ಪಾಕ್ ಮಿ*ಲಿಟರಿ ವೇಸ್ಟ್- ಪಾಕಿಸ್ತಾನದೊಳಗೆ ತಾಲಿಬಾನ್ ವಿಧ್ವಂಸ
ಅಧಿಕಾರಿಗಳ ಕಿಡ್ನ್ಯಾಪ್, ಇಬ್ಭಾಗ ಫಿಕ್ಸ್

ಪಾಕ್ ಮಿ*ಲಿಟರಿ ವೇಸ್ಟ್- ಪಾಕಿಸ್ತಾನದೊಳಗೆ ತಾಲಿಬಾನ್ ವಿಧ್ವಂಸಅಧಿಕಾರಿಗಳ ಕಿಡ್ನ್ಯಾಪ್, ಇಬ್ಭಾಗ ಫಿಕ್ಸ್

ಪಾಕಿಸ್ತಾನದೊಳಗೆ ಉಗ್ರರು ನುಗ್ಗಿ ಅಧಿಕಾರಿಗಳನ್ನ ಅಪಹರಿಸಿಕೊಂಡ್ರು ಹೋದ್ರು ತನ್ನ ಕೈಯಲ್ಲಿ ಏನೂ ಮಾಡದ ಹೀನಾಯ ಸ್ಥಿತಿಗೆ ಪಾಕಿಸ್ತಾನ ಬಂದು ತಲುಪಿದೆ. ನಿಜಕ್ಕೂ ಪಾಕಿಸ್ತಾನದ ಮಿಲಿಟರಿ ಏನ್ ಮಾಡ್ತಿದೆ? ತನ್ನ ದೇಶವನ್ನ ಉಗ್ರರಿಗೆ ಬಿಟ್ಟು ಕೊಡ್ತಿದ್ಯಾ ಅನ್ನೋ ಅನುಮಾನ ಹುಟ್ಟು ಹಾಕಿದೆ.. ಅಂದಹಾಗೇ  ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ ಟಿಟಿಪಿ ಬಂಡುಕೋರರು ಪಾಕಿಸ್ತಾನ ಪರಮಾಣು ಶಕ್ತಿ ಆಯೋಗದ 18 ಉದ್ಯೋಗಿಗಳನ್ನು ಅಪಹರಿಸಿದ್ದಾರೆ. ಖಬುಲ್ ಖೇಲ್ ಅಣುಶಕ್ತಿ ಗಣಿಗಾರಿಕೆ ಯೋಜನಾ ಸ್ಥಳದ ಕಡೆಗೆ ಪ್ರಯಾಣಿಸುತ್ತಿದ್ದ ಉದ್ಯೋಗಿಗಳನ್ನು ಭಾರಿ ಶಸ್ತ್ರಸಜ್ಜಿತ ಉಗ್ರರು ರಸ್ತೆ ಮಧ್ಯದಲ್ಲಿ ತಡೆದು ದಾಳಿ ನಡೆಸಿದ್ದಾರೆ. ನಂತರ ಅವರೆಲ್ಲರನ್ನು ಅಪಹರಿಸಿ ಅವರು ಪ್ರಯಾಣಿಸುತ್ತಿದ್ದ ವಾಹನಕ್ಕೆ ಬೆಂಕಿ ಇಟ್ಟು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ನಿರಂತರ ಉಗ್ರಗಾಮಿ ಚಟುವಟಿಕೆಗಳಿಂದ ಬಾಧಿತವಾಗಿರುವ ಲಕ್ಕಿ ಮಾರ್ವತ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ : ಬಿಗ್‌ ಬಾಸ್‌ ಗೆ ಚಹಲ್‌, ಅಯ್ಯರ್‌.. ಧನಶ್ರೀ, ಇಬ್ಬರು ಗೆಳೆಯರು ಒಂದಾದ್ರಾ? 

ಘಟನೆಯ ಮಾಹಿತಿ ಪಡೆದ ಸ್ಥಳೀಯ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಎಂಟು ಜನರನ್ನು ರಕ್ಷಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಯ ವೇಳೆ ಮೂವರು ಗಾಯಗೊಂಡಿದ್ದು, ಅದರಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದೆ. ಇನ್ನುಳಿದ ಒತ್ತೆಯಾಳುಗಳನ್ನು ರಕ್ಷಿಸಲು ಕಾರ್ಯಾಚರಣೆ ಮುಂದುವರೆದಿದೆ. ಅಪಹರಣದ ಜವಾಬ್ದಾರಿ ಹೊತ್ತುಕೊಂಡಿರುವ ಟಿಟಿಪಿ, ಅಪಹರಣಕ್ಕೊಳಗಾದ ಉದ್ಯೋಗಿಗಳನ್ನು ತೋರಿಸುವ ವೀಡಿಯೊವನ್ನು ಬಿಡುಗಡೆ ಮಾಡಿದೆ. ಪಾಕಿಸ್ತಾನದ ಜೈಲುಗಳಲ್ಲಿರುವ ಟಿಟಿಪಿ ಕೈದಿಗಳನ್ನು ಬಿಡುಗಡೆ ಮಾಡುವುದು ಸೇರಿದಂತೆ ಸಂಘಟನೆಯ ಇತರ ಬೇಡಿಕೆಗಳನ್ನು ಈಡೇರಿಸುವ ಮೂಲಕ ತಮ್ಮನ್ನು ಬಿಡುಗಡೆ ಮಾಡಿಸಿಕೊಳ್ಳಬೇಕೆಂದು ಒತ್ತೆಯಾಳುಗಳು ವೀಡಿಯೊದಲ್ಲಿ ಮನವಿ ಮಾಡಿದ್ದಾರೆ.

ಅಪಹರಣಕ್ಕೊಳಗಾದ ಉದ್ಯೋಗಿಗಳು ಇಂಧನ, ಕೃಷಿ ಮತ್ತು ಔಷಧದಂತಹ ಕ್ಷೇತ್ರಗಳಲ್ಲಿ ಶಾಂತಿಯುತ ಪರಮಾಣು ಬಳಕೆಯನ್ನು ಅಭಿವೃದ್ಧಿಪಡಿಸುವ ಉದ್ದೇಶದ ಪಿಎಇಸಿ ಅಡಿಯಲ್ಲಿನ ಗಣಿಗಾರಿಕೆ ಯೋಜನೆಗಳಲ್ಲಿ ಕೆಲಸ ಮಾಡುವವರಾಗಿದ್ದಾರೆ. ಸರ್ಕಾರಿ ಮತ್ತು ಖಾಸಗಿ ಉದ್ಯೋಗಿಗಳಿಗೆ ಈ ಪ್ರದೇಶದಲ್ಲಿ ಆಗಾಗ ಭದ್ರತಾ ಅಪಾಯ ಎದುರಾಗುತ್ತಿರುವುದನ್ನು ಈ ಘಟನೆಯು ಎತ್ತಿ ತೋರಿಸಿದೆ. ಗಡಿಯಲ್ಲಿ ಪಾಕಿಸ್ತಾನ ಆರ್ಮಿ ಏನ್ ಮಾಡ್ತಿದೆ.. ಉಗ್ರರು ಗಡಿ ನುಗ್ಗಿ ಬರುವಾಗ ಆರ್ಮಿ ಅಧಿಕಾರಿಗಳು ಏನ್ ಮಾಡುತ್ತಿದ್ದಾರೆ ಅನ್ನೋ ಪ್ರಶ್ನೆ ಎದ್ದಿದೆ.

ಇತ್ತೀಚಿನ ತಿಂಗಳುಗಳಲ್ಲಿ ಪಾಕಿಸ್ತಾನದಲ್ಲಿ ಉಗ್ರಗಾಮಿ ಚಟುವಟಿಕೆಗಳು ವ್ಯಾಪಕವಾಗುತ್ತಿವೆ. ಈ ಅಪಹರಣ ಘಟನೆಯ ಒಂದು ದಿನ ಮೊದಲು, ಬಲೂಚ್ ಲಿಬರೇಶನ್ ಆರ್ಮಿಯ ಪ್ರತ್ಯೇಕತಾವಾದಿ ಉಗ್ರಗಾಮಿಗಳು ಬಲೂಚಿಸ್ತಾನದಲ್ಲಿ ಸರ್ಕಾರಿ ಕಚೇರಿಗಳು ಮತ್ತು ದುರ್ಗಮ ಪ್ರದೇಶದ ಜಿಲ್ಲೆಗಳಲ್ಲಿನ ಬ್ಯಾಂಕ್ ಮೇಲೆ ದಾಳಿ ಮಾಡಿದ್ದರು. ಈ ಘಟನೆಗಳಲ್ಲಿ ಯಾವುದೇ ಸಾವುನೋವುಗಳು ವರದಿಯಾಗಿಲ್ಲವಾದರೂ, ಈ ದಾಳಿಯು ದೇಶಾದ್ಯಂತ ಭಯೋತ್ಪಾದಕ ಕೃತ್ಯಗಳ ತೀವ್ರತೆಯನ್ನು ಪ್ರತಿಬಿಂಬಿಸುತ್ತಿದೆ. ಟಿಟಿಪಿ ಮತ್ತು ಬಲೂಚ್ ದಂಗೆಕೋರರು ಅಫ್ಘಾನಿಸ್ತಾನದ ಬೆಟ್ಟಗುಡ್ಡಗಳಲ್ಲಿ ಅವಿತುಕೊಂಡು ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಪಾಕಿಸ್ತಾನ ಆರೋಪಿಸಿದೆ. ಹೀಗೆ ಆರೋಪ ಮಾಡಿಯೇ ಅಫ್ಘಾನ್ ಮೇಲೆ ವೈಮಾನಿಕ ದಾಳಿ ಮಾಡೋಕೆ ಹೋದ ಪಾಕ್ ಅಮಾಯಕರ ಜೀವವನ್ನ ಬಲಿ ಪಡೆದಿದ್ದಾರೆ. ಹೀಗಾಗಿ ತಾಲಿಬಾನಿಗಳ ದ್ವೇಷವನ್ನ ಪಾಕಿಸ್ತಾನ ಕಟ್ಟಿಕೊಂಡಿದೆ. ಒಂದ್ಕಡೆ ಉಗ್ರರ ಉಪಟಳ, ಮತ್ತೊಂದ್ಕಡೆ ತಾಲಿಬಾನಿಗಳ ಕಿರಿಕ್ ಮಧ್ಯೆ ಪಾಕಿಸ್ತಾನ ಬಳಲಿ ಬೆಂಡಾಗಿ ಹೋಗಿದೆ. ಭಾರತದ ಮೇಲೆ ಉಗ್ರರನ್ನ ಚೂ ಬಿಡುತ್ತಿದ್ದ ಪಾಕ್‌ ಸರಿಯಾಗಿ ಪೆಟ್ಟು ತಿನ್ನುತ್ತಿದ್ದು, ತನ್ನ ದೇಶವನ್ನ ಹೇಗೆ ಉಳಿಸಿಕೊಳ್ಳುತ್ತೆ.. ಹಾಗೇ ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ ನಡೆಯಲಿದ್ದು, ಅದಕ್ಕೆ ಪಾಕ್‌ ಎಷ್ಟು ಸೆಕ್ಯೂರಿಟ್ ಕೊಡುತ್ತೆ ಅನ್ನೋ ಅನುಮಾನ ಆತಂಕ ಹೆಚ್ಚಾಗಿದೆ..

Kishor KV