥಿ ಯಾರು?
ದೇಶದಲ್ಲಿನ ರಾಜಕೀಯ ಬಿಕ್ಕಟ್ಟಿನ ನಡುವೆಯೂ ಬಾಂಗ್ಲಾದೇಶ ತಂಡ ಪಾಕಿಸ್ತಾನ ಪ್ರವಾಸಕ್ಕೆ ಸಜ್ಜಾಗುತ್ತಿದೆ. ಈಗಾಗ್ಲೇ ತಂಡವನ್ನ ಪ್ರಕಟ ಮಾಡಿದ್ದು, ಯುವ ಆಟಗಾರ ನಜ್ಮುಲ್ ಹುಸೇನ್ ಶಾಂತೊ ತಂಡವನ್ನು ಮುನ್ನಡೆಸಲಿದ್ದಾರೆ. ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್ಷಿಪ್ ಟೂರ್ನಿಯ 3ನೇ ಆವೃತ್ತಿಯ ಭಾಗವಾಗಿ ಆತಿಥೇಯ ಪಾಕಿಸ್ತಾನ ಎದುರು ಬಾಂಗ್ಲಾದೇಶ ತಂಡ 2 ಪಂದ್ಯಗಳ ಟೆಸ್ಟ್ ಕ್ರಿಕೆಟ್ ಸರಣಿಯನ್ನು ಆಡಲಿದೆ. ಉಭಯ ತಂಡಗಳ ನಡುವಿನ ಮೊದಲ ಟೆಸ್ಟ್ ರಾವಲ್ಪಿಂಡಿಯಲ್ಲಿ ಆಗಸ್ಟ್ 21 ಮತ್ತು 25 ರ ನಡುವೆ ನಡೆಯಲಿದೆ. ಹಾಗೇ ಎರಡನೇ ಪಂದ್ಯವು ಕರಾಚಿಯಲ್ಲಿ ಆಗಸ್ಟ್ 30 ರಿಂದ ಸೆಪ್ಟೆಂಬರ್ 3 ರ ನಡುವೆ ನಡೆಯಲಿದೆ. ಈ ಎರಡೂ ಟೆಸ್ಟ್ ಪಂದ್ಯಗಳನ್ನ ವೀಕ್ಷಿಸಲು ಹೆಚ್ಚು ಜನ ಸ್ಟೇಡಿಯಮ್ಗಳಿಗೆ ಬರುವಂತೆ ಮಾಡಲು ಪಾಕ್ ಕ್ರಿಕೆಟ್ ಮಂಡಳಿ ದೊಡ್ಡ ಆಫರ್ ಅನ್ನೇ ಕೊಟ್ಟಿದೆ.
ಟಿಕೆಟ್ ರೇಟ್ ಜಸ್ಟ್ 15 ರೂಪಾಯಿ!
ಪಾಕಿಸ್ತಾನ್ ಮತ್ತು ಬಾಂಗ್ಲಾದೇಶದ ನಡುವಿನ ಟೆಸ್ಟ್ ಸರಣಿಗೆ ಪಾಕಿಸ್ತಾನವೇ ಈ ಸರಣಿಗೆ ಆತಿಥ್ಯ ವಹಿಸುತ್ತಿದೆ. ಆದ್ರೆ ಪಂದ್ಯಗಳನ್ನ ನೋಡೋಕೆ ಜನ ಬರ್ತಾರೋ ಇಲ್ವೋ ಅನ್ನೋ ಭಯ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಕಾಡ್ತಿದೆ. ಕಳೆದ ಒಂದು ವರ್ಷದಿಂದ ಪಾಕಿಸ್ತಾನ ಆಟಗಾರರ ಪಂದ್ಯವನ್ನು ನೋಡೋಕೆ ಅಲ್ಲಿನ ಜನ ಸ್ಟೇಡಿಯಮ್ಗಳ ಕಡೆ ಮುಖ ಮಾಡ್ತಿಲ್ಲ. ಹೀಗಾಗಿಯೇ ಟೆಸ್ಟ್ ಪಂದ್ಯಗಳ ಟಿಕೆಟ್ ದರವನ್ನು ಇಳಿಕೆ ಮಾಡಿದೆ. ಇಳಿಕೆ ಮಾಡಿದೆ ಅನ್ನೋದಕ್ಕಿಂಥ ಒಂಥರಾ ಎಂಟ್ರಿ ಫೀಸ್ ಅನ್ನುವಂತೆ ಕೇವಲ 15 ರೂಪಾಯಿ ತಗೊಳ್ತಿದೆ ಅನ್ಬೋದೇನೋ. ಪಾಕಿಸ್ತಾನ್ ಮತ್ತು ಬಾಂಗ್ಲಾದೇಶ್ ನಡುವಣ ಟೆಸ್ಟ್ ಪಂದ್ಯದ ಟಿಕೆಟ್ ದರವನ್ನು ಘೋಷಿಸಲಾಗಿದೆ. ಜನರಲ್ ಟಿಕೆಟ್ ಅನ್ನು ಕೇವಲ 15 ರೂ. ಗೆ ಮಾರಾಟ ಮಾಡಲಾಗುತ್ತಿದೆ. 2024ರ ಪಾಕಿಸ್ತಾನ್ ಸೂಪರ್ ಲೀಗ್ ವೇಳೆ ಸ್ಟೇಡಿಯಂಗಳಲ್ಲಿ ಪ್ರೇಕ್ಷಕರೇ ಇರ್ಲಿಲ್ಲ. ಅದರಲ್ಲೂ ಎಲಿಮಿನೇಟರ್ ಅಥವಾ ಫೈನಲ್ ಪಂದ್ಯಗಳನ್ನು ವೀಕ್ಷಿಸಲು ಅಭಿಮಾನಿಗಳು ನಿರೀಕ್ಷಿತ ಮಟ್ಟದಲ್ಲಿ ಆಗಮಿಸಿರಲಿಲ್ಲ. ಇನ್ನು ಏಷ್ಯಾಕಪ್ ಕೂಡ ಖಾಲಿ ಸ್ಟೇಡಿಯಂಗಳಿಗೆ ಸಾಕ್ಷಿಯಾಗಿತ್ತು. ಹೀಗಾಗಿಯೇ ಟೆಸ್ಟ್ ಪಂದ್ಯಗಳಿಗೂ ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗುವ ಆತಂಕ ಪಿಸಿಬಿಯನ್ನ ಕಾಡ್ತಿದೆ. ಟಿಕೆಟ್ ದರ ಪಾಕಿಸ್ತಾನ ಕರೆನ್ಸಿ ಪ್ರಕಾರ 50 ರೂಪಾಯಿ ಇದ್ರೆ ಭಾರತೀಯ ಕರೆನ್ಸಿ ಪ್ರಕಾರ 15 ರೂಪಾಯಿ ಮಾತ್ರವೇ ಇದೆ. ಇದೂ ಸಾಲದು ಎಂಬಂತೆ ಪಂದ್ಯಗಳ ಐದು ದಿನದಾಟದ ಟಿಕೆಟ್ ಖರೀದಿಸೋರಿಗೆ ವಿಶೇಷ ರಿಯಾಯಿತಿಯನ್ನು ಸಹ ಘೋಷಿಸಿದೆ. ಐದು ದಿನಗಳವರೆಗೆ ಕ್ರಿಕೆಟ್ ವೀಕ್ಷಿಸಲು ಬಯಸಿದರೆ, ಅಂಥವ್ರು ಕೇವಲ 72 ರೂಪಾಯಿ ಪಾಸ್ ನೀಡಲಾಗುತ್ತಿದೆ.ಈ ಮೂಲಕ ಟೆಸ್ಟ್ ಕ್ರಿಕೆಟ್ಗೆ ಪ್ರೇಕ್ಷಕರನ್ನು ಕರೆತರಲು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಪ್ಲ್ಯಾನ್ ರೂಪಿಸಿದೆ. ಹಿಂಗಾದ್ರೂ ಬಾಂಗ್ಲಾದೇಶ್ ಮತ್ತು ಪಾಕಿಸ್ತಾನ್ ನಡುವಣ ಟೆಸ್ಟ್ ಪಂದ್ಯದ ವೇಳೆ ಸ್ಟೇಡಿಯಂ ಭರ್ತಿಯಾಗಲಿ ಅಂತಾ ಪ್ಲ್ಯಾನ್ ಮಾಡಿದೆ. ಟೆಸ್ಟ್ ಸರಣಿಯಲ್ಲಿ ಬಾಂಗ್ಲಾ ವಿರುದ್ಧ ಮೇಲುಗೈ ಸಾಧಿಸಿರೋ ಪಾಕಿಸ್ತಾನ ಈ ಬಾರಿಯೂ ಅದನ್ನೇ ನಿರೀಕ್ಷೆ ಮಾಡ್ತಿದೆ. ಒಟ್ಟಾರೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವೆ 13 ಟೆಸ್ಟ್ ಪಂದ್ಯಗಳು ನಡೆದಿವೆ. ಇದರಲ್ಲಿ ಪಾಕಿಸ್ತಾನ 12 ಪಂದ್ಯಗಳನ್ನು ಗೆದ್ದುಕೊಂಡಿದ್ದರೆ, ಬಾಂಗ್ಲಾದೇಶ ತಂಡ ಒಂದೇ ಒಂದು ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಮೊದಲೇ ಆರ್ಥಿಕವಾಗಿ ದಿವಾಳಿಯಾಗಿರೋ ಪಾಕಿಸ್ತಾನದಲ್ಲಿ ದಿನಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿ ಅಲ್ಲಿನ ಜನ ಒಂದೊತ್ತಿನ ಊಟಕ್ಕೂ ಪರದಾಡ್ತಿದ್ದಾರೆ. ಆದ್ರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅದೆಂಥಾ ಪರಿಸ್ಥಿತಿಗೆ ತಲುಪಿದೆ ಅನ್ನೋದಕ್ಕೆ ಪಾಕ್ ಮತ್ತು ಬಾಂಗ್ಲಾ ನಡುವಿನ ಟಿಕೆಟ್ ಬೆಲೆಯೇ ಸಾಕ್ಷಿ. ಜಸ್ಟ್ 15 ರೂಪಾಯಿಗೆ ಟಿಕೆಟ್ ಬೆಲೆ ಫಿಕ್ಸ್ ಮಾಡಿದ್ದು ಜನರನ್ನ ಮೈದಾನಕ್ಕೆ ಕರೆಸಿಕೊಳ್ಳೋ ಮಾಸ್ಟರ್ ಪ್ಲ್ಯಾನ್ ಮಾಡಿದೆ. ಇಂಥಾ ಪಾಕಿಸ್ತಾನ 2025ಕ್ಕೆ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಆತಿಥ್ಯ ವಹಿಸ್ತಾ ಇದೆ. ಅದೂ ಸಾಲದು ಅಂತಾ ಭಾರತ ತಂಡ ಕ್ರಿಕೆಟ್ ಆಡೋಕೆ ಪಾಕಿಸ್ತಾನಕ್ಕೆ ಬರ್ಲೇಬೇಕು ಅಂತಾ ಪಟ್ಟು ಹಿಡಿದು ಕುಳಿತಿದ್ದಾರೆ. ಬಹುಶಃ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಜನರನ್ನ ಕರೆಸೋಕೆ ಫುಲ್ ಫ್ರೀ ಆಫರ್ ಘೋಷಣೆ ಮಾಡಿದ್ರೂ ಮಾಡ್ಬೋದೋ ಏನೋ.